ತಾಯಿಯ ಅಂತಃಕರಣ..

0

ಹೋಗುವ ಉಸಿರ ಬಿಗಿ ಹಿಡಿದು
ನೋವ ನುಂಗಿದಳು
ಕಂದವೊಂದು ಕಣ್ಣ ಬಿಟ್ಟು
ನಕ್ಕಿತು ಜಗವ ಕಂಡು
ಜೀವನ ಸಾರ್ಥಕವೆನಿಸಿತು
ಕೈ ಹಿಡಿದು ನುಡಿಸಿದಳು
ಕೈಹಿಡಿದು ನಡೆಸಿದಳು
ಕೈ ಹಿಡಿದು ಬರೆಸಿದಳು
ಕೈ ಹಿಡಿದು ಬಾಳ್ವೆಯ ಕಲಿಸಿದಳು
ಕೈ ಹಿಡಿದು ಅವನುಗೊಪ್ಪುವ
ಮನದನ್ನೆಯನ್ನು ಕೈ ಹಿಡಿಸಿದಳು
ತನ್ನನ್ನು ಹಿಡಿದ ಕೈ ಬಿಟ್ಟ
ತಾನಿಡಿದ ಕೈಯ ಕೂಗಿಗೆ ಓ ಗೊಟ್ಟ
ಬಿಟ್ಟ ಕೈಯಿಗೆ ಮತ್ತೆ ಹೋಗುವ ಉಸಿರು ಬಂದಿತು
ಆಗ ಉಸಿರು ಬಿಗಿ ಹಿಡಿಯಲಿಲ್ಲ
ಏಕೆಂದರೆ ಜೀವನ ಸಾಕೆನಿಸಿತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹ್ಮಂ , ಚೆನ್ನಾಗಿದೆ ಅಕ್ಕ .
ಏನು ಮೆಗಾ ಧಾರವಾಹಿ ಬಿಟ್ಟು ಕವಿತೆ ಕಡೆ ಬಂದಿದ್ದಿರಿ ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ ಅವರೇ

ಕವನ ತುಂಬಾ ಚೆನ್ನಾಗಿದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆ.. ಬರ್ಗ್ಮನ್ ನ ಸಿನಿಮಾ ನೋಡ್ತಾ ಇದ್ದೆ. waiting women ಅಂತ..
. ಅದರಲ್ಲಿ ತಾಯಿ ಮಗುವಿಗೆ ಜನ್ಮ ನೀಡುವ ಸನ್ನಿವೇಶ.. ಮನೋಜ್ಞವಾಗಿ ಚಿತ್ರಿಸಿದ್ದಾನೆ...
ನಿಮ್ಮ ಕವನ ಅದನ್ನು ಮತ್ತೆ ನೆನೆಯುವಂತೆ ಮಾಡಿತು... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೆ, ಮರೆಯಾಗಿ ಹೋದ ಅಮ್ಮನನ್ನು ನೆನಪಿಸಿತು ನಿಮ್ಮ ಕವಿತೆ, ಈ ಜಗದಲಿ ಸರಿ ಸಾಟಿ ಯಾರಿಲ್ಲ, ಆ ಅಮ್ಮನಿಗೆ, ಅವಳ ಮಡಿಲ ಬಿಸಿಯಪ್ಪುಗೆಗೆ, ಅವಳೊಡಲ ಪ್ರೀತಿಗೆ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸು೦ದರ ಕವನ. ೧೬ ಸಾಲುಗಳಲ್ಲಿ ಹೆಣ್ಣಿನ ಜೀವನವೊ೦ದನ್ನೇ ಸೃಷ್ಟಿಸಿದ್ದೀರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ ಯವರೇ ತುಂಬಾ ಭಾವುಕತೆ ತುಂಬಿದೆ ಏನು ಬರೆಯಬೇಕೆಂದು ತೋಚುತ್ತಿಲ್ಲ ,.,
ಸಂತೋಷ ,.
ನಿಮಗಿದು ಗೊತ್ತ
ಅಮ್ಮ
ಮಾ
ಮಮ್ಮಿ
ಅಮ್ಮಿ
ಉಮ್ಮ
ಮಾಯಿ
ಉಮ್
,.,. ಎಲ್ಲದರಲ್ಲೂ " ಮ " ಎಂಬ ಶಬ್ದ ಅದು ಎಲ್ಲ ಭಾಷೆಯಲ್ಲೂ
ಅದೇ ಅಮ್ಮ ,.,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೇ,

ಸುಂದರ ಕವನ.

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ,

ಅಮ್ಮನ ಬಗ್ಗೆ ಏನು ಬರೆದರೂ ಅದು ಚಂದ
ಮನ ಕುಲುಕುವಂತಾದಾಗ ಅದಿನ್ನೂ ಅಂದ

ಕೈಹಿಡಿದವಳ ಬೆನ್ನ ಹಿಂದೆ ನಡೆಯುವವನು
ಬೆನ್ನ ಹಿಂದೆ ಇರುವ ಅಮ್ಮನ ಮರೆಯುವನು

ಬಂದವಳು ಆತನಮ್ಮನನು ತನ್ನಮ್ಮನಂತೆ
ಕಂಡು ಗೌರವದೊಂದಿಗೆ ಬಾಳ ಬಹುದಂತೆ

ಕೈ ಹಿಡಿದಾತನಿಗೆ ತನ್ನ ಅಮ್ಮನ ಮರೆಸುವವಳು
ನಾಳೆಯ ದಿನ ತಾನೂ ಅಲ್ಲಿ ಅಮ್ಮನಾಗುವವಳು

ತಾನೂ ಅಮ್ಮನಾಗಿ ತನ್ನ ಮಕ್ಕಳಿಂದ ತನ್ನ ತಪ್ಪಿನ
ಅರಿವಾಗುವಾಗ ಮುಗಿದಿರುತ್ತವೆ ಇಲ್ಲಿ ಆಕೆಯ ದಿನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಹೆಗ್ಡೆ ಮತ್ತೆ ಮಾಲತಿ ಅವರೇ..ನಿಮ್ಮ ಸ್ವಂತ ಅನುಭವ ಏನಾದ್ರು ಇಲ್ಲಿ ಕವನ ಮೂಲಕ ಎಲ್ಲರಿಗೂ ಹೇಳಿಕೊಳ್ಳುತ್ತಾ ಇದ್ದೀರಾ? ಯಾಕ್ರೀ ಇಂಥ sadist ಮನೋಭಾವ ನಿಮ್ಮದು?? ತಾಯಿಯನ್ನು ದೇವರಿಗಿಂತಲೂ ಹೆಚ್ಚಾಗಿ ಪೂಜಿಸುವ ಗಂಡು ಮಕ್ಕಳಿಲ್ವೇ? ಇಲ್ಲ ಹೆಣ್ಣು ಮಕ್ಕಳು ಮಾತ್ರ ಅಪರಂಜಿಗಳು ಅನ್ನೋದು ನಿಮ್ಮ ಅನಿಸಿಕೆಯೇ??ಬರೀ ಇಂಥ ಹುಳುಕುಗಳ ಮೇಲೇ ಕವನ ಬರೆದು ಅದೇನು ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡು ಆನಂದ ಪಡ್ತೀರೋ ದೇವರೇ ಬಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

(ರೀ ಹೆಗ್ಡೆ ಮತ್ತೆ ಮಾಲತಿ ಅವರೇ..ನಿಮ್ಮ ಸ್ವಂತ ಅನುಭವ ಏನಾದ್ರು ಇಲ್ಲಿ ಕವನ ಮೂಲಕ ಎಲ್ಲರಿಗೂ ಹೇಳಿಕೊಳ್ಳುತ್ತಾ ಇದ್ದೀರಾ? ಯಾಕ್ರೀ ಇಂಥ sadist ಮನೋಭಾವ ನಿಮ್ಮದು?? ತಾಯಿಯನ್ನು ದೇವರಿಗಿಂತಲೂ ಹೆಚ್ಚಾಗಿ ಪೂಜಿಸುವ ಗಂಡು ಮಕ್ಕಳಿಲ್ವೇ? ಇಲ್ಲ ಹೆಣ್ಣು ಮಕ್ಕಳು ಮಾತ್ರ ಅಪರಂಜಿಗಳು ಅನ್ನೋದು ನಿಮ್ಮ ಅನಿಸಿಕೆಯೇ??ಬರೀ ಇಂಥ ಹುಳುಕುಗಳ ಮೇಲೇ ಕವನ ಬರೆದು ಅದೇನು ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡು ಆನಂದ ಪಡ್ತೀರೋ ದೇವರೇ ಬಲ್ಲ...)
ಪ್ರದೀಪ್.ಅವರೆ ಇದು ನಮ್ಮ ಸ್ವಂತ ಅನುಭವವಲ್ಲ..
ತಾಯಿಯನ್ನು ದೇವರಿಗಿಂತಲೂ ಹೆಚ್ಚಾಗಿ ಪೂಜಿಸುವ ಗಂಡು ಮಕ್ಕಳಿಲ್ವೇ?
ಇಲ್ಲ ಎಂದು ನಾವು ಅಲ್ಲಗಳೆಯುವುದಿಲ್ಲ.ಬೇಕಾದಷ್ಟು ಜನವಿದ್ದಾರೆ.
ನಾವು ಬರೆದ ಕವನ ಒಂದು ಕಲ್ಪನೆ..ಆ ನೋವುಗಳನ್ನು ಅನುಭವಿಸುವವರು ಬೇಕಾದಷ್ಟು ತಾಯಂದಿರು ಈ ಭೂಮಿ ಮೇಲೆ ಇದ್ದಾರೆ....ಅದು ನಿಮಿಗು ತಿಳಿದಿರುತ್ತದೆ...ಅಂಥವರನ್ನು ನೋಡಿದಾಗ ಮನ ಮಿಡಿಯುತ್ತದೆ..ಆಗ ಬರುವ ಮನಸ್ಸಿನ ಭಾವನೆಗಳಿಗೆ ಈ ಕವನ ಒಂದು ರೂಪವಷ್ಟೆ..
ಇದು ಆನಂದವಲ್ಲ...ಕವನವಷ್ಟೆ...
ಈ ರೀತಿ ಪ್ರತಿಕ್ರಿಯಿಸಿದರೆ ನಿಮಗೆ ಏನು ಆನಂದ ಸಿಗುವುದೊ ಗೊತ್ತಿಲ್ಲ.... ಆ ದೇವರೆ ಬಲ್ಲ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ ಅವರೇ..ಹೌದು..ತಾಯಿಯನ್ನು ದೇವರಿಗಿಂತ ಹೆಚ್ಚಾಗಿ ಕಾಣುವ ನಮ್ಮಂಥ ಗಂಡು ಮಕ್ಕಳಿಗೆ ಇಂಥ ಕವನ, ಕಥೆ ನೋಡಿದರೆ ಮೈಯಲ್ಲಾ ಉರಿಯುತ್ತದೆ..ಈ ಕವನವನ್ನು ಈ ಥರ ನೊಂದಿರೊ ತಾಯಂದರಿಗೆ ಹೇಳಿ ಅವರು ಅದೆಷ್ಟು ಖುಶಿ ಪಡುತ್ತಾರೆ ಅಂಥ ಒಂದು ಸಲ ನೋಡಿ ನನಗೆ ಹೇಳಿ..ಅಲ್ಲದೆ ಅಂಥಹ ನೊಂದ ಜೀವಗಳಿಗೆ ನಿಮ್ಮಂಥವರು ಅವರ ಕಣ್ಣೀರಿನ ಮೇಲೆ ಕವನ,ಕಥೆ ಬರೆದು ಪ್ರಶಂಶೆ ಗಿಟ್ಟಿಸುವುದನ್ನು ಬಿಟ್ಟು ಬೇರೆ ಏನಾದರು ಮಾಡಿದ್ದೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿ ಸೂ : ಪ್ರದೀಪ್ ಅವರಿಗೆ ಮೈ ಉರಿಯುವಂತದ್ದು ಸಂಪದದಲ್ಲಿ ಯಾರು ಬರೆಯುವಂತಿಲ್ಲವಂತೆ ಹಿ ಹೀ ;) :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಯಾರ ಪ್ರಶಂಶೆ ಗೋಸ್ಕರ ನಾವು ಬರಿಯಲ್ಲ..ನಮ್ಮಲ್ಲಿ ಮೊಡುವ ಭಾನನೆಗಳಿಗೆ ಒಂದು ರೂಪ ಕೊಡುತ್ತೀವಿ ಅಷ್ಟೆ..
(ತಾಯಿಯನ್ನು ದೇವರಿಗಿಂತ ಹೆಚ್ಚಾಗಿ ಕಾಣುವ ) ತುಂಬಾ ಸಂತೋಷವಾಯಿತು
(ನಮ್ಮಂಥ ಗಂಡು ಮಕ್ಕಳಿಗೆ ಇಂಥ ಕವನ, ಕಥೆ ನೋಡಿದರೆ ಮೈಯಲ್ಲಾ ಉರಿಯುತ್ತದೆ..)--..
ಇದರಲ್ಲಿ ಮೈ ಉರಿಯುವುದು ಏತಕ್ಕೆ ಇನ್ನು ನೀವು ಬೇಸರ ಪಟ್ಟುಕೊಳ್ಳಬೇಕು..ಏಕೆಂದರೆ ನಿಮ್ಮಂತೆ ಬೇರೆ ಗಂಡು ಮಕ್ಕಳು ತಾಯಿಯನ್ನು ಆ ರೀತಿ ಕಾಣುವುದಿಲ್ಲವಲ್ಲ ಎಂದು..ನೀವು ಆ ರೀತಿ ನಡೆದೆಕೊಳ್ಳುವುದಿಲ್ಲವೆಂದಾದರೆ ನಿಮಗೆ ಬೇಸರವಾಗುತ್ತಿತೆ ವಿನಹ ಮೈಯಲ್ಲ ಉರಿಯುತ್ತಿರಲಿಲ್ಲ...ನಿಮ್ಮ ಮೈ ಉರಿಯಬೇಕಾದ್ದು ..ಅಂಥ ಗಂಡುಮಕ್ಕಳನ್ನು ನೋಡಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರದೀಪ್ ಎನ್ನುವ ಹೆಸರನ್ನಿಟ್ಟುಕೊಂಡವರೇ,

>>ರೀ ಹೆಗ್ಡೆ ಮತ್ತೆ ಮಾಲತಿ ಅವರೇ..ನಿಮ್ಮ ಸ್ವಂತ ಅನುಭವ ಏನಾದ್ರು ಇಲ್ಲಿ ಕವನ ಮೂಲಕ ಎಲ್ಲರಿಗೂ ಹೇಳಿಕೊಳ್ಳುತ್ತಾ ಇದ್ದೀರಾ?<<
- ಹೌದು...ಇದು ನಾವು ಈ ಸಮಾಜದಲ್ಲಿ ಕಂಡು..ಕೇಳಿ...ಅನುಭವಿಸಿದ್ದು.

>> ಯಾಕ್ರೀ ಇಂಥ sadist ಮನೋಭಾವ ನಿಮ್ಮದು?? <<

-- ಹಾಗಂದ್ರೆ ಏನು? ಅರ್ಥ ಆಗ್ಲಿಲ್ಲಾ...

>>ತಾಯಿಯನ್ನು ದೇವರಿಗಿಂತಲೂ ಹೆಚ್ಚಾಗಿ ಪೂಜಿಸುವ ಗಂಡು ಮಕ್ಕಳಿಲ್ವೇ? >>

- ಇದ್ದಾರೆ. ನಾನೂ ಒಬ್ಬ.

>>ಇಲ್ಲ ಹೆಣ್ಣು ಮಕ್ಕಳು ಮಾತ್ರ ಅಪರಂಜಿಗಳು ಅನ್ನೋದು ನಿಮ್ಮ ಅನಿಸಿಕೆಯೇ??<<

-- ನನ್ನ ಕವನದಲ್ಲಿ ಹೆಣ್ಣು ಮಕ್ಕಳನ್ನು ಅಪರಂಜಿ ಅಂತ ಹೇಳಿದ್ದೇನಾ..ಮತ್ತೆ ಒಮ್ಮೆ ಓದಿ ನೋಡಿ. ನಾನು ಬರೆದದ್ದು ಹೆಣ್ಣೇ ಅದಕ್ಕೆ ಹೊಣೆ ಅಂತ.
ನನ್ನ ಕರ್ಮ. ಅಷ್ಟು ಸುಲಲಿತವಾಗಿ ಬರೆದು ಆಮೇಲೆ ವ್ಯಾಖ್ಯಾನ ನೀಡಬೇಕಾಗುತ್ತದೆ.

>>ಬರೀ ಇಂಥ ಹುಳುಕುಗಳ ಮೇಲೇ ಕವನ ಬರೆದು ಅದೇನು ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡು ಆನಂದ ಪಡ್ತೀರೋ ದೇವರೇ ಬಲ್ಲ...<<

ನಾವು ಕವನ ಯಾವುದರ ಮೇಲೆ ಬರೆಯಬೇಕು ಅಂತ ಒಂದು ಪಟ್ಟಿ ಮಾಡಿ ಕಳಿಸಿಕೊಡಿ.
ಬರೆದು ಬಿಸಾಕ್ತೀವಿ.
ಓದ್ಕೊಂಡು ಇರಿ.
ಇವು ನಿಮಗೆ ಇಷ್ಟ ಆಗಿಲ್ಲ ಅಂತಾದ್ರೆ ಓದಿ ಇಷ್ಟ ಆಗಿಲ್ಲ ಅಂತ ಹೇಳಿ. ಯಾಕೆ ಬರೀತೀರಿ ಅಂತ ಕೇಳ್ಬೇಡಿ.
ನಾನು ಬರೆಯುವುದು ನನಗೋಸ್ಕರ. ಅದಕ್ಕೇ ನಾನಿದನ್ನು "ವೆಬ್ಲಾಗ್" ವರ್ಗದಲ್ಲಿ ಪ್ರಕಟಿಸುವುದು. "ಲೇಖನ" ವರ್ಗ್ದದಡಿಯಲ್ಲಿ ಅಲ್ಲ.
"ವೆಬ್ಲಾಗ್" ವೈಯಕ್ತಿಕ. ಓದುವವರು ಓದಲೂಬಹುದು.

ಇನ್ನು, ನಾವು ಯಾವುದರಿಂದ ಆನಂದ ಪಡುತ್ತೇವೆ ಅನ್ನುವುದನ್ನು ನಿಮ್ಮಿಂದ ಕೇಳಿ ತಿಳಿದುಕೊಳ್ಳಬೇಕಾಗಿಲ್ಲ. ನಿಮಗಿಷ್ಟ ಆಗಲಿ ಅಂತ ನಾವು ವ್ಯವಹರಿಸುವುದಿಲ್ಲ.

ಸ್ವಂತ ಹೆಸರಿನಲ್ಲಿ ವ್ಯವಹರಿಸಲಾಗದವರು ಊರಿಗೆ ಉಪದೇಶ ನೀಡಿ ಏನು ಪ್ರಯೋಜನ ಹೇಳಿ.

ಸಾಕಾ... ಇನ್ನೂ ಪ್ರಶ್ನೆಗಳಿವೆಯೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.