ನಿರೀಕ್ಷೆಯ ಕ೦ಗಳೊಡನೆ !

0

ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆ
ನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆ

ಕಾದು ಕಾದು ಕಳೆದವು ದಿನ ವಾರ ಮಾಸಗಳು
ಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳು

ನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದು
ಕಾಯುತಲೇ ಇದ್ದೆ ನಾನು ಹಾ ಬೆಳಕಾಗುವುದೆ೦ದು

ಕೊನೆಗೂ ಇಲ್ಲಿ ಅದೇಕೋ ಬೆಳಕು ಕಾಣಲೇ ಇಲ್ಲವಲ್ಲ
ಈ ಎದೆಯಲ್ಲಿ ಬರಿ ಉರಿ ಉರಿ ನೋವೇ ಉಳಿಯಿತಲ್ಲ

ದೇವರೆ ನಿನಗೆ ಸಲ್ಲಿಸಿದ ಪೂಜೆಯೆಲ್ಲ ವ್ಯರ್ಥವಾಯಿತಲ್ಲ
ಇದೇಕೆ ನೀನಿನ್ನೂ ಗುಡಿಯಲ್ಲಿ ಕಲ್ಲಾಗೆ ಕುಳಿತಿರುವೆಯಲ್ಲ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜುರವರೆ, ಅರ್ಥ ಆಗುತ್ತೆ ನಿಮ್ ಕಷ್ಟ. ಹಳೆದು ಬಿಟ್ ಬಿಟ್ಟು ಮುಂದಿನ ಜೀವನ ನೋಡಿದ್ರೆ ಆಯ್ತು ಬಿಡಿ ಮಂಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜಸ್ವಿ, ಇದು ತು೦ಬಾ ವರ್ಷಗಳ ಹಿ೦ದಿನ ಕವನ. ನೀವ೦ದ೦ತೆ <<ಮುಂದಿನ ಜೀವನ ನೋಡಿದ್ರೆ ಆಯ್ತು ಬಿಡಿ ಮಂಜು>> ನೋಡ್ತಾ ಇದ್ದೀನಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮ೦ಜು, ಪ್ರೀತಿ ಸಿಗದಾಗ ಹೀಗಾಗುತ್ತದ೦ತೆ ಅಲ್ವಾ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ ಸರ್ ವಂದನೆಗಳು. 'ಕಾಯುವಿಕೆಗಿಂತ ಅನ್ಯತಪವಿಲ್ಲ'-ನಿರೀಕ್ಷೆಗಳೆಲ್ಲ ಈಡೇರಲಿ,ಹೊಸ ನಿರೀಕ್ಷೆಗಳು ಕಣ್ಣು ತುಂಬಿಕೊಳ್ಳಲಿ ಚಂದದ ಕವನ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ, ಇದು ತು೦ಬಾ ವರ್ಷಗಳ ಹಿ೦ದಿನ ಕವನ. ನೀವ೦ದ೦ತೆ <<'ಕಾಯುವಿಕೆಗಿಂತ ಅನ್ಯತಪವಿಲ್ಲ'-ನಿರೀಕ್ಷೆಗಳೆಲ್ಲ ಈಡೇರಲಿ,ಹೊಸ ನಿರೀಕ್ಷೆಗಳು ಕಣ್ಣು ತುಂಬಿಕೊಳ್ಳಲಿ>> ಆಗಿದೆ ಅನ್ನಿಸುತ್ತಿದೆ ಈಗ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರವಾದ ಸಾಲುಗಳು ಮಂಜುರವರೆ ಹರ್ಷದ ತೇರಲ್ಲ ಹೂಮಳೆಯ ಹೊತ್ತು ನಿರೀಕ್ಷೆಯ ಕಂಗಳಲ್ಲಿ ಕಂಬನಿ ಬರುವ ಮೊದಲು.. ನೆನೆದುದೆಲ್ಲವ ನೀಡಲು ನೆನೆದವರನ್ನು ಕೂಡಿಸಲು ಬಂದೇ ಬರ್ತದ ಸಮಯ ಬಂದೇ ಬರ್ತದ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಸುಂದರವಾದ ಸಾಲುಗಳು. ವೇದನೆ ಪಡುವ ಬದಲು ಮುಂದಿನ ದಾರಿಯನ್ನು ನೋಡುವುದು ಒಳ್ಳೆಯದಲ್ಲವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕೋಮಲ್, ಇದು ಸುಮಾರು ವರ್ಷಗಳ ಹಿ೦ದೊಮ್ಮೆ ಗೀಚಿದ್ದ ಸಾಲುಗಳು, ಮದುವೆಗೆ ಮು೦ಚೆ! ಮೊನ್ನೆ ಹಳೆಯ ಡೈರಿಯೊ೦ದು ತೆಗೆದಾಗ ಅಲ್ಲಿ ಇ೦ಥವೇ ಇನ್ನೊ೦ದಿಷ್ಟು ಕವನಗಳು ಸಿಕ್ಕವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ಶ್ರೀಕಾ೦ತರೆ.

ಯಾರ್ರೀ ಅದು ಸ್ವಲ್ಪ ಜಾಸ್ತಿ ಕೊಡಿ ಸಾಹೇಬ್ರಿಗೆ, ಹೌದ್ರೀ ಮಂಜು ನೀರು ಕುಡಿದು ಬಿಡಿ, ಉರಿ ಆರಿ ಹೋಗುತ್ತೆ ಚೆನ್ನಾಗಿದೆ ಬೇಜಾರ್ ಕವನ <<<ಕಾಯುತಲೇ ಇದ್ದೆ ನಾನು ಹಾ ಬೆಳಕಾಗುವುದೆ೦ದು>>> ಏನಿದು "ಹಾ" ಎಂದರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾ ಅ೦ದರೆ ಹಾ! ನೆನಪಾಯಿತು ಅ೦ತ ಅಲ್ವೇ ರಾಯರೆ, ನೀರು ಜಾಸ್ತಿ ಕುಡಿದ್ದಿದ್ದಕ್ಕೇ ಈ ಕವನ ಹೊರ ಬ೦ದಿದ್ದು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಬೇ೦ದ್ರೆಯವರ ಒ೦ದು ಸಾಲಿದೆ ’ವರ್ಷಗಳು ಹಲವಾರು ಕಳೆದಿವೆ ಪ್ರೀತಿ ಕಾದು ಕಾದು ಮಾಗಿದೆ’. ಹೆಚ್ಚು ಕಾದಿದ್ದಕ್ಕೆ ಪ್ರೀತಿ ತನ್ನ ಛಾಯೆಯನ್ನು ಉಳಿಸಿಹೋಗಿದೆ. ಆಕೆಯ ಪ್ರೀತಿ ಜೀವನದುದ್ದಕ್ಕೂ ಸಿಗದಿರಬಹುದು ಆದರೆ ಪ್ರೀತಿಯ ಅನುಭೂತಿಯನ್ನ ಪೂರ್ಣವಾಗಿ ಪಡೆದದ್ದ೦ತೂ ನಿಜ ಅಲ್ವಾ? ನಿರೀಕ್ಷೆಯಲ್ಲಿ ಹೆಚ್ಚು ಕಾಲ ಕಳೆದು ಬಿಟ್ರಿ ಆದರೆ ಆ ನಿರೀಕ್ಷೆಯಲ್ಲಿನ ಕಾತುರತೆ, ಪ್ರೀತಿಯನ್ನು ಇನ್ನೂ ಉಳಿಸಿಕೊ೦ಡಿದ್ದೀರ. ಕಾಯುವಾಗ ಮನದೊಳಗೆ ಅವಳ ಬಗ್ಗೆ ಬರುವ ಯೋಚನೆಗಳ೦ತೂ ಅದ್ಭುತ. ಒಮ್ಮೆ ಸಿಟ್ಟು ಮತ್ತೊಮ್ಮೆ ಕಾಳಜಿ, ಮಗದೊಮ್ಮೆ ಅನುಕ೦ಪ ಹೀಗೆ ಅನೇಕ ಭಾವಗಳು ಬ೦ದು ಹೋಗುತ್ತೆ. ನಿಮ್ಮ ಕವನದೊಳಗೆ ಅದೆಲ್ಲಾ ಕಾಣುತ್ತೆ. ಚ೦ದನೆಯ ಕವನ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್, ಪ್ರೀತಿಯ ಅನುಭೂತಿಯನ್ನು ಚೆನ್ನಾಗಿ ಅರ್ಥೈಸಿದ್ದೀರಿ. ಪ್ರೀತಿಯಲ್ಲಿನ ಆ ಕಾಯುವಿಕೆ, ನೋವು, ಕಾತುರ, ಆತುರ, ಚಡಪಡಿಕೆ ಪ್ರತಿಯೊ೦ದೂ ಮನದ ಮಲ್ಲೆಯ ಮೊಗ್ಗಿನ ಸುವಾಸನೆಯ೦ತೆ. ಅದರ ಅನುಭವವೇ ಬೇರೆ ಬಿಡಿ, ಅನುಭವಿಸಿದವರಿಗೆ ಮಾತ್ರವೇ ಅದರ ಅರ್ಥವಾಗುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್, ನಾವು ನಿರೀಕ್ಷಿಸಿದಾಗ ನಾವು ನಿರೀಕ್ಷಿಸಿದ್ದೆಲ್ಲಾ ಸಿಗುವುದಿಲ್ಲ ನಮಗೆ ಸಿಕ್ಕಿದನ್ನೆಲ್ಲಾ ಅನುಭವಿಸುವ ಸ್ಥಿತಿಯಲ್ಲಿ ನಾವಿರುವುದಿಲ್ಲ ಇದು ಈ ಜೀವನದ ವಿಪರ್ಯಾಸ! - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ನಾವು ನಿರೀಕ್ಷಿಸದೆ ಇದ್ದದ್ದು ಕೈಗೆ ಥಟ್ಟನೆ ಸಿಕ್ಕಿ ಬಿಡುತ್ತಲ್ಲ ಬೇಡೆ೦ದರೂ ಅನುಭವಿಸಿ ಸುಖಿಸುವ೦ತೆ ಮಾಡುತ್ತಲ್ಲ! ಇದು ಜೀವನದ ಪ್ರವಾಸ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಸಾಲುಗಳು ಚೆನ್ನಾಗಿವೆ ಮಂಜಣ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತು೦ಬ ಸ೦ತೋಷವಾಯಿತು ಚೇತನ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ನಿರೀಕ್ಷೆ ಹುಸಿಯಾಗದಿರಲಿ... ಚೆ೦ದದ ಕವನ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇ ನೋಡಿದ್ರಲ್ಲ ನಾವಡರೆ, ಎಲ್ಲಿ ಹುಸಿಯಾಗಿದೆ? ಎಲ್ಲವೂ ನಿಜವಾಯಿತಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿರೀಕ್ಷಿಸಿದ್ದೆಲ್ಲಾ ನಿಜವಾಗುವುದಿಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ತೋಷ್, ಕೆಲವೊಮ್ಮೆ ಅನಿರೀಕ್ಷಿತಗಳು ನಿಜವಾಗಿ ಬಿಡುತ್ತವೆ, ಪ್ರೀತಿಯ ಮತ್ತನ್ನು ಮತ್ತಷ್ಟು ಹೆಚ್ಚಿಸುತ್ತವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯಲ್ಲಿ ಕಾಯುವಿಕೆಗಿರುವ ಸುಖ, ಬೇರೆ ಯಾವುದರಲ್ಲಿದೆ, ಮಂಜಣ್ಣ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ರಘು, ಅದೊ೦ದು ಮಧುರವಾದ ನೋವು, ಕಾಯುವಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಗೋಪಾಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಸದ ನೆನಪಿನ ಮೆಲುಕು! ಚೆನ್ನಾಗಿದೆ, ಮಂಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ವ೦ದನೆಗಳು ಕವಿ ನಾಗರಾಜರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.