ಆ ಸಂಖ್ಯೆ ಕನ್ನಡ ದಲ್ಲಿ ಬರೆಯಲಾಗಿತ್ತು !!!

4

ಈದೀಗ ಅಟೋ ದಲ್ಲಿ ಕಛೇರಿಗೆ ಬರ್ತಾಯಿದ್ದೆ ಸರಿಯಾಗಿ ಮಿನರ್ವ ಸರ್ಕಲ್ಗೆ ಸಿಗ್ನಲ್ ಬಿತ್ತು .
ಆದರೆ ನನ್ನ ಮುಂದೆ ಇರೋ ಆಟೋದವ ಅದನ್ನ ಲೆಕ್ಕಿಸದೇ ಹಾಗೆ ಹೊರಟುಹೋದ
ಅಲ್ಲೇ ಇದ್ದ ಪೋಲಿಸ ಪೇದೆ ಕಣ್ ಕಣ್ ಬಿಟ್ಟು ತುಂಬಾ ಶ್ರಮಪಟ್ಟು ಆ ಗಾಡಿ ಸಂಖ್ಯೆ ಬರೆದು ಕೊಳ್ಳಲು
ಪ್ರಯತ್ನ ಪಟ್ಟ ಆದರೆ ಆಗಲೇ ಇಲ್ಲ
ಯಾಕೆಂದರೆ

ಆ ಸಂಖ್ಯೆ ಕನ್ನಡ ದಲ್ಲಿ ಬರೆಯಲಾಗಿತ್ತು.

ಇದು ಕರ್ನಾಟಕ !!!
ನಮ್ಮ ಬೆಂಗಳೂರು !!!

********************
ಎಮ್.ಡಿ.ಎನ್.ಪ್ರಭಾಕರ
*********************

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನ ಗೆಳೆಯನ ಕಾರಿನ ಸಂಖ್ಯೆಯೂ ಕನ್ನಡದಲ್ಲಿದೆ.
ಪೋಲಿಸ್ "ಕನ್ನಡದಲ್ಲಿ ಯಾಕೆ ಬರೆದಿರಿ ? ನೋಟ್ ಮಾಡಿಕೊಳ್ಳಲು ಕಷ್ಟ" ಎಂದು ಕೇಳಿದ.
ಹಾಗಿದ್ದರೆ "ಕನ್ನಡ ಕಲಿಯಿರಿ" ಎಂದು ಹೇಳಿ ಗದರಿಸಿ ಬಂದೆವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಳ್ಳೆ ತಮಾಷೆ....ಕರ್ನಾಟಕದಲ್ಲೆ ಕನ್ನಡಕ್ಕೆ ಎಷ್ಟೊಂದು ಆಧ್ಯತೆ ಅಂದ್ರೆ...ಇನ್ನು ಬೇರೆ ಕಡೆ ದೇವ್ರೆ ಗತಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್! ನನ್ನ ಬೈಕಿನ ಸಂಖ್ಯೆ ಕೂಡ ಕನ್ನಡದಲ್ಲಿದೆ. ಒಮ್ಮೆ ಓವರ್ ಸ್ಪೀಡ್ ಮಾಡುತ್ತಿದ್ದೆನೆಂದು ನನ್ನನ್ನು ನಿಲ್ಲಿಸಿದ ಪೋಲಿಸ್, ನಂಬರ್ ಬರ್ಕೊಳ್ಳೋಕೆ ಕಷ್ಟ ಪಡ್ತಿದ್ರು. ಓವರ್ ಸ್ಪೀಡಿಂಗ್ ಅಂದ್ರೆ ಜಾಸ್ತಿ ಕೊಡ್ಬೇಕಾಗತ್ತೆ, ಡಿಫೆಕ್ಟೀವ್ ನಂಬರ್ ಬೋರ್ಡ್ ಅಂತ ದಂಡ ಹಾಕ್ತೀವಿ ನೂರು ರೂಪಾಯಿ ಕೊಡಿ ಅಂದ್ರು.. ನಾನು ಹುಶಾರಾಗ್ಬಿಟ್ಟು ಏನ್ ಸರ್ ಕನ್ನಡದಲ್ಲಿ ನಂಬರ್ ಹಾಕಿದ್ರೆ ನಿಮ್ಗೆ ತೊಂದ್ರೇನಾ? ಕನ್ನಡಕ್ಕೆ ನೀವು ಕೊಡೋ ಮರ್ಯಾದೆ ಇದೇನ? ಅಂತ ರೇಗಾಡೊಕ್ ಶುರು ಮಾಡ್ದೆ. ಕೊನೇಗೆ ಐವತ್ತು ರೂಪಾಯಿ ಈಸ್ಕೊನ್ಡ್ ಬಿಟ್ರು..
--ಇದು ಮೂರ್ನಾಲ್ಕು ವರ್ಷದ ಹಳೆ ಕತೆ. ನಾನು ಈಗ ಓವರ್ ಸ್ಪೀಡ್ ಮಾಡಲ್ಲ ಹಾಗೂ ಪೋಲಿಸರಿಗೆ ಲಂಚ ಕೂಡ ಕೊಡಲ್ಲ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಅವರಿಗೆ ಕನ್ನಡ ಸಂಖ್ಯೆಗಳೇ ಮರೆತುಹೋಗಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.