ಹೀಗೇಕೆ..?

0

ಈ ಚಿತ್ರ ಎಡಿಟ್ ಮಾಡಿದಾಗಿಂದ ಇದರ ಬಗ್ಗೆ ಏನಾದ್ರು ಬರೀಬೇಕು ಅನಿಸ್ತಾ ಇದೆ ಆದ್ರೆ ಏನೂ ಬರಿಯಲಿಕ್ಕ್ ಆಗ್ತಾ ಇಲ್ಲಾ.. ಮುಂದ್ಯಾವತ್ತಾದ್ರು ಬರಿಯೋದಕ್ಕೆ ಇರ್ಲಿ ಅಂತ ಇಲ್ಲಾಕಿದ್ದೀನಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅವಳು ಬೇಗ ಬೇಗ ನಡೆದು ಹೋಗುತ್ತಿದ್ದಳು ತಟ್ಟನೆ ಅವಳ ಕಣ್ಣುಗಳು ಏನನ್ನೊ ನೋಡಿ ಬೆಚ್ಚಿದವಳಂತೆ ಮತ್ತೆ ಹಿಂದೆ ತಿರುಗಿ ನೋಡಿದಳು ಅರೆ ಇದು ಅವನ ಮುರ್ತಿನೆ ಅಲ್ವೆ. ಎಷ್ಟೊ ಸಾರಿ ಅವನನ್ನು ಈ ದಾರಿಯಲ್ಲಿ ಧರಣಿ ಅದು ಇದು ಎಂದು ಹೋರಾಡುತಿದ್ದಿದ್ದನ್ನು ಕಣ್ಣಾರೆ ನೋಡಿದ್ದಳು, ಅವನಲ್ಲಿರುವ ಉತ್ಸಾಹವನ್ನು ಮೆಚ್ಚಿದ್ದಳು. ಇಂಥವರು ಈಗಿನ ಕಾಲದಲ್ಲಿ ಇದ್ದಾರ ಅನಿಸುತ್ತಿತ್ತು.. ಬಡವರಿಗೋಸ್ಕರ ತನ್ನ ಪ್ರಾಣವನ್ನ್ನೆ ಮೀಸಲು ಇಟ್ಟಿದ್ದಾನೆ ಪಾಪ ಎಂದು ಕೆಲವರು, ಬುದ್ಧಿ ಇಲ್ಲ ಆ ರಾಜಕೀಯದವರ ವಿರುದ್ದ ಹೋರಡಕಾಗುತ್ತ....ಎಂದು ಕೆಲವರು ಮಾತನಾಡಿಕೊಳ್ಳುತಿದ್ದಿದು ಇವಳ ಕಿವಿಗು ಬಿದ್ದಿತ್ತು........ತನ್ನ ಕಣ್ಣನ್ನೆ ನಂಬದಾದಳು, ಸುತ್ತಲು ನೋಡಿದಳು ಇದು ಬಡಬಗ್ಗರ ಏರಿಯ ಎಂದು ಯಾರಿಗಾದರು ತಿಳಿಯುತಿತ್ತು....ಈ ದಾರಿಯಲ್ಲಿ ಎಷ್ಟೊ ಬಾರಿ ನಡೆದು ಹೋಗಿದ್ದಳು ಆದರೆ ಎಂದು ಅಷ್ಟಾಗಿ ಗಮನ ಹರಿಸಿರಲಿಲ್ಲ ಇಂದೊ ಏತಕ್ಕೊ ನೋಡುವಂತಾಯಿತು (ತಿಂಗಳಿಮ್ದ ತಾನು ಈ ಕಡೆ ಬಾರದಿದ್ದದ್ದು ನೆನಪಾಯಿತು ಅಷ್ತರಲ್ಲಿ ಎಷ್ಟೊಂದು ಬದಲಾವಣೆ) ಹಾಗೆ ದಿಟ್ಟಿಸಿದಳು.....ಹೌದ್ ಮೊದಲೆಲ್ಲ ಹೊಟ್ಟೆಗು ಇಲ್ಲದೆ ಬರೆ ಮೊಳೆಗಳಂತೆ ಇದ್ದವರು ಇಂದು ಕೈ ಕಾಲು, ಮೈ ತುಂಬಿಕೊಂಡು ಸಂತೋಷದಿಂದ ಓಡಾಡುತ್ತಿದ್ದಾರೆ....ಅವರ ಏರಿಯವೆಲ್ಲ ಸ್ವಚ್ಚವಾಗಿದೆ....ಈ ಹೊಸತಾಗಿ ಸ್ಥಾಪಿಸಿದ ಈ ಹೊಸ ಮುರ್ತಿ ಅನಾವರಣಕ್ಕು ಅವರ ಸಂತೋಷಕ್ಕು ಕಾರಣ ಕೇಳುವಂತಾಯಿತು.....ಅಲ್ಲೆ ಮರದ ಕೆಳಗೆ ಕುಳಿತಿದ್ದ ಒಬ್ಬ ಮಧ್ಯಮ ವಯಸ್ಸಿನ ಹೆಂಗಸನ್ನು ಕೇಳಿದಳು...ಆ ಹೆಂಗಸು ಆ ಮುರ್ತಿಗೆ ಕೈ ಮುಗುಯುತ್ತ ದ್ಯಾವ್ರು ತಾಯಿ ಇವರು ನಮ್ಮ್ ಪಾಲಿಗೆ , ಕೊನೆ ಉಸ್ರು ಗಂಟ ನಮ್ಮಂತ ಬಡುರ್ ಗೋಸ್ಕರ ಸರ್ಕಾರದ ವಿರುದ್ದ ಹೋರಾಡಿ ನಮಿಗೆಲ್ಲ ಒಂದು ನೆಲೆ ಉಳ್ಸಿ....ಜೀವ್ನುಕ್ಕೆ ಅಂತ ಒಂದು ದಾರಿನು ಮಾಡಿ ತಮ್ಮ ಪಿರಾಣ ಬಿಟ್ಟವರೆ.....ಏನ್ ಮಾಡ್ತೀರ ಆ ದ್ಯಾವ್ರು ಅವ್ರ್ ಪಿರಾನನೆ ತಗಂಬಿಟ್ಟ...ಎಂದು ಮತ್ತೊಮ್ಮೆ ಕೈ ಮುಗಿದಳು..ಒಳ್ಳೆಯವ್ರಿಗೆ ಕಾಲ ಇಲ್ಲ ಆ ರಾಜಕೀಯದವರು ನಮಿಗೆ ಇವ್ರು ಇಷ್ಟೆಲ್ಲ ಮಾಡಿದುಕ್ಕೆ ಇವ್ರ್ ಪಿರಾಣನೆ ತಗ........ಎಂದು ಕಥೆ ಹೇಳುತಿದ್ದಳು ಅವಳು ಮುಂದೆ ಹೇಳಿದ ಯಾವ ಮಾತುಗಳು ತನ್ನ ಕಿವಿಗೆ ಬೀಳಲೆ ಇಲ್ಲ, ಮನಸ್ಸು ಏಕೊ ಮುದುಡಿದಂತಾಯಿತು..ತನಗೆ ಗೊತ್ತಿಲ್ಲದೆ ಕಣ್ಣುಗಳು ಮಂಜಾದವು ಸುಮ್ಮನೆ ಮುಂದೆ ನಡೆದು ಹೋದಳು .......( ತಮಾಷೆಗೆ ಬೇಸರ ಮಾಡಿಕೊಳ್ಳಬೇಡಿ ನೀವು ಎಡಿಟ್ ಮಾಡಿದ ಚಿತ್ರಕ್ಕೆ ನಾನು ಒಂದು ಕಥೆಯನ್ನು ಬರೆದೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಮಾಲ್ತಕ್ಕ ಕಥೆ ಚೆನ್ನಾಗಿದೆ
ನಿಮಗೆ ಹೇಗೆ ಕಥೆ ಅಷ್ಟು ಬೇಗ ಹೊಳೆಯುತ್ತೆ ನೀವು ಆಶುಕಥೆಗಾರರು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಳು........ಹೌದು ಕಥೆಗಳು ನನ್ನ್ನ ಕಲ್ಪನೆಯಲ್ಲಿ ಬೇಗ ಮೊಡುತ್ತದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕಥೆಗಳು ನನ್ನ್ನ ಕಲ್ಪನೆಯಲ್ಲಿ ಬೇಗ ಮೊಡುತ್ತದೆ<<

ಕಥೆ ಹೇಳ್ತಿರಾ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ ಮೇಡಂ ನಿಮ್ಮ ಕಥೆ ತುಂಬಾ ಚೆನ್ನಾಗಿದೆ...
ನನ್ನ ಅನಿಸಿಕೆ, ವಿಶಯಕ್ಕೆ ವಿರುದ್ದವಾಗಿದ್ದರು, ನಿಮ್ಮ ದೃಷ್ಟಿಕೋನವು ಒಂದು ರೀತಿಯಲ್ಲಿ ಸರಿ... ನಾನು ಈ ಫೋಟೋ ಎಡಿಟ್ ಮಾಡೊದಿಕ್ಕೆ ಕಾರಣ ನೀವೆ... ನೀವು ಫೋಟೋ ಬದಲಾಯಿಸಿ ಅಂತ ಹೇಳಿದ್ರಲ್ಲಾ ಅದಕ್ಕೆ ಬೇರೆ ಯಾವುದು ಹಾಕಲಿ ಅಂತ ಯೋಚಿಸ್ತಾ ಇದ್ದಾಗ ಈ ಫೋಟೋ ಎಡಿಟ್ ಮಾಡಿದ್ದು. ನನ್ನ ಪ್ರೊಫೈಲ್ನ ಹಿಂದಿನ ಎರೆಡು ಹಾಗು ಈ ಫೋಟೋದಲ್ಲಿರುವ ಬೆತ್ತಲು ಚಿತ್ರಗಳು ಸೂಡನ್ ದು... ನನ್ನನ್ನ ತುಂಬಾ ಕಾಡೋ ದೇಶ ಸೂಡಾನ್...ಎಷ್ಟೆಂದರೆ ನನ್ನ ರೂಮ್ನಲ್ಲಿ ಬರೀ ಇವೇ ಫೋಟೋಗಳನ್ನು ಹಾಕಿಕೊಂಡಿದ್ದೇನೆ. ನನ್ನ ಈಗಿನ ಕಲಾಕೃತಿಗಳಿಗೂ ಇವೇ ರೆಫರೆನ್ಸ್ ಆಗಿವೆ...
ನನ್ನ ಫೋಟೋಗಳಿಂದಾಗಿ ನಿಮಗೆ ಕಷ್ಟವಾಗಿದ್ದರೆ ಕ್ಷಮಿಸಿ....
ನಿಮ್ಮ ಕಥೆ ತುಂಬಾ ಇಷ್ಟವಾಯಿತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕಥೆ ತುಂಬಾ ಇಷ್ಟವಾಯಿತು....
ಧನ್ಯವಾದಗಳು.....ನೀವು ನಿಮ್ಮ ಫೋಟೋವನ್ನು ಬದಲಾಯಿಸಿದ್ದೀರಿ...
(ನನ್ನ ಫೋಟೋಗಳಿಂದಾಗಿ ನಿಮಗೆ ಕಷ್ಟವಾಗಿದ್ದರೆ ಕ್ಷಮಿಸಿ....)
ಹೌದು ಮನಸ್ಸಿಗೆ ತುಂಬಾ ಕಷ್ಟವಾಗುತಿತ್ತು....ಕಷ್ಟಗಳನ್ನು ನೋಡಿದಾಗ ಅದಕ್ಕೆ ಯಾವುದಾದರು ರೀತಿಯಲ್ಲಿ ಸಹಾಯ ಮಾಡಬೇಕು ಇಲ್ಲವಾದರೆ ಸುಮ್ಮನೆ ಮರುಗುವುದು..ಸಂಕಟಪಡುವುದು ತುಂಬಾ ಕಷ್ಟ.....ನನಿಗಂತು ತಡೆಯುವುದಕ್ಕೆ ಆಗುವುದಿಲ್ಲ....ಅದಕ್ಕೆ ನಿಮಗೆ ಚಿತ್ರವನ್ನು ಬದಲಾಯಿಸಲು ಹೇಳುತಿದ್ದಿದ್ದು...ಆದರು ಅದರಲ್ಲು ನಿಮ್ಮ ಹಳೆಯ ಚಿತ್ರಗಳು ಕಂಡುಬಂದಾಗ ನಿಮಗೆ ಅವರ ಬಗ್ಗೆ ಕಾಳಜಿ ಇರಬೇಕೆಂದು ಅರಿತು ಆ ರೀತಿಯ ಕಥೆ ಬರೆದೆ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ನಿಮ್ಮ ಚಿತ್ರಕ್ಕೆ ನನ್ನದೊ೦ದು ಕವನ ಪೇರಿಸಿದ್ದೇನೆ ಬ್ಲಾಗಿನಲ್ಲಿದೆ ನೋಡಿ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಸೋ೦ರೆಯವರೇ,

ನನ್ನನ್ನು ಕಾಡುವ ಪ್ರಶ್ನೆಯೆ೦ದರೆ, ಕಲಾವಿದರನ್ನು ಇ೦ತವೇ ಚಿತ್ರಗಳು ಯಾಕೆ ಕಾಡುತ್ತವೆ? ಇ೦ತಹ ಶೋಷಿತ, ನಿರ್ಗತಿಕತನ, ಬಡತನವೇ ಯಾಕೆ ಅವರ ವಸ್ತುಗಳಾಗುತ್ತವೆ? ಬೇರೆ ಯಾವುದೇ ವಸ್ತುಗಳಲ್ಲಿ ಕಲೆ ಎ೦ಬುದು ಇರುವುದಿಲ್ಲವೇ? ಅಥವಾ ಅದರಲ್ಲಿ ನೈಜತೆ, ಜೀವ೦ತಿಕೆ ತರಲಾಗುವುದಿಲ್ಲವೇ? ಯಾವುದೇ ಬಗೆಯ ಕಲೆಯ ಪ್ರಾಕಾರವನ್ನೇ ತೆಗೆದುಕೊಳ್ಳಿ, ಚಿತ್ರಕಲೆ, ಛಾಯಾಗ್ರಹಣ, ಸಿನೆಮಾ, ಬರವಣಿಗೆ... ಮನ್ನಣೆ ದೊರೆಯುವುದು ಇ೦ತಹ ವಿಷಯಗಳಿಗೇ, ಅದೂ ಪಾಶ್ಚಿಮಾತ್ಯ ಮನ್ನಣೆ, ಪ್ರಶಸ್ತಿಗಳು. (ಪುಲಿಟ್ಜರ್ ಪ್ರಶಸ್ತಿ ಗಳಿಸಿದ ಕೆವಿನ್ ಕಾರ್ಟನ್ ನ ಚಿತ್ರ, ಅಡಿಗರ ವೈಟ್ ಟೈಗರ್, ಆಸ್ಕರ್ ವಿಜೇತ ಸ್ಲಮ್ ಡಾಗ್.....) ಇಲ್ಲೆಲ್ಲ ವಿಷಯಗಳು ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ, ಸುಡಾನ್, ಜಿ೦ಬಾಬ್ವೆ ಇತ್ಯಾದಿ..
ನಿಮ್ಮ ಈ ಚಿತ್ರ ಇ೦ತಹ ಅವಕಾಶವಾದಿ ಕಲಾವಿದರನ್ನು ಅಣಕವಾಡುವ೦ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.