ನೆರಳ ಬೆಳಕಿನಾಟ ಈ ಸಂಸಾರದ ಕೂಟ

2

ನೆರಳ ಬೆಳಕಿನಾಟ ಈ ಸಂಸಾರದ ಕೂಟ
ತಿಳಿದುಬದುಕಬೇಕು ಇದು ನಿಲ್ಲದ ಆಟ

ಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ
ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ  

ಸುಖದಸೋಗಿನಲ್ಲಿ ಹುದುಗಿಹುದು ದುಃಖ
ಆಚೆನೋಡು ನೀ ನಿಂತಿಹುದು ಸುಖವು ಪಕ್ಕ

ಕೆಸರೊಂದೆ ಅಲ್ಲ ಅರಳಿಹಿದು ಕಮಲ ಇಲ್ಲಿ
ಹುಟ್ಟು  ಮತ್ತದೇ ಸಾವು  ನಿಯಮವಿಲ್ಲಿ

ಕತ್ತಲೆಯು ಕವಿದಾಗ ಕಂಗೆಟ್ಟು  ಕೂಡದಿರು
ಬೆನ್ನಟ್ಟಿ  ಬರುವ ಬೆಳಕು ನೀ ಕಾಯುತಿರು

ನೆರಳ ಬೆಳಕಿನಾಟ ಈ ಸಂಸಾರದ ಕೂಟ

ತಿಳಿದುಬದುಕಬೇಕು ಇದು ನಿಲ್ಲದ ಆಟ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಭಾಕರ್ ಸರ್, ಕವನ ಸರಳ ಹಾಗೂ ಸುಂದರವಾಗಿದೆ. <<ಆಚೆನೋಡು ನೀ ನಿಂತಿಹುದು ಸುಖವು ಪಕ್ಕ>> ಇದು ನನಗೆ ಇಷ್ಟವಾದ ಸಾಲು. ಇದರಲ್ಲಿ`..ನಿಲ್ಲಬಹುದು ಸುಖದ ಪಕ್ಕ' ಎಂದಾಗಬೇಕಲ್ಲವೆ? <<ಬೆನ್ನಟ್ಟಿ ಬರುವ ಬೆಳಕು ನೀ ಕಾಯುತಿರು>> ಹೀಗೆ ಬೆನ್ನಟ್ಟಿ ಬರುವುದೆಂಬ ನಿಖರತೆ ಇಲ್ಲದ ನಿರೀಕ್ಷೆಗಿಂತಲೂ ಹೆಚ್ಚಾಗಿ ಅದೇ ಸಾಲುಗಳನ್ನೇ `ಕತ್ತಲೆಯು ಕವಿದಾಗ ಕಂಗೆಟ್ಟು ಕೂಡದಿರು; ಹಣತೆ ಹಚ್ಚಲು ನೀ ಯಾರಿಗೂ ಕಾಯದಿರು' ಎಂದು ಬದಲಾಯಿಸಿದರೆ ಅರ್ಥವತ್ತಾಗಬಹುದೇನೋ ಒಮ್ಮೆ ಪರಿಶೀಲಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.