ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು

0

ನನ್ನ ನಿನ್ನೊಲವಿನ ವೀಣೆ  ತಂತಿಹರಿದು ಬಿದ್ದಿರಲು
ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು

ಮೊದಲು ನುಡಿಸಿದ ರಾಗ ನುಲಿಯುತಿದೆ ಇನ್ನೂ
ಬೇರೇ ರಾಗ ಬೇಕೇ ನನಗೆ ಬೇರೇ ಭಾವ ಬೇಕೇ

ಮೊದಲ ಕಂಡ ಕನಸು ಕೂಡ ನನಸಾಗದೇ ಉಳಿದಿದೆ
ಬೇರೇ ಕನಸು ಬೇಕೇ ನನಗೆ ಬೇರೇ ಆಸೆ ಬೇಕೇ

ನನ್ನ ಮನದ ತುಮಲ ನಿನಗೇ ಹೇಗೆ ತಾನೇ ತಿಳಿದೀತು
ನನ್ನ ಭಾವದ ಭಾವ ಹೇಗೆ ತಾನೇ ಹೊಳೆದೀತು

ನನ್ನ ನಿನ್ನ ನಡುವೆಯಿಂದು ಇಲ್ಲವೊಂದು ಸೇತುವೆ
ನನ್ನ ನಿನ್ನ ನುಡುವೆಯಿಂದು ಇಲ್ಲವೊಂದು ಭಾವವು

ನನ್ನ ನಿನ್ನೊಲವಿನ ವೀಣೆ  ತಂತಿಹರಿದು ಬಿದ್ದಿರಲು
ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾವನಾತ್ಮಕವಾಗಿ ಚೆನ್ನಾಗಿದೆ. ಆದರೆ ಯಾಕೆ ಈ ನಿರಾಸೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.