ಮೋಹದ ಬಲೆ

0

ಚಿಮ್ಮಿತು ಚಿಮ್ಮಿತು
ಪ್ರೀತಿಯ ಒರತೆ
ಹೊಮ್ಮಿತು ಹೊಮ್ಮಿತು
ಚಿಗುರಿ ಪ್ರೇಮಲತೆ

ಸೇರಿತು ಹಾಡಿತು
ಭಾವಗಳ ಸಂತೆ
ಬೆರೆಯಿತು ಮರೆಯಿತು
ಜೀವ ಎಲ್ಲ ಚಿಂತೆ.

ಮಿಡುಕಿತು ನುಡಿಯಿತು
ಮೋಹನ ವೀಣೆ
ಆದಿಯೋ ಅಂತ್ಯವೋ
ಅರಿಯೆನು ಜಾಣೆ.

ಸರಿಯಿತು ತೆರೆಯಿತು
ಮೋಹದ ಬಲೆ
ಮೈಮರೆಸಿ ಮನತೆರೆಸಿತು
ನಿಸರ್ಗದ ಕಲೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃತಜ್ಞತೆಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಮಿಡುಕಿತು' ಅಂದ್ರೇನು? ದಯವಿಟ್ಟು ತಿಳಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿಡುಕಿತು == ತಟ್ಟನೆ ಸರಿದಾಡು
ಉದಾಹರಣೆ : ಮಗು ಮಿಡುಕಿತು

ಇಲ್ಲಿ ಆ ಪದ ಸಮಂಜಸ ವಲ್ಲ ವೆಂದು ನಿಮ್ಮಭಿಪ್ರಾಯವೇ ..?

ಮಂಜು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಲ್ಲ.. ಕವಿತೆ ವಿಮರ್ಶೆ ಮಾಡುವಷ್ಟು ನನಗೆ ಗೊತ್ತಿಲ್ಲ..
ಆ ಪದದ ಅರ್ಥ ಗೊತ್ತಿಲ್ಲದೆ ಕೇಳಿದೆ ಅಷ್ಟೆ..
ನನ್ನಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ
ನನ್ನ ಹಿಂದೆ ಅವಳು ಬಂದಾಗ,,,,,,,,,,,ಮನೆಯವರನ್ನೆಲ್ಲಾ ಧಿಕ್ಕರಿಸಿ,,
ನೆರೆದಿತ್ತು ಭಾವಗಳ ಸಂತೆ ,, ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ,,

ಆದಿ ಅಂತ್ಯವನರಿಯದೆ ಮಿಡಿದಿತ್ತು ವೀಣೆ ಅಂದು,,

ಆದರೆ ಇಂದು,,

ಸರಿದಿದೆ ತೆರೆ, ತೋರಿದೆ ಜೀವನ
ತನ್ನ ನಿಜರೂಪವ,

ಕುರುಡು ಕಾಂಚಾಣ ಕುಣಿಯುತ್ತಲಿದೆ,,
ಕಾಲಿಗೆ ಬಿದ್ದವರ ತುಳಿಯುತ್ತಲಿದೆ,,
ನಿಸರ್ಗ ಮುನಿದಿದೆ
ಭಾವಗಳು ಅಡಗಿ ಹೋಗಿವೆ,, ಎದೆಯ ಗುಹೆಯಲ್ಲಿ,

ಆದರೂ ಒಂದು ಮಿಣತೆ ದೂರದಲ್ಲಿ ಮಿಂಚುತ್ತಿದೆ,,
ಸಾರುತ್ತಿದೆ ಜಗಕೆ,

ಇಲ್ಲಿ ಮಾನವೀಯತೆ ಬದುಕಿದೆ,
ಪ್ರೀತಿಗಿಲ್ಲಿ ಇನ್ನೂ ಬೆಲೆಯಿದೆ,
ಕೊರಗಬೇಡ ಮನವೆ.

ಹೊಳೆನರಸೀಪುರ ಮಂಜುನಾಥ ಗೌಡ
ದುಬೈ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.