ಭೂಮಿ -ಆಕಾಶ

0

ದೂರ ತೀರವ ದಾಟಿ
ತಿರುಗಿ ನೋಡದೆ
ಮುಂದೆ ಹೋಗುವ
ಪಯಣಿಗ ನೀನು.

ನಿಂತಲ್ಲೇ ನಿಲುವ
ನಿಶ್ಚಲ ತೀರ ನಾನು.

ಕನಸುಗಳ ಕೈಬಿಟ್ಟು
ಭಾವಗಳ ಬದಿಗಿಟ್ಟು
ಭಾನಿನೆತ್ತರದಲ್ಲಿ
ಹಾರಿಹೋಗುವ ಚಲುವೆ
ಮರೆಯದಿರು
ನಾನಿರುವದು ಇಲ್ಲೇ
ಈ ಭೂಮಿಯಲ್ಲಿ.
-----ಸತ್ಯಾತ್ಮ ------

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.