ಮುದುಡಿ ಮಲಗಿದ ನಗು ಮತ್ತೆ ಬರುವುದೇ??

0

ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆ
ಮು೦ಜಾವಿನ  ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆ

ಹರುಷವೆ೦ಬ  ಅಮೃತಧಾರೆ  ಇ೦ದೇಕೋ ಅರಿಯೆ ವಿಷವಾಗಿದೆ
ಗೃಹಲಕ್ಷ್ಮಿಯ  ಮೊಗದಲಿದ್ದ   ನಗು  ಅದೇಕೋ  ಮಾಯವಾಗಿದೆ

ಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು ಬೇಗೆಯಲಿ ಬಸವಳಿದಿದೆ
ನಲಿಯುತ ಸಾಗುತಲಿದ್ದ ಜೀವನರಥದ ಗಾಲಿ ಏಕೋ ಸ್ತಬ್ಧವಾಗಿದೆ

ಅರಿಯದ ಮಾಯೆಯ ಮುಸುಕು ಮನವ ಕವಿದು ಕಾಡುತಲಿದೆ
ಪರಿಹರಿಸುವ ದಾರಿ ಕಾಣದೆ ಮನ ನೊ೦ದು ಇ೦ದು ಮೂಕವಾಗಿದೆ

ಮಧುರ ದೈನ೦ದಿನ ಮ೦ದಸ್ಮಿತ ಕಮಲ  ಮತ್ತೆ ಅರಳುವುದೇ??
ವಿಷಾದದ ಛಾಯೆಯಡಿ ಮುದುಡಿ ಮಲಗಿದ ನಗು ಮತ್ತೆ ಬರುವುದೇ??

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ದಾರಿ ಕಾಣದೆ ಮೂಕವಾದ ಮನವಿಷ್ಟೊಂದು ಮಾತನಾಡಿದೆ ಮನೆ ಮನದ ಒಳ ಒಣ ಚಿತ್ರಣವ ಇಲ್ಲಿ ತೆರೆದು ಇಟ್ಟಂತಾಗಿದೆ ಮಂದಸ್ಮಿತ ಕಮಲವೇನು ಪೂರ್ಣ ಪಕಳೆಯುಳ್ಳ ಕಮಲವರಳೀತು ಮುಡುಡಿ ಮನಗಿರುವ ನಗುವೂ ತಡಮಾಡದೆ ಕೇಕೆ ಹಾಕಿ ನಕ್ಕೀತು ಮುಂಜಾವಿನ ಸೂರ್ವ ಕಾರ್ಮೇಡದಡಿಯಲಿ ಮರೆಯದರೇಣಾಯ್ತಂತೆ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿದ್ದಂತೆ ಸಂಧ್ಯಾರಾಣಿ ಅರಳುವುದಂತೆ ಮನೆ ಮನದ ತುಂಬೆಲ್ಲಾ ಕಿಲ ಕಿಲ ನಗುವಿನ ಪ್ರತಿಧ್ವನಿ ಹರಡುವುದಂತೆ ಬ್ಲ್ಯಾಕ್ ಲೇಬಲ್ಲಿನ ಮತ್ತೇರಿ ನೀವೀ ಸಂಪದದಂಗಳವನೇ ಮರೆಯುವಿರಂತೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪೊಪ್ಪು: <<ಮಂದಸ್ಮಿತ ಕಮಲವೇನು ಪೂರ್ಣ ಪಕಳೆಯುಳ್ಳ ಕಮಲವರಳೀತು ಮುಡುಡಿ ಮನಗಿರುವ ನಗುವೂ ತಡಮಾಡದೆ ಕೇಕೆ ಹಾಕಿ ನಕ್ಕೀತು ಮುಂಜಾವಿನ ಸೂರ್ವ ಕಾರ್ಮೇಡದಡಿಯಲಿ ಮರೆಯದರೇಣಾಯ್ತಂತೆ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿದ್ದಂತೆ ಸಂಧ್ಯಾರಾಣಿ ಅರಳುವುದಂತೆ>> ಮಂದಸ್ಮಿತ ಕಮಲವೇನು ಪೂರ್ಣ ಪಕಳೆಗಳುಳ್ಳ ಕಮಲವರಳೀತು ಮುಡುಡಿ ಮಲಗಿರುವ ನಗು ಕೂಡ ತಡಮಾಡದೇ ಕೇಕೆ ಹಾಕೀತು ಮುಂಜಾವಿನ ಸೂರ್ವ ಕಾರ್ಮೋಡದಡಿಯಲಿ ಮರೆಯಾದರೇನಾಯ್ತಂತೆ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿದ್ದಂತೆ ಸಂಧ್ಯಾರಾಣಿ ಅರಳುವುದಂತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶರೆ ನಿಮಗನಿಸುತಿದೆ ಇದು ಮನೆ ಮನದ ಒಳ ಚಿತ್ರಣವೆ೦ದು ಆದರೆ ನನಗನ್ನಿಸುತಿದೆ ಇದು ನನ್ನ ಮನದ ಭಾವನೆಗಳ ತೋರಣವೆ೦ದು ಹಿ೦ದೆಯೂ ಬಾಡಿತ್ತು ಮನದ ಮ೦ದಸ್ಮಿತ ಕಮಲ ಪಕಳೆಗಳು ಬಾಡಿ ಮುದುಡಿ ಮಲಗಿದ್ದ ಮನವು ನಕ್ಕಿತ್ತು ಕೇಕೆ ಹಾಕಿ ಇಲ್ಲದೆ ಆವ ಗಡಿಬಿಡಿ ಆದರೆ ಇ೦ದು ಪ್ರಖರ ಬೆಳಕಿನ ನಡುವೆಯೂ ಮರೆಯಾದನಲ್ಲ ಸೂರ್ಯ ಮಧ್ಯಾಹ್ನ ಕಳೆದು ಸ೦ಜೆಯಾಗುತ್ತಾ ಬ೦ದರೂ ಮರೆತನೇ ತನ್ನ ಕಾರ್ಯ ಮನೆ ಮನದ ತು೦ಬೆಲ್ಲ ತು೦ಬಿ ಹರಡುತ್ತಿದ್ದ ಆ ಕಿಲಕಿಲ ನಗು ಇ೦ದು ಮಾಯ ಆ ಬ್ಲಾಕ್ಲೇಬಲ್ ಶಿವಾಸ್ ಗ್ರೀನ್ಲೇಬಲ್ಗಳೆಲ್ಲ ಕಳೆದುಕೊ೦ಡವಲ್ಲ ತಮ್ಮ ಪ್ರಾಯ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ, ಹೀಗೇ ಇರೋಲ್ಲ! ಆದರೆ ಇ೦ದು.............ಹೀಗಿದೆಯಲ್ಲಾ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ನಾನು ತಡವಾಗಿ ಪ್ರತಿಕ್ರಿಯಿಸುವ ವೇಳೆಗಾಗಲೇ ಮುದುಡಿದ್ದ ಮನದಾವರೆ ಅರಳಿದ್ದಿರಬಹುದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.