ಮರಳುಗಾಡಿನ ವಸಂತ......

0

ಖರ್ಜೂರದ ಮರಗಳು, ನಮ್ಮ ಭಾರತದ ಎಲ್ಲೆಡೆ ಕಂಡು ಬರುವ ಈಚಲು ಮರಗಳಂತೆ, ಈ ಅರಬ್ ರಾಷ್ಟ್ರಗಳ ಎಲ್ಲ ಕಡೆ ಕಾಣಬಹುದು. ಈಗ ಇಲ್ಲಿ ಸುಡು ಬೇಸಿಗೆ, ಬಾನ ಸೂರ್ಯ ಇಳೆಯನ್ನು ಸುಟ್ಟೇ ಬಿಡುವನೇನೋ ಎಂದು ಭಯ ಹುಟ್ಟಿಸುವಂತೆ ಇಲ್ಲಿ ಬಿಸಿಲು ಸುಡುತ್ತಿದೆ. ಈಗ ಇಲ್ಲಿ ಖರ್ಜೂರದ ಮರಗಳಿಗೆ ವಸಂತ ಕಾಲ, ಬೇಸಿಗೆಯಲ್ಲಿ ನಮ್ಮಲ್ಲಿ ಮಾವಿನ ಮರಗಳ ತುಂಬಾ ಹೇಗೆ ನಾವು ಹಣ್ಣುಗಳನ್ನು ನೋಡಿ, ತಿಂದು, ಆಸ್ವಾದಿಸುತ್ತೇವೋ, ಹಾಗೆ. ನಮ್ಮಲ್ಲಿ ಮಾಮರದ ತುಂಬಾ ಕೋಗಿಲೆಗಳು ಕುಳಿತು " ಕುಹೂ, ಕುಹೂ" ಎಂದು ಹಾಡುವ ಹಾಗೆ ಈ ಖರ್ಜೂರದ ಮರಗಳಲ್ಲಿ ಸಣ್ಣ ಪುಟ್ಟ ಹಕ್ಕಿಗಳು ಕುಳಿತು, ಕಳಿತ ಖರ್ಜೂರದ ಹಣ್ಣುಗಳನ್ನು ತಿನ್ನುತ್ತಾ, ತಮ್ಮದೇ ಆದ ಅದೆಂಥದೋ ಭಾಷೆಯಲ್ಲಿ ಅದೇನೇನನ್ನೋ ಮಾತಾಡಿಕೊಳ್ಳುತ್ತಾ, ಚಿತ್ರ ವಿಚಿತ್ರವಾದ ಕಲರವವನ್ನೆಬ್ಬಿಸುತ್ತವೆ. ಆ ಹಕ್ಕಿಗಳ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದರೆ, ನನಗೆ ನಮ್ಮ " ಸಕ್ರೆ ಬೈಲಿನ" ದಟ್ಟ ಕಾನನದ ನಡುವೆ, "ಮಂಡಗದ್ದೆಯ" ತುಂಗೆಯ ಮಡಿಲಲ್ಲಿ, ನಮ್ಮ " ರಂಗನತಿಟ್ಟಿನ" ಕಾವೇರಿಯ ದ್ವೀಪದಲ್ಲಿ, ಕಂಡು ಕೇಳಿದ ಹಕ್ಕಿಗಳ ಶಬ್ಧಗಳೆಲ್ಲಾ ನೆನಪಿಗೆ ಬರುತ್ತಿವೆ, ಈ ಮರಳುಗಾಡಿನಲ್ಲಿ!!

ಮರಗಳ ತುಂಬಾ ಗೊಂಚಲು ಗೊಂಚಲಾದ ಹಣ್ಣುಗಳು ಇಳಿಬಿದ್ದಿವೆ, ಆ ಹಣ್ಣುಗಳನ್ನು ಕಿತ್ತು ಸಂಸ್ಕರಿಸಿ, ಶೇಖರಣೆ ಮಾಡಲು ಒಂದು ಪ್ರತ್ಯೇಕ ಇಲಾಖೆಯನ್ನೇ ಇಲ್ಲಿನ ಸರ್ಕಾರ ನಿಯಮಿಸಿದೆ. ಅದಕ್ಕಾಗಿ ಸಾವಿರಾರು ಜನ ಕೆಲಸ ಮಾಡುತ್ತಾರೆ, ಸಂಸ್ಕರಿಸಿದ ಹಣ್ಣುಗಳನ್ನು ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಲ್ಲದೆ ಸಾಕಷ್ಟು ದೇಶಗಳಿಗೆ ರಫ್ತು ಮಾಡುತ್ತಾರೆ. ಇದು ಅರಬ್ ರಾಷ್ಟ್ರೀಯರಿಗೆ ಒಂದು ದೊಡ್ಡ ವರಮಾನದ ಮೂಲ. ಸಕ್ಕರೆಯನ್ನೇ ಸಿಹಿ ಎಂದು ನಾವು ತಿಳಿದುಕೊಂಡರೆ ಅದು ದೊಡ್ಡ ತಪ್ಪು, ಅದರ ಎಷ್ಟೋ ಪಾಲು ಹೆಚ್ಚಿನ ಸಿಹಿ ಈ ಖರ್ಜೂರದ ಹಣ್ಣುಗಳಲ್ಲಿದೆ.

ಇದೆಂಥಾ ಸೋಜಿಗ, " ಜಗವೇ ವಿಸ್ಮಯ"!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.