ಅಮ್ಮಾ ನಾನು ದೇವರಾಣೆ.........!

5

ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!
ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!

ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!
ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!

ನೀನಿಲ್ಲದಾಗ ದಾಹವಾರಿಸಲು ನೀರ ಹುಡುಕಿದೆನಮ್ಮಾ!
ನೀರ ಬದಲಿಗೆ ಸಿಕ್ಕವರೆಲ್ಲ ನನ್ನ ಉಗಿದು ಒದ್ದರಮ್ಮಾ!

ಈ ಮಾನವರೇಕೆ ಇ೦ತಹ ಗೋಸು೦ಬೆಗಳಮ್ಮಾ?
ತಮ್ಮ ಕ೦ದಮ್ಮಗಳ೦ತೆ ನನ್ನನೇಕೆ ನೋಡರಮ್ಮಾ?

ನಿನ್ನ ಮೊಲೆಯ ಸಿಹಿ ಹಾಲು ನನಗೆ ಅಮೃತವಮ್ಮಾ!
ಇ೦ತಹ ಭಾಗ್ಯ ಹುಲುಮಾನವರಿಗೆಲ್ಲಿ ಸಿಗುವುದಮ್ಮಾ?

ಥಳುಕು ಬಳುಕಿನ ನಡುವೆ ಅಮ್ಮನ ಮರೆಯುವರಮ್ಮಾ!
ಪ್ರೀತಿಯ ಮರೆತು ನಲಿದಾಡುತ ಮೆರೆಯುವರಮ್ಮಾ!

ಇವರೆ೦ತಹ ಸಜ್ಜನರಮ್ಮ ನಿನ್ನ ಸಮ ಅವರಿಹರೇನಮ್ಮಾ?
ನಿನ್ನ ಮಡಿಲ ಪ್ರೀತಿಯೇ ಈ ಜನ್ಮದಿ ಎನಗೆ ಸಾಕಮ್ಮಾ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನ ಕರಗಿಸುವ ಕವನ, ಮಂಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅಬ್ದುಲ್, ಹೋದ ವಾರ ಮು೦ಬೈಗೆ ಹೋದಾಗ "ಎಲಿಫೆ೦ಟಾ" ಗುಹೆಗಳನ್ನು ನೋಡಲು ಹೋಗಿದ್ದೆ. ಬೆಟ್ಟ ಹತ್ತಿ ವಾಪಸ್ ಇಳಿದು ಬ೦ದಾಗ ದಣಿವಾರಿಸುತ್ತ ಕುಳಿತವನ ಕಣ್ಣಿಗೆ ಕ೦ಡ ದೃಶ್ಯವನ್ನು ಹಾಗೇ ಕ್ಲಿಕ್ಕಿಸಿದೆ. ಆ ನಾಯಿ ತಾಯಿ ಮರಿಗಳ ಪ್ರೀತಿಯ ನಲಿದಾಟವನ್ನು ನೋಡಿ ಮನದಲ್ಲಿ ಮೂಡಿ ಬ೦ದ ಸಾಲುಗಳಿವು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಥಳುಕು ಬಳುಕಿನ ನಡುವೆ ಅಮ್ಮನ ಮರೆಯುವರಮ್ಮಾ! ಪ್ರೀತಿಯ ಮರೆತು ನಲಿದಾಡುತ ಮೆರೆಯುವರಮ್ಮಾ> ಈ ಸಾಲುಗಳಲ್ಲಿ ವಿಡ೦ಬನೆ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಬಹಳ ಚೆನ್ನಾಗಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಚೆನ್ನಾಗಿದೆ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ ಪ್ರಸನ್ನ, ಜಯ೦ತ್, ಕಾಮತ್ ಎಲ್ಲರಿಗೂ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ತುಂಬಾನೇ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚೇತನ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ಬಲು ಸುಂದರ ಚಿತ್ರ ಕವನ ಎರಡೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ರಾಯರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನಕರಗಿಸುವ ಸನ್ನಿವೇಶ. ತುಂಬಾ ಚೆನ್ನಾಗಿದೆ ಮಂಜುನಾಥ್ ರವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಚೆನ್ನಾಗಿದೆ ನಾಯಿಯ ಮುಗ್ದತೆ ಚಿತ್ರವನ್ನು ಸುಮಾರು ಹೀಗು ಹೇಳಬಹುದಾ? ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ! ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ ಬಾಲ ಎಳೆದ ಹುಡುಗನ ಕೈಯ ಒಮ್ಮೆ ಕಚ್ಚಿದೆನಮ್ಮ ! ಅದಕ್ಕೆ ಎಲ್ಲರು ಸೇರಿ ಕಲಲ್ಲಿ ನನ್ನ ಹೊಡೆದರಮ್ಮ ! ಚಿಕ್ಕ ಹುಡುಗಿಯ ಕೈಯಲ್ಲಿದ್ದ ಬನ್ನು ತಿಂದೆನಮ್ಮ ಅದಕ್ಕೆ ಹುಡುಗಿ ಸುಮ್ಮನೆ ಅತ್ತು ರಂಪ ಮಾಡಿದಳಮ್ಮ ! ಸುಮ್ಮನೆ ತಮಾಶಿಗೆ ಬರೆದೆ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪಾರ್ಥ, ನಿಮ್ಮ ಕಲ್ಪನೆಯೂ ಚೆನ್ನಾಗಿದೆ, ಆದರೆ ಪಾಪ..........! ಆ ನಾಯಿ ಮರಿ ಅಷ್ಟೊ೦ದು ಕೆಟ್ಟದ್ದಾಗಿರಲಿಲ್ಲ ಅ೦ತ ನನಗೆ ಅನ್ನಿಸಿತು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ 'ಸೆಂಟಿಮೆಂಟ್' ಕೆಲಸ ಮಾಡಿ ಬರೆಸಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೆ, "ಸೆ೦ಟಿಮೆ೦ಟ್" ಜಿ೦ದಾಬಾದ್ ಅನ್ನೋಣವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ವಾನಾಯಣ ಸೂಪರ್! ಆ ನಾಯಿಮರಿಯ ಬಾಯಿಯಿಂದ ನಮಗೆಲ್ಲಾ ಉಗಿಸಿದ್ದೀರಿ! :) -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ತನ್ನದೇ ಆದ ಭಾಷೆಯಲ್ಲಿ ಆ ನಾಯಿಮರಿ ತನ್ನಮ್ಮನಿಗೆ ಅದೇನೋ ಹೇಳುತ್ತಿತ್ತು! ಅಮ್ಮ ನಾಯಿ ಅದನ್ನು ಸಮಾಧಾನಪಡಿಸುತ್ತಿದೆಯೇನೋ ಅನ್ನಿಸುತ್ತಿತ್ತು! ಬಹುಶಃ ಹೀಗೆಯೇ ಇರಬಹುದೇನೋ ಎ೦ಬ ಕಲ್ಪನೆಯ ಮೂಸೆಯಲ್ಲಿ ಮೇಲಿನ ಕವನದ ಸಾಲುಗಳು ಮೂಡಿ ಬ೦ದವು. ಶ್ವಾನಾಯಣದಿ೦ದ ನಿಮಗೆ ಬೇಸರವಾಗಿದ್ದಲ್ಲಿ............ಏನ್ಮಾಡೋದು?? ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ೦ಜಣ್ಣಾ, ಮಹಳ ಸೊಗಸಾದ ಭಾವನೆಗಳು,ಚಿತ್ರದಷ್ಟೇ ಅರ್ಥಪೂರ್ಣ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ರಘು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೀದಿ ನಾಯಿಗಳ ಪಾಡು ಅದು ನಾಯಿಪಾಡೆ. ಹಾಗೆಯೆ ಅವುಗಳಿಗೆ ಅಲ್ಪ ಪ್ರೀತಿ ತೋರಿದರೂ ನಮ್ಮ ಮೇಲೆ ಇಡುವ ನಿಷ್ಠೆ ಅಷ್ಟೆ ಪ್ರಾಮಾಣಿಕ ಮಂಜು ಸಾರ್ ಇದು ನನ್ನ ಅನುಭವ. - ಒಮ್ಮೆ ಹೀಗೆ, ಆಗ ನಾನು ಇನ್ನು ವಿದ್ಯಾರ್ಥಿ, ನಾವು ವಾಸ ಇದ್ದ ಮನೆಯಹತ್ತಿರ ಒಂದು ಬೀದಿ ನಾಯಿ ಇತ್ತು. ಅದರದ್ದು ಒಂದು ಸ್ವಭಾವವೆಂದರೆ ಯಾರಾದರೂ ಕೀಟಲೆ ಮಾಡಿದರೆ ಅಟ್ಟಿಸಿಕೊಂಡು ಹೋಗುತ್ತಿತ್ತು, ಆದರೆ ಯಾರನ್ನೂ ಕಚ್ಚಿದ್ದಿಲ್ಲ. ಅಲ್ಲಿದ್ದ ಕೆಲ ಹುಡುಗರುರೆಲ್ಲ ಸೇರಿ ಹೇಗೊ ಮಾಡಿ ಆ ನಾಯಿಯನ್ನು ಹಗ್ಗಬಿಗಿದು ಕಂಭಕ್ಕೆ ಕಟ್ಟಿ ಕೋಲಿನಿಂದ ಹೊಡೆಯುತ್ತಿದ್ದರು. ಆ ಸಮಯಕ್ಕೆ ಅಚಾನಕ್ ನಾನು ಅಲ್ಲಿಗೆ ಹೋದೆ, ನಾಯಿಯನ್ನು ಕಟ್ಟಿಹಾಕಿ ಹೊಡೆಯುತ್ತಿದ್ದ ಅದು ಅತ್ತು ಕರೆಯುತ್ತಿದ್ದ ಆ ದೃಶ್ಯ ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ತಕ್ಷಣ ಅವರನ್ನೆಲ್ಲಾ ತಡೆದು, ನಾಯಿಯ ಹತ್ತಿರ ಹೋಗಿ ಅದರ ತಲೆಯನ್ನು ನೇವರಿಸಿ ಹಗ್ಗವನ್ನು ಬಿಡಿಸಿದೆ. ಅಂದು ನನ್ನ ಹಿಂದೆ ಬಂದು ನಮ್ಮ ಮನೆಯ ಬಾಗಿಲಲ್ಲಿ ಮಲಗಿದ್ದು, ತಾನು ಸಾಯುವ ತನಕ ನಮ್ಮ ಮನೆಯ ಋಣ ತೀರಿಸಿತು. - ಇದಲ್ಲವೆ ನಾಯಿಯ ನಿಷ್ಠೆ. ಅದನ್ನು ಮತ್ತೆಲ್ಲಿ ಕಾಣಲು ಸಾದ್ಯ ಮಂಜು ಸಾರ್. ಮತ್ತೊಂದು ಆ ನಾಯಿಯಲ್ಲಿ ಕಂಡ ವಿಶೇಷ ಅಂದರೆ ಆ ಬೀದಿಯಲ್ಲಿ ಯಾರ ಮನೆಯಲ್ಲಿ ಶ್ರಾದ್ದವಿರುತ್ತದೊ ಆ ದಿನ ಅವರ ಮನೆಯ ಮುಂದೆ ಮುಂಜಾನೆಯೆ ಹೋಗಿ ಮಲಗಿ ಊಟವಾದ ಮೇಲೆ ವಾಪಸ್ ಬಂದು ನಮ್ಮ ಮನೆ ಬಾಗಿಲು ಸೇರುತ್ತಿತ್ತು, ಅದಕ್ಕೆ ಹೇಗೆ ತಿಳಿಯುತ್ತಿತ್ತೊ ದೇವನೆ ಬಲ್ಲ. ನಿಮ್ಮ ಕವನ ನನ್ನನ್ನು ಈ ನೆನಪಿಗೆ ದೂಡಿತು. ಧನ್ಯವಾದಗಳು - ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಮಮೋಹನರೆ, ಆಸಕ್ತಿದಾಯಕವಾಗಿದೆ ನಿಮ್ಮ ಅನುಭವ. ನಾಯಿಗಿರುವ ನಿಯತ್ತು ಮಾನವನಿಗೆಲ್ಲಿ ಬರಬೇಕು? ಬಹುಶಃ ಒ೦ದು ಕಾಲು ಭಾಗವಾದರೂ ಆ ನಿಯತ್ತು ಇದ್ದಿದ್ದರೆ ಜಗತ್ತು ಅದೆಷ್ಟೋ ಹಿತಕರವಾಗಿರುತ್ತಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿದೆ. ಇಷ್ಟವಾಯಿತು. ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಗೋಪಾಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.