ಕನ್ನಡ ವ್ಯಾಮೋಹ ಬೇಕು

4.5

"ಕನ್ನಡವನ್ನು ಮಾತೃಭಾಷೆಯಾಗಿಸಿಕೊಂಡವರು ಸಹ ಇಂದು ಆಂಗ್ಲ ವ್ಯಾಮೋಹ ಬೆಳೆಸಿಕೊಂಡಿದ್ದಾರೆ...  ಇದನ್ನು ಹೇಳಿದವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು.


ಇಲ್ಲ ಸ್ವಾಮಿ, ನಾನು ಕನ್ನಡದ ವ್ಯಾಮೋಹ ನೋಡಿದ್ದೇನೆ. ಎಲ್ಲಿ ಗೊತ್ತಾ?! ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ! ನಮ್ಮಲ್ಲಿ ಯಾವುದಿಲ್ಲವೋ ಅದು ನಮಗೆ ಬೇಕೆನಿಸುತ್ತದೆ. ಅಲ್ಲಿ ಕನ್ನಡ ಕಿವಿಗೆ ಬಿದ್ದರೆ ಜೇನಿನಷ್ಟು ಸವಿ. ತುಂಬಾ ದಿನಗಳಿಂದ ಊರಿನಕಡೆ ಹೋಗದಿರುವವರಿಗೆ ಕನ್ನಡದ  ನೆನಪು ಕಾಡುತ್ತಿರುತ್ತದೆ. ಕನ್ನಡ ಬಲ್ಲವರು ಸಿಕ್ಕರೆ ಸಾಕು ತಡೆಬಡೆ ಇಲ್ಲದೆ ಸಂಭಾಷಣೆ ಕನ್ನಡದಲ್ಲಿ ನಡೆಯುತ್ತದೆ. ಅಲ್ಲಿ ಕನ್ನಡ ಚಲನಚಿತ್ರಗಳಿಗೂ ಪ್ರೋತ್ಸಾಹವಿದೆ. ಇಲ್ಲಿಯ ನಷ್ಟವನ್ನು ಅಲ್ಲಿ ತುಂಬಿಸಿಕೊಳ್ಳುತ್ತಾರೋ ಏನೋ!

ಇರಲಿ, ನನಗೆ ಅನ್ನಿಸಿದ್ದು ಬರೀ ಆಂಗ್ಲಭಾಷೆ ಒಂದೇ ಅಲ್ಲ, ಎಲ್ಲಾ ಪರಭಾಷೆಗಳಿಗೂ ನಮ್ಮವರು ಮನಸೋತಿದ್ದಾರೆ. ಅದಕ್ಕೇ ಬೆಂಗಳೂರಿನಲ್ಲಿ ವಲಸಿಗರು ಕನ್ನಡ ಕಲಿಯುತ್ತಿಲ್ಲ. ನಮ್ಮವರು ಇತರ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನುಗ್ಗಿ ಹೋಗುತ್ತಿದ್ದಾರೆ.  ಸ್ಥಳೀಯರು ನಿಮ್ಮ ಬಾಷೆಯಲ್ಲಿ ಸಂವಾದ ನಡೆಸುವಾಗ  ವಲಸಿಗರು ಈಕೆ ಕನ್ನಡ ಕಲಿಯುತ್ತಾರೆ? ಇದಕ್ಕೇನು ಮದ್ದು? ಆಂಗ್ಲ ವ್ಯಾಮೋಹವಿರುವವರನ್ನು ಕ್ಯಾಲಿಫೋರ್ನಿಯಾಕ್ಕೆ ರಫ್ತು ಮಾಡಿ. ಕನ್ನಡ ವ್ಯಾಮೋಹವಿರುವವರನ್ನು ಆಮದುಮಾಡಿಕೊಳ್ಳಿ. ಎಷ್ಟು ಸುಲಭ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಮಾತು ತುಂಬಾ ನಿಜ .... ಕರ್ನಾಟಕದಿಂದ ಹೊರಗೆ ಬಂದು ಹೊರಪ್ರಪಂಚವನ್ನ ನೋಡಿದಾಗ ನಮ್ಮ ಭಾಷೆಯ ಮೇಲಿನ ಪ್ರೀತಿ ಹೆಚ್ಚಾಗುವುದು ಸತ್ಯ ... ನಾನೂ ಕೂಡ ಇದಕ್ಕೆ ಒಂದು ಉದಾಹರಣೆ.. ಈ ಕಾರಣಕ್ಕೆ ನಾನು ಚೆನ್ನೈಗೆ ಋಣಿ ... ಈಗ ಅಮೆರಿಕ ತಲುಪಿದ ಮೇಲೆ ಭಾಷಾಭಿಮಾನ ಇನ್ನಷ್ಟು ಹೆಚ್ಚಾಗಿದೆ..... ನನ್ನ ಅನಿಸಿಕೆ ಪ್ರಕಾರ - ಹೊರನಾಡು/ದೇಶ ಗಳಲ್ಲಿ ಇತರೆ ದಕ್ಷಿಣ ಭಾಷೆಗಳ (ತಮಿಳು , ತೆಲಗು , ಮಲೆಯಾಳಂ ... ) ಜನರ ಸಂಖ್ಯೆ , ಸಿನಿಮಾಗಳು , ಪತ್ರಿಕೆಗಳು ಇವೆಲ್ಲ ಸಾಕಷ್ಟು ಮಟ್ಟಿಗೆ ದೊರೆಯುತ್ತವೆ ... ಈ ವಿಷಯದಲ್ಲಿ ಕನ್ನಡ ಹಿಂದೆ ಉಳಿದಿರುವುದನ್ನು ಭಾರ ಮನಸ್ಸಿನಿಂದ ಒಪ್ಪಿಕ್ಕೊಳಬೇಕಿದೆ .... ಈ ಪರಿಸ್ಥಿತಿಯ ಅರಿವು ಕನ್ನಡ ನೆಲದಿಂದ ಹೊರಬಂದು ನೋಡಿದಾಗ ಹೆಚ್ಚು ಗೋಚರವಾಗುತ್ತದೆ ... ಇದೆ ನಮ್ಮ ನಿಮ್ಮನ್ಥವರಲ್ಲಿ ಹುದುಗಿರುವ ಕನ್ನಡಾಭಿಮಾನವನ್ನ ಬಡಿದೆಬ್ಬಿಸುತ್ತದೆ ... ಇದೆ ಬೆಳವಣಿಗೆ ಮುಂದೆ ಕನ್ನಡ ಕ್ರಾಂತಿಯಾಗಿ ಹೊರನಾಡು / ದೇಶಗಳಲ್ಲೂ ಕನ್ನಡ ಕಂಪು ಹರಡುವುದು ಸತ್ಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.