ಏಕೆ ಹೀಗೆ ಒಮ್ಮೊಮ್ಮೆ......?

0

ಏಕೆ  ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲ
ನಾವ೦ದುಕೊ೦ಡ೦ತೆಯೆ   ನಡೆವುದು ಎಲ್ಲ
ಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲ
ಅ೦ದುಕೊ೦ಡಿದ್ದೆಲ್ಲ  ನಿಜವಾಗಿ ಬಿಡುವುದಲ್ಲ!

ಏಕೆ  ಹೀಗೆ  ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲ
ಅ೦ದುಕೊಡದ್ದು ಯಾವುದೂ ನಡೆಯುವುದಿಲ್ಲ
ಬೆಳಕಿಲ್ಲದ ಗಾಡಾ೦ಧಕಾರ  ನಮ್ಮ ಸುತ್ತಲೆಲ್ಲ
ಎಲ್ಲ ಶೂನ್ಯ ಒಮ್ಮೆಗೇ  ಕೊ೦ದು ಬಿಡುವುದಲ್ಲ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅದುವೇ ಜೀವನವಲ್ಲವೇ ಮಂಜಣ್ಣ ನವರೇ, ಚೆನ್ನಾಗಿದೆ ಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಕಣ್ರೀ ರಘು, ಅದೇ ಜೀವನ! ಎಲ್ಲಾ ಓಕೆ, ಆದರೆ ಈ "ಸ್ವಾಮಿ" ಯಾಕೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರ್ಯಾದೆ ಸ್ವಾಮಿ ಮರ್ಯಾದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು, ಮ೦ಜು ಸಾಕು, ಬೇಡ ಕಣ್ರೀ ಈ "ಸ್ವಾಮಿ" ನಿತ್ಯಾನ೦ದನ ನೆನಪು ಬ೦ದು ಕಾಡ್ತಾನೆ ಆ ಕಾಮಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ರೀ ಮಂಜು ಜೀವನ!!!! ಪ್ರತೀ ಸುಖವೂ ಹಿಂದೆ ಕಟ್ಟಿಕೊಂಡೇ ಬರುತ್ತದೆ ಕೋಟಲೆಯನ್ನ ಪ್ರತೀ ಕೋಟಲೆಯೂ ಕೂಡಿಸಿ ಕೊಡುತ್ತದೆ ಮುಂದಿನ ಸುಖವನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ, ನಿಮ್ಮ ದ್ವಿಪದಿ ಸೂಪರ್ ಆಗಿದೆ ಕಣ್ರೀ ಆಶುಕವಿಗಳ ದ್ವಿಪದಿಗಳಿಲ್ಲರುವಾಗ ಸಕತ್ ಕಣ್ರೀ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಳೆದವಾರ ನೀವು ಯಾಕೆ ಪಠಾಣ್ ಆದ್ರೀ ಅಂತ ಕೇಳಿದ್ದೆ ಉತ್ತರ ಬರಲಿಲ್ಲ ನಿಮ್ಮಿಂದ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಲ್ಪ ಬದಲಾವಣೆ ಇರಲಿ ಅ೦ತ ಅಷ್ಟೆ ರಾಯರೆ, ಬೇರೇನಿಲ್ಲ! ಯಾಕೆ, ಈ ಫೋಟೋ ಚೆನ್ನಾಗಿಲ್ವಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೇ ಅರೆರೆ ತುಂಬಾನೇ ಚೆನ್ನಾಗಿದೇರೀ ನಮ್ಮ ಮನೆಗೆ ಬಂದ ಅತಿಥಿ ಅಭ್ಯಾಗತರಿಗೂ ನಿಮ್ಮ ಫೋಟೋ ತೋರಿಸಿ ನೋಡೀ ಇವರೇ ಸಾವಿತ್ರಿಯ ಅಪ್ಪ ಅನ್ನುತ್ತಿದ್ದೇನೆ ಗೊತ್ತಾ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ ನಾನು ಇನ್ನು ಮು೦ದೆ ನಮ್ಮ ಉದ್ಯಾನ ನಗರಿಯಲ್ಲಿ ಸಾರ್ವಜನಿಕವಾಗಿ ಓಡಾಡಲು ಕಷ್ಟವಾಗುತ್ತೇನೋ??? ಭಯ ಹುಟ್ಟಿಸುತ್ತಿದ್ದೀರಿ ಮಾರಾಯರೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಿ ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲ ಅವನಂದುಕೊಂಡಂತೆಯೇ ನಡೆಯುತ್ತಲಿಹುದು ಇಲ್ಲಿ ಎಲ್ಲಾ ಅವನು ಅಂದುಕೊಂಡಂತೆ ನಾವಂದುಕೊಂಡರೆ ಬೆಲ್ಲ ಮೆದ್ದಂತೆ ನಾವು ಅಂದುಕೊಂಡಂತೆ ಅವನಂದುಕೊಳ್ಳದಿರೆ ಕತ್ತೆ ಒದ್ದಂತೆ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾವು ಅಂದುಕೊಂಡಂತೆ ಅವನಂದುಕೊಳ್ಳದಿರೆ>>ಹೌದು, ನಿಜ, ಕತ್ತೆ ಒದ್ದ೦ತೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[[ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲ]] ನಿಜ, ಮಂಜು. ಅರ್ಥವಾದರೆ ಅದಕ್ಕೆ ಅರ್ಥ ಇರುವುದಿಲ್ಲವಲ್ಲ, ಅದಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜರೆ, ಅರ್ಥಗಳೆಲ್ಲ ಕೆಲವೊಮ್ಮೆ ಅನರ್ಥಗಳಾಗಿ ಬಿಡುತ್ತಿರುವಾಗ ಇನ್ನು ಈ ಅರ್ಥವಾಗದವುಗಳ ಬಗ್ಗೆ ಬೇರೆ ಚಿ೦ತೆ ಹತ್ತಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.