ಮೂಗುತಿ!

0

ಬಂಗಾರದೋಲೆಯಲ್ಲ,
ಕೈ ಬಳೆ ನಾದವಲ್ಲ,
ಕಾಲ್ಗೆಜ್ಜೆ ಸದ್ದಲ್ಲ,
ನನ್ನೊಲವಿನಾರತಿ ಈ ಮೂಗುತಿ.

ಚೆಲುವಿನ ನಾಸಿಕ,
ಶೃಂಗಾರದ ಪ್ರತೀಕ,
ಬಂಗಾರದ ತಿಲಕ,
ನನ್ನೊಲವಿನಾರತಿ ಈ ಮೂಗುತಿ.

ಬೆರಗು ಕಣ್ಗಳು,
ಚೆಂದುಟಿ ಮೂಗು,
ಕೆಂದಾವರೆ ಕೆನ್ನೆ,
ಕಲಶವಿಟ್ಟಂತೆ ಗುಡಿಗೆ,
ಬೆರಗಾಗುವಂತೆ ಅಡಿಗಡಿಗೆ,
ನನ್ನೊಲವಿನಾರತಿ ಈ ಮೂಗುತಿ.

ಫಳಫಳನೆ ಹೊಳೆಯುವ,
ನನ್ನನ್ನೇ ತೋರುವ,
ತೊರೆಯದಂಥ ಭಾವವ,
ಒಡಮೂಡಿ ರಾಗವ,
ನನ್ನೊಲವಿನೊಡನಾಡಿ ಈ ಮೂಗುತಿ.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾರ ಮೂಗುತಿ ಕಣ್ಣಿಗೆ ಬಿದ್ದು ಈ ಮೂಗುತಿ ಇಲ್ಲಿ ಬಿತ್ತೋ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆ ಸುಮ್ಮನೆ, ಮೂಗುತಿ ಬಗೆಗಿನ ವ್ಯಾಮೋಹ. :P :-P :tongue:

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಮೂಗುತಿ ಬಗೆಗಿನ ವ್ಯಾಮೋಹ>>
ವ್ಯಾಮೋಹ ಮೂಗುತಿ ಬಗ್ಗೆಯೋ ಅಥವಾ ಅದನ್ನು ಧರಿಸಿದವರ ಬಗ್ಗೆಯೋ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧರಿಸಿದವರಾದ್ದರಿಂದ ಮೂಗುತಿಯ ಬಗ್ಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.