manjunathsinge ರವರ ಬ್ಲಾಗ್

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೧

ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು
ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ
ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮ ಚಂತನಾ ಪ್ರಪಂಚ ಎಷ್ಟೊಂದು
ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ
ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ
ಸಿಕ್ಕಿರಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲೇ ಆ ಆಸೆ ಈಡೇರಬಹುದು ಅಂತ ಊಹೆ ಕೂಡ
ಮಾಡಿರಲಿಲ್ಲ. ಒಂದು ವಾರ ಕೆಲಸದಿಂದ ರಜೆ ಗಿಟ್ಟಿಸಿಕೊಂಡು ಆದಷ್ಟು ಊರುಗಳಿಗೆ
ಭೆಟ್ಟಿಕೊಟ್ಟೆ. ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ
ನಾಚಿಕೆ ದಿನೆ ದಿನೆ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು
ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ
ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ಹತ್ತು ದಿನಗಳ ಅಲೆದಾಟ
ಅವಿಸ್ಮರಣೀಯವಾದರೂ, ಅಪೂರ್ವ ಅನುಭವ ಸಿಕ್ಕಿದ್ದು ಮೈಲಾಪುರದ ಜಾತ್ರೆಯಲ್ಲಿ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಂಜಣ್ಣ, ನಾವಿರೋದೆ ಹಿಂಗೆ!

ಮೊನ್ನೆ ಕಾಕಾ(ಚಿಕ್ಕಪ್ಪ) ಊರಿಂದ ಬಂದಿದ್ದ. ಮೊದಲ ಬಾರಿಯೇನಲ್ಲ. Promotion ಫೈಲನ್ನು ಒಂದೇ ಆಫೀಸಿನ ಮತ್ತೊಂದು ಕೋಣೆಗೆ ಸಾಗಿಸಲು ಬೆಂಗಳೂರಿಗೆ ಮೂರು ಬಾರಿ ಬಂದಿದ್ದ.
"ಯಾಕಪ್ಪ ಹಿಂಗೆ?" ಅಂದೆ.
"Head ಆಫೀಸಲ್ಲಿರೋ IAS officer ಗೆ ಮೂಡ್ ಬರ್ಬೇಕು, ಬಂದ್ ಮೇಲೆ documents ಗೆ ಸಹಿ ಹಾಕ್ಬೇಕು, ಆಮೇಲೆ ಅವನ PA ಗೆ ಮೂಡ್ ಬಂದು, promotion ಪತ್ರ ನಮ್ಮ Director ಗೆ ಕಳಿಸಿದ ಮೇಲೆ ನನ್ನ promotion!"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಗತ್ ಸಿಂಗ್: ದಾರಿ ಆವುದಯ್ಯ ವೈಕುಂಠಕೆ?

ಕೆಲವು ದಿನಗಳ ಹಿಂದೆ "Poverty Talk - A new fashion" ಅಂತ ಒಂದು ಲೇಖನ ಬರೆದಿದ್ದೆ. ಅದನ್ನು ಓದಿ ನನ್ನ ಗೆಳೆಯನೊಬ್ಬ, ".. ಜೀವನದಲ್ಲಿ ಯಾರೂ ಮತ್ತೊಬ್ಬರನ್ನು ಸಹಾನುಭೂತಿಯಿಂದ ನೋಡುವುದೇ ಇಲ್ಲ, ಎಲ್ಲರಿಗೂ ತಮ್ಮದೇ ಚಿಂತೆ, ಎಲ್ಲರೂ ಸ್ವಾರ್ಥಿಗಳು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಮ್ಮ ರತ್ನ Excellenಟು!

ಜೀವನ, ಭಾವನೆಗಳ ಒಂದು ಕೊನೆಯಿಲ್ಲದ ಸರಪಳಿ. ಮೊದಮೊದಲು ನಮ್ಮೆಲ್ಲರ ಭಾವನೆಗಳ ಮೂಲ ಯಾವುದು ಎಂಬುದರ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು "ಸ್ಪೂರ್ತಿ" ಎಂಬ ಲೇಖನವನ್ನು ಬರೆದಿದ್ದೆ [ಓದಲು ಇಲ್ಲಿ Click ಮಾಡಿ]. ಪ್ರತಿಯೊಂದು ಕ್ಷಣವೂ ನಾವು ಒಂದಿಲ್ಲ ಒಂದು ವಿಷಯದಲ್ಲಿ ನಮ್ಮನ್ನು ನಾವು ಮಗ್ನರನ್ನಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ನಮ್ಮ ಮನಸ್ಸು ಯಾವುದೋ ವಿಷಯವನ್ನು ಮೆಲುಕು ಹಾಕುತ್ತ ದೇಶದೇಶಾಂತರ ಸುತ್ತಾಡುತ್ತಿರುತ್ತದೆ. ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ ಥಟ್ಟನೆ ಹೊಳೆದು ನಮ್ಮನ್ನು ಅತೀವ ಸಂತೋಷಕ್ಕೆ ಗುರಿಮಾಡುತ್ತದೆ. ಆ ಅನುಭವವನ್ನು ನೆನೆದರೆ ಮತ್ತೆ ಅದೇ ಥರದ ರೋಮಾಂಚನ ಸಿಗುವುದಿಲ್ಲ. ಆ ಅನುಭವವನ್ನು ಬೇರೊಬ್ಬದ ಜೊತೆ ಹಂಚಿಕೊಂಡು, ಅವರೂ ಆ ರೋಮಾಂಚನವನ್ನ ಅನಭವವಿಸುವಂತೆ ಮಾಡುವುದು ಹೇಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೊಸತನದ ಹಳೆ ಕಥೆ

ಬೀರ್ ಹೀರಿ "ಎಂಡ್ಕುಡ್ಕ ರತ್ನ ನಂಜಿನ ಹೊಗಳೊ" ಹಂಗೆ ನನ್ನ ಗೆಳೆಯ 'ವಿಶ್ವ' ನನ್ನ ಬ್ಲಾಗ್ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸುತ್ತಿದ್ದ. ಬಡಪಾಯಿ ನಾನು, ನಿಜ ಇರಬಹುದೇನೊ ಅನ್ಕೊಂಡು, ಸ್ವರ್ಗಕ್ಕೆ ಮೂರೇ ಗೇಣು ಅಂತ ಎಣಿಸ್ತಿದ್ದೆ. "ಕುಡುದ್ ಬಿಟ್ ಮಾತಾಡ್ತವ್ನೆ ನನ್ ಮಗ" ಅಂತ ಕೊಂಚ ಬೇಜಾರೇನೊ ಆಯಿತು. ಅವನು ಅಂದಿದ್ರಲ್ಲಿ ಸ್ವಲ್ಪನಾದ್ರು ನಿಜ ಇರಬೇಕಲ್ಲ ಅಂತ ಸಮಧಾನ ಪಟ್ಟುಕೊಂಡೆ. ಅವನು ಯಾವುದೇ ಸಂಧರ್ಭದಲ್ಲಿ ಹಿಂಗಿಂಗೇ ಪ್ರತಿಕ್ರಿಯೆ ಕೊಡ್ತಾನೆ ಅಂತ ಹೇಳೊಕ್ಕಾಗಲ್ಲ. ಅವಾಗಾವಾಗ ಮಖದ ಮೇಲೆ ವಾನರನ ಗುಣಗಳು ಪ್ರತಿಬಿಂಬಿಸುತ್ತಿರುತ್ತವೆ! ಅದೂ ಒಂದ್ ರೀತೀಲಿ ವಿನೋದ ಪ್ರವೃತ್ತಿ (sense of humour) ಅನ್ಕೊಬಹುದು. ಮನಸ್ಸು ಮಾತ್ರ ಒಳ್ಳೇದು. ಅವನ ಒಂದು ಪ್ರಶ್ನೆ ಮಾತ್ರ ನನ್ನನ್ನು ಗೊಂದಲಕ್ಕೆ ಸಿಲುಕಿಸಿ ಬಿಡುತ್ತೆ. "ಮತ್ತೇನ್ ವಿಷೇಶ?" ಅಂತ. ನನ್ನ ಉತ್ತರ ಮಾತ್ರ: "ಏನಿಲ್ಲಪ್ಪ ಅದೇ ಹಳೇ ಲೈಫು" ಅಂತ. ನಿನ್ನಂಥೊರು ಇನ್ನು ಉಸಿರಾಡ್ತಿರೋದೇ ತಪ್ಪು ಅನ್ನೊ ಹಾಗಿತ್ತು ಅವನ ಪ್ರತಿಕ್ರಿಯೆ!

ಅವನು ಹೇಳೊ ಮಾತಿನನಲ್ಲಿ ಸ್ವಲ್ಪ ಅರ್ಥ ಇತ್ತು ಅಂತ ಕಾಣುತ್ತೆ. ಬೆಳಿಗ್ಗೆ 9 ಗಂಟೆಗೆ ಆಫೀಸಿಗೆ ಬಂದು, ಕಾಫಿ ಕುಡಿದು, ಅವರಿವರ ಹತ್ರ ಸ್ವಲ್ಪ ಹರಟೆ ಹೊಡ್ದು, ಮೇಲ್ ಚೆಕ್ ಮಾಡಿ, ಇದ್ದ ಕೆಲಸ ಮಾಡಿ, lunch time ಅಲ್ಲಿ ಎಲ್ಲರ ಜೊತೆ ಹರಟೆ ಹೊಡಿಯುತ್ತ, ಅತ್ತಿತ್ತ ಕಣ್ಣು ಹಾಯಿಸಿ ಯಾರಾದ್ರು ಕಣ್ಣು ತಂಪು ಮಾಡೋರ್ ಸಿಗ್ತಾರ ಅಂತ ನೋಡಿ, ರೇಡಿಯೊ ಮಿರ್ಚಿಯಲ್ಲಿ ಹೇಳೋ ಹಾಗೆ "ಸಕ್ಕತ್ hot ಮಗಾ!" ಅಂದು, ಊಟ ಮುಗಿಸಿ, ಉಳಿದ ಕೆಲಸ ಮಾಡಿ ಮತ್ತೊಂದ್ ಸಲ ಟೀ ಕುಡ್ದು, "ಹತ್ತಿರದ ಗೆಳೆಯರು" ಅನಿಸಿಕೊಂಡವರ ಜೊತೆ chat ಮಾಡಿ, ಉಫ್ssssss... ಅನ್ನೊ ಹೊತ್ತಿಗೆ 6 ಗಂಟೆ! ಮನೆಗೆ ಹೋಗಿ ಟೀವಿ ನೋಡಿ, ಊಟ ಮಾಡಿ, ಕಥೆ ಕಾದಂಬರಿ ಅಂತ ಕಾಲ ಕಳೆದು ಮಲಗಿಕೊಂಡು ಬೆಳಿಗ್ಗೆ ಎದ್ರೆ, ಮತ್ತೆ ಅದೇ ಹಳೇ ಲೈಫು! ಇನ್ನು weekendಅಲ್ಲಿ ಸಿನಿಮಾನೋ, ಪ್ರವಾಸನೋ, ಗೆಳೆಯರ ಜೊತೆ ಹರಟೆ, ಅಥವ, Forum, Inox, ಗರುಡ mall ಅನ್ನೋದ್ರಲ್ಲೇ ಕಾಲ ಹೋಗಿ ಬಿಡುತ್ತೆ. ಅಷ್ಟಾದ್ರೆ ಮತ್ತೆ "monday morning" ರಾಗ ಶುರು! ತಿಂಗಳಿಗೊಮ್ಮೆ ಊರಿಗೆ ಹೋಗಿ ಅಮ್ಮನ ಕೈಯಿಂದ ಮಾಡಿದ ಮೃಷ್ಟಾನ್ನ ಸವಿದು, 10ಕೇಜಿ ತೂಕ ಜಾಸ್ತಿ ಮಾಡ್ಕೊಂಡು ವಾಪಸ್ ಬಂದುಬಿಟ್ರೆ "ಸಾಫ್ಟ್ ವೇರ್ ಕೂಲಿ" (ನನ್ನ ಗುರುಗಳೊಬ್ಬರು ನನ್ನನ್ನ ಹಾಗೆಯೇ ಕರೆಯೋದು)ಯ ಬದುಕು ಮತ್ತೆ ಮುಂದುವರಿಯುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - manjunathsinge ರವರ ಬ್ಲಾಗ್