ಬರೆದವನು ನಾನಲ್ಲ

4

ಬರೆದವನು ನಾನಲ್ಲ
ಬರವಣಿಗೆ ತಿಳಿದಿಲ್ಲ
ಕಾವ್ಯ ನನ್ನದೆನ್ನುವ
ಸೊಲ್ಲು ನನ್ನದಲ್ಲ.

ಬರೆಸಿದವ ಬೇರೆ
ಲಿಪಿಕಾರ ನಾನು
ನುಡಿಸಿದವ ಬೇರೆ
ಬರೀ ಕೊಳಲು ನಾನು.

ಕಾವ್ಯ ಬರೆಯುವ ಸಂಗತಿಯಲ್ಲ
ಭಾವ ಸ್ಪುರಣೆಯೇ ಎಲ್ಲಾ.

ಕಾವ್ಯ ನಿನ್ನ ಕೈಯಲಿಲ್ಲ
ಅದು ಕದತಟ್ಟಿದಾಗ ಲಿಪಿಗೊಳಿಸು
ಅದು ತೇಲುವ ಮೋಡದಷ್ಟೇ ಚಂಚಲ
ಸಾಗಬಹುದು ಹಾಗೆ ಎಚ್ಚರ.

ಮನವು ಹಸಿರಾಗಿರಲಿ
ಆಹ್ಲಾದದ ತಂಪನೀಯಲಿ
ಕಾವ್ಯದ ಮೋಡ ಮಳೆಗರೆಯುವುದೇ ಅಲ್ಲಿ
ಮರಳುಗಾಡದರೆ ಮನ
ಕಾವ್ಯದ ಮಳೆ ಸುರಿಯುವದಿಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇನ್ನು.. ವ್ಯಾಕರಣ ಶುದ್ದಿ ಆಗಬೇಕಿದೆ..
ಬೇಸರಿಸದೆ.. ನನ್ನ ಮಾತನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವಿರೆಂದು ಭಾವಿಸುತ್ತೇನೆ..
ಕವನಗಳು ರಿಯಲಿ ಸುಪೆರ್ಬ್..

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿದ್ದಿಕೊಂಡಿದ್ದೇನೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು..
"ಸುರಿಯುವುದಿಲ್ಲ" ಸರಿ ಅಲ್ಲವೇ..?
"ಕಾವ್ಯದ ಮಳೆ ಸುರಿಯುವದಿಲ್ಲ." ಅಲ್ಲ ಅಲ್ಲವೇ..?
ನೋಡಿ ಮತ್ತೆ ಇನ್ನೊಮ್ಮೆ ಮತ್ತಿನ್ನ್ಯಾವುದಾದರೂ ಇದೆಯೇ ಅಂತ?

ಕ್ಷಮಿಸಿ.. ನನ್ನದು ಹೆಚ್ಚಾಯಿತು ಅನ್ನಿಸಿದರೆ.. :)

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಪ್ರಭಾಕರ
ಪರಾಕು ನಮಸ್ಕಾರ,
ಬರೆದವನು ನೀನಲ್ಲ
ಬರವಿಗೆ ಕೂಡಿದೆ ಸೊಗಸೆಲ್ಲ.
*
ಮರದೆಲೆಗಳ ನಾಟ್ಯ ಚಂದ
ಬೀಸುಗಾಯ ಚಾಟ್ಯದಿಂದ
ಕವನ ಯುಕ್ತಿಪೂರ್ಣ ರಚಿಸೆ
ಪ್ರೇರೇಪಕ ಸುಮಿರ್ತನ ವರಸೆ.
*
ಆತ್ಮೀಯ ಆಶಿಸುವೆ ನಿನಗೆ
ಅಮಿತ ಕಾವ್ಯಧಾರೆಗಳ ಬಳಿಗೆ
ಸಾಹಿತ್ಯದಾಗಸದಿಂ ತರುತಿರು
ನಿತ್ಯ ಕವನಮಳೆಯ ಸುರಿಸುತಿರು
*
ಕಾವ್ಯನಭದಿ ರಚಿಸು ಕಾಮನಬಿಲ್ಲು
ವಾಚಕರ ಮನದಿ ಆಹ್ಲಾದ ಚೆಲ್ಲು
ನಿನಗಂದು ಕನ್ನಡಭಾಷೆಯ ಸೇವೆ
ತರುವುದು ಮನದಾನಂದ ಅಲ್ಲವೆ?
*
- ವಿಜಯಶೀಲ. ೧೬.೦೬.೦೯
*

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ವಿಜಯಶೀಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಷ್ಟಾದ್ರೂ ಕರ್ತ್ರು ಆತ, ನಮ್ಮದೇನಿದ್ದರೂ ಆತನ ಹೆಸರಿನಲ್ಲಿ ಕ್ರಿಯೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ...ಈ ಪ್ರತಿಕ್ರಿಯೆ ನನ್ನದಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.