ನನ್ನ ಮನದಲ್ಲಿ ಕವಿತೆ ಹೊಳೆದ್ದಿದ್ದೆಷ್ಟೋ ?

0

ನನ್ನ ಮನದಲ್ಲಿ ಕವಿತೆ ಹೊಳೆದ್ದಿದ್ದೆಷ್ಟೋ ?
ಅದರಲ್ಲಿ ನಾ ಬರೆದ್ದಿದ್ದೆಷ್ಟೋ ?
ಬರೆದ ನಂತರ ಓದಿ ಹರಿದ್ದಿದ್ದೆಷ್ಟೋ ?
ಭಾವಗಳು ಮೋಡವಾಗಿ
ಮಳೆ ಸುರಿಸಿದ್ದೆಷ್ಟೋ?
ಹಾಗೇ ಸುಳಿವ ಗಾಳಿಗೆ ಸಿಕ್ಕು
ತೇಲಿ ಹೋಗಿದ್ದೆಷ್ಟೋ ?
ಬರೆದ ಕವಿತೆಗಳ ವಾಚಿಸಿದ್ದೆಷ್ಟೋ ?
ಹಾಗೆಯೇ ಪುಸ್ತಕದ ಎದೆಯಲ್ಲಿ
ಅವಿತ್ತಿದ್ದೆಷ್ಟೋ ?
ಕೆಲವು ಕವಿತೆಗಳು ಜನ್ಮತಾಳದೆ
ಮೃತ್ಯು ವಶವಾಗಿದ್ದೆಷ್ಟೋ ?
ಕೆಲವು ಹುಟ್ಟಿಯೂ ಹುಟ್ಟದಂತೆ
ಇದ್ದಿದ್ದೆಷ್ಟೋ ?
ಲೆಕ್ಕವಿಲ್ಲದ ಭಾವಗಳು
ಅನಂತ ಕವಿತೆಗಳು.
ಆದರೆ ಉಳಿದದ್ದು ಮಾತ್ರ ಇಷ್ಟೇ
ನೀವು ಓದಿರುವಷ್ಟು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೊನೆಗೆ ಅಷ್ಟಾದರು ಉಳಿಯಿತಲ್ಲಾ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ಸಮಾಧಾನ , ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬರೆದ ಕವನಗಳನ್ನು ನಾವು ಓದಿದ್ದೆಷ್ಟೊ....ಚೆನ್ನಾಗಿದೆ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.