ನೀನೇ ಹೇಳು , ನೀ ನನ್ನ ಮನಸ್ಸನ್ನ ಕದ್ದದ್ದೋ ?

0

ನೀನೇ ಹೇಳು , ನೀ ನನ್ನ ಮನಸ್ಸನ್ನ ಕದ್ದದ್ದೋ ?
ಅಥವಾ ನಾ ನನ್ನ ಮನಸ್ಸನ್ನ ಕಳೆದುಕೊಂಡಿದ್ದೋ?
ಕದ್ದದ್ದು ಕಾಣಲೇ ಇಲ್ಲ ,ಕಳೆದದ್ದು ಅರಿವಾಗಲೇಯಿಲ್ಲ.
ಕದ್ದವರಿಲ್ಲಿ ಕಳೆದುಕೊಳ್ಳುತ್ತಾರೆ
ಕಳೆದುಕೊಂಡವರಿಲ್ಲಿ ಪಡೆದುಕೊಳ್ಳುತ್ತಾರೆ.
ಆದರೂ ನೀ ಹೇಳು ?ನೀ ನನ್ನ ಮನಸ್ಸನ್ನ ಕದ್ದದ್ದೋ ?
ಅಥವಾ ನಾ ನನ್ನ ಮನಸ್ಸನ್ನ ಕಳೆದುಕೊಂಡಿದ್ದೋ?
ಕದ್ದವಳಿಲ್ಲಿ ಕಳ್ಳಿಯಲ್ಲ ,ಕಳೆದುಕೊಂಡವನಿಲ್ಲಿ ನಷ್ಟದಲ್ಲಿಲ್ಲ .
ಕದ್ದು ಕದಿಯದಂತಿರುವೆ "ನೀನು"
ಕಳೆದುಕೊಂಡು ಕಳೆದುಕೊಳ್ಳದಂತಿರುವೆ "ನಾನು"
ನೀನು "ನಿನ್ನನ್ನ" ಕಳೆಯಬೇಕು
ನಾನು "ನನ್ನನ್ನ" ಕಳೆಯಬೇಕು
ಆಗ ಪ್ರೀತಿಯೊಂದೇ ಉಳಿಯಬೇಕು.
ಪ್ರೀತಿ ಕದಿಯುವಂತುಹುದಲ್ಲ
ಅದನ್ನು ಕಳಿಯುವಂತಿಲ್ಲ
ಕೂಡಿಸಿ ,ಗುಣಿಸಿ ,ಭಾಗಿಸಬೇಕಷ್ಟೇ .
ಈಗ ಹೇಳು , ಕದ್ದವರಾರು ?
ಕಳೆದುಕೊಂಡವರಾರು?
ಕಳೆದಿದ್ದೇನು ? ಕಳೆದುಕೊಂಡಿದ್ದೇನು ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.