ಮಳೆಹನಿಯ ಚಿಟ ಪಟ!

5

ಚಿತ್ರ; ಅ೦ತರ್ಜಾಲದಿ೦ದ.

ಸುರಿವ  ಸ೦ಜೆ  ಮಳೆಹನಿಯ ಚಿಟ ಪಟ
ತ೦ತು ನಿನ್ನ ನೆನಪು ಏನಿದು ಈ ಮಾಟ

ಕಾಮನಬಿಲ್ಲು ನೆನಪಿಸುವ ನಿನ್ನ ಕಣ್ಣೋಟ
ನಲ್ಲೆ  ಬಾ ಬಳಿಗೆ  ಬಿಡು ನಿನ್ನ ತು೦ಟಾಟ

ಬಾನು  ಮುಗಿಲು ಒ೦ದಾದ ಈ ನೋಟ
ನೀನಿರಲು  ಬಾಳು ನಗುವ ಹೂ ತೋಟ.

ಸುರಿಯುತಿಹ  ಮುಸಲಧಾರೆಯ ಆರ್ಭಟ
ಇಳೆ  ವರುಣರ  ಭರ್ಜರಿ   ಪ್ರಣಯದಾಟ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆಹಾ... ಏನು ಭಯ೦ಕರ ಮೂಡ್ನಲ್ಲಿದ್ದೀರೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾವಡರೆ. ನಿನ್ನೆ ನ್ಯೂಸ್ ಚಾನಲ್ಲಿನಲ್ಲಿ ಮು೦ಗಾರು ಮಳೆಯ ವಿಶೇಷ ಕಾರ್ಯಕ್ರಮ ನೋಡಿದ ಮನಸ್ಸು ಗೀಚಿದ ಕವನವಿದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ್ ಅತಿ ಸುಂದರ್ ಸುಂದರ ಕವನ ಅದಕ್ಕಿಂತಲೂ ಸುಂದರ ಚಿತ್ರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ರಾಯರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಲ್ಲೆಯ ನೆನೆದು, ಕರೆದು, ತೋರಿಸಿದರೆ ಈ ಪರಿಯ ಆಸೆ ದೂರದಲ್ಲಿರುವ ಆಕೆ ಹೇಗೆ ತೀರಿಸಿಕೊಳ್ಳಬೇಕು ಅಲ್ಲಿ ತನ್ನಾಸೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಸುರೇಶ್, ಕವಿ ನಲ್ಲೆಯ ನೆನೆದು ಹಾಡಿದರೆ ಕವನ ಕುಳಿತು ದೂರದ ಮರಳುಗಾಡಿನಲಿ ನಲ್ಲೆಯ ಹೃದಯದಲಿ ಉಕ್ಕಿ ಹರಿವುದು ಪ್ರೀತಿ ಅಲ್ಲಿ ಉದ್ಯಾನನಗರಿಯಲಿ! ಇದು ಹೃದಯಗಳ ಮಾತು, ಎಲ್ಲ ನಡೆವುದು ಇಲ್ಲಿ ಮೌನ ಸ೦ಭಾಷಣೆಯಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೌನ ಸಂಭಾಷಣೆಯ ಹೃದಯದ ಮಾತುಗಳ ಮಾಡದಿರಿ ಹೀಗೆ ಬಟಾ ಬಯಲು ಸುಖಾ ಸುಮ್ಮನೆ ಸಾರ್ವಜನಿಕವಾಗುವುದು ಒಳ್ಳೆಯದಲ್ಲ ನಲ್ಲೆಯ ಮನದ ಅಳಲು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿಗಳೇ ತಾವೆಲ್ಲಿರುವಿರಿ ಇದು ಕವಿಯ ಮನದ ಕವನ ತಮಗೇಕೆ ಬ೦ತು ಈ ಪರಿಯ ಕೋಪ, ಬಾಡಿತಲ್ಲ ವದನ! ಮು೦ಜಾನೆಯಲಿ ಹೀಗೇಕೆ ಈ ದಿನ ನಿಮ್ಮ ಕಟುನುಡಿಯ ತನನ! ನಿಮ್ಮ ಸಖಿಯ ಕವನಕಿ೦ತ ಇಲ್ಲೇನಿದೆ ಮಣ್ಣು ಇದು ಬರಿಯ ಕವನ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಗೋಪಾಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರವರೆ, ಚಂದದ ಚಿತ್ರ, ಸುಂದರ ಕವನ ಮನಸ್ಸಿಗೆ ಮುದ ನೀಡಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಕವನ ಬೋ ಸಂದಾಗೈತೆ. ಚಳಿಗೆ ಬೈಟೂ ಸುಗರ್ ಲೆಸ್ ಚಾ. ರಾತ್ರಿಗೆ ಬೇರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕೋಮಲ್. ನ೦ಗೆ ಸಕ್ರೆ ಖಾಯ್ಲೇ ಇಲ್ಲ, ನಾನು ನಿಮ್ಮ ಗೌಡಪ್ಪನು ಅಲ್ಲ! ನ೦ಗೆ ಆ ಸುಗರ್ ಲೆಸ್ ಚಾ ಬೇಕಿಲ್ಲ, ರಾತ್ರಿಗೆ ಬೇರೆ ಐತಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಭಾಗವತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಚೆನ್ನಾಗಿದೆ, ಮರುಭೂಮಿಯ ಮಳೆಯ ಪ್ರೇರಣೆಯೋ ಅಥವಾ ಹಾಸನದ್ದೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರುಭೂಮಿಯಲ್ಲಿ ಮಳೆ ಇಲ್ಲ ಚೇತನ್, ನಿನ್ನೆ ನೋಡಿದ ವಿಶೇಷ "ಮು೦ಗಾರು ಮಳೆ" ಕಾರ್ಯಕ್ರಮದ ಪ್ರಭಾವ, ಈ ಕವನ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬಾನು ಮುಗಿಲು ಒ೦ದಾದ ಈ ನೋಟ ನೀನಿರಲು ಬಾಳು ನಗುವ ಹೂ ತೋಟ. >> ಅವಳಿದ್ದರೆ ಖಂಡಿತ ಮನಸ್ಸು ಊಲ್ಲಾಸವೇ , ಚೆನ್ನಾಗಿ ಮೂಡಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಘು, ಅವಳಿದ್ದರೆ ಖ೦ಡಿತ ಮನಸ್ಸು "ಉಲ್ಲಾಸವೇ"!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಮೇಘ ಸಂದೇಶ ಕೇಳಿದ್ದೆ. ವರುಣ ಸಂದೇಶವೂ ಇದೆಯೆಂದು ತಿಳಿಯಿತು! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಕವಿ ನಾಗರಾಜರೆ, ವರುಣ ಸ೦ದೇಶವೂ ಇದೆ, ವಿರಹಿಗಳ ಮನದಲ್ಲಿ ಕಿಚ್ಚು ಹಚ್ಚಿಸುವವನೆ ಈ ವರುಣ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಕವನ ಸುಂದರವಾಗಿದೆ....ಮಳೆ ನೆನೆದು ನನಗೂ ಆಸೆ ಆಗಿದೆ ಮಳೆಯ ಮೇಲೊಂದು ಕವನ ಬರೆಯಲು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜಸ್ವಿ, ಇನ್ನೇಕೆ ತಡ ಮತ್ತೆ, ಬರೆದೇ ಬಿಡಿ, ಓದಲು ನಾವು ಸಿದ್ಧರಿದ್ದೇವೆ ನಿಮ್ಮ ರಸಭರಿತ ಕವನವನ್ನು!