ಮನದ ಮಾತುಗಳೆಲ್ಲ ಪಂಜರದ ಗಿಳಿಯಂತೆ

4

ಮನದ ಮಾತುಗಳೆಲ್ಲ ಪಂಜರದ ಗಿಳಿಯಂತೆ
ಮನದಾಳದಲ್ಲೇ ಅವಿತು ಕಾಯುತಿಹವು
ಹೆಪ್ಪುಗಟ್ಟಿದ ಮೋಡ ಮಳೆಯಾಗಿ ಸುರಿಯಲು
ತವಕಪಡುವಂತೆ ಕಾಣುತಿಹವು

ಮೊಕ್ಷದಾಸೆಯ ಹೊತ್ತ ಭಿಕ್ಷು ವಿನ ಪರಿಯಂತೆ
ಕಾಯಲಾಗದೆ ಅಲ್ಲಿ ಪರಿತಪಿಸುತಿಹವು
ತನ್ನ ಬಸಿರನು ಹೊತ್ತು ಪ್ರಸವಕ್ಕೆ  ಕಾಯ್ದಿರುವ
ತಾಯಂತೆ ನೋವ ಅನುಭವಿಸುತಿಹವು

ಬಂದು ನನ್ನೆದುರಲ್ಲಿ ನಿಂದು ನೀ ಈ ಕ್ಷಣಕೆ
ಹೇಳುದೆಲ್ಲವ ಹೇಳಿ ಬರಿದಾಗುವೆನು
ಹೊತ್ತ ಭಾರವ ಇಳುಹಿ ಹಗುರಾಗಿ ನಾನಿಂದು
ಹಕ್ಕಿಯಂದದಿ ನಾನು ಹಾರ ಬಯಸುವೆನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.