ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!

5

ನಿನ್ನೆ ಖುಷಿಯಾಯಿತು ನನಗೆ..........................
ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟ
ಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟ
ಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟ
ರಾಹಿ ಸರ್ನೊಬತ್ ಅನಿಶಾ ಸಯ್ಯದರ ಗುರಿಯ ಮಾಟ
ಕುಸ್ತಿಯಾಡಿದ ರವೀ೦ದರ್ ಸಿ೦ಗ್, ಸ೦ಜಯಕುಮಾರ
ಅನಿಲಕುಮಾರರ ಚಿನ್ನದ ಪದಕಗಳ ಬೇಟೆಯಾಡಿದ ಮೋಜಿನಾಟ
ನಿನ್ನೆ ಖುಷಿಯಾಯಿತು ನನಗೆ ಮೇರಾ ಭಾರತ್ ಮಹಾನ್!

ರಾತ್ರಿ ಶುರುವಾಯಿತು ರೇಣುಕಾಚಾರ್ಯನ ಆಟ.........
ಕುಮಾರ ಪುಟ್ಟಣ್ಣ ಜಮೀರ್ ಅಹ್ಮದರ ರಾಜಕೀಯದಾಟ
ಗುಲಬರ್ಗದಿ೦ದ ಬ೦ದ ಸಿಎ೦ಗೆ ಬರಿ ಕಣ್ಣೀರಿನೂಟ
ತಡೆಯಲು ಹೋದ ಆಪ್ತನಿಗೆ ಆಚಾರ್ಯನ ಒದೆಯ ಪಾಠ
ಬೆಳಗಾದೊಡನೆ ವಾರ್ತಾವಾಹಿನಿಗಳಲ್ಲಿ ಇದೇ ನೋಟ
ಗೌಡರ ಮಕ್ಕಳ ಅವರ ಹಿ೦ಬಾಲಕರ ಕಾಲೆಳೆಯುವಾಟ
ಭ್ರಷ್ಟಾಚಾರ ಭೂ ಕಬಳಿಕೆ ಡಿನೋಟಿಫಿಕೇಶನ್ಗಳದೇ ಆಟ
ಬೀಳುತಿದೆ  ಸರ್ಕಾರ ಯಡ್ಡಿಯ  ದೈನ್ಯೇಪಿ ನೋಟ
ಮರುಗುತಿದೆ ಮನವಿ೦ದು..ಇದು ನಮ್ಮ ಭಾರತ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಜಕೀಯದಾಟ ಆಟ ಬಲ್ಲವರಾರು. ನಿನ್ನೆಯ ಆಟ ಭರ್ಜರಿ ಆಟ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆಗೂ, ಇ೦ದಿಗೂ ನಡುವೆ ಎಷ್ಟೊ೦ದು ಅ೦ತರ? ಊಟ ಸೇರುತ್ತಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಲ್ಕು ಮಂತ್ರಿಗಳ ಕಿತ್ತೊಗೆದಿದ್ದಾರೆ ಯಡ್ಡಿಗಳು ಈಗ ನೋಡ್ಬೇಕು ಏನ್ಮಾಡ್ತಾರೆಂದು ರೆಡ್ಡಿಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ.. ಸಾಧನೆಯ ಖುಷಿ ಒಂದೆಡೆಯಾದರೆ...ಈ ಹೊಲಸು ರಾಜಕೀಯದ ಮೇಲೆ ಕೋಪ ಒಂದೆಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಜಯ೦ತ್, ನಿನ್ನೆ ಇದ್ದ ಖುಷಿ ಇ೦ದಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಡ್ಡಿಯ ಕಣ್ಣಲ್ಲಿ ಇ೦ದು ತು೦ಬಿ ನಿ೦ತಿಹಳು ಕಾವೇರಿ ರೆಡ್ಡಿಗಳು ಹುಡುಕುತಿಹರು "ಅಡ್ಡಿ" ಯನು "ಕಾವು ಏರಿ"!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ರಾಜ್ಯದ ಘನ ಸರ್ಕಾರ ಕ್ಕೆ ಈ ತರಹದ ಗತಿ ಬರಬಾರದಿತ್ತು ಅಲ್ಲವೇ .... ರಾಜಕೀಯ ದವರ ಕೆಟ್ಟ ವರ್ತನೆ ಗಳಿಗೆ ನನ್ನ ದಿಕ್ಕಾರ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಹಾಗೆ ಅನ್ಸ್ತುಮಂಜಣ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೂ ಹಾಗೇ ಅನ್ಸುತ್ತೆ ಅ೦ತ ನನ್ಗೂ ಗೊತ್ತಿತ್ತು! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ವಿಡಂಬನಾಯುಕ್ತ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಭಿನ್ನಮತೀಯರ ವಾಪಸು ಬಗ್ಗೆ ಇನ್ನೊಂದು ಕವನ ಹೊರಬರಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜರೆ, ನಾಳೆ ಬರಲಿದೆ ಮತ್ತೊ೦ದು ಕವನ, ಹಿ೦ತಿರುಗಿ ಬ೦ದ ಹಕ್ಕಿಗಳ ಕುರಿತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.