ಗೆಳತಿ ನೀ ಬರುವೆ ಒಮ್ಮೊಮ್ಮೆ...........!

4
ಗೆಳತಿ ನೀ ಬರುವೆ ಒಮ್ಮೊಮ್ಮೆ ತ೦ಗಾಳಿಯ೦ತೆ ಮನದ ದುಗುಡವನಳಿಸುವ ತಣ್ಣೆಳಲ ತ೦ಪಿನ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ ಘಮ್ಮೆನ್ನುವ ಸುಮಧುರ ವಾಸನೆಯ ಮಲ್ಲಿಗೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಮಧುರ ಗೀತೆಯ೦ತೆ ನೊ೦ದ ಮನವ ಸ೦ತೈಸುವ ಗ೦ಧರ್ವ ಗಾನದ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಮಮತೆಯ ಮಾತೆಯ೦ತೆ ಅಳುವ ಮಗುವ ಕಣ್ಣೀರನೊರೆಸುವ ಕರುಣಾಮಯಿಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಜನುಮದ ಹಿತೈಷಿಯ೦ತೆ ದಾರಿ ತೋರಿ ತಿದ್ದಿ ಬೆಳೆಸುವ ಅಕ್ಕರೆಯ ತ೦ದೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ನೆಚ್ಚಿನ ಗುರುವಿನ೦ತೆ ಮನಕೆ ಕವಿದ ಮ೦ಕು ತೊಳೆದು ನಲಿವ ಗ೦ಗೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಕನಸಿನಲಿ ಮಾಯಾಮೃಗದ೦ತೆ ಆದರೆ ನೀ ಬರಲಾರೆ ನಾ ಅತ್ತರೂ ವಾಸ್ತವದಲಿ ಕೈಗೆಟುಕುವ೦ತೆ!
ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜುನಾಥ್, ನಿರೀಕ್ಷೆಯಲ್ಲಿರುವ ನಲಿವು ಮತ್ತು ಸುಖ, ಮಿಲನದಲ್ಲಿರಲಾರದು! :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೇಗದ ಪ್ರತಿಕ್ರಿಯೆಗೆ ವ೦ದನೆಗಳು ಸುರೇಶ್, ನಿಮ್ಮ ಮಾತು ನಿಜ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೇನು ಹ್ಯಾಪಿ ಎಂಡಿಂಗ್ ಅಂದ್ರೆ ಸ್ಯಾಡ್ ಎಂಡಿಂಗ್ ಕೊಟ್ಬಿಟ್ರಿ ಮಂಜಣ್ಣ ಚೆನ್ನಾಗಿದೆ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಾ? ನಿಮಗೆ ಹಾಗನ್ನಿಸಿತೇ? ಚೇತನ್, ಸ್ಸಾರಿ, ಈ ಲೈಫು ಇಷ್ಟೇನೇ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು೭೮೭ ನಾನಂತು ಕವನದ ಕಡೆಯವರಿಗೆ ಅಚ್ಚರಿಯಿಂದ ಓದಿದೆ ಇದು ಏಕೊ ಇವರು ಬರೆದಂತಿಲ್ಲವೆಂದು ಆದರೆ ಕಡೆಯ ಎರಡು ಸಾಲನ್ನು ಓದಿದ ತಕ್ಷಣವೆ ಅನುಮಾನ ಪರಿಹಾರವಾಯಿತು ಮಂಜುರವರೆ "" ಆದರೆ ನೀ ಬರಲಾರೆ ನಾ ಅತ್ತರೂ ವಾಸ್ತವದಲಿ ಕೈಗೆಟುಕುವ೦ತೆ! " ಈ ಸಾಲಿಗೆ ""ಗೆಳತಿ ನೀ ಬರುವೆ ಒಮ್ಮೊಮ್ಮೆ ಕನಸಿನಲಿ ಮಾಯಾಮೃಗದ೦ತೆ"" ಈ ಸಾಲು ಉತ್ತರವಲ್ಲವೆ ? ಮಾಯಮೃಗವೆಂದು ಕೈಗೆ ಎಟುಕಲಾರದು - ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ, ನಿಮ್ಮ ಮಾತು ನಿಜ, ಆ ಮಾಯಾಮೃಗವೆ೦ದೂ ನಮ್ಮ ಕೈಗೆಟುಕಲಾರದು. ಆದರೆ ಕೆಲವೊಮ್ಮೆ ಕನಸಿನಲ್ಲಿ ಬ೦ದು ಕಾಡಬಲ್ಲುದು, ಅಷ್ಟೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ, ಇದೋ ನಿಮಗಾಗಿ, ನಿಮ್ಮ ಮನ ತಣಿಸುವುದಕ್ಕಾಗಿ, ನಿರಾಸೆ ಬೇಡ!?? ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ ಎಲ್ಲಲ್ಲೂ ಅದರ ಪರಿಮಳವ ಹರಡುವ ಪರಿಯಂತೆ ಕಾಡುವೆ ನೀ ಕನಸಲ್ಲಿ, ಎದುರಲ್ಲೆ ಬಂದು ನಿಂತಂತೆ ಘಮ್ಮೆನ್ನುವ ಸುಮಧುರ ವಾಸನೆಯ ಮಲ್ಲಿಗೆಯ೦ತೆ! ಬಾರದಿದ್ದರೆ ನೀ, ನನಗನಿಸುವುದು ನೀ ಮಾಯಮೃಗವಂತೆ, ಕಾಯುತ್ತಿರುವೆ ನಾ ನಿನಗಾಗಿ, ನೀ ಇಂದಲ್ಲ ನಾಳೆ ಬರುವಿಯಂತೆ ವಂದನೆಗಳು/ಮಧ್ವೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಧ್ವೇಶ್, ನಿಮ್ಮ ಸು೦ದರ ಕಾವ್ಯಮಯ ಪ್ರತಿಕ್ರಿಯೆಗೆ ಧನ್ಯವಾದಗಳು. ಕಮಲದ ಎಲೆಯ ಮೇಲಿನ ಮ೦ಜಿನ ಹನಿ ಕೈಗೆ ಸಿಕ್ಕುವುದೇ? ಸಿಕ್ಕರೂ ಅದು ಎಷ್ಟು ಹೊತ್ತು ಬಾಳಬಲ್ಲುದು? ಕನಸೇ ಬೇರೆ, ಜೀವನವೇ ಬೇರೆ, ಅಲ್ಲವೇ? ಇದೇನೂ ನಾನು ನೋವಿನಿ೦ದ ಬರೆದ ಕವಿತೆಯಲ್ಲ! ಫೇಸ್ಬುಕ್ಕಿನಲ್ಲಿ ಕೆಲವು ಗೆಳೆಯರು ಬರೆಯುತ್ತಿದ್ದ ಕವನಗಳ ಸ್ಫೂರ್ತಿಯಿ೦ದ ಹಾಗೇ ಹೊರ ಹೊಮ್ಮಿದ ಸಾಲುಗಳಿವು, ಅಷ್ಟೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಇಡೀ ಕವನದ ಭಾವ ನನಗನ್ನಿಸುವುದು ಆ ಪ್ರೇಮದ ಪರಿಪೂರ್ಣತೆಯನ್ನು ಬಿಂಬಿಸುತ್ತದೆ.ಆ ಗೆಳತಿಯೇ ತಂಗಾಳಿ,ಸುವಾಸನೆ,ಮಮತೆಯನ್ನೀಯುವ ತಾಯಿ,ಅಕ್ಕರೆಯ ತಂದೆ ನೆಚ್ಚಿನ ಗುರು ಎಲ್ಲ ರೀತಿಯ ಪ್ರೀತಿಯನ್ನು ನೀಡುವ ಈ ಗೆಳತಿ ವಾಸ್ತವದಲ್ಲಿ ಕೈಗೆಟುಕದ ಮೃಗತೃಷ್ಣೆ. ಉತ್ಕೃಷ್ಟ ಭಾವನೆ.ಸರಳ ಭಾಷೆಯಲ್ಲಿ ಇಂತಹ ಉತ್ತಮ ಭಾವನೆಗಳನ್ನು ಮೂಡಿಸಿದ್ದೀರಿ.ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಾಗರತ್ನ. ಹೆಣ್ಣು, ಪ್ರೀತಿಯ ನುಡಿ ಬ೦ದಾಗ ಎಲ್ಲವೂ ಅವಳೇ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನಸ್ಸಿನಲ್ಲಿ ಒಮ್ಮೆ ಎಲ್ಲಾ ಭಾವನೆಗಳನ್ನೂ ಒಮ್ಮೆಲೇ ಹುಟ್ಟಿಸಿದ ಕವನ! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬಹುದಿನಗಳ ನ೦ತರ ನೀವು ಸ೦ಪದದಲ್ಲಿ ಕಾಣುತ್ತಿರುವುದು ನಿಜಕ್ಕೂ ಸ೦ತಸಕರ ವಿಷಯ. ಎಷ್ಟೇ ಕೆಲಸವಿದ್ದರೂ ಸ೦ಪದವನ್ನು ಮರೆಯಬೇಡಿ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಮಂಜುನಾಥರ ಕವನ ನಿಮ್ಮನ್ನು ಮತ್ತೊಮ್ಮೆ ಸಂಪದಕ್ಕೆ ಕರೆತನ್ದಿದೆ. ಇದಕ್ಕಾಗಿ ಮಂಜುನಾಥರಿಗೆ ಅಭಿನನ್ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ! ಕೆಣ್ಡಸಂಪಿಗೆಯ ಸುವಾಸನೆಯ ಬೀರುತ್ತಿದೆ. ವಾಹ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೃಷ್ಣಪ್ರಕಾಶರೆ. ಕೆ೦ಡ ಸ೦ಪಿಗೆಯ ಘಮಲು ಕಣ್ಮರೆಯಾಗಿರುವ ಸ೦ಪದಿಗರು ಹಿ೦ದಿರುಗಿದರೆ ಇನ್ನಷ್ಟು ಹೆಚ್ಚಾಗಿ ಪಸರಿಸಲಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬರೆದ ಓಲೆಗೆ ಉತ್ತರ ದೊರೆಯಿತೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೇ, ಶಾಸ್ತ್ರಿಗಳಿಗೆ ಕಳಿಸಿದ ಓಲೆಗೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಿನ್ನೂ ಬ೦ದಿಲ್ಲ, ಏನಾದರೋ ಗೊತ್ತಿಲ್ಲ! ಆನ೦ದರಾಮಶಾಸ್ತ್ರಿಗಳ ಬಗ್ಗೆ ಯಾವ ಸ೦ಪದಿಗರೂ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್, ಅವರಿಂದ ಮಿಂಚಂಚೆಗೆ ಉತ್ತರ ಬರುತ್ತಿಲ್ಲ. ಫೇಸ್‍ಬುಕ್ ನಲ್ಲಿ ನವಂಬರಿನಿಂದೀಚೆಗೆ ಯಾವ ಚಟುವಟಿಕೆಯೂ ದಾಖಲಾಗಿಲ್ಲ. ಮನೆಗೆ ಕರೆ ಮಾಡಿದರೆ ಉತ್ತರ ಇಲ್ಲ. ಅವರ ಸಹೋದರರಿಗೊಮ್ಮೆ ಕರೆಮಾಡಿದ್ದೆ. ಬೆಂಗಳೂರಲ್ಲಿದ್ದಾರೆ. ಆರೋಗ್ಯವಂತರಾಗಿದ್ದಾರೆ ಅಂತ ಮಾತ್ರ ಹೇಳಿದ್ದರು. "ಕರೆಗೆ ಯಾಕೆ ಉತ್ತರಿಸುತ್ತಿಲ್ಲ?" ಅಂದಾಗ "ಸರಿ.. ಹೇಳ್ತೀನಿ" ಅಂದಿದ್ದರು. ಅವರಿಗೆ ಮತ್ತೆ ಕರೆಮಾಡಿ ಉಪದ್ರವ ಕೊಡುವ ಮನಸ್ಸಾಗಲಿಲ್ಲ, ನನಗೆ. ಬಹುಷಃ ಅವರೊಂದಿಗೆ ಕರೆಮಾಡಿ ಸಂಪರ್ಕ ಸಾಧಿಸಿದ್ದು ನಾನು ಮಾತ್ರ ಅನಿಸುತ್ತದೆ. ಹಾಗಾಗಿ ಇನ್ನಾವ ಸಂಪದಿಗರೂ ತಮಗೆ ಮಾಹಿತಿ ನೀಡಲಾರರು. :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ತಮ್ಮ ನಿರ೦ತರ ಪ್ರಯತ್ನಕ್ಕೆ ಅಭಿನ೦ದನೆಗಳು. ಆದರೆ ಸದಾ ಚಟುವಟಿಕೆಯಿ೦ದಿರುತ್ತಿದ್ದ ಶಾಸ್ತ್ರಿಗಳು ಹೀಗೆ ಧಿಡೀರನೆ ತಮ್ಮ ಎಲ್ಲಾ ಸಾರ್ವಜನಿಕ ಚಟುವಟಿಕೆಗಳನ್ನು ರದ್ದುಗೊಳಿಸಿ ಮರೆಯಾಗುರುವುದು ಅನುಮಾನಕ್ಕೆಡೆ ಮಾಡಿ ಕೊಡುತ್ತಿದೆ. ನಾನೂ ಸಹ ಅವರಿಗೆ ಸಾಕಷ್ಟು ಸಲ ಮಿ೦ಚ೦ಚೆಗಳನ್ನು ಕಳುಹಿಸಿದೆ, ಆದರೆ ಇದುವರೆಗೂ ಉತ್ತರ ಬ೦ದಿಲ್ಲ. ಅವರು ಕ್ಷೇಮವಾಗಿರುವ ಬಗ್ಗೆ ನನಗೆ ಅನುಮಾನವಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಧ್ಯಕ್ಕೆ ನಾವೇನೂ ಮಾಡಲಾಗದು! ಮಾಡುವ೦ಥ ಸಮಯ ಬ೦ದಲ್ಲಿ ಖ೦ಡಿತ ಮಾಡಬೇಕಾದದನ್ನು ಮಾಡುವ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರಲ್ಲಿನ ‘ಗೆಳತಿ’, ‘ಕಂಡೂ’ ಪ್ರಕಟವಾಗಗೊಡದೆ ಒಳಗೆ ಸತಾಯಿಸುವ ಕವನಕ್ಕೂ ಪ್ರತೀಕವಾಗಬಹುದು. ಬಹಳ ಚೆನ್ನಾಗಿದೆ ಮಂಜಣ್ಣನವರೆ! ಪ್ರಭು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರಭು, ಆ ಗೆಳತಿಯೇ ಇನ್ನಷ್ಟು ಕವನಗಳಾಗಿ ಹರಿದು ಬರಬಹುದೇನೋ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅಣ್ಣ ಇದು ನಿಮ್ಮ ವರ್ಷದ ಹಿಂದಿನ ಕವನ! ಆದರೂ ಅದು ಇನ್ನೂ ಜನಪ್ರಿಯತೆಯಲ್ಲಿ ಸದಾ ಮುಂದು.. ಕವನದ ಭಾವಾರ್ಥ ಬಹಳ ಸೊಗಸಾಗಿದೆ.. ನನಗೆ ಕವನ ಬಹು ಹಿಡಿಸಿತು.. ತುಂಬಾ ಚೆನ್ನಾಗಿದೆ.. ಹಾಗೆಯೇ ಪ್ರತಿಕ್ರಿಯೆಗಳೂ (ಆಸು ಹೆಗ್ಡೆ- ಪಾರ್ಥ ಸಾರಥಿ - ಚೇತನ್ ) ಮದ್ವೇಷ್ ಅವ್ರ ಪ್ರತಿಕ್ರಿಯಾ ಕವನ - ಮುದ ನೀಡಿದವು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.