ಕಪಿಯಿಂದ 8 ಪ್ಯಾಕ್ಸ್ ವರೆಗೂ ರೂಪಾಂತರಗೊಂಡ ಹನುಮಂತ

4.2

ರಾಮಾಯಣದ ಒಂದು ಸನ್ನಿವೇಶ.... ಸೀತೆಯನ್ನು ಹುಡುಕುತ್ತಾ ಬಂದ ಕೋತಿಗಳ ಗುಂಪು ರಾಮೇಶ್ವರದ ಬಳಿಯ ಸಮುದ್ರ ತೀರಕ್ಕೆ ಬರುತ್ತದೆ. ಅಲ್ಲಿಂದ ಸೀತೆಯನ್ನು ಹುಡುಕಲು ಅವರು ಸಮುದ್ರವನ್ನು ದಾಟಬೇಕಾಗುತ್ತದೆ. ಆಗಿನ್ನೂ ಫ್ಲೈಟು, ಗ್ಯಾಸ್ ಬಲೂನು, ಹೆಲಿಕಾಪ್ಟರು ಇರಲಿಲ್ಲವಾದ್ದರಿಂದ ಅವರು ಯಾವುದೇ ಸಹಾಯವಿಲ್ಲದೇ ದಾಟಬೇಕಾಗಿರುತ್ತದೆ. ನೀರಲ್ಲಿ ಹೋಗೋದಿಕ್ಕೆ ಅವರಿಗೆ ದೋಣಿಯ ಐಡಿಯಾ ಇನ್ನೂ ಬಂದಿರಲಿಲ್ಲವೇನೊ... ಅಷ್ಟು ದೂರ ಈಜಿ ಗಿನ್ನಿಸ್ ರೆಕಾರ್ಡ್ ಮಾಡೋ ಐಡಿಯಾನೂ ಇರ್ಲಿಲ್ಲವೇನೋ.

ಇನ್ನೇನು ಮಾಡೋದು ಅವರೆಲ್ಲಾ ಮರದಿಂದ ಮರಕ್ಕೆ ಹಾರೋ ತಮ್ಮ ವಂಶಪಾರಂಪರ್ಯ ವಿದ್ಯೆಯನ್ನೆ ನಂಬಿಕೊಳ್ಳಬೇಕಾಯ್ತು. ಆದ್ರೆ ಅವರಿಗೆ ಮರದಿಂದ ಮರಕ್ಕೆ ಹಾರೋಕ್ಕೆ ಬರುತಿತ್ತೇ ಹೊರತು ಸಮುದ್ರಗಳನ್ನಲ್ಲಾ... ಸರಿ ತುಂಬಾ ಚಿಂತೆಯಲ್ಲಿದ್ದ ಅವರಲ್ಲಿ ಸ್ವಲ್ಪ ಬುದ್ದಿವಂತನಾದ ಹಿರಿ ಕಪಿಗೆ ಸಡನ್ನಾಗಿ ನೆನಪಿಗೆ ಬಂತು... ಅದೇನೆಂದರೆ ಮಾನವನ ಗುಣವುಳ್ಳ ಕಪಿಯೊಂದು ನಮ್ಮಲ್ಲಿದೆಯಲ್ಲಾ ಅದನ್ನೇ ಹಳ್ಳಕ್ಕೆ ನೂಕಿದರೆ ಹೇಗೆ ಅಂತ.

ದಾಟಿದರೆ ನಮ್ಮ್ ಲಕ್ಕು, ಇಲ್ಲಾಂದ್ರೆ ಬ್ಯಾಡವಾದ ಲಕ್ಕು.
ಸರಿ ಕುರಿನ ಹಳ್ಳಕ್ಕೆ ನೂಕೋ ಪ್ರೋಗ್ರಾಮು ಶುರುವಾಯಿತು... ಆ ಕುರೀನೆ ಹಳ್ಳಕ್ಕ್ ಬೀಳಿಸೋದಿಕ್ಕೆ ಕಾರಣ ಅವನಲ್ಲಿ ಮಾನವನ ವಿಶೇಷ ಅಂಶ ಇದ್ದಿದ್ದು. ಅದೇನೆಂದರೆ ಸ್ವಲ್ಪ ಗಾಳಿ ಪಂಪ್ ಮಾಡಿದ್ರೂ ಸಾಕು ಫುಲ್ ಉಬ್ಬೋಗೋದು.ಅದು ಸರಿಯಾಗೇ ವರ್ಕೌಟ್ ಆಯ್ತು.. ಆ ಕಪಿ ಹನುಮಂತನಾಗಿ ಸಮುದ್ರ ದಾಟೇ ಬುಟ್ಟ...

ಅದಾದ ನಂತರ ಆ ಕಪಿ ಮತ್ತೆ ಹನುಮಂತನಾಗೋದಿಕ್ಕೆ ಸತತ ಮೂರು ಯುಗಗಳೇ ಬೇಕಾಯ್ತು. ಅಂದರೆ ಈಗಿನ ಕಲಿಗಾಲದವರೆಗೂ ಕಾಯಬೇಕಾಯ್ತು... ರವಿವರ್ಮ, ಎಸ್.ಎಂ ಪಂಡಿತ್ ಹಾಗು ಚಂದಮಾಮ ಖ್ಯಾತಿಯ ಎಂ.ಟಿ.ವಿ.ಆಚಾರ್ಯ ರಂತಹ ಪಾಶ್ಚಿಮಾತ್ಯ ಶೈಲಿಯ ಅಂಗರಚನಾಶಾಸ್ತ್ರದ ಪ್ರಭಾವಿತ ಕಲಾವಿದರು ಬರುವವರೆಗೂ ಕಪಿಯಾಗೇ ಇದ್ದ ಈ ಹನುಮಂತ ಇವರಂತಹ ಕಲಾವಿದರು ಬಂದು ಇವನಲ್ಲಿದ್ದ ಮಾನವ ಗುಣಕ್ಕೆ ಮಾನವನದೇ ದೇಹದ ರೂಪ ಕೊಡಲು ಪ್ರಾರಂಭಿಸಿದ ಮೇಲೆ, ಸಮುದ್ರ ದಾಟುವಾಗ ಉಬ್ಬಿದಂತೆ ಉಬ್ಬುತ್ತಾ ಉಬ್ಬುತ್ತ ಕೊನೆಗೆ ಸಿಕ್ಸ್ ಪ್ಯಾಕ್, ಎಯ್ಟ್ ಪ್ಯಾಕ್ ಹನುಮಂತನವರೆಗೂ ಉಬ್ಬಿಹೋದ.

ಸದಾ ಶಾಸ್ತ್ರದ ಗುಂಗಲ್ಲೇ ಇರುವ ಶಾಸ್ತ್ರಬದ್ದ ಕಲಾವಿದರೂ ಸಹ ಕಪಿ ಹನುಮಂತನಾದದ್ದನ್ನು ಖುಶಿ ಖುಶಿಯಾಗಿ ಅಪ್ಪಿಕೊಂಡರು,ಒಪ್ಪಿಕೊಂಡರು .

ಮುಂದೆ ಹೀಗಾದರು ಒಪ್ಪುತ್ತಾರೊ ಇಲ್ವೊ ನೋಡಬೇಕು..
ಆದ್ರೆ ನಮ್ಮ ಮುಂದಿನ ಹನುಮಂತ ಉಬ್ಬಿಸಿದರೆ ಉಬ್ಬೋಗದೆ ಈರೀತಿ ಎಂಜಾಯ್ ಮಾಡ್ಬೋದು ಅಂತ ನನ್ನ ಅನಿಸಿಕೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ :)

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳೊಂದಿಗೆ ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ..... ಕೊನೆಯ ಎರಡು ಚಿತ್ರಗಳನ್ನು ಬಿಟ್ಟು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸ ರೀತಿಯ ಚಿಂತನೆ!!!
ಶೀರ್ಷಿಕೆ ನೋಡಿ ಏನೋ ಅಂದುಕೊಂಡಿದ್ದೆ..
ಸಕ್ಕತ್ ಬರಹ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಯ ಚಿತ್ರ ಅದೇನದು?
ಚನ್ನರಾಯಪಟ್ನದಲ್ಲಿ ಬಿ.ಎಂ. ರಸ್ತೆ ಬದಿಯಲ್ಲೇ ಆಜಾನುಭಾಹು ನಿಂತಿದ್ದಾನೆ.ಅಲ್ಲಿ ಹೋದಾಗ ಒಂದು ಫೋಟೋ ತಂದು ಹಾಕ್ತೀನಿ. ಹಾಗೆಯೇ ಎಲ್ಲಾ ಊರಲ್ಲೂ ಆಂಜನೇಯ ಮೂರ್ತಿಗಳು ರಾರಾಜಿಸುತ್ತಿರುವುದನ್ನು ಅಲ್ಲಲ್ಲಿ ನೋಡಬಹುದಾಗಿದೆ. ಪ್ರತಿಕ್ರಿಯೆ ರೂಪದಲ್ಲಿ ಸಂಪದಿಗರು ಫೋಟೋ ಗಳನ್ನು ಹಾಕಿದರೆ ಚೆನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಪ್ರತಿಕ್ರಿಯೆ ರೂಪದಲ್ಲಿ ಸಂಪದಿಗರು ಫೋಟೋ ಗಳನ್ನು ಹಾಕಿದರೆ ಚೆನ್ನ.
ಮೊದಲು ನಿಮ್ಮಿಂದಲೇ ಶುರುವಾಗಲಿ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಕ್ತೇನೆ,ಒಂದು ವಾರ ಸಮಯ ಬೇಕು. ಚನ್ನರಾಯಪಟ್ಟಣಕ್ಕೆ ಹೋಗಿಬರಬೇಕು.
ಇದೇನು ಈ CAPTCHA ಕಾಟ? ಪ್ರತಿಕ್ರಿಯೆ ಪೋಸ್ಟ್ ಮಾಡಬೇಕಾದ್ರೆ ಕನ್ನಡ ಎಗ್ಸಿಟ್ ಮಾಡಬೇಕಲ್ಲಾ? ಬೇರೆ ಏನಾದರೂ ವಿಧಾನ ಇದೆಯೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. ನನಗೆ ಈ ಲೇಖನ ಬರಿಯೋದಿಕ್ಕೆ ಆ ಮಾರುತಿಯ ಮೂರುತಿಯು ಕಾರಣವಾಗಿದೆ... ಇತ್ತೀಚೆಗೆ ಆ ಕಡೆ ಬಂದಿದ್ದಾಗ ನೋಡಿದ್ದೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಿನ್ನ ಕಲ್ಪನೆಯ ಬರಹ ಬೊಂಬಾಟಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಹನುಮನ ಮಹಿಮೆ...ಲೇಖನ ಸೂಪರ್...ಮಂಸೋರೆ ನಿಮ್ಮ ಪರಿಚಯದ ಚಿತ್ರ ಬದಲಾಯಿಸುತ್ತೀರೊ ಇಲ್ವೊ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಲೇಖನವನ್ನು ರಾತ್ರಿ ಲೇಖನಗಳಲ್ಲಿ ಹಾಕಿದ್ದೆ .. ಈಗ ಬ್ಲಾಗಲ್ಲಿ ಬಂದು ಕೂತಿದೆ... ಅಂತೂ ಕಪಿ ಹನುಮಂತನಾದರೂ ಜಂಪಿಂಗ್ ಮಾತ್ರ ಮರೆತಿಲ್ಲಾ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನ ನಾನೀವತ್ತು ನೋಡ್ತಾ ಇದೀನಿ... ಚಿತ್ರ ಕಾಣಿಸ್ತಿಲ್ಲವಲ್ಲ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.