’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!

5

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗ
ಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗ
ಮಗ ಮಾಡಿದ ತಪ್ಪಿಗೆ ಅಪ್ಪ  ಹೊಣೆಯಲ್ಲವೀಗ!!

ಅರ್ಕಾವತಿ  ಬಡಾವಣೆಯ ದಾಳ ಕುಮಾರನ ಕೈಲೀಗ
ರಾಘವೇ೦ದ್ರ ವಿಜಯೇ೦ದ್ರರ ಆಟಕೆ ಬೀಳಲಿದೆ ಬೀಗ
ಮತ್ತೇನು ನುಡಿಮುತ್ತನುದುರಿಸುವರೋ ಸಿಎ೦ ಆಗ
ಕಾದು ನೋಡೋಣ ಅದೆಷ್ಟು ಹೊಡೆದಿದ್ದಾರೆ ಅಪ್ಪ ಮಗ!!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದೊಂದೇ ವಿಕೆಟ್ ಹೀಗೆ ಅಲ್ಲಾಡ್ತಾ ಇದ್ರೆ, ಸಿಎಂ ಹಾಕ್ಬೇಕಾಗುತ್ತೆ ತಿಪ್ಪರಲಾಗ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮು೦ದಿನ ವಿಕೆಟ್ ಅವರೇ ಅನ್ನುವ ಅನುಮಾನ ನನಗೀಗ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ.... ಮಂಗಂಗೆ ಹೆಂಡ ಕುಡಿಸಿದ ಹಾಗೆ.... ಎನ್ನುವ ಗಾದೆಗಳನ್ನು ಇಂತವರನ್ನು ನೋಡಿಯೇ ಮಾಡಿರುವುದೆಂದೇ ಕಾಣುತ್ತದೆ. ಹಾಗಾದರೆ ಆ ಕಾಲದಲ್ಲೂ ಇಂತವರು ಇದ್ದರು ಎಂದಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ಲೂ,ಅದಕ್ಕಿ೦ತಲೂ ಇನ್ನೊ೦ದು ಆಡು ಮಾತಿದೆ ಆಡೋ ಹುಡುಗನಿಗೆ ಮದುವೆ ಮಾಡಿದರೆ ... ಅ೦ಥ! ಅದೇ ಸೂಕ್ತ ಅನ್ನಿಸುತ್ತೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಕಳ್ಳರ ಕಿತ್ತಾಟ, ಮಂಜು. ಹೊ.ನ.ಪುರದ ಗೌಡರು ಮತ್ತು ಮಕ್ಕಳ ಮುಂದೆ ಇವರದ್ದು ಏನೇನೂ ಅಲ್ಲ. ನಾನು ಹೊ.ನ.ಪುರ ಮತ್ತು ಶಿಕಾರಿಪುರ ಎರಡು ಕಡೆಗಳಲ್ಲೂ ಕೆಲಸ ಮಾಡಿದ ಅನುಭವವಿದು! ಇಂದಿನ ಪತ್ರಿಕೆಯಲ್ಲಿ ರೇವಣ್ಣ ಉದುರಿಸಿರುವ ಅಣಿಮುತ್ತು ಗಮನಿಸಿದಿರಾ? "ಅಧಿಕಾರಿಗಳ ಹೆಂಡತಿ, ಮಕ್ಕಳು ಸರಿ ಇರಬೇಕೆಂದರೆ ಸರಿಯಾಗಿ ಕೆಲಸ ಮಾಡಬೇಕು" ಅಂತೆ. ಇದೇನಾ ಸಂಸ್ಕೃತಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜರೆ, ನಮ್ಮ ಹೊ.ನ.ಪುರದ ಗೌಡರ ಕಥೆ ಬಿಡಿ, ಅವರ ಬಗ್ಗೆ ಮಾತಾಡಲೂ ಹೇಸಿಗೆಯಾಗುತ್ತದೆ. ಆದರೆ ಸಾಕಷ್ಟು ಭರವಸೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬ೦ದ ಯಡ್ಯೂರಪ್ಪ ಈ ಮಟ್ಟಕ್ಕೆ ಇಳಿಯುತ್ತಾರೆ೦ದು ಕನಸಿನಲ್ಲೂ ಎಣಿಸಿರಲಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೇಕೋ ಇದು "ಅನಂತ ಕೃಪೆ" ಎಂದು ಗುಮಾನಿ.. ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅನುಭವಿಸಿದ ಹಿನ್ನಡೆಯಿಂದ ಈ ಹೊಸ ಹಗರಣ ಬೆಳಕಿಗೆ ತಂದಿರಬಹುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಂತಾನಂತ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ ಅವರಿಗೆ ಸಿದ್ಧರಾಮಯ್ಯ ಅಂಡ್ ಕಂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ೦ತ ಕೃಪೆಯೋ, ಸಿದ್ಧುವಿನ ಗುದ್ದೋ ಅಥವಾ ಆಚಾರ್ಯನ ಶಾಣ್ಯಾತನವೋ, ಇಷ್ಟರಲ್ಲೇ ಗೊತ್ತಾಗಲಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಒಂದು" ಪತ್ರಿಕೆಯಲ್ಲಿ ಮಾತ್ರ ತೀರಾ ವಿಜೃಂಭಿತ ವರದಿ ಬರ್ತಾ ಇರೋದನ್ನ ನೋಡಿದ್ರೆ, ಹಾಗೂ ಆ "ಒಂದ"ನೇ ಪತ್ರಿಕೆಯವರ ನಿಷ್ಠೆ ಯಾರ ಕಡೆಗೆ ಅನ್ನೋದನ್ನ ತಾಳೆ ಹಾಕಿದ್ರೆ, ಇದು "ಅನಂತ ಕೃಪೆ" ಅಂತ ಅರ್ಥ ಮಾಡ್ಕೊಳ್ಳೋಕೆ ತುಂಬಾ ತರ್ಕ ಏನೂ ಬೇಕಿಲ್ಲ ಅನ್ಸತಾ ಇದೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಟ್ಟಾರೆ ಇದು ಯಾರದೇ "ಕೃಪೆ’ ಆಗಿರಲಿ, ಸರ್ಕಾರ ಬೀಳುವುದ೦ತೂ ನಿಶ್ಚಿತವಾಗಿದೆ. ಕಟ್ಟಾ ನಾಯ್ಡುವನ್ನು ಉಳಿಸಲು ಹೋಗಿ ಯಡ್ಡಿ, ಚೆಡ್ಡಿ ಕಳಕೊ೦ಡ ಪ್ರಸ೦ಗ ಇದಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೆಲ್ಲಾ ಮಾತಾಡಿದ್ದು ವೇಸ್ಟಾಯ್ತಲ್ಲೋ ಅಣ್ಣಾ..! ಯಡ್ಡಿ ಕಳಚಿದ್ದು ಕುಮಾರನ ಚೊಣ್ಣ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರ ಚೊಣ್ಣ ಕಳಚಲಿದೆ ಎ೦ದು ತೀರ್ಮಾನಿಸಲಿದೆ ಉಚ್ಚ ನ್ಯಾಯಾಲಯ ನಾಳೆ, ಅದುವರೆಗೂ ಉಸಿರಾಡಲು ಸಿಕ್ಕಿದೆ ಯಡ್ಯೂರಪ್ಪನ ಸರಕಾರಕ್ಕೆ ಅಮೂಲ್ಯ ವೇಳೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವೇನೇ ಮಾತನಾಡಿದರು ನಮ್ಮ ರಾಜಕೀಯದವ್ರು ಯಾರು ಸರಿಯಿಲ್ಲ ಬಿಡಿ. ಇಲ್ಲಿ ಯಾರನ್ನು ಕೊಂಡಾಡುವಂತಿಲ್ಲ. ಎಲ್ಲರೂ ಲಜ್ಜೆಗೆಟ್ಟವರೆ!!!!!! ಎಲ್ಲ ಪಕ್ಷದಲ್ಲು ಸ್ವಲ್ಪ ಜನ ಒಳ್ಳೆಯವರಿರುತ್ತಾರೆ ಅವರೂ ಸಹ ಬಾಯಿ ಮುಚ್ಚಿಕೊಂಡಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋ.ನ.ಮ ಅವ್ರೆ ನಿಮ್ಮ ಹಲವಾರು 'ತಿವಿ'ಮಿನಿ ಗವನ ಗಳನ್ನ ಓದಿದ್ದೇನೆ, ಆದರೆ ಪ್ರತಿಕ್ರಿಯಿಸಿರಲಿಲ್ಲ. ಈಗ ಈ 'ಕೆಟ್ಟ' 'ಕಟ್ಟಾ' ಗಳ ಬಗ್ಗೆ ನೀವ್ ಬರೆದ ಈ ತಿವಿ ಗವನ , ಮುಖಕ್ಕೆ ರಾಚಿ ಹೊಡೆದಂತಿದೆ. ತಂದೆ ಮಗನ ದುರಾಸೆ ವಿಪರೀತಕ್ಕೊಗಿ, ಈಗ ಕಟ್ಟಾ ಗೆ ನಂತರ ಎಡ್ಡಿ ಗೂ ಮುಂದಿದೆ ಮಾರಿ ಹಬ್ಬ! ಜನ ಸಾಮಾನ್ಯರಿಗೆ ಕೋರ್ಟು ಮೇಲೆ ಈಗೀಗ ಅಲ್ಪ ಸ್ವಲ್ಪ ನಂಬಿಕೆ ಉಳಿದಿದೆ. ಜೈಲಿಗೆ ಹಾಕಿದ ಕೂಡಲೇ ಎದೆ ನೋವು ಬಂತಂತೆ( ಹೃದಯ ಬೇನೆ! ಇವರ್ಗೆ ಹೃದಯ ಇದೆಯೇ!) ಆದರೂ ಜಾಡಿಸಿ ಜಾಮೀನು ಕೊಡದೆ ಪರಪ್ಪನ ಅಗ್ರಹಾರಕ್ಕೆ ಅಟ್ಟಿದ ನ್ಯಾಧೀಶರ್ಗೆ ನೂರ್ ನಮನ. ಹಾಗಂತ ಈ ಕೆಟ್ಟ ಕಟ್ಟಗಳು ಜೈಲಿಂದ ಆಚೆ ಬರಲು ನೂರಾರು ಕಾರಣ ಹುಡುಕುತ್ತವೆ, ಜಾಮೀನು ಸಿಗದಿದ್ದರೆ ಸಾಕಸ್ಟೆ! ಈಗಾ ಕಟ್ಟಾ ನಂತರ ಎಡ್ಡಿ ಅವ್ರಾದಮೇಲೆ ಇನ್ನು ಅದೆಸ್ತೋ ಜನ ಅವ್ರೆ ಪರಪ್ಪನ ಅಗ್ರಜ್ಹಾರಕ್ಕೆ ಹೋಗಲು! ಇನ್ ಸ್ವಲ್ಪ ದಿನಗಳಲ್ಲೇ ಪರಪ್ಪನ ಅಗ್ರಹಾರ ಈ 'ಕೆಟ್ಟ' ಅವರಿಂದ ತುಂಬಿ ತುಳುಕೊದು ಖಾತ್ರಿ.. ನಿಮ್ಮ ತಿವಿ ಗವನ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.