ಪ್ರತಿಮೆಗೆ ಬಂದ ಪ್ರತಿಕ್ರಿಯೆ

0

ಅಂತೂ ನನ್ನ ಮನದಾಳದ ಮಾತಿಗೆ ಪದವು ವಿನುತಾರವರಿಂದ ಹೊರಬಂತು....
ಅದಕ್ಕೆ ದನ್ಯವಾದಗಳು.

<<<<ಮಸೋ೦ರೆಯವರೇ,

ನನ್ನನ್ನು ಕಾಡುವ ಪ್ರಶ್ನೆಯೆ೦ದರೆ, ಕಲಾವಿದರನ್ನು ಇ೦ತವೇ ಚಿತ್ರಗಳು ಯಾಕೆ ಕಾಡುತ್ತವೆ? ಇ೦ತಹ ಶೋಷಿತ, ನಿರ್ಗತಿಕತನ, ಬಡತನವೇ ಯಾಕೆ ಅವರ ವಸ್ತುಗಳಾಗುತ್ತವೆ? ಬೇರೆ ಯಾವುದೇ ವಸ್ತುಗಳಲ್ಲಿ ಕಲೆ ಎ೦ಬುದು ಇರುವುದಿಲ್ಲವೇ? ಅಥವಾ ಅದರಲ್ಲಿ ನೈಜತೆ, ಜೀವ೦ತಿಕೆ ತರಲಾಗುವುದಿಲ್ಲವೇ? ಯಾವುದೇ ಬಗೆಯ ಕಲೆಯ ಪ್ರಾಕಾರವನ್ನೇ ತೆಗೆದುಕೊಳ್ಳಿ, ಚಿತ್ರಕಲೆ, ಛಾಯಾಗ್ರಹಣ, ಸಿನೆಮಾ, ಬರವಣಿಗೆ... ಮನ್ನಣೆ ದೊರೆಯುವುದು ಇ೦ತಹ ವಿಷಯಗಳಿಗೇ, ಅದೂ ಪಾಶ್ಚಿಮಾತ್ಯ ಮನ್ನಣೆ, ಪ್ರಶಸ್ತಿಗಳು. (ಪುಲಿಟ್ಜರ್ ಪ್ರಶಸ್ತಿ ಗಳಿಸಿದ ಕೆವಿನ್ ಕಾರ್ಟನ್ ನ ಚಿತ್ರ, ಅಡಿಗರ ವೈಟ್ ಟೈಗರ್, ಆಸ್ಕರ್ ವಿಜೇತ ಸ್ಲಮ್ ಡಾಗ್.....) ಇಲ್ಲೆಲ್ಲ ವಿಷಯಗಳು ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ, ಸುಡಾನ್, ಜಿ೦ಬಾಬ್ವೆ ಇತ್ಯಾದಿ..
ನಿಮ್ಮ ಈ ಚಿತ್ರ ಇ೦ತಹ ಅವಕಾಶವಾದಿ ಕಲಾವಿದರನ್ನು ಅಣಕವಾಡುವ೦ತಿದೆ. >>>>

ಇದೂ ನನ್ನ ಚಿತ್ರದ ಉದ್ದೇಶಗಳಲ್ಲಿ ಒಂದಾಗಿದೆ.
ಇದೇ ಪ್ರಶ್ನೆ ನನ್ನನ್ನು ಸದಾಕಾಡುತ್ತದೆ. ಅದೇಕೆ ಇಂತಹ ಚಿತ್ರಗಳೆ ಕಲಾವಿದರಗೆ ಸದಾ ಆಸಕ್ತಿಕರ ವಿಶಯವಾಗುತ್ತದೆ... ಇಂತಹ ವಿಶಯಗಳ ಬಗ್ಗೆ ಪುಂಖಾನುಪುಂಕವಾಗಿ ಬರೆದು ಪ್ರಶಸ್ತಿ ಗಿಟ್ಟಿಸಿದವರೆಷ್ಟೋ ಜನರಿದ್ದಾರೆ.ಇಂತಹ ವಿಶಯಗಳ ಅಡಿಪಾಯದ ಮೇಲೆ ತಮ್ಮಹೆಸರಿನ ಮಹಲುಗಳು ಕಟ್ಟಿದ ಅದೆಷ್ಟೊ ರೀಲ್ ಗಳನ್ನು ಸುತ್ತಿದ ನಿರ್ದೇಶಕರಿದ್ದಾರೆ...ಅವರಿಗೆಲ್ಲಾ ಯಾಕೆ ಹೀಗೆ ಕಾಡುತ್ತವೆ.

ಹಾಗೆ ಮರೆಯಬಾರದ ಇನ್ನೊಂದು ವಿಶಯವೇನೆಂದರೆ ಪುಲಿಟ್ಜರ್ ಪ್ರಶಸ್ತಿ ಗಳಿಸಿದ ಕೆವಿನ್ ಕಾರ್ಟನ್ ಆ ಸೂಡಾನ್ ಚಿತ್ರಗಳನ್ನು ತೆಗೆದು ಪ್ರಶಸ್ತಿ ಪಡೆದ ನಂತರ, ಆ ಚಿತ್ರಗಳು ಮೂಡಿಸಿದ ಶಾಶ್ವತ ಗುರುತುಗಳಿಂದ ಹೊರಗೆ ಬರಲಾರದೆ, ಮತ್ತೆ ಸೂಡಾನಿಗೆ ಬಂದು ಅಲ್ಲೇ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ.

ಕಲಾವಿದರಲ್ಲಿ ಕೆಲವರು ಇಂತಹ ವಿಶಯಗಳಿಂದ ಸ್ಪೂರ್ತಿಯಾಗಿ ತಮ್ಮ ಹೆಸರನ್ನು ಬೆಳೆಸಿಕೊಳ್ಳುತ್ತಾರೆ. ಇನ್ನು ಕೆಲವರು ಅಂತಹ ಸನ್ನಿವೇಶಗಳಿಗೆ ಮಿಡಿದು ಅದರಲ್ಲೆ ಮರುಗುತ್ತಾ ತಮ್ಮನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾ ಕಳೆದು ಹೋಗುತ್ತಾರೆ. ಇದಕ್ಕೆ ಚಿತ್ರ ಕಲಾವಿದರಲ್ಲಿ ಗಾಗಿನ್ ಒಳ್ಳೆಯ ಉದಾಹರಣೆ.

ನಾನು ಈ ಎರೆಡು ಗುಂಪುಗಳಲ್ಲಿ ಎಲ್ಲಿಗೆ ಸೇರುತ್ತೇನೊ ನನಗೆ ತಿಳಿಯದಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ದಯವಿಟ್ಟು ಯಾವ ಗುಂಪಿಗು ಸೇರಬೇಡಿ.....ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡಿ (ನನ್ನ ಅನಿಸಿಕೆ)
(ಆ ಚಿತ್ರಗಳು ಮೂಡಿಸಿದ ಶಾಶ್ವತ ಗುರುತುಗಳಿಂದ ಹೊರಗೆ ಬರಲಾರದೆ, ಮತ್ತೆ ಸೂಡಾನಿಗೆ ಬಂದು ಅಲ್ಲೇ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ.)
ಮಾಡಿಕೊಳ್ಳಬೇಕಾದ್ದೆ...ಮನಸ್ಥಿತಿ ಹಾಗಾಗುತ್ತದೆ...
ಅದಕ್ಕೆ ನನಗೆ ನೀವು ಅಪ್ಲೋಡ್ ಮಾಡಿಕೊಂಡಿದ್ದ ಫೋಟೋವನ್ನು ನೋಡಲಾಗುತ್ತಿರಲಿಲ್ಲ ಅದಕ್ಕೆ ಬದಲಾಯಿಸಿ ಎಂದು ಕೇಳಿಕೊಳ್ಳುತಿದ್ದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<ದಯವಿಟ್ಟು ಯಾವ ಗುಂಪಿಗು ಸೇರಬೇಡಿ.....ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡಿ >>>
ಕಲಾವಿದನಾದವನು ಸರ್ವೇ ಸಾಮಾನ್ಯವಾಗಿ ಯಾವುದಾದರು ಒಂದು ಗುಂಪಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಕಲಾವಲಯದಲ್ಲಿದೆ, ಅಥವ ಆರೀತಿಯ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ... ಅದರಿಂದ ಹೊರಬಂದು neutral ಆಗಿ ಮುಕ್ತವಾಗಿ ಇರಲು ಪ್ರಯತ್ನಿಸುತ್ತಿದ್ದೇನೆ. ನೋಡೋಣ ಮುಂದೇನಾಗುತ್ತದೆಯೋ ...
<<ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡಿ>>.
ನನಗೆ ಆ ಅವಕಾಶ ಒದಗಿ ಬಂದರೆ ಖಂಡಿತ ಮಾಡುತ್ತೇನೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕಲಾವಿದನಾದವನು ಸರ್ವೇ ಸಾಮಾನ್ಯವಾಗಿ ಯಾವುದಾದರು ಒಂದು ಗುಂಪಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಕಲಾವಲಯದಲ್ಲಿದೆ, ಅಥವ ಆರೀತಿಯ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ>>
ನಿಜವೇ? :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕಲಾವಿದನಾದವನು ಸರ್ವೇ ಸಾಮಾನ್ಯವಾಗಿ ಯಾವುದಾದರು ಒಂದು ಗುಂಪಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಕಲಾವಲಯದಲ್ಲಿದೆ, ಅಥವ ಆರೀತಿಯ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ>>
ನಿಜವೇ? :( >>>>>>>>>>

???????? :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೇರದೇ ಇದ್ದರೂ, ಸುಮ್ಮನೆ ಬ್ರಾಂಡಿಂಗ್ ಮಾಡಿ, ಸೇರಿದ್ದಾರೆಂದು ಹೇಳಿಬಿಡುತ್ತಾರಲ್ಲ...:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.