ಹೂವು - ದುಂಬಿ

0

ದುಂಬಿ ಬಂದರೆ ಚೆಂದ
ಹೂವಿನ ಮಕರಂದ ಹೀರಲಾನಂದ
ಕಾಯುವ ಹೂವಿನ ಬವಣೆಗೆ
ಭ್ರಮರದಾಗಮನವೇ ಆನಂದ

ಹೃದಯದಲಿ ತುಂಬಿಟ್ಟ ರಸಾನಂದವ
ಹೀರಿದರೆ ಸಾಕೆಂಬ ಹೂವಿನ ತವಕ,
ಮುಗಿದು ಹೋಗುವದು ಒಮ್ಮೆ
ದುಂಬಿ ನೀ ಮೈದುಂಬಿ ಬಂದಪ್ಪಿದಾಗ

ಬಳಕುವ ಹೂವಿಗೆ ಚಂಚಲ ಭ್ರಮರ
ಮುತ್ತನಿಡುವದೆ ಶೃಂಗಾರದ ಚರಮ

ಹೂ ದುಂಬಿ ಒಂದಾಗಬೇಕು
ತನ್ನ ತಾನೊಂದು ಮರೆಯಬೇಕು
ಪ್ರೀತಿಯಲಿ ಬೆರೆತು ಮೆರೆಯಬೇಕು
ತಮ್ಮಾತ್ಮ ಸುಖದಲಿ ರಥಿಸಬೇಕು

ಸೃಷ್ಟಿಯ ಸಾರ್ಥಕತೆಯ
ಸಿಹಿಯನುಣಬೇಕು.
ದುಂಬಿ ಬಂದರೆ ಚೆಂದ
ಹೂವಿನ ಮಕರಂದಹೀರಲಾನಂದ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಪ್ರಭಾಕರ್ ರವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.