" ಸಂತ "

0

ಗವಿಯಲ್ಲಿ ,ಗುಹೆಯಲ್ಲಿ
ಹಿಮಾಲಯದೆತ್ತರದಲ್ಲಿ,
ಕಾಡಲ್ಲಿ ,ವನದಲ್ಲಿ
ಪ್ರಪಂಚದ ದೂರಿನಲ್ಲಿ
" ಸಂತ " ನಾಗುವದು ಸುಲಭ.

ನಾಡಲ್ಲಿ ,ಬೀಡಲ್ಲಿ
ಜನ ಜಂಗುಳಿಯಲ್ಲಿ
ನೂರೆಂಟುತಾಪಗಳ ಮಧ್ಯದಲ್ಲಿ
ಘೋರ ಸಂಸಾರದ ಸುಳಿಯಲ್ಲಿ
"ಸಂತ " ನಾಗುವುದೇ ಶ್ರೇಷ್ಠ.

********************************
ಎಮ್.ಡಿ.ಎನ್.ಪ್ರಭಾಕರ
********************************

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅರ್ಥಗರ್ಭಿತವಾಗಿದೆ ಕವನ.

ಥಟ್ಟನೆ ಬಂದ ಬಂದ ಪ್ರತಿಕ್ರಿಯೆ:

ಅಂತಾದೊಡೆ ಎಲ್ಲರೂ ಕೂಗುವರು ಸಂತ ಸಂತ
ಇಂತಾದೊಡೆ ದೂಷಿಸುವರಾತನನು ಹುಚ್ಚನಂತ

ಸಂದೇಹ:
ಅಧ್ಯಾತ್ಮ ಸರೀನಾ...ಆಧ್ಯಾತ್ಮ ಸರೀನಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು , ಅಧ್ಯಾತ್ಮ ಸರಿ ಬಳಕೆ ಅನ್ಸುತ್ತೆ. ಥಟ್ಟನೆ ಬಂದ ಬಂದ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೊ. ಜಿ. ವೆಂಕಟಸುಬ್ಬಯ್ಯ ನವರ ನಿರ್ವಚನದ ಪ್ರಕಾರ ಎರಡೂ ಪದಗಳೂ (ಅಧ್ಯಾತ್ಮ ಮತ್ತು ಆಧ್ಯಾತ್ಮ ) ಬಳಕೆಯಲ್ಲಿವೆ

http://www.baraha.com/kannada/index.php

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೇಷ್ಠ ಹಾಗು ಹೆಚ್ಚು ಕಮ್ಮಿ ಅಸಂಭವ ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೇನಿಲ್ಲ ವಿನಯಕುಮಾರ್, ಅದು ಅಸಂಭವವೇನಲ್ಲ , ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಹೇಗೆ?
ಅದು ಹೆಚ್ಚು ಕಮ್ಮಿ ಅಸಂಭವ ಹಾಗೂ ಅತ್ಯಂತ ಕಠಿಣವಿರಬೇಕಲ್ವೇ?
ಹಾಗಿದ್ದರೆ ತಾನೆ ಅದು ಶ್ರೇಷ್ಠವೆನಿಸುವುದು..
ಪರಿಹರಿಸಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಲ್ಲ ಅದು ಕಷ್ಟ ಸಾಧ್ಯ ಹೊರತು ಅಸಂಭವ ಅಥವಾ ಅಸಾಧ್ಯ ವಲ್ಲವಲ್ಲ , ಅದು ಸುಲಭ ಸಾಧ್ಯವಲ್ಲ ಹಾಗೆ ಅಸಾಧ್ಯವೂ ಅಲ್ಲ ಅದಕ್ಕೆ ಅದು ಶ್ರೇಷ್ಠ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.