ಕಾರಿನ ಕಥೆ.

5

ದುಬೈನಲ್ಲಿ ಕೆಲಸ ಮಾಡಲು ಬಂದ ನಂತರ ಇಲ್ಲಿನ ವಾಹನ ಚಾಲನಾ ಪರವಾನಗಿ ಪಡೆದೆ.  ಕಂಪನಿಯಿಂದ ಒಳ್ಳೆಯ ಕಾರ್ ಕೂಡ ಸಿಕ್ಕಿತು.  ಕಾರು ನನ್ನ ಕೆಲಸದ ಅವಿಭಾಜ್ಯ ಅಂಗ.  ನನಗೆ ಇಲ್ಲಿ ಕಾರು ಸಿಕ್ಕಿದ ದಿನ ಅಲ್ಲಿ ಬೆಂಗಳೂರಿನಲ್ಲಿ ಪತ್ನಿ - ಮಕ್ಕಳು ಅಕ್ಕ ಪಕ್ಕದವರಿಗೆಲ್ಲಾ ಸಿಹಿ ಹಂಚಿ ಸಂತೋಷಪಟ್ಟಿದ್ದರು.  ಸ್ವಲ್ಪ ದಿನಗಳು ಕಳೆದ ನಂತರ ಶುರುವಾಯಿತು ನೋಡಿ, ಒಮ್ಮೆ ಮೆತ್ತಗೆ ಮಗ ಶುರು ಮಾಡಿದ, ಅಪ್ಪ, ನಮಗೂ ಒಂದು ಕಾರ್ ಕೊಡಿಸಪ್ಪ, ಮತ್ತೊಮ್ಮೆ ಮುದ್ದಿನ ಮಗಳು ಕೇಳಿಸಿಯೂ ಕೇಳಿಸದಂತಹ ಧ್ವನಿಯಲ್ಲಿ ಉಸುರಿದ್ದಳು,  ಅಪ್ಪಾ, ನಮಗೊಂದು ಕಾರ್.

ಕೊನೆಗೆ ಪತ್ನಿ, ಕಲಾ,  ಫೋನಿನಲ್ಲಿ  "ಮಕ್ಕಳು ತುಂಬಾ ಆಸೆ ಪಡ್ತಿದಾರೆ, ಎಲ್ಲಾದ್ರೂ ಹೋಗ್ಲಿ, ಒಂದು ಕಾರ್ ಕೊದಿಸಿಬಿಡ್ರೀ"  ಅಂತ ಬೇರೆ ಶಿಫಾರಸ್ಸು ಮಾಡಿದಳು.  ಮೊದಲು ಅವಳಿಗೆ ವಾಹನ ಚಾಲನಾ ಪರವಾನಗಿ ಪಡೆಯುವಂತೆ ಹೇಳಿದೆ.  ತರಬೇತಿ ಪಡೆದು ಕೇವಲ ಎರಡೇ ತಿಂಗಳಲ್ಲಿ ಕಲಾ ಪರವಾನಗಿ ಪಡೆದೇ ಬಿಟ್ಟಳು.  ನನಗೆ ಅನುಮಾನ, ಕಾರ್ ನಿಜವಾಗಲೂ ಬೇಕಿದ್ದದ್ದು ಮಕ್ಕಳಿಗಾ ಅಥವಾ ಇವಳಿಗಾ ??  ಈಗ ಕಾರಿಗಾಗಿ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಮಕ್ಕಳಿಬ್ಬರೂ ದಿನಕ್ಕೊಮ್ಮೆ ನನಗೆ ಕಾರಿನ ಬಗ್ಗೆ ಕುಯ್ಯತೊಡಗಿದರು.  ಕೊನೆಗೆ ಅವರಿಗೆ " ಈ ಸಲ ರಜಕ್ಕೆ ಬಂದಾಗ" ಕಾರ್ ಕೊಡಿಸುವ ಭರವಸೆ ಕೊಟ್ಟೆ.

ಭರವಸೆ ಕೊಟ್ಟಂತೆ ಈ ಸಲ ರಜಕ್ಕೆ ಬೆಂಗಳೂರಿಗೆ ಹೋದಾಗ ಹೊಸ ಕಾರ್- - ಹ್ಯುಂಡೈ - ಐ 10, ಟೆಸ್ಟ್ ಡ್ರೈವ್ ಮಾಡಿದೆ, ತುಂಬಾ ಚೆನ್ನಾಗಿದೆ ಅನ್ನಿಸಿತು. ಖರೀದಿಸಿಯೇ ಬಿಟ್ಟೆ, ಕಲಾ ಮತ್ತು ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಸಿಹಿ ತಿನ್ನಿಸಿದ್ದೇ ತಿನ್ನಿಸಿದ್ದು, ಎಲ್ಲರಿಗೂ ಹೇಳಿದ್ದೇ ಹೇಳಿದ್ದು, ಹೊಸ ಕಾರ್ ತಂದ್ವಿ ಅಂತ.

ಅವರನ್ನು ಚೆನ್ನಾಗಿ ಕಾರಿನಲ್ಲಿ ಸುತ್ತಾಡಿಸಿದೆ, ಕಲಾ ಮತ್ತು ಮಗಳು ಗೌತಮಿಗೆ ಕಾರ್ ಓಡಿಸಲು ಕೊಟ್ಟು ಪ್ರೋತ್ಸಾಹಿಸಿದೆ. ನಾನು ರಜೆ ಮುಗಿದು ದುಬೈಗೆ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು, ಮಗ ವಿಷ್ಣು ಅಳುವಾಗ ಹ್ರುದಯ ಹಿಂಡಿದಂತಾಗಿ ದುಬೈಗೆ ಹೋಗುವುದೇ ಬೇಡ ಅನ್ನಿಸಿತ್ತು. ಆದರೆ ಇನ್ನೂ ನಿರ್ವಹಿಸಬೇಕಾದ ಜವಾಬ್ಧಾರಿಗಳು ತುಂಬಾ ಇವೆ, ಹೋಗಲೇಬೇಕು ಎಂದ ಮನಸ್ಸಿನ ಮಾತು ಕೇಳಿ ಹೊರಟು ಬಂದೆ,, ಭಾರವಾದ ಹ್ರುದಯದೊಂದಿಗೆ.

ಸಂಪದಿಗರಿಗಾಗಿ.... ಪ್ರೀತಿಯಿಂದ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಭಾವುಕವಾಗಿತ್ತು ನಿಮ್ಮ ಕಾರಿನ ಕಥೆ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಮಾಲತಿಯವರೆ, ನಾನೊಬ್ಬ ಭಾವ ಜೀವಿ, ನಾನು ಬೇಕೆಂದು ಬಯಸಿದ್ದು ನನಗೆ ಸಿಗಲಿಲ್ಲ ನನ್ನ ಬಾಲ್ಯ ಮತ್ತು ಯೌವ್ವನದಲ್ಲಿ. ಈಗ ನನ್ನ ಮಕ್ಕಳು ಅವರು ಬೇಕೆಂದಿದ್ದನ್ನು ಪಡೆದು, ಸಂತೋಷಿಸುವಾಗ ನನಗಾಗುವ ಖುಷಿಯನ್ನು ಮಾತುಗಳಲ್ಲಿ ಹೇಳಲಾಗದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಥ್ ಅವರೆ ನಾವು ನಮ್ಮ ಬಾಲ್ಯದಲ್ಲಿ ಮತ್ತು ಯೌವನದಲ್ಲಿ ಕಳೆದುಕೊಂಡದ್ದನ್ನು ನಮ್ಮ ಮಕ್ಕಳಿಗೆ ಸಿಕ್ಕು ಅವರು ಸಂತೋಷ ಪಟ್ಟಾಗ ನಮ್ಮ ಜೀವನ ಸಾರ್ಥಕ ಅನಿಸುತ್ತದೆ ಅಲ್ಲ್ವೆ, ಕೆಲವುಸಾರಿ ನಮ್ಮ ಭೂತಕಾಲದ ಜೀವನದಬಗ್ಗೆ ತುಂಬಾ ಬೇಸರವಾಗುತ್ತದೆ ಆ ಸ್ಂತೋಷಗಳನ್ನು ಕಿತ್ತು ಕೊಂಡವರನ್ನು ನೆನೆದ ಬೇಸರವಾಗುತ್ತದೆ....ನಾನಂತು ತುಂಬಾ ನೊಂದಿದ್ದೇನೆ....ಅದಕ್ಕೆ ಆದಷ್ಟು ನನ್ನ ಮಗನನ್ನು ಆ ರೀತಿಯ ನೋವು ಕಾಡದಂತೆ ನೋಡಿಕೊಳ್ಳುತ್ತೇನೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೆ, ನಿಮ್ಮ ಮಾತು ಸತ್ಯ, ಆ ಮಕ್ಕಳ ನಗುಮುಖ ನಮ್ಮೆಲ್ಲ ನೋವನ್ನೂ ಮರೆಸಿಬಿಡುತ್ತದೆ. " ಹೇಮಾವತಿಯ ದಡದಲ್ಲಿ" ನನ್ನ ಮಗನ ಫೋಟೊ ಹಾಕಿದ್ದೇನೆ, ತಪ್ಪದೆ ನೋಡಿ. ಅಂದ ಹಾಗೆ ನಾವು ಒಂದೇ ದೋಣಿಯ ಪಯಣಿಗರಾಗಿ ಬಿಟ್ಟೆವಲ್ಲ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಒಂದು ವಿಷಯ ನಾವು ಮರೆತಿದ್ದೇವೆ. ನಮಗೆ ಸಿಗದ ಸೌಲಭ್ಯಗಳು ನಮ್ಮ ಮಕ್ಕಳಿಗೆ ಸಿಕ್ಕಾಗ ನಾವೇನೋ ತೃಪ್ತಿ ಹೊಂದುತ್ತೇವೆ ಆದರೆ ಅದರಿಂದ ನಮ್ಮ ಮಕ್ಕಳಿಗೆ ಯಾವ ರೀತಿ ಪರಿಣಾಮ ಆಗುತ್ತದೆ. ನಾವು ಕಷ್ಟ ಪಟ್ಟು ಗಳಿಸಿದ್ದು ಅವರಿಗೆ ಸುಲಭವಾಗಿ ಸಿಗುತ್ತದೆ ಅನ್ನಿಸುವಾಗ ಯಾವುದೇ ವಸ್ತುವಿನ ಬೆಲೆ ಅವರಿಗೆ ತಿಳಿಯುವುದಾದರೂ ಹೇಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಕಷ್ಟ ಪಟ್ಟು ದುಡಿದದ್ದು, ನಮ್ಮ ಮಕ್ಕಳಿಗಲ್ಲದೆ ಬೇರೆ ಯಾರಿಗೆ ? ಅವರಿಗೆ ಜೀವನದ ಮೌಲ್ಯಗಳನ್ನು ಹೇಳಿ ಕೊಟ್ಟಾಗ ಆ ಮಕ್ಕಳು ತಮಗೆ ದೊರೆತ ಸೌಲಭ್ಯಗಳಿಂದ ಮಾಣಿಕ್ಯಗಳೂ ಆಗಬಹುದಲ್ಲವೇ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾರಿನ ಕತೆಯನ್ನು ನನ್ನ ಮಗಳು ಮತ್ತು ಮಗಳಬ್ಬೆಗೂ ಓದಿಸೋಣ ಅಂತ ಇದ್ದೆ
ಇದೀಗ ಓದಿ ಮುಗಿಸಿದ ಮೇಲೆ ನನಗರ್ಥ ಆಯ್ತು ಕಛೇರಿಯಲ್ಲೆ ಓದಿ ನಾ ಗೆದ್ದೆ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಹೆಗ್ಡೆಯವರೆ, ಆದರೆ ಮಗಳು ಮತ್ತು ಮಗಳಬ್ಬೆ ಜೊತೆ ಜೊತೆಯಲಿ ಕಾರನೋಡಿಸಿಕೊಂಡು ನಮ್ಮ ಬೆಂಗಳೂರನೆಲ್ಲಾ ಸುತ್ತಿ ಬಂದು ನನಗೆ ಫೋನ್ ಮಾಡಿ ವರದಿ ಒಪ್ಪಿಸಿದಾಗ, ನನ್ನ ಮನ ಜೋಗದ ಜಲಪಾತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.