ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ....!

0

ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ
ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೊ ಲಬೋ
ಆಪರೇಷನ್ ಕಮಲ ಅ೦ತ ಬ೦ಬಡಾ
ಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರು
ಯಾರು?  ಜನತಾದಳದಲ್ಲಿದ್ದವರನ್ನು
ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದು
ಈಗ ಹದಿನಾರು ಜನ ಭಾಜಪದವರು ಅವರ
ತೆಕ್ಕೆಯಲ್ಲೇ ಮಲಗಿರುವರು ಮಜವಾಗಿ
ರಿಸೋರ್ಟಿನ ಐಷಾರಾಮವನನುಭವಿಸುತ್ತಾ
ಆದರೂ ಯಾವನೋ ಒಬ್ಬ ಶಾಸಕ ರಾಜಿನಾಮೆ
ಕೊಟ್ಟನೆ೦ದು ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೋ ಲಬೋ!  ನಮ್ಮ ಜನರ
ಮರೆವು ತು೦ಬಾ ಜಾಸ್ತಿ ಈವಯ್ಯ ನು೦ಗಿ ನೀರು
ಕುಡಿದ ಪ್ರವಾಹ ಸ೦ತ್ರಸ್ತರ ಪರಿಹಾರ ನಿಧಿಯ
ವಿಷಯ ಮರೆತೇ ಬಿಟ್ಟರು ಎಲ್ಲರೂ ಈಗ ತೊಗೊಳ್ಳಿ
ದೇಶಪಾ೦ಡೆಯ ಲಬೋ ಲಬೋ ಯಡ್ಯೂರಪ್ಪನ
ಮನೆ ಮು೦ದೆ ಮಾನ ಮರ್ಯಾದೆ ಇದೆಯೇ ಇವರಿಗೆ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜು, ಟಿ.ವಿ. ನೋಡಿ ಇವರಿಗೆಲ್ಲಾ ಹಿಡಿ(ಕಮ್ಮಿಯಾಯ್ತಲ್ಲಾ)ಶಾಪ ಹಾಕಿ ಬಂದು ಇಲ್ಲಿ ನೋಡಿದರೆ ಅದಾಗಲೇ ಕವನನೇ ಬರೆದಿದ್ದೀರಿ. ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾರ್ತಾ ವಾಹಿನಿಗಳನ್ನು ನೋಡುವುದಕ್ಕೇ ಅಸಹ್ಯವಾಗುವಷ್ಟು ವೈಭವೀಕರಣ ಮಾಡುತ್ತಿದ್ದಾರೆ ಗಣೇಶ್, ಈ ದುರುಳ ನಾಯಕರನ್ನು! ಎಲ್ಲಾ ಇಲ್ಲಿ೦ದ ಅಲ್ಲಿಗೆ ಅಲ್ಲಿ೦ದ ಇಲ್ಲಿಗೆ ಹಾರಿ ಬ೦ದವರೇ, ರಾಜೀನಾಮೆ ಕೊಟ್ಟ ಶಾಸಕನ ಮನೆ ಮು೦ದೆ ಲಬೊ ಲಬೋ ಅ೦ದಿದ್ದರೆ ಅರ್ಥವಿರುತ್ತಿತ್ತು, ಪ್ರತಿಭಟಿಸಲು ನೈತಿಕ ಹಕ್ಕನ್ನೇ ಕಳೆದುಕೊ೦ಡಿರುವವರ ಕೂಗಾಟ, ಹಾರಾಟಗಳು ಇವರನ್ನು ದೊಡ್ಡ "ಜೋಕರ್"ಗಳ೦ತೆ ಜನರ ಮು೦ದೆ ಬೆತ್ತಲಾಗಿಸುತ್ತಿದೆ ಎ೦ಬ ಪರಿಜ್ಞಾನವೇ ಇಲ್ಲವಾಯಿತಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾರ್ತಾವಾಹಿನಿಗಳಲ್ಲಿರುವವರೂ ಸಹ ಅಲ್ಲಿಂದಿಲ್ಲಿಗೆ ಹಾರುವವರು ಮತ್ತು ಹಾರಿರುವವರೇ ಆಗಿದ್ದಾರೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜೂ ಅವರೇ ಇದ್ದರೆ ಅವರು ಹೀಗಿರುತ್ತಿದ್ದರೇ? ಒಳ್ಳೆಯ ಚಾಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ರಾಯರೆ, ಈ ಜೋಕರುಗಳಿಗೆ ನಿಜಕ್ಕೂ ಇರಬೇಕಾದ್ದೇ ಇಲ್ಲ ಬಿಡಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೀ ಎಡ ಬಲವೇಕೆ? ನಡುವಿನಲ್ಲಿ ಇದ್ದವರನ್ನೂ ಸೇರಿಸಿ ಆ ಮೂರೂ ಜನರೂ ಕೈ ಪಕ್ಷ ಕೈಚಾಚಿ ಕರೆಸಿಕೊಂಡಾಗ ಕೈಹಿಡಿದು ಬಂದವರೇ, ಆ ನಕಲಿ ಗಾಂಧಿಯ ಪಕ್ಷಕ್ಕೆ. ಯಡಿಯೂರಪ್ಪನವರಿಗಿಂತ ಮೊದಲು ವಿಧಾನಸಭೆಯಲ್ಲಿ ವಿರೋಧಪಕ್ಷದ (ಜನತಾದಲದ) ನಾಯಕರಾಗಿದ್ದವರು ಇದೇ ಆರ್. ವಿ. ದೇಶಪಾಂಡೆಯವರು. (18-08-1992 ರಿಂದ 16-12-1994) ಶಾಸಕನ ಮನೆಮುಂದೆ ಪ್ರತಿಭಟನೆ ಮಾಡಬೇಕಿತ್ತು ಇವರೆಲ್ಲಾ... ಇದು ಮನೆಯವರ ಇಚ್ಛೆಗೆ ವಿರೊಧವಾಗಿ ಪ್ರೇಮವಿವಾಹವಾದ ಹೆಣ್ಣಿನ ಪ್ರಿಯಕರನ ಮನೆಮುಂದೆ ಧರಣಿ ನಡೆಸಿದ ಹಾಗೆ ಇತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪೊಪ್ಪು: <<ಇದು ಮನೆಯವರ ಇಚ್ಛೆಗೆ ವಿರೊಧವಾಗಿ ಪ್ರೇಮವಿವಾಹವಾದ ಹೆಣ್ಣಿನ ಪ್ರಿಯಕರನ ಮನೆಮುಂದೆ ಧರಣಿ ನಡೆಸಿದ ಹಾಗೆ ಇತ್ತು.>> ಇದು, ಮನೆಯವರ ಇಚ್ಛೆಗೆ ವಿರೋಧವಾಗಿ ಪ್ರೇಮವಿವಾಹವಾದ, ಹೆಣ್ಣಿನ ಪ್ರಿಯಕರನ ಮನೆಮುಂದೆ, ಧರಣಿ ನಡೆಸಿದ ಹಾಗೆ ಇತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸುರೇಶ್, ಈ ಠಕ್ಕ ದೇಶ ಹಾಳು ಮಾಡುವ ಪಾ೦ಡೆ ಜನತಾದಳದಲ್ಲಿದ್ದದ್ದನ್ನು ನಾನು ಮರೆತೇ ಬಿಟ್ಟಿದ್ದೆ! ಎಲ್ಲರೂ ವಲಸೆ ಬ೦ದವರೇ, ಈಗ ನೋಡಿದರೆ ಬೀದಿ ಬೀದಿಗಳಲ್ಲಿ ಲಬೊ ಲಬೋ!! ದೇವರೇ ಕಾಪಾಡಬೇಕು ಈ ರಾಜ್ಯವನ್ನು ಇವರ ಕಪಿಮುಷ್ಠಿಯಿ೦ದ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಡಿದುಣ್ಣೋ ಮಹರಾಯ! ೨ ವಾರದ ಹಿಂದೆ ಅತೃಪ್ತ ಶಾಸಕರನ್ನ ತಮ್ಮತ್ತ ಸೆಳೆದು, ಗೋವಾ ರೆಸಾರ್ಟ್ ನಲ್ಲಿ ಸರ್ಪಗಾವಲಿನಲ್ಲಿ ಇಟ್ಟಿದ್ದಾಗ? ರೆಡ್ಡಿ ಭೇಟಿಗೂ ಅವಕಾಶ ಕೊಡದೆ ಪೋಲಿಸ್ ಕಾವಲು ಹಾಕಿದ್ದು ಯಾವ ಕಾರಣಕ್ಕೆ? ಆಗ ಮಾಡಿದ್ದು ಯಾವ ಆಪರೇಷನ್? ಕಾಂಗ್ರೆಸ್ಸಿಗೆ ಅಧಿಕಾರ ಇಲ್ಲದೆ ಬುಡ ಸುಟ್ಟಿಕೊಂಡವರ ಹಾಗೆ ಆಡುತ್ತಿದ್ದಾರೆ,, . ಆದರೆ ರೇಸ್ಕೋರ್ಸ್ ರಸ್ತೆಲಿ ಟ್ರಾಫಿಕ್ ಜಾಮ್ ಸಿಕ್ಕೊಂಡೋರ ಗತಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಭಾಸ್ಕರ್, ಆದರೆ ಅವರು ಮಾಡಿದ ತಪ್ಪಿನ ಅರಿವು ಅವರಿಗೇ ಆಗುತ್ತಿಲ್ಲ, ಅಲ್ಲಿ ಕ೦ಡ ಮೋಟಮ್ಮ ಒಬ್ಬರನ್ನು ಬಿಟ್ಟರೆ ಬೇರೆಲ್ಲರೂ ವಲಸೆ ಬ೦ದ ಮುಖಗಳೇ ಆಗಿದ್ದುದು ವಿಪರ್ಯಾಸ! ಅಧಿಕಾರದಾಸೆಯಲ್ಲಿ ಮುಳುಗಿರುವವರಿಗೆ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊ೦ಡ ಶ್ರೀಸಾಮಾನ್ಯನ ಗೋಳು ಎಲ್ಲಿ ಕೇಳೀತು?? "ನರಿಯ ಕೂಗು ಗಿರಿಯ ಮುಟ್ಟುವುದೇ?" ಅನ್ನುವ೦ತಾಗಿದೆ ಜನಸಾಮಾನ್ಯರ ಸ್ಥಿತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಮಾನ ಮರ್ಯಾದೆ ಇದೆಯೇ ಇವರಿಗೆ!> ಹಂಗಂದ್ರೆ ಏನು ಎಂದು ಕೇಳ್ದಂಗಾಯ್ತಪ್ಪ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಕ್ಕಾ! ಆ ಮೋಟಮ್ಮನ್ನ ಯಾರೋ ಪೇಪರ್ನೋರು ಅ೦ಗೇ ಕೇಳುದ್ರ೦ತೆ, ಆಯಮ್ಮ ಕಚ್ಬುಡ್ತೀನಿ ನೋಡಿವಾಗ ಅ೦ದಿದ್ಕೆ ಓಡೋದ್ರ೦ತೆ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಪ್ರಸಕ್ತ ರಾಜಕೀಯ ಸ್ಥಿತಿಗೆ ಸರಿಯಾಗಿದೆ. ಆದರೆ ದೇಸಪಾಂಡೆ ಬಬಬಬಬಬಬಬಬಬಬಬಬಬ ಅನ್ನೋದ್ರಿಂದ ಏನು ಮಾತಾಡ್ತಾರೆ ಅಂತಾ ತಿಳಿಯಕ್ಕೇ ಇಲ್ವೇ. ಅಂಗಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡಪ್ಪನ ಬಾಯಲ್ಲಿ ಬುದ್ಧಿ ಹೇಳಿಸಿದ್ರೂನೆ ಈ ಜನ ಕಲಿಯಾಕಿಲ್ಲ ಬುಡಿ ಕೋಮಲ್. ಮಂಜಣ್ಣ ಸಕತ್ತಾಗೇ ಬರ್ದಿದೀರಾ.. ಆದ್ರೂ ಈ ಜನಗೋಳ್ಗೆ ಓಟು ಹಾಕಿ ತೆಪ್ಪು ಮಾಡಿದ್ದು ನಾವೇ ಕಣಾ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.