"ಸಂಪದ" ಸಹೃದಯರೇ

0

ಬಂದಿಹೆನು "ಸಂಪದ" ಕೆ
ಬರಮಾಡಿಕೋ ಎನ್ನ
" ಬರವಣಿಗೆ " ತಂದಿಹೆನು
ಓದಿ ಹರಸೆನ್ನ.

ಸಂಪಿಗೆಯ ಗುಂಪೊಂದು
"ಸಂಪದ"ವೇ ಆಗಿಹುದು
ಆಗ ಬಯಸುವೆ ನಾನು
ಆ ಗುಂಪೊಂದರ "ಹೂ "ವ.

ಆಕ್ಕರೆಯ ನಗೆಯವರೇ
ಸಕ್ಕರೆಯ ಮಾತಿನವರೇ
ತಪ್ಪಿದರೆ ತಿದ್ದುವ
ಸಹೃದಯ ಓದುಗರೇ.

ನನಗಿಂತ ಕಿರಿಯರಿಲ್ಲ
ನಿಮಗಿಂತ ಹಿರಿಯರಿಲ್ಲ
ನನ್ನ ತಿದ್ದಿ ಹರಸುವ ಭಾರ
ಹಿರಿಯರದೇ ಎಲ್ಲಾ.

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
ಅದರಿಂದಲೇ ಏಳ್ಗೆ
ನಮ್ಮೆಲ್ಲರ ಬಾಳ್ಗೆ .

********************
ಎಮ್.ಡಿ.ಎನ್.ಪ್ರಭಾಕರ
********************

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ
ಸ೦ಪದಕ್ಕೆ ಆತ್ಮೀಯ ಸ್ವಾಗತ
ಸ೦ಪದಕ್ಕೆ ಬ೦ದಮೇಲೆ ಮುಗೀತು ಇದು ನಿಮ್ಮದೇ ಕುಟು೦ಬ
ಅ೦ದ ಹಾಗೆ ನಾಟಕದ ಮನೆಗೆ ಬರ್ತೀರಲ್ಲ .....
ಹರೀಶ ಅತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಬರುತ್ತೇನೆ , ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸುಂದರವಾಗಿ ಬರೆದಿದ್ದೀರಿ...ಇಷ್ಟವಾಯಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ,ಅದು ತಮ್ಮೆಲ್ಲರ ಪ್ರೋತ್ಸಾಹದ ಫಲ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬಂದು ವಾರದ ಮೇಲಾಯ್ತು
ಈಗೇಕೆ ಬರುತಿರುವೆನೆಂಬ ಮಾತು

ಓದುಗರ ಮನಗಳನೇ ಹೊಕ್ಕಾಯ್ತು
ಏಕೀಗ ಮನೆಗೆ ಬಂದೆನೆಂಬ ಮಾತು

ಹಿರಿಯರಿಲ್ಲ ಕಿರಿಯರಿಲ್ಲ ಸಂಪದಿಗರೇ ಎಲ್ಲ
ಭಾವಕ್ಕೆ ಬೆಲೆಕೊಡುವೆಡೆ ಬಂಧುಗಳೆ ಎಲ್ಲ

ಅಕ್ಕರೆಯವರೂ ಇರುವರು ಸಕ್ಕರೆಯವರೂ ಇಲ್ಲಿ
ತಿದ್ದುವವರೂ ಇಲ್ಲಿ ಓದಿ ಮೂದಲಿಸುವವರೂ ಇಲ್ಲಿ

ಪ್ರತಿಕ್ರಿಯೆಗಳ ನಿರೀಕ್ಷೆಯಿರಲಿ ಅವಕ್ಕಾಗಿಯೇ ಬರೆಯದಿರಿ
ಹೊಗಳಲು ಒಮ್ಮೆಗೆ ಉಬ್ಬದಿರಿ ಬರಹವ ತೆಗಳಲು ಕುಗ್ಗದಿರಿ

ಕನ್ನಡವ ಬಳಸಿ ಕನ್ನಡವ ಬೆಳೆಸಿ ಕನ್ನಡವ ಉಳಿಸಿ
ಕನ್ನಡವ ಬಳಸಿ ಕನ್ನಡವ ಬೆಳೆಸಿ ಕನ್ನಡವ ಉಳಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಸಿಕೆಯನ್ನು ಕವನವಾಗಿಸಲು ಸಮಯವಾಯಿತು , ಧನ್ಯವಾದಗಳು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.