manju787 ರವರ ಬ್ಲಾಗ್

ಅರಬ್ಬರ ನಾಡಿನಲ್ಲಿ -೧೮: ಆಪರೇಷನ್ ನೈಜೀರಿಯಾ!

ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ. ಆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿದ್ದವು, ಅವಳ ಧ್ವನಿಯಲ್ಲಿದ್ದ ಅಸಹಾಯಕತೆ, ಕಣ್ಣುಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಕಣ್ಮುಂದೆ ಸುಳಿಯುತ್ತಿತ್ತು! ಆಗೊಂದು, ಈಗೊಂದು ಭರ್ರೆಂದು ಎಡ ಬಲಗಳಿಂದ ಸಾಗಿ ಹೋಗುತ್ತಿದ್ದ ಅರಬ್ಬಿಗಳ ದೊಡ್ಡ ಕಾರುಗಳ ಆರ್ಭಟದ ನಡುವೆಯೇ ತೂಕಡಿಸುತ್ತಾ ನನ್ನ ಕಾರು ಕೊನೆಗೂ ಮನೆ ತಲುಪಿಸಿತ್ತು. ದಣಿದಿದ್ದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿತ್ತು, ಬಟ್ಟೆ ಬದಲಿಸಿ ಮಲಗಿದವನಿಗೆ ಮತ್ತೆ ಮತ್ತೆ ಅವಳಾಡಿದ ಮಾತುಗಳೇ ಮನದಲ್ಲಿ ಮಾರ್ದನಿಸಿ ನಿದ್ದೆ ಬರದೆ ಹೊರಳಾಡುವಂತಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ನೆನಪಿನಾಳದಿಂದ - ೨೫; ನನ್ನ ಈಜು ಕಲಿಕೆಯ ಪ್ರಸಂಗಗಳು.

ಇಂದು ದಿನಪತ್ರಿಕೆಯಲ್ಲಿ ಕೆಲವು ಮಕ್ಕಳು ಬೇಸಿಗೆಯ ರಜೆಯಲ್ಲಿ ಈಜು ಕಲಿಯಲು ಹೋಗಿ ಈಜುಕೊಳದಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತ ಸುದ್ಧಿ ಓದಿದೆ, ಮನಸ್ಸು ಮಮ್ಮಲ ಮರುಗಿತು.  ವರ್ಷಪೂರ್ತಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ(ಇದ್ದರೆ), ಇಲ್ಲದಿದ್ದರೆ ಬೇಸಿಗೆ ಶಿಬಿರಗಳು ಅಲ್ಲಿ ಇಲ್ಲಿ ಅಂತ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಅತ್ಯಂತ ಚಟುವಟಿಕೆಯಿಂದ ಕೂಡಿರುವ ಮಕ್ಕಳ ಸುರಕ್ಷತೆಯ ಬಗ್ಗೆ, ಅದೂ ಅವರ ಶಾಲಾ ರಜಾ ದಿನಗಳಲ್ಲಿ, ಪಾಲಕರು ಹಾಗೂ ಸುತ್ತಮುತ್ತಲಿನವರು ಅದೆಷ್ಟು ಕಾಳಜಿ ವಹಿಸಿದರೂ ಕಡಿಮೆಯೇ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅರಬ್ಬರ ನಾಡಿನಲ್ಲಿ - ೧೬ - ಹರ್ಷದ ಹಿಂದೆಯೇ ಹೊಂಚು ಹಾಕುವ ಸಾವು!

ದಿನಾಂಕ ೨/೩/೨೦೧೫ರಂದು ನಾನು ಕೆಲಸ ಮಾಡುವ ಸಮೂಹದ ಒಂದು ಹೋಟೆಲ್ಲಿನಲ್ಲಿ "ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ" ಆಯೋಜಿಸಿದ್ದರು. ಹೋಟೆಲ್ಲಿನಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಬಗೆಬಗೆಯ ಉಡುಪು ಧರಿಸಿ ತಮ್ಮ ಕಲಾಚಾತುರ್ಯವನ್ನು ತೋರಿಸಲು ಸಿದ್ಧರಾಗಿ ಬಂದಿದ್ದರು. ಕೆಲವರು ಹಾಡು ಹೇಳಿದರೆ ಮತ್ತೆ ಕೆಲವರು ಜನಪ್ರಿಯ ಚಿತ್ರಗೀತೆಗಳಿಗೆ ನೃತ್ಯ ಮಾಡಿ ತಮ್ಮ ಪ್ರತಿಭೆ ತೋರಿಸುತ್ತಿದ್ದರು. ಭಾರತ, ಪಾಕಿಸ್ತಾನ, ನೇಪಾಳ, ಫಿಲಿಫೈನ್ಸ್, ನೈಜೀರಿಯಾ, ಭೂತಾನ್, ಇಂಡೋನೇಶಿಯಾ, ಬಾಂಗ್ಲಾದೇಶ, ಶ್ರೀಲಂಕಾ ಹೀಗೆ ಹಲವಾರು ದೇಶಗಳಿಂದ ಉದ್ಯೋಗಕ್ಕಾಗಿ ಬಂದವರು ತಮ್ಮೆಲ್ಲ ಬೇಧಭಾವಗಳನ್ನು ಮರೆತು ಒಂದೇ ಕುಟುಂಬದಂತೆ ಬದುಕುತ್ತಿರುವ ವಲಸೆ ಹಕ್ಕಿಗಳೆಲ್ಲ ಒಂದೆ ಸೂರಿನಡಿಯಲ್ಲಿ ಸಂತೋಷವಾಗಿದ್ದ ಕ್ಷಣವದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (7 votes)
To prevent automated spam submissions leave this field empty.

ನೆನಪಿನಾಳದಿಂದ ೨೪: ಚಟ್ನಿ ಭೂತ!

ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ. ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ, ನನ್ನಷ್ಟಕ್ಕೆ ನಾನೇ ಆ ಸ್ವಾರಸ್ಯಕರ ಘಟನೆಯನ್ನು ನೆನೆದು ನಗುತ್ತಿದ್ದರೆ ಪಕ್ಕದಲ್ಲಿರುವವರು ನನಗೇನಾದರೂ ಹುಚ್ಚು ಹಿಡಿಯಿತೇ ಅಥವಾ ಯಾವುದಾದರೂ ಮೋಹಿನಿ ಕಾಟ ಇರಬಹುದೇ ಎಂದು ಅಚ್ಚರಿಯಿಂದ ನನ್ನ ಮುಖವನ್ನೇ ನೋಡುವಂಥ ಸನ್ನಿವೇಶಗಳು ಸಾಕಷ್ಟು ಬಾರಿ ಸೃಷ್ಟಿಯಾಗಿವೆ. ಈ ದಿನವೂ ಹಾಗೇ ಆಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)

Average: 4.7 (3 votes)
To prevent automated spam submissions leave this field empty.

Pages

Subscribe to RSS - manju787 ರವರ ಬ್ಲಾಗ್