ಅಪ್ಪನನ್ನು ಮೀರಿಸಿದ ಮಗಳು....

0

ನಾನೂ ಸಾಕಷ್ಟು ಸಾಧನೆ ಮಾಡಿದೆ, ( ಅದನ್ನು ನನ್ನ ಮುಂದಿನ ಲೇಖನಗಳಲ್ಲಿ ಬರೆಯುತ್ತೇನೆ.), ಆದರೆ ನಾನು ಓದಿದ ಎಲ್ಲಾ ತರಗತಿಗಳಲ್ಲೂ ನನ್ನ ಅಂಕಗಳ ಗಳಿಕೆ, ೬೨ ರಿಂದ ೬೫ % ಗೆ ನಿಂತು ಬಿಡುತ್ತಿತ್ತು. ಎಂದೂ ನನಗೆ ಅದಕ್ಕಿಂತಾ ಹೆಚ್ಚಿಗೆ ಅಂಕಗಳು ಬರಲೇ ಇಲ್ಲ. ಬಹುಶ: ನನ್ನ ಮೆದುಳು ಅಷ್ಟಕ್ಕೇ " ಕಂಡಿಷನಿಂಗ್’ ಆಗಿ ಬಿಟ್ಟಿರಬೇಕು ಅನ್ನಿಸುತ್ತದೆ. ಆದರೆ ನನ್ನ ಮಗಳು ನೋಡಿ, ಎಲ್ಲ ತರಗತಿಗಳಲ್ಲೂ ೯೦ % ರ ಮೇಲೇ ಅಂಕಗಳನ್ನು ಪಡೆದು, ಹತ್ತನೆಯ ತರಗತಿಯಲ್ಲಿಯೂ ೯೩ % ಗಳಿಸಿ, " ಪ್ರತಿಭಾ ಪುರಸ್ಕಾರ" ಪಡೆದು ತನ್ನ ಹೆಸರನ್ನು ಕೆತ್ತಿ ಬಿಟ್ಟಳು. ಇಂಥಾ ಹೆಮ್ಮೆಯ ಕ್ಷಣಗಳು, ಜೀವನದಲ್ಲಿ ಅದೆಷ್ಟು ಸಲ ಬರಬಹುದು ? ಅಂದು, ದುಬೈನಲ್ಲಿ ಕುಳಿತು ಮಗಳು ಕಳುಹಿಸಿದ ಫೋಟೊ, ಅದರ ವಿವರಗಳನ್ನು ಓದುತ್ತಾ, ಆನಂದ ತುಂದಿಲನಾಗಿ, ನನ್ನನ್ನೇ ಮರೆತು, ಅತ್ತು ಬಿಟ್ಟಿದ್ದೆ. ಜೊತೆಯಲ್ಲಿದ್ದವರೆಲ್ಲಾ ’ ಏನಾಯ್ತು’ ಎಂದು ಕಾತುರದಿಂದ ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಇದು ಆ ದೇವನ ಅತ್ಯುತ್ತಮ ಕಾಣಿಕೆ, ನನಗೆ. ಅವನಿಗೆ ನನ್ನ ನಮನಗಳು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜುನಾಥ್,
ನಿಮ್ಮ ಮಗಳ ಪ್ರಯತ್ನಕ್ಕೆ ಸಂದ ಪುರಸ್ಕಾರ. ಪಿ.ಯು.ಸಿ.ಯಲ್ಲಿ ಇನ್ನೂ ಉತ್ತಮ ಅಂಕಗಳು ಸಿಗಲಿ ಎಂದು ಹಾರೈಸುವೆ. ನಿಮ್ಮ ಮಗಳಿಗೆ ಶುಭಾಶಯಗಳನ್ನು ತಿಳಿಸಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು, ಗಣೇಶ್, ಆದರೆ ಮುದ್ದಿನ ಮಗಳು ಅಭಿನೇತ್ರಿಯಾಗುವ ಭರದಲ್ಲಿ ಪಿಯುಸಿಯಲ್ಲಿ ಕಡಿಮೆ ಅಂಕಗಳನ್ನು ತೊಗೊಂಡು ಬಿಟ್ಟಳಲ್ಲಾ ?? ಅದೇ ನನ್ನ ಚಿಂತೆ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಗಳಲ್ಲಿ ಉತ್ತಮ ಅಭಿನೇತ್ರಿ ಆಗುವ ಎಲ್ಲಾ ಲಕ್ಷಣಗಳೂ ಇವೆ... ಅವರಿಗೆ ಒಳ್ಳೆಯದಾಗಲಿ. ಅವರಿಂದ ಕನ್ನಡಕ್ಕೆ ಉತ್ತಮ ಕನ್ನಡ ನಟಿ ಸಿಗುವಂತಾಗಲಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ರೆಡ್ಡಿಯವರೆ, ನನ್ನ, ನಿಮ್ಮ ಆಸೆ ಈಡೇರುವಂತೆ ಆ ದೈವ ಅನುಗ್ರಹಿಸಲಿ ಎಂದು ನನ್ನಾಸೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಾಸೆ , ನಿಮ್ಮಾಸೆಗಿಂತ ನಿಮ್ಮ ಮಗಳಾಸೆ ಮುಖ್ಯ. ಆದರೆ.... ಅದೇ ರಂಗದಲ್ಲಿ ನಾನಿರುವುದರಿಂದ ಕೆಲವೊಂದು ಮಾತುಗಳನ್ನು ಹೇಳಲು ಇಚ್ಚಿಸುತ್ತೇನೆ... ಅದನ್ನು ಸಾದ್ಯವಾದರೆ ನಿಮ್ಮ ಮಗಳಿಗೆ ತಲುಪಿಸಿ.
೧) ನಟನೆ ಅಭಿವ್ಯಕ್ತಿಗೆ ಆದ್ಯತೆ ನೀಡಬೇಕೆ ಹೊರತು ಅದು ನೀಡುವ ಹಣ ಮತ್ತು ಹೆಸರಿಗಲ್ಲ...
೨) ಸೂಕ್ತ ಅವಕಾಶಕ್ಕಾಗಿ ಕಾಯುವುದು ಒಳ್ಳೆಯದು.
೩) ಅದಕ್ಕೂ ಮೊದಲು ನಟನೆಯ ಬಗ್ಗೆ ಎಲ್ಲಿಯಾದರು ಒಳ್ಳೆಯ ನಟನೆ ಕಲಿಸುವ ಶಾಲೆಯಲ್ಲಿ ತರಬೇತಿ ಪಡೆಯುವುದು ಅವಶ್ಯಕ
೪)ನಟನೆ ಕಲಿಯಲು ಅಭಿವ್ಯಕ್ತಿಸಲು ನಾಟಕರಂಗ ಒಳ್ಳೆಯ ವೇದಿಕೆ...
೫) ನಟನೆ, ನಾಟಕ, ಸಿನಿಮಾ ಬಗ್ಗೆ ಎಷ್ಟು ಸಾದ್ಯವೋ ಅಶ್ಟು ತಿಳುವಳಿಕೆ ಪಡೆಯುತ್ತಾ.. ಸತತ ಅಭ್ಯಾಸ ಅವಶ್ಯಕ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೆಡ್ಡಿಯವರೆ, ನಿಮ್ಮ ಅಮೂಲ್ಯವಾದ ಸಲಹೆಗಳಿಗೆ ಧನ್ಯವಾದಗಳು. ಖಂಡಿತ ನನ್ನ ಮಗಳಿಗೆ ಇದನ್ನು ಓದಿ ಅರ್ಥ ಮಾಡಿಕೊಂಡು ಪಾಲಿಸುವಂತೆ ತಿಳಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೆಡ್ಡಿಯವರೆ, ನಿಮ್ಮ ಅಮೂಲ್ಯವಾದ ಸಲಹೆಗಳಿಗೆ ಧನ್ಯವಾದಗಳು. ಖಂಡಿತ ನನ್ನ ಮಗಳಿಗೆ ಇದನ್ನು ಓದಿ ಅರ್ಥ ಮಾಡಿಕೊಂಡು ಪಾಲಿಸುವಂತೆ ತಿಳಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಗಳಲ್ಲಿ ಉತ್ತಮ ಅಭಿನೇತ್ರಿ ಆಗುವ ಎಲ್ಲಾ ಲಕ್ಷಣಗಳೂ ಇವೆ... ಅವರಿಗೆ ಒಳ್ಳೆಯದಾಗಲಿ. ಅವರಿಂದ ಕನ್ನಡಕ್ಕೆ ಉತ್ತಮ ಕನ್ನಡ ನಟಿ ಸಿಗುವಂತಾಗಲಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಗಳ ಬಗ್ಗೆ ಇದೆ ಮೊದಲ ಬಾರಿ ಹೇಳುತಿದ್ದೀರಿ..ಸಂತೋಷವಾಯಿತು....ಅವಳ ಅಭಿರುಚಿಗೆ ಪ್ರೋತ್ಸಾಹಿಸಿ....ದೇವರು ಅವಳಿಗೆ ಎಲ್ಲ ರೀತಿಯಲ್ಲು ಅವಳ ಆಸೆಯನ್ನು ನೆರವೇರಿಸಲಿ...ಅವಳ ಪ್ರತಿಯೊಂದು ಹೆಜ್ಜೆಯಲ್ಲು ನಿಮ್ಮ ಮಾರ್ಗದರ್ಶನವಿರಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಮಾಲತಿಯವರೆ, ಅವಳಾಸೆ ನೆರವೇರಿ, ಅವಳಂದುಕೊಂಡಂತೆ ಆಗಿ ಬಿಟ್ಟರೆ, ನನಗೇನು ಚಿಂತೆ ? ನನಗಾಗ ಸ್ವರ್ಗ ಮೂರೇ ಗೇಣು !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.