ಮಗನಿಗೊಂದು ಬುದ್ದಿಮಾತು

0

Polonius advice to Laertes -- ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದಿಂದ ಆಯ್ದದ್ದು. ವಿಶ್ವ ತಂದೆಯರ ದಿನಕ್ಕೆ ನನ್ನ ಈ ಕಾಣಿಕೆ.

ಮನದ ಮಾತುಗಳು ಇರಲಿ ಮೌನದಲಿ.
ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ.
ಒಂದಾಗು ಎಲ್ಲರಲಿ, ಅತಿರೇಕವಿರದಿರಲಿ.
ಒರೆ ಹಚ್ಚಿ ನೋಡಲುಬೇಕು ,
ಗೆಳೆತನವ ಬೆಳೆಸುವ ಮುನ್ನ
ಹೃದಯ ಬಂಧಿಸಿರಬೇಕು ,
ಸ್ನೇಹ ಸಂಕೋಲೆಗಳಲಿ,ಬೇಕಿಲ್ಲ ಚಿನ್ನ.
ಸಿಕ್ಕಸಿಕ್ಕವರೆಲ್ಲ ಸ್ನೇಹಕರ್ ಹರೇನಲ್ಲ,
ಎಲ್ಲರನು ನೀನನಸುರಿಸಬೇಕಿಲ್ಲ.
ಬೇಡ ಕಾದಾಟ ಯಾರೊಡನೆಯೂ,
ಕಾದಿದರೆ ಅರಿಗಿರಲಿ ನಿನ್ನರಿವು ಕಾಳಗದಮುನ್ನ.
ಸಹನೆಯಲಿ ನೀ ಕೇಳು ಸರ್ವರ ನುಡಿಯ.
ನುಡಿದಾರೆ ನುಡಿ ಯೋಗ್ಯರಲಿ ಮುತ್ತಿನ ಹಾರ
ನಡತೆಯಲಿ ಸಿರಿತನವಿರಲಿ,
ಉಡುಗೆ ತೊಡುಗೆಗಳಿಗೂ ಉಂಟು ಬೆಲೆಯು,
ಲೆಕ್ಕದಾ ಅರಿವಿರಲಿ , ಅಳತೆ ಮೀರದೆ ಇರಲಿ.
ತರದು ಘನತೆಯ ಬರಿಯಬ್ಬರವು,
ಸಾಲದ ಹಂಗಿಲ್ಲದಿರಲಿ ,
ತರುವುದೇ ಬೇಡ,ಇನ್ನು ಕೊಡುವುದೇಕೆ?
ನೀನು ಸಾಲಿಗನಾದರೆ ಕಳೆಯಬಹುದು
ಕೆಳೆಯನನೂ ಸಾಲದ ಜೊತೆಗೆ
ಸಾಲದ ಹೊರೆ ನಿನಗಾದರೆ ,
ನಿನಗಿರದು ಆತ್ಮಗೌರವದ ರಕ್ಷೆ
ಎಲ್ಲಕ್ಕೂ ಮಿಗಿಲಾಗಿ ,
ಜೀವನವಿರಲಿ ಆತ್ಮಸಾಕ್ಷಿಗನುಗುಣವಾಗಿ
ಭಯವಿರದು ದೇವನಿಗೆ ಉತ್ತರಿಸಲು,
ಮನುಜರ ಲೆಕ್ಕವಿನ್ನೇನು..?
ಹೋಗಿ ಬಾ ಮಗು.. ಕಾಯಲಿ ನಿನ್ನನೀ ಹರಕೆಯು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಪ್ರಯತ್ನ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃತಜ್ಞತೆಗಳು ಹರಿಪ್ರಸಾದ್ ನಾಡಿಗರೇ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಳ ಕನ್ನಡ...ಒಂದು ಉತ್ತಮ ಪ್ರಯತ್ನ...ಬಹಳ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃತಜ್ಞತೆಗಳು ವಿಜಯ್ .. ಮೂಲ ಕವಿತೆಯ ಆಶಯ ಸ್ವಲ್ಪವಾದರೂ ಇಲ್ಲಿ ಧ್ವನಿಸಿದ್ದಾದರೆ ನಾನು ಧನ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.