ಕರಗಿಹೋಗಲಿ ನಿರಾಶೆಯ ಕಾರ್ಮೋಡ

0

ಮತ್ತೆ ಹುಟ್ಟಿಬರಲಿ ನವಜೀವನೋತ್ಸಾಹ
ಕರಗಿಹೋಗಲಿ ನಿರಾಶೆಯ ಕಾರ್ಮೋಡ

ಆಗದೆಂದೆನುವ ಮಾತು ನೀನಾಡಬೇಡ
ನೀ ಮಾಡದ ಹೊರತು ಸಾಗದು ಕೆಲಸನೋಡ

ನಿನ್ನ ಕನಸುಗಳಿಂದು ಗರಿಬಿಚ್ಚಿ ಹಾರಲಿ
ಕೀಳುರಿಮೆಯ ಕೊಳೆ ತೊಳೆದುಹೊಗಲಿ

ಮುಂದೆಸಾಗಲಿ ಹೀಗೆ ಗುರಿಯೆಡಗೆ ಪಯಣ
ತಿರುಗಿ ನೋಡದಿರು ಹಿಂದೆ,ನಡೆ ಮತ್ತದೇ ಪಯಣ

ಸೋಲಿನಲಿ ಗೆಲುವಿನಲಿ ಆ ದೇವ ಜೊತೆಗುಂಟು
ಚಿಂತೆಯಾಕಿನ್ನು ಬಿಡು, ಮನಕುಗ್ಗಿಸುವ ಮಾತು

ಗುರಿ ತಲುಪುವ ಭರದಿ ಗುರಿಯೆಡೆಗೆ ಸಾಗು
ಬೀಳುಗಳ ಕಡೆಗಣಿಸಿ ಮುನ್ನುಗ್ಗಬೇಕು

ಹಾಕು ಹೆಜ್ಜೆಯ ಹಾಕು,ಹುಟ್ಟಿಬರಲಿ ನವಜೀವನೋತ್ಸಾಹ
ಕರಗಿಹೋಗಲಿ ನಿರಾಶೆಯ ಕಾರ್ಮೋಡ.

********************
ಎಮ್.ಡಿ.ಎನ್.ಪ್ರಭಾಕರ
********************

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜಕ್ಕೂ ಹುಮ್ಮಸ್ಸು ತುಂಬಿಸುವ ಕವನ
ಮನದ ಉಲ್ಲಾಸವೇ ಎಲ್ಲದಕೆ ಕಾರಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಳ ,ಉತ್ಸಾಹದ ಪದಗಳು ಮೆಚ್ಚುಗೆಯಾಯ್ತು. ಕೀಲಿಮಣೆಯಲ್ಲಿ ಶಿಫ್ಟ್ ಮನೆಯದ್ದು ಎಲ್ಲರಿಗೂ ಇರುವ ತಾಪತ್ರಯವೇ. ಅದರಿಂದ ಕೆಲವು ತಪ್ಪುಗಳಾಗಿವೆ.

[ಕೊಲೆ ತೊಳೆದುಹೊಗಲಿ]
ಕೊಳೆ ತೊಳೆದು ಹೋಗಲಿ

[ಸೋಲಿನಲಿ ಗೆಲುವಿನಲಿ ಆ ದೇವ ಜೋತೆಗುಂಟು
ಚಿಂತೆಯಾಕಿನ್ನು ಬಿಡು, ಮನಕುಗ್ಗಿಸುವ ಮಾತು]

ಸೋಲಿನಲಿ ಗೆಲುವಿನಲಿ ಆ ದೇವ ಜೊತೆಗುಂಟು
ಚಿಂತೆಯಾಕಿನ್ನು ಬಿಡು, ಮನಕುಗ್ಗಿಸುವ ಮಾತು
--------------------------------------------
ಪ್ರಾಸಕ್ಕಾಗಿ ಕೊಂಚ ಬದಲಾವಣೆ ಮಾಡಿದರೆ ಹೇಗೆ/

[ಗುರಿ ತಲುಪದಿದ್ದರೂ ಗುರಿಯೆಡೆಗೆ ಸಾಗು
ಮನಸುಹಾಕುವ ಸೋಗಿಗಂಜಿ ಹಿಂಜರಿಯದಿರು]

ಗುರಿ ತಲುಪುವ ಭರದಿ ಗುರಿಯೆಡೆಗೆ ಸಾಗು
ಬೀಳುಗಳ ಕಡೆಗಣಿಸಿ ಮುನ್ನುಗ್ಗಬೇಕು

ಗುರಿತಲುಪಲಿಲ್ಲವೆಂಬ ಋಣಾತ್ಮಕ ಚಿಂತನೆಯೇ ಬೇಡ, ಅದರ ಬದಲು ಗುರಿತಲುಪುವ ವೇಗವನ್ನು ಹೆಚ್ಚಿಸುವುದು ಸೂಕ್ತ ವಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ತಮ್ಮ ಯೋಚನೆ ತುಂಬಾ ಸರಿಯಿದೆ ಗುರಿತಲುಪಲಿಲ್ಲವೆಂಬ ಋಣಾತ್ಮಕ ಚಿಂತನೆಯೇ ಬೇಡ, ತಮ್ಮ ಸಲಹೆಗೆ ನಾನು ಆಭಾರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಪ್ರೋತ್ಸಾಹದ ಕವಿತೆ ಚೆನ್ನಾಗಿದೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.