ಸ್ಪಟಿಕ ಎಸ್ಟೇಟ್ - ೬

4

ಸುಮಿ ಆಗ್ಲೆ ಆರುವರೆ ಆಕ್ತಾ ಬಂತು ಬೇಗ ಬೇಗ ಕೂದಲು ಒಣುಸ್ಕಂಡು ಬಾ ಎಂದು ಶಾರದಮ್ಮ ಸಡಗರದಿಂದ ಒಳಗು ಹೊರಗು ಓಡಾಡುತ್ತಿದ್ದರು....ಅವರಿಗೆ ಒಂದು ರೀತಿಯಲ್ಲಿ ಸಮಾಧಾನವೆ ಇರಲಿಲ್ಲ ...ಎಷ್ಟು ಕೆಲಸಗಳನ್ನು ಮಾಡುತ್ತಿದ್ದರು ಅಪೂರ್ಣ ಎನಿಸುತ್ತಿತ್ತು...ಏನೆ problem ಶಾರದ ನಿಂದು...ಎಂದು ಕವನ ..ಗಂಡ ಇಬ್ಬರು ಒಳ ಬಂದಿದ್ದನ್ನು ನೋಡಿ..ಅಯ್ಯೊ ಯಾಕಿಷ್ಟು ಹೊತ್ತು ಮಾಡಿದ್ರಿ ನೋಡಿ ಆಗ್ಲೆ ಆರುವರೆ ಆಯ್ತು...
ಇವರ ಚಡಪಡಿಕೆ ನೋಡಿ ಕವನಳಿಗೆ ನಗು ತಡಿಯಲಾಗಲಿಲ್ಲ....ಶಾರು ಯಾಕಿಷ್ಟು ಗಡಿಬಿಡಿ ಮಾಡ್ಕೊತೀಯೆ ಅವರು ಬರೋದು ಇನ್ನು ೧೦:೩೦ಕ್ಕೆ ಕಣೆ ..ಅಯ್ಯೋ ೧೦:೩೦ಏನ್ ಆಗೆ ಬಿಡುತ್ತೆ ಗೊತ್ತೆ ಆಗಲ್ಲ..ಕವನ ಬೇಗ ಬೇಗ ನೀನು ರೆಡಿ ಆಗಮ್ಮ ಎಂದು ಅಡಿಗೆ ಮನೆ ಕಡೆ ನಡೆದರು.....ಕವನ ಅಕ್ಕನನ್ನು ನೋಡಿದಳು ಏನೊ ಒಂದು ರೀತಿ ಹೊಸಕಳೆ ಕಂಡಂತಾಯಿತು...ನಕ್ಕು ಸ್ನಾನಕ್ಕೆ ಹೊರಟಳು...ಶಾರದಮ್ಮ ಆಗಲೆ ತರಕಾರಿ ಎಲ್ಲ ಹೆಚ್ಚಿ ,ರವೆಯನು ಉರಿದು . ಘಮ್ ಎನ್ನುವಂತೆ ಉಪ್ಪಿಟ್ಟು ,ಕೈ ಮುಂದು ಮಾಡಿ ಹೆಚ್ಚಾಗಿ ದ್ರಾಕ್ಷಿ, ಗೋಡಂಬಿ ಹಾಕಿ ಗಸ ಗಸೆ ಪಾಯಸ ತಯಾರಿಸಿದ್ದರು ಅವರಿಗೆ ಕೊಡುವ ತಿಂಡಿ ತಟ್ಟೆ ಲೋಟ ಎಲ್ಲ ವನ್ನು ಒಂದು ಕಡೆ ಒಪ್ಪ ಓರಣವಾಗಿ ಜೋಡಿಸಿಟ್ಟಿದ್ದರು..ಭಾನುವಾರವೆ ಮನೆಯಲ್ಲ ಸಿಂಗರಿಸಿದ್ದರಿಂದ ಅದರ ಕೆಲಸವಿರಲಿಲ್ಲ...ಆಗಲೆ ಎಂಟಾಗುತ್ತ ಬಂದಿತು ಶಂಕ್ರಣ್ಣ ಅಕ್ಕ ಎನ್ನು ತ್ತ ಒಳ ಬಂದ ...ಶಾರದಮ್ಮ ಅವನ ಧ್ವನಿಯನ್ನು ಕೇಳಿ ..ಬಾ ಶಂಕ್ರು..ಅರಾಮ..ಬಾ ಕೈ ಕಾಲು ತೊಳ್ಕೊ...ತಿಂಡಿ ತಿನ್ನುವಂತೆ......ಸರಿ ಅಕ ಬಂದೆ ಎಂದು ಬಚ್ಚಲಿಗೆ ಹೋಗಿ ಕೈ ಕಾಲು ತೊಳೆದು ಬಂದ. ಭಾವ ಎಲ್ಲಕ ...ಇಲ್ಲೆ ಹೂ ತರೊಕೆ ಹೋಗಿದಾರೆ ಕಣೊ ಬರ್ತಾರೆ..ಸರಿ ಬಿಡು ಅವ್ರು ಬರ್ಲಿ ಒಟ್ಟಿಗೆ ತಿಂದ್ರಾಯ್ತು...ಸುಮಿ, ಕವನ ಎಲ್ಲಕ...

ರೂಮ್ ನಲ್ಲಿದಾರೆ...ಸುಮಿ..ಕವನ ಮಾವ ಬಂದಿದಾರೆ ನೋಡ್ರೆ
ಬಂದ್ವಿ....ಏನ್ ಮಾವ ಅರಾಮ..ಎಂದು ಸುಮಿ ಮಾತನಾಡಿಸಿದಳು....
ಓಹೋ!!! ಮದುಮಗಳು... ಅಲ್ಲೆ ನಿಂತಿದ್ದ ಅಕ್ಕನನ್ನ ನೋಡಿ ಅಹಾ ಏನೆ ಹೇಳು ಅಕ್ಕ ನಿನ್ ಮಕ್ಳು ಅಂದ್ರೆ ಮಕ್ಳು...ಒಬ್ಬೊಬ್ರು ಒಂದೊಂದು ಮುತ್ತು...ಅದನ್ನು ಕೇಳಿ ಸುಮಿ ರೂಮಿಗೋಡಿದಳು ಅವಳ ಹಿಂದೆಯೆ ಕವನಳು ಹೋದಳು....

ಶಾರು ತಗೊ ಹೂ ....ಯಾವಾಗ್ಬಂದೆ ಶಂಕ್ರು....ಈಗ್ ಬಂದೆ ಭಾವ....ಹೂವನ್ನು ಕೈಯಲ್ಲಿ ತೆಗೆದುಕೊಳ್ಳುತ್ತ...ಏನೂಂದ್ರೆ....ಎಲ್ಲರು ತಿಂಡಿ ತಗೊಂಬಿಡಣ .....ಅವ್ರು ಬರೋದು ಎಷ್ಟೊತ್ತಾಗುತ್ತೊ ಏನೊ ಗಡಿಬಿಡಿ ಬೇಡ ಎಲ್ಲ್ ಮುಗುಸ್ಕೊಂದು ಕೂತ್ರೆ ಒಳ್ಳೆದಲ್ವ.....ಸರಿ ಹಾಗೆ ಮಾಡು ಮಕ್ಕಳಿಗು ಕರಿ....ಶಂಕ್ರು ನೀನು ನೋಡಿದೀಯ ಹುಡ್ಗನ್ನ....ಹೂಂ ಭಾವ ನೋಡಿದೀನಿ ತುಂಬಾ ಚೆನಾಗಿದಾನೆ..ನಮ್ ಸುಮಿಗೆ ಒಳ್ಳೆ ಜೋಡಿ..ಎಂದು ರೂಮಿನಡೆ ನೊಡಿದನು ...
ಅಹಾ ಕೇಳುಸ್ಕೊಂಡ್ಯ ಅಕ್ಕ ಹುಡ್ಗ ಸೂಪರ್ ಅಂತೆ..
ಥೂ ಹೋಗೆ ಆ ಶಂಕ್ರಣ್ಣ ಎಲ್ಲರಿಗು ಹೊಗುಳ್ತಾನೆ....ಎಂದು ನಾಚಿ ತೆಲೆ ತಗ್ಗಿಸಿದಳು ..

ಇನ್ನೊಂದು ಸ್ವಲ್ಪ ಹೊತ್ತಿಗೆ ಗೊತ್ತಾಗುತ್ತೆ ಬಿಡು....ತಿಂಡಿ ಎಲ್ಲ ಮುಗಿದು...ಮತ್ತೆ ಒಮ್ಮೆ ಚೊಕ್ಕ ಮಾಡಿದರು ಶಾರದಮ್ಮ.....ಹಾಗೆ ಗಂಡಿನ ಕಡೆಯವರ ತಿಳಿದ ವಿಷ್ಯವನ್ನೆಲ್ಲ ಸ್ವಾರಸ್ಯವಾಗಿ ಹೇಳುತ್ತಿದ್ದ ಶಂಕ್ರಣ್ಣನ ಮಾತಿಗೆ ಹೂಂಗುಟ್ಟುತಿದ್ದರು ರಾಮಮೊರ್ತಿ...ಹೊತ್ತು ಹತ್ತಾಗುತ್ತ ಬಂದಿತು..ಇತ್ತ ಶಾರದಮ್ಮ ಇಬ್ಬರಿಗು ತಯಾರಾಗುವಂತೆ ಹೇಳಿ ತಾವು ತಮ್ಮ ಬಳಿ ಇದ್ದ ಹಸಿರು ಮೈಸೂರು ಸಿಲ್ಕ್ ಸೀರೆ ಹುಟ್ಟು ಕೂದಲನ್ನು ಬಾಚಿ ಹೂಮುಡಿದು..ಮಕ್ಕಳ ಬಳಿ ಬಂದರು..ಕವನ ಅಕ್ಕನಿಗೆ ಸೀರೆ ಹುಡಿಸುತ್ತಿದ್ದಳು....ನೆರಿಗೆಯಿಟ್ಟು ಒಪ್ಪವಾಗಿ ಉಡಿಸಿದಳು.....ಶಾರದಮ್ಮ ತೆಲೆ ಬಾಚಿ ನೀಳವಾಗಿ ಜಡೆ ಹೆಣೆದು..ದಟ್ಟ ವಾಗಿ ಮಲ್ಲಿಗೆ ಮುಡಿಸಿದರು, ಕೈಗೆ ಎರಡೆರಡು ಬಂಗಾರದ ಬಳೆಗಳ ನಡುವೆ ಮುತ್ತಿನ ಬಳೆ ಹಾಕಿ..ಕತ್ತಿಗೆ ಮುತ್ತಿನ ಹಾರ ಹಾಕಿ..ಕಿವಿಗೆ ಜುಮುಕಿ ಹಾಕಿ......ಸುಮಿ ಮುಖದ ಅಲಂಕಾರ ಮಾಡ್ಕೊ..ಕವನ ನೀನು ಬೇಗ ರೆಡಿ ಆಗ್ಬಿಡು....ಎಂದು ಹೊರ ನಡೆದರು....ಕವನ ತನ್ನ ಬಳಿಯೆ ಇದ್ದ ಒಂದಂಚಿನ ಮಾವಿನ ಕಾಯಿಯ ಬಾರ್ಡರಿನ....ರಕ್ತ ಬಣ್ಣದ ಮೈಸೂರು ಸಿಲ್ಕ್ ಸೀರೆ ಉಟ್ಟಳು...ತನ್ನ ಕೂದಲನ್ನು ಬಾಚಿ..ಮುಖಕ್ಕೆ ತೆಳುವಾಗಿ ಪೌಡರ್ ಲೇಪನ ಮಾಡಿ...ಚಿಕ್ಕದಾಗಿ ಕೂಂಕುಮವಿಟ್ಟಳು.

ಸುಮಿ ಕನ್ನಡಿಯಮುಂದೆ ನಿಂತು ಮುಖಕ್ಕೆ ಗುಲಾಬಿ ಬಣ್ಣದ ಪೌಡರಿಂದ ಲೇಪನ ಮಾಡಿ......ಸೀರೆಗೆ ಹೊಂದುವಂತ ತಿಲಕವಿಟ್ಟು ಕಣ್ಣಿಗೆ ಕಾಡಿಗೆ ಹಚ್ಚಿದಳು..ತುಟಿಗಳಿಗೆ ತೆಳುವಾಗಿ ಬಣ್ಣವನ್ನು ಹಚ್ಚಿಕೊಂಡಳು.....ಕವನ ಇದನ್ನೆಲ್ಲ ಆಸಕ್ತಿಯಿಂದ ನೋಡುತಿದ್ದಳು ಅವಳಿಗೆ ಅವೆಲ್ಲ ಬರುತ್ತಲೆ ಇರಲಿಲ್ಲ...ಅದಕ್ಕಿಂತ ಅದರಲ್ಲಿ ಆಸಕ್ತಿನು ಇರಲಿಲ್ಲ..ಅಕ್ಕ ಎಷ್ಟು ಚೆನ್ನಾಗಿ ಅಲ್ಂಕಾರ ಮಾಡ್ಕೊತಾಳೆ ಎನಿಸಿತು...ತನ್ನ ಅಲ್ಂಕಾರ ಮುಗಿದ ನಂತರ..ತನ್ನನ್ನೆ ದಿಟ್ಟಿಸುತ್ತಿದ್ದ ತಂಗಿಯನ್ನೊಮ್ಮೆ ನೋಡಿ ನಕ್ಕು...ಎಲ್ಲ OK ನ ಅಂದಳು..ಎದ್ದು ಅವಳ ಬಳಿ ಬಂದು ಅಕ್ಕ ತುಂಬಾ ಚೆನಾಗ್ ಕಾಣ್ತಾಇದೀಯ ಕಣೆ.....ಎಂದಳು....ಕವನ ನಿನಿಗು ಮೇಕಪ್ ಮಾಡ್ತೀನಿ ಬಾರೆ...ಬೇಡಪ ನನಿಗೆ ಇಷ್ಟೆ ಸಾಕು ನನಿಗೆ ಅದೆಲ್ಲ ಇಷ್ಟಇಲ್ಲ ಅಂತ ನಿನಿಗೆ ಗೊತ್ತಲ...ಇವತ್ತು ಒಂದಿನ ಕಣೆ please ನನಿಗೋಸ್ಕರ....ಬೇಡ ಅಕ್ಕ ನನಿಗೆ ಒತ್ತಾಯ ಮಾಡ್ಬೇಡ...ಅದುನ್ನೆಲ್ಲ ಹಚ್ಕೊಂಡ್ರೆ ಮಾತ್ರ ಚೆನಾಗ್ ಕಾಣ್ತಾರ.....ನನಿಗಂತು ನಾನು ಹ್ಯಾಗಿದೀನೊ ಹಾಗೆ ಇರೊಕಿಷ್ಟ....ಹಾಗೆ ಇರ್ತೀಯ...ಕಣೆ...ಆದ್ರೆ ಇವತ್ತು ನನಿಗೋಸ್ಕರ...ಎಂದು ಕೇಳದೆ ಅವಳ ಅಲಂಕಾರ ಶುರುಮಾಡಿದಳು.....ವಿಧಿಯಿಲ್ಲದೆ ಅವಳ ಮನಸ್ಸು ನೋಯಿಸಲಿಚ್ಚಿಸದೆ ಅವಳು ಹೇಳಿದ್ದಕ್ಕೆಲ್ಲ ಹೂಂಗುಟ್ಟುತ್ತ ಸುಮ್ಮನೆ ಕೂತಳು......ಅವಳಂತೆ ಅಲಂಕಾರ ಮಾಡಿ ಅವಳ ಸೀರೆಗೆ ಹೊಂದುವಂತ ಬಣ್ಣವನ್ನು ತುಟಿಗಳಿಗೆ ಹಚ್ಚಿ..ಸ್ವಲ್ಪ ದೊಡ್ಡದಾದ...ಮ್ಯಾಂಚಿಂಗ್ ಬಿಂದಿಯನ್ನು ಹಚ್ಚಿ..ಕಣ್ಣಿಗೆ ಕಾಡಿಗೆ ಹಚ್ಚಿದಳು..ತೆಲೆಗೆ ಹೂ ಮುಡಿಸಿದಳು...ಎಲ್ಲವನ್ನು ಮಾಡಿ ಒಂದೆರಡು ಹೆಜ್ಜೆ ಹಿಂದೆ ಹೋಗಿ ಅವಳನ್ನೊಮ್ಮೆ ದಿಟ್ಟಿಸಿದಳು..ಅಬ್ಬ....ಅವಳ ಸೌಂದರ್ಯ ಒಂದು ಅಧ್ಬುತ ಪವಾಡವೆನಿಸಿತು...ನಿಜಕ್ಕು ಕವನಳಂತ ಸೌಂದರ್ಯವತಿ ಯನ್ನು ಅವಳು ಕಣ್ಣಾರೆ ಎಲ್ಲು ಕಂಡಿರಲಿಲ್ಲ.....ತನ್ನ ತಂಗಿ ಎನ್ನುವುದೆ ಹೆಮ್ಮೆ ಎನಿಸಿತು..ಅಹಾ ಎಂದು ಕೈ ನಿವಾಳಿಸಿ ದೄಷ್ಟಿ ತೆಗೆದಳು...ಏನಕ್ಕ ಮಾಡ್ತಾಇದೀಯ ಎಂದು ನಕ್ಕು ಎದ್ದಳು..ಕವನ ಎಷ್ಟು ಚೆನಾಗ್ ಕಾಣ್ತಾಇದೀಯ ಗೊತ್ತ ನೀನು...ಶಾರದಮ್ಮ ರೆಡಿಯಾದ ಸುಮಿ ಎಂದು ಒಳಬಂದರು...ಇಬ್ಬರನ್ನು ನೋಡಿ ಹೆಮ್ಮೆಯೆನಿಸಿತು...ಕವನಳನ್ನು ನೋಡಿ ಅವರಿಗು ಅಬ್ಬ ಎನಿಸಿತು...ಕವನ ನೀನು!!!!! ..ಯಾವತ್ತು ಆ ರೀತಿ ಅಲಂಕಾರದಲ್ಲಿ ಅವಳನ್ನು ನೋಡಿರಲಿಲ್ಲ..ನೋಡಮ ಕೂರುಸ್ಕೊಂಡು ಏನೇನೊ ಮಾಡ್ಬಿಟ್ಳು..ಅಕ್ಕ...ಪರ್ವಾಗಿಲ್ಲ ಬಿಡು ..ಇಬ್ರಿಗು ನನ್ ದೄಷ್ಟಿನೆ ತಾಗುತ್ತೆ...ಸರಿ ಸರಿ ಹೊತ್ತಾಕ್ತಾ ಬಂತು ಸುಮಿ ದೇಮರು ಮನೆಗೋಗಿ ನಮಸ್ಕಾರ ಮಾಡಿ ಬಂದ್ ಬಿಡಮ್ಮ...ಅವ್ರು ಬರೊ ಹೊತ್ತಾಯ್ತು ಫೋನ್ ಮಾಡಿದ್ರು...ಇನ್ನು ಹತ್ತು ನಿಮಿಷದಲ್ಲಿ ಇಲ್ಲಿರ್ತಾರಂತೆ....ಎಂದು ಎಲ್ಲರು ಹೊರಬಂದ್ರು..ರಾಮಮೂರ್ತಿ ಮಕ್ಕಳಿಬ್ಬರನ್ನು ನೋಡಿ ಕಣ್ತುಂಬಿಕೊಂಡರು.....ಕಾರಿನ ಶಬ್ದವಾದಂತಾಯಿತು...ಶಂಕ್ರಣ್ಣ ಭಾವ ಅವ್ರು ಬಂದ್ರು..ಎಂದು ಹೊರ ನಡೆದ ಅವನ ಹಿಂದೆನೆ ರಾಮಮೂರ್ತಿನು ನಡೆದರು..ಇತ್ತ ಶಾರದಮ್ಮ ಮಕ್ಕಳಿಬ್ಬರನ್ನು ಅಡುಗೆ ಮನೆಯ ಪಕ್ಕದ ರೂಮಿನಲ್ಲಿರುವಂತೆ ಹೇಳಿ ಅವ್ರು ಹೊರನಡೆದರು.....
ಬನ್ನಿ ಬನ್ನಿ..ನಮಸ್ಕಾರ.....ಶಂಕ್ರಣ್ಣ ಕಾರಿನಿಂದಿಳಿಯುತ್ತಿದ್ದ ಗಂಡಿನ ತಂದೆ ಸದಾನಂದರಾಯರನ್ನು ಅವರ ಪತ್ನಿ ಸುಮಿತ್ರದೇವಿ ಯನ್ನು ನಮಸ್ಕರಿಸಿದರು...ಶಾರದಮ್ಮ ಬಾಗಿಲಿನಿಂದಲೆ ಅವರನ್ನು ಗಮನಿಸಿದರು..ಸಾಮಾನ್ಯವಾದ ಎತ್ತರ ಗಂಡ ಹೆಂಡರಿಬ್ಬರದ್ದು....ಅವರ ಉಡುಗೆ ತೊಡುಗೆಯಲ್ಲೆ ಅವರ ಶ್ರೀಮಂತಿಕೆ.....ಸರಳತೆ ಎದ್ದು ಕಾಣುತಿತ್ತು...ಒಳ್ಳೆಯ ಜನಎಂದು ಕೊಂಡರು..ನಮಸ್ಕರಿಸುತ್ತ ಎಲ್ಲರು ಒಳಬಂದರು..ಶಂಕ್ರಣ್ಣ ಇವರು ನಮ್ಮ ಭಾವ ರಾಮಮುರ್ತಿಯವರು..ಇವರು ನಮ್ಮಕ್ಕ ಶಾರದಮ್ಮ..ಎಂದು ಒಬ್ಬರಿಗೊಬ್ಬರನ್ನು ಪರಿಚಯಿಸಿದನು.....ಅವರು ಮುಗುಳ್ನಕ್ಕು ನಮಸ್ಕರಿಸಿದರು...ಒಳ ಬಂದು ಕೆತ್ತನೆಯ ಸೋಫಾದಲ್ಲಿ ಕುಳಿತರು...ಇವನು ನನ್ನ ಮಗ ಚಂದ್ರಕಾಂತ ಎಂದು ಪರಿಚಯಿಸಿದರು..ವಿನಯದಿಂದ ಎದ್ದು ನಮಸ್ಕರಿಸಿದನು...ಸದಾನಂದರಾಯರು ತಾವೆ ಮಾತು ಮುಂದುವರೆಸುತ್ತ...ಮದುವೆಗೆ ಬಂದು ತಮ್ಮ ಮಗಳನ್ನು ನಮ್ಮ ಮಗ ಮೆಚ್ಚಿದ್ದು..ತಾವಿರುವ ವಾಸಸ್ಥಳ....ತಮ್ಮ ಮಗನ ವಿಧ್ಯಾಭ್ಯಾಸ...ಅವನ ವ್ಯವಹಾರ...ತಮಗಿರುವ ಆಸ್ತಿ ಪಾಸ್ತಿ ವಿವರ ಎಲ್ಲವನ್ನು ಸಂಕ್ಷಿಪ್ತವಾಗಿ ವಿವರಿಸಿದರು...ಇತ್ತ ಅವರ ಪತ್ನಿ ನಗುತ್ತ ಶಾರದಮ್ಮನಿಗೆ ತಮ್ಮ ಮಗಳು ನಮಗೆ ತುಂಬಾ ಒಪ್ಪಿಗೆಯಾಗಿದ್ದು ಜಾತಕ ಎಲ್ಲ ರೀತಿಯಲ್ಲು ಹೊಂದಿಕೆಯಾಗಿದ್ದು...ಸಂತೋಷದಿಂದ ವಿವರಿಸುತ್ತಿದ್ದರು...ಅವರ ಮಾತು ನಿಂತಾಗ ರಾಮಮುರ್ತಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಮಗೆ ಇಬ್ಬರೆ ಹೆಣ್ಣು ಮಕ್ಕಳು ಅವರ ಓದಿನ ಬಗ್ಗೆ...ಎಲ್ಲವನು ವಿವರಿಸಿದರು...ಮಧ್ಯೆ ತೆಲೆಹಾಕಿದ ಶಂಕ್ರಣ್ಣ ಎಲ್ಲ ನೀವೆ ಮಾತನಾಡಿದರೆ ಪಾಪ ಹುಡುಗನಿಗೆ ಬೇಸರವಾಗಲ್ವೆ...ಹುಡ್ಗಿನ್ ಕರೆಸಿ ಎಂದರು...ಎಲ್ಲರು ನಕ್ಕು ಅವನತ್ತ ನೋಡಿದರು..ರಾಮಮುರ್ತಿ ಶಾರು ಸುಮನ್ನ ಕರೆದು ತರುವಂತೆ ಹೇಳಿದರು..ಶಾರದಮ್ಮ ತಲೆಯಾಡಿಸಿ...ಒಳನಡೆದು ಮಗಳಿಗೆ ಇನ್ನೊಮ್ಮೆ ದೇವರಿಗೆ ನಮಸ್ಕರಿಸುವಂತೆ ಹೇಳಿ..ಮಗಳ ಕರೆತಂದರು.....ತಲೆತಗ್ಗಿಸಿ ಅವರ ಬಳಿಬಂದು ಎದುರು ಸೋಫಾದಲ್ಲಿ ಕುಳಿತಳು ಶಂಕ್ರಣ್ಣ ಹೀಗೆ ತೆಲೆ ತಗ್ಗಿಸಿ ಕುಳಿತರೆ ಹೇಗಮ್ಮ ನಮ್ಮ ಚಂದ್ರಕಾಂತ ನೋಡೋದು ಬೇಡ್ವೆ....ಎಲ್ಲರು ನಕ್ಕ್ರು...ಮೈಯ ರಕ್ತವೆಲ್ಲ ಮುಖಕ್ಕ್ಕೆ ನುಗ್ಗಿದಂತಾಯಿತು..ಸುಮಿಗೆ ನಿಧಾನವಗಿ ತೆಲೆ ಎತ್ತಿದಳು... ಚಂದ್ರಕಾಂತ ತದೇಕಚಿತ್ತದಿಂದ ಅವಳನ್ನೆ ನೋಡುತಿದ್ದ..ಅವನ ನೋಟವನ್ನು ಕಂಡು ನಾಚಿ ತೆಲೆತಗ್ಗಿಸಿದಳು...ಶಂಕ್ರಣ್ಣ ಸುಮು ಸರಿಯಾಗಿ ಹುಡ್ಗನ್ನ ನೋಡ್ಬಿಡಮ್ಮ ಆಮೇಲೆ ನೋಡ್ಲಿಲ್ಲ ಅನ್ಬೇಡ...ಇನ್ನು ನಾಚಿಕೆ ಎನಿಸಿತು..ಸುಮನಿಗೆ....ರಾಮಮುರ್ತಿ ಕವನಳನ್ನು ಕರೆದು ಇವಳು ನನ್ನ ಇನ್ನೊಬ್ಬಳು ಮಗಳು ಎಂದು ಪರಿಚಯಿಸಿದರು..ಎಲ್ಲರಿಗು ಕವನ ತುಂಬಾ ಸುಂದರಿ ಎನಿಸಿತು....ಚಂದ್ರಕಾಂತ ತಂದೆ ಕಿವಿಬಳಿ ಏನೊ ಉಸಿರಿದ..ನಕ್ಕ ಸದಾನಂದರು ರಾಮಮುರ್ತಿಗೆ ತಮ್ಮ ಮಗ ಸುಮಳ ಬಳಿ ಮಾತನಾಡಬೇಕೆಂದು ಹೇಳಿದರು...ಅದಕ್ಕೇನಂತೆ ಸುಮಿಗೆ ಪಕ್ಕದ ರೂಮಿಗೆ ಕರೆದುಕೊಂಡು ಹೋಗುವಂತೆ ಹೇಳಿದರು ಮಧ್ಯದಲ್ಲೆ ತಡೆದು ಬೇಡ ಹೊರಗಡೆನೆ ಮಾತಾಡ್ತೀವಿ ನಿಮ್ಮ ಅಭ್ಯಂತವಿಲ್ಲವೆಂದರೆ ಅಂದ...ಸರಿ ಅದ್ಕ್ಕೇನಂತೆ ಕಣ್ಣಲ್ಲೆ ಸುಮನಿಗೆ ಹೇಳಿದರು....
ಚಂದ್ರಕಾಂತ ಹೊರಬಂದು ಮಲ್ಲಿಗೆಬಳ್ಳಿಯಬಳಿ ನಿಂತ...ಸುಮ ಅಂಜುತ್ತ ಬಂದು ತಲೆತಗ್ಗಿಸಿ ನಿಂತಳು ಅದನ್ನು ಕಂಡು ಚಂದಕಾಂತನಿಗೆ ನಗು ಬಂತು..ಸುಮಾವ್ರೆ ನೀವು ಹೀಗೆ ತಲೆತಗ್ಗಿಸಿ ನಿಂತರೆ ನಾನು ಹ್ಯಾಗ್ ಮಾತಾಡ್ಲಿ.ನೀವು ನನ್ನುನ್ನ ನೊಡಿದ್ರೆ ತಾನೆ ನಿಮ್ಮ ಮುಖಭಾವ ನನಿಗೆ ತಿಳಿಯುವುದು...ಸುಮ ನಿಧಾನವಾಗಿ ತೆಲೆಎತ್ತಿದಳು..ಇಬ್ಬರ ಕಣ್ಣುಗಳು ಸೇರಿದವು...ಚೆಂದ್ರಕಾಂತ ಅವಳನು ನೋಡಿ ಮೆಚ್ಚಿದ್ದು..ಮದುವೆಗೆ ನಿರ್ಧರಿಸಿದ್ದು...ಇವರ ಒಪ್ಪಿಗೆ ಪಡೆದು...ಮದುವೆಯನ್ನು ಇನ್ನೊಂದೆರಡು ತಿಂಗಳಲ್ಲೆ ಮಾಡಿಕೊಳ್ಳಬೇಕೆಂದಿರುವುದು ಎಲ್ಲವನ್ನು ವಿವರಿಸಿದನ್ನು ಎಲ್ಲವನು ಸುಮ್ಮನೆ ಕೇಳಿಸಿಕೊಂಡಳು...".ಸುಮ " ನೀವು ಹೀಗೆ ಸುಮ್ಮನೆ ಇದ್ದರೆ ನಾನು ಏನಂತ ಅರ್ಥ ಮಾಡ್ಕೊಳ್ಲಿ..ನಿಮಿಗೆ ಒಪ್ಪಿಗೆ ಇದೆ ಅಂತಾನೊ ಇಲ್ಲ ಅಂತಾನೊ ಎಂದನು...ಸುಮ ಅವನ್ನು ನೋಡಿ ತಂದೆ ತಾಯಿ ಹೇಗೆ ನಿರ್ಧಾರ ಮಾಡುತ್ತಾರೊ ಹಾಗೆ ಎಂದಳು..ಹಾಗಾದರೆ ನಿಮಿಗೆ ನಾನು ಒಪ್ಪಿಗೆ ಇಲ್ವ ಎಂದ "ಹಾಗಲ್ಲ"..ಮತೆ ಅದುನ್ನ ಬಾಯ್ಬಿಟ್ಟು ಹೇಳ್ಬೋದಲ್ವ ಅಂದ..ತಲೆ ಎತ್ತಿ ಅವನನ್ನು ನೋಡಿದಳು ಬಾಯಿ ಮಾತನಾಡದ್ದನ್ನು ಕಣ್ಣುಗಳು ಮಾತನಾಡಿದವು..ಅರಿತವನಂತೆ ಚಂದ್ರಕಾಂತ ತನ್ನ ಜೀಬಿನಿಂದ ಒಂದು ಕಾರ್ಡ್ ತೆಗೆದು ಇದು ನನ್ನ ಕಾರ್ಡ್ ಇದರಲ್ಲಿ ನನ್ನ ಫೋನ್ ನಂಬರಿದೆ..ಎಂದು ಕೊಟ್ಟ....ಅದನ್ನು ತೆಗೆದು ಕೊಂಡುಳು ಹೋಗೋಣ್ವ ಎಂದು ಒಳನಡೆದರು ಆಗಲೆ ಎಲ್ಲರು ತಿಂಡಿ ತಿನ್ನುತಿದ್ದರು..ಶಾರದಮ್ಮ ಇಬ್ಬರು ಒಳಬಂದಿದ್ದನ್ನು ನೋಡಿ..ಸುಮಳಿಗೆ....ಚಂದ್ರಕಾಂತನಿಗೆ ತಿಂಡಿಕೊಡುವಂತೆ ಹೇಳಿದರು...ಒಳ ಹೋಗಿ ತಿಂಡಿ ತ್ಂದು ಕೊಟ್ಟಳು ಆಗ ಸ್ವಲ್ಪ ನಾಚಿಕೆ ಕಡಿಮೆಯಾದೆಂತೆನಿಸಿತು..ಎಲ್ಲರು ತಿಂಡಿ ತಿಂದು ಹೊರಡಲನುವಾದರು ಶಾರದಮ್ಮ ಕುಂಕುಮ ತ್ಂದರು....ಸದಾನಂದರಾಯರು ಮತ್ತೊಮ್ಮೆ..ಮದುವೆಯಬಗ್ಗೆ ತಮ್ಮ ನಿರ್ಧಾರ ತಿಳಿಸಿ...ನಮಸ್ಕರಿಸಿ ಹೊರನಡೆದರು....ಚಂದ್ರಕಾಂತ ಎಲ್ಲರಿಗು ನಮಸ್ಕರಿಸಿ ಯಾರಿಗೊ ಹುಡುಕಾಡಿದನ್ನು ಕಂಡು ಶಾರದಮ್ಮ ಸುಮ ಎಂದು ಕೂಗಿದರು..ಸುಮ ಹೊರ ಬಂದಳು..ಬರ್ತೀನಿ ಎಂದು ಅವಳಿಗು ಕಣ್ಣಲ್ಲೆ ಹೇಳಿ ಹೊರನಡೆದ... ರಾಮಮುರ್ತಿಗಂತು ಅವರ ಸರಳತನ ನೋಡಿ ಮನ ತುಂಬಿ ಬಂತು...
ಅವರನ್ನು ಬೀಳ್ಕೊಟ್ಟು...ಒಳಬಂದರು....ಎಲ್ಲರು ಕೂತರು..ಏನೆ ಶಾರು ಇವರು ಎಷ್ಟೊಂದು ಅವಸರವಾಗಿದ್ದಾರೆ ಎಂದರು..ಹೌದ್ರಿ..ಆ ಜೋಯಿಸ್ರು ಹೇಳಿದ್ದು ಮರ್ತ್ರಾ ನೀವು ಎಂದಳು...ಹೌದೌದು ಎಂದು ಸುಮನ ಮುಖ ನೋಡಿದರು ನಕ್ಕು ಒಳ ನಡೆದಳು..ಇಬ್ಬರು ಬಟ್ಟೆ ಬದಲಾಯಿಸಿ ಬಂದು ಕುಳಿತರು..ಇತ್ತ ಶಾರದಮ್ಮನ್ನು ಎಲ್ಲವನ್ನು ಸ್ವಚ್ಚಮಾಡಿ ಬಂದು ಕುಳಿತರು...ಸುಮ ಏನ್ ಹೇಳ್ತೀಯಮ ನೀನು...?
ನಾನ್ ಏನ್ ಹೇಳ್ಲಪ ಎಲ್ಲರು ಹೇಗ್ ಹೇಳ್ತೀರೊ ಹಾಗೆ ಎಂದಳು..
ಹಾಗಲ್ಲಮ ಅವರು ತುಂಬಾ ಅವಸರದಲ್ಲಿ ಇದಾರೆ..ನಮಿಗು ಅವರಿಗು ಎಲ್ಲ ರೀತಿಲು ಒಪ್ಪಿಗೆ ಆಗಿದೆ ಶ್ರೀಮಂತಿಕೆ ಇದ್ದರು ಸರಳ ವ್ಯಕ್ತಿತ್ವದ ಜನ...ಅಷ್ಟಕ್ಕು ಇದರಲ್ಲಿ ನಿನ್ನ ಒಪ್ಪಿಗೆ ತುಂಬಾ ಮುಖ್ಯ ತಾಯಿ ಎಂದರು...ಸಕ್ಕು ತಲೆ ತಗ್ಗಿಸಿದಳು..ಶಾರದಮ್ಮ ಆಗಾದ್ರೆ ಮುಂದುವರಿಬಹುದು ಬಿಡಿನಾವು ಎಂದರು...ಶಾರು ಆಗ್ಲೆ ಜೂನ್ ಮುಗಿತಾ ಬಂತು ಅವರ ಪ್ರಕಾರ ಆಗಸ್ಟ್ ಕೆನೆಗೆ ಮದುವೆ...ಇರೋದು ಇನ್ನು ಎರ್ಡು ತಿಂಗಳು ಅಷ್ಟೆ...ಭಾವ ಅದುಕ್ಕೆ ಯಾಕೆ ಯೋಚ್ನೆ ಮಾಡ್ತೀರ...ಶುಭಸ್ಯ ಶೀಘ್ರಂ...ಓಡಾಟ ಎಲ್ಲ್ಲ ನನಿಗೇಳ್ಹಿ .. ತಿಂಗಳಲ್ಲೆ ಮಾಡ್ತಾರಂತೆ...ಅಂತಾದ್ರಲ್ಲಿ ನೀವು ಯೋಚ್ನೆ ಮಾಡ್ತೀರಲ ಎಂದ..ಅದು ನಿಜ ಬಿಡು ಎಲ್ಲ ಆ ದೇವರಿಟ್ಟಂಗಾಗಲಿ....ಏನಮ್ಮ ಸುಮ ಎಂದರು...ಸರಿ ಅಪ ಎಂದಳು..ದಿನ ಪೂರ್ತಿ ಅದೆ ಮಾತು ಕಥೆಯಲಿ ಕಳೆಯಿತು...ಶಾರದಮ್ಮ ನಿಗೆ, ರಾಮಾಮುರ್ತಿಗೆ ಮುಂದಿನ ತಯಾರಿಬಗ್ಗೆ ಆಗಲೆ ಮನಸ್ಸು ಹರಿದಾಡಿತು..ಇದರಲ್ಲೆ ೨-೩ ದಿನ ಸರಿಯಿತು..ಆಗಲೆ ಸುಮ ಚಂದ್ರಕಾಂತನಿ ತುಂಬಾ ಹತ್ತಿರವಾಗಿದ್ದಳು..ದಿನಕ್ಕೆ ಎರಡುಬರಿಯಾದರು ಫೋನ್ ನಲ್ಲಿ ಅವರ ಸಂಭಾಷಣೆ ನಡ್ಯುತ್ತಿತ್ತು..
ಅಂದು ಶುಕ್ರವಾರ ಈ ನಡುವೆ ಕವನ ಎಸ್ಟೇಟಿನಲ್ಲಿ auditing ಹತ್ರ ಕೆಲಸಮಾಡುವುದಕ್ಕೆ ತನ್ನ ಸಮ್ಮತವನ್ನು ತಿಳಿಸಿದ್ದಳು....ಕವನ ಬೇಗ ರೆಡಿಆಗ್ಬಿಡಮ್ಮ ಹೊರೊಡೋಣ...ಬಂದೆ ಅಪ್ಪ...ಎಂದು ಹೊರಬಂದಳು....ರಾಮಮುರ್ತಿ ಮೆಚ್ಚುಗೆಯಿಂದ ಮಗಳೆಡೆ ನೋಡಿದರು..ಅವಳುಟ್ಟಿದ್ದ ಗುಲಾಬಿ ಬಣ್ಣದ ಬಿಳಿಯ ಚಿಕ್ಕ ಚಿಕ್ಕ ಹೂಗಳ ಸೀರೆ ಅದ್ಕ್ಕೊಪ್ಪುವ ರವಿಕೆ...ತಲೆಸ್ನಾನ ಮಾಡಿದ್ದರಿಂದ ಮುಖವನ್ನು ಹರಡಿದ್ದ ಮುಂಗುರುಳು...ನೀಳ ಕೇಶರಾಶಿ...ಅಕ್ಕ ಒತ್ತಾಯವಾಗಿ ಹಚ್ಚಿದ್ದ ಗುಲಾಬಿಬಣ್ಣದ ಉಗುರುಬಣ್ಣ.., ಕತ್ತಿನಲ್ಲಿ ಒಂದೆಳೆ ಬಾಂಗಾರದ ಎಳೆ...ಕೈಯಲ್ಲಿಡಿದ ಪರ್ಸ್,ಮುಖದಲ್ಲಿದ್ದ ಗಾಂಭೀರ್ಯ....ನಕ್ಕು ಹೊರೊಡೋಣ್ವ ಎಂದರು...ಸರಿ ಅಪ್ಪ ಎಂದು ತಲೆಯಾಡಿಸಿ..ಅಮ್ಮನೆಡೆ ನೋಡಿದಳು..ಶಾರದಮ್ಮ..ಅವಳಿಗೆ ಉಷಾರು..ಅಪ್ಪನು ಜೊತೆ ಇರ್ತಾರೆ..ಹಾಗೆ ಹೀಗೆ ಎಂದು ಬಾಗಿಲಿನಿವರೆಗು ಬಂದು ಬೀಳ್ಕೊಟ್ಟಾರು..ಸುಮನು ಬಂದು ಬೈ ಹೇಳಿ ಒಳಬಂದಳು..
ಕವನ ನನಿಗಂತು ದಿನಾ ಇಷ್ಟು ದೂರ ನಡ್ದು ಅಭ್ಯಾಸ ನಿನಿಗೆ ಸುಸ್ತಾಗುತ್ತೆ ಅನ್ಸುತ್ತಮ..ಇಲ್ಲ ಅಪ್ಪ ಒಂದೆರಡುದಿನ ಅಭ್ಯಾಸ ಆಗುತ್ತೆ ಬಿಡಿ ಅದು ಅಲ್ದೆ ಈ ಗಿಡ ಮರಗಳನ್ನೆಲ್ಲ ನೋಡ್ಕೊಂಡು ಹೋಕ್ತಾಇದ್ರೆ ನಡ್ದಿದ್ದೆ ಗೊತ್ತಾಗಲ್ಲ..ನಕ್ಕು ಸುಮ್ಮನಾದರು ರಾಮಮುರ್ತಿ..ಕೆಲಸದ ಬಗ್ಗೆ ಎಸ್ಟೇಟಿನಲ್ಲಿ ಇರುವವರ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು..ಮಾತನಾಡುತ್ತ ಸ್ಪಟಿಕ ಬಂದದ್ದೆ ಗೊತ್ತಾಗಲಿಲ್ಲ..ಇವಳ ಬರುವಿಕೆಯನ್ನು ಮೊದಲೆ ರಾಯರಿಗೆ ತಿಳಿಸಿದ್ದರು..
ಆಗಲೆ ರಾಯರು,ಭವಾನಿ ಇಬ್ಬರು ಹೊರಗಡೆ ಮಾತನಾಡುತ್ತಿದ್ದರು..ರಾಮಮುರ್ತಿಗೆ ಆಶ್ಚರ್ಯವಾಯಿತು..ವಿಶೇಷ ಎನಿಸಿತು.
ಇವರಿಬ್ಬರ ಬರುವಿಕೆಯನ್ನು ಕಂಡು..ಬಳಿಬಂದರು..ಇಬ್ಬರ ಮುಖದಲ್ಲು ಸಂತೋಷ ಕುಣಿದಾಡುತಿತ್ತು..
ರಾಯರು..ಕವನಳನ್ನು ಕಂಡು welcom my child ಎಂದರು.ನಕ್ಕು ಸುಮ್ಮನಾದಳು..ಭವಾನಿ ಹಲೊ ಕವನ ಎಂದು ನಕ್ಕರು..ಅವಳ ರೂಪ ಇವರನ್ನು ದಂಗುಬಡಿಸಿತು..ಒಂದು ನಿಮಿಷ ಕಣ್ಣುಗಳನ್ನು ಮಿಟಿಕಿಸದೆ ನೋಡಿದರು..ಕವನಳಿಗೆ ಮುಜುಗರವಾಯಿತು..
ರಾಮು ಕವನಳಿಗೆ ಎಲ್ಲ ಪರಿಚಯ ಮಾಡುಸ್ಕೊಡಪ..ಅವಳಿಗೆ ಯಾವುದಕ್ಕು ತೊಂದ್ರೆಯಾಗೋದ್ಬೇಡ...ಕವನ ಯಾವ್ದುಕ್ಕು ಸಂಕೋಚ ಬೇಡಮ..feel free ok ಎಂದರು..ಭವಾನಿ ತಕ್ಷಣ ya..kavana..nathing to worry ...here everything is homely atmospher ಎಂದು ನುಡಿದು...ರಂಗನಾಂಥ one minute ಎಂದು ಬಂಗಲೆಯತ್ತ ಹೆಜ್ಜೆಹಾಕಿದರು...ಅವರ ಮಾತು ಕೇಳಿ ಮನಸ್ಸಿಗೆ ನಿರಾಳವೆಂದೆನಿಸಿತು...
ರಾಯರಿಗೆ ಭವಾನಿಯ ಮಾತು ಕೇಳಿ ಆಶ್ಚರ್ಯವಾಯಿತು...ಯಾಕೆಂದರೆ ಅವಳು ತನಿಗೆ ಇಷ್ಟವಾದವರ ಹತ್ರ ಮಾತ್ರ ಅಷ್ಟು ಸಲುಗೆಯಿಂದ ಮಾತನಾಡುತಿದ್ದಿದ್ದು..
ಸರಿ ಎಂದು ರಾಮಮುರ್ತಿ ಕವನ ಆಫೀಸ್ ಕಡೆ ಹೊರಡಲನುವಾದರು...ಏನೊ ನೆನೆದವರಂತೆ ರಾಯರು..ರಾಮು..ಎಂದರು ರಾಮಮುರ್ತಿ ಇವರ ಕೂಗು ಕೇಳಿ ಅಲ್ಲೆ ನಿಂತರು ಕವನ ಒಂದತ್ತು ಹೆಜ್ಜೆ ಮುಂದೆ ಹೋದಳು...ಇವತ್ತು ಸುಹಾಸ್ ಬರ್ತಾಇದಾನೆಕಣೊ!!!!!..ಅದುಕ್ಕೆ ಇಬ್ರು ಕಾಯ್ತ ಇದೀವಿ...ಇನ್ನೇನೊ ಬರ್ತಾನೆ...ಬೆಂಗಳೂರಿಗೆ ನೆನ್ನೆನೆ ಬಂದಿದಾನೆ..ರಾತ್ರಿ ಫೋನ್ ಮಾಡಿದ್ದ...ಅದುಕ್ಕೆ ಇಬ್ರು ಹೊರಗಡೆ ಕಾಯ್ತ ಇರೋದು..ಇವಳಿಗಂತು ಸುಹಾಸ್ನ ಬೆಂಗಳೂರಿಗೆ ಹೋಗೆ ಕರೆ ತರುವ ಉದ್ದೇಶ ಇತ್ತು ಆದ್ರೆ ಅವ್ನು..ಬೆಂಗಳೂರಿಗೆ ಬಂದ್ಮೇಲೆ ಹೇಳಿದಾನೆ..ಏನ್ ಸಡಾರ ಹೇಳ್ಲಪ್ಪ ಅವುಳ್ದು...ಅಂತು ೫ ವರ್ಷದ ಮೇಲೆ ಅವಳ ಂಉಖದಲ್ಲಿ ಕುಷಿ ನೇಡ್ತಾ ಇದೀನಿ..ಹೌದ ರಾಯ್ರೆ..ಅಂತು ಒಳ್ಳೆದೆ ಆಯ್ತು ಬಿಡಿ..ಮಾತು ಮುಂದುವರೆಸಿದರು.
ಈ ಸುಹಾಸ್ ಅವರ ಮಗ ಅಲ್ವ..ಎಲ್ಲವನ್ನು ಕೇಳುತ್ತಿದ್ದ ಕವನ ಮನದಲ್ಲೆ ಮಾತನಾಡಿಕೊಳ್ಳುತ್ತಿದ್ದಳು..ಒಂದೆರಡುಬಾರಿ ಚಿಕ್ಕವರಿದ್ದಾಗ ಅಪ್ಪನ ಜೊತೆ ಬಂದಾಗ ನೋಡಿದ್ದ ನೆನಪು ಮುಸುಕು ಮುಸುಕಾಗಿತ್ತು ಅವನ ಮುಖ ನೆನಪಾಗಲಿಲ್ಲ..ವಿಷಯವೇನೆಂದು ಅಪ್ಪ ಅಮ್ಮ ಮತನಾಡುತಿದ್ದಾಗ ಕಿವಿಗೆ ಬಿದ್ದಿತ್ತು..."ಸುಹಾಸ್" ಹೆಸರು ಮನಸ್ಸನ್ನು ಮೀಟಿದಂತಾಯಿತು..ತನಿಗರಿವಿಲ್ಲದಂತೆ ಬಾಯಿಂದ ಸುಹಾಸ್ ಎಂದು ನುಡಿದಳು..ಹಾಗೆ ಸುತ್ತ ಮುತ್ತಲಿದ್ದ ಪ್ರಕೃತಿಯನ್ನು ಸವಿಯುತ್ತಿದ್ದಳು...ಸುತ್ತಲು ಕಣ್ಣಾಯಿಸಿದಳು..ಎಲ್ಲೆಲ್ಲು ಹಸಿರು..ಹಕ್ಕಿಗಳ ಕಲರವ..ಹೂಗಳ ಸುವಾಸನೆ ಮನಸ್ಸಿಗೆ ತುಂಬಾ ಇಷ್ಟವಾಯಿತು...ಇವರ ಮಾತಿನ ಕಡೆ ಗಮನ ಹರಿಯಲಿಲ್ಲ....
ಭವಾನಿ ..ರಂಗನಾಥ..ರಂಗನಾಥ್ ...ಸುಹಾಸ್..ಬರ್ತಾಇದಾನೆ ಎಂದು ಓಡಿಬಂದಳು ಎಲ್ಲರು ೧ ಕಿಲೊ ಮೀಟರ್ ದೂರದಲ್ಲಿದ್ದ ಗೇಟಿನಡೆ ಕಣ್ಣಾಯಿಸಿದರು..ಬಾಡಿಗೆ taxiಯಲ್ಲಿ ಬರುತ್ತಿದ್ದ ಸುಹಾಸನ ಕಾರ್ ಒಳಬಂದಿತು...ಮೋಡಕಟ್ಟಿದ ವಾತವರಣ..ಮೋಡ ಚೆದುರಿಸಲೆಂದು ತಣ್ಣಗೆ ಬೀಸುತಿದ್ದ ಗಾಳಿ..ಕಾರ್ ಬಂದು ಇವರ ಬಳಿಯೆ ನಿಂತಿತು..ಬಾಗಿಲುತೆಗೆದು ತನ್ನ ಕಾಲನ್ನು ಹೊರ ಅಡಿಇಟ್ಟ...ಸುಹಾಸ ನ ಕಣ್ಣಿಗೆ ಮೊದಲು ಬಿದ್ದಿದ್ದು ಅನತಿ ದೂರದಲ್ಲಿದ್ದ ಆ ಹುಡುಗಿ...ಯಾವುದೊ ಒಂದು ಸೌಂದರ್ಯ ಪ್ರತಿಮೆ ಕಂಡಂತಾಯಿತು...ಗಾಳಿಗೆ ತನ್ನ ಮುಂಗುರುಳ ಆಟವನ್ನು ಹತ್ತಿಕ್ಕುವಂತೆ ತನ್ನ ಕೂದಲನ್ನು ಒತ್ತಾಯವಾಗಿ ಹಿಂದೆ ಸರಿಸುತ್ತಿದ್ದಳು...ಕಾರಿನ ಶಬ್ದ ಕೇಳಿ ಇತ್ತ ತಿರುಗಿದಳು..ಕಣ್ಣುಗಳು ಕಾರಿನಿಂದಿಳಿದ ವ್ಯಕ್ತಿಯನ್ನು ಗಮನಿಸಿತು..
(ಮುಂದುವರೆಯುವುದು)

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನು ಕಾಣ್ತಾನೆ ಇಲ್ಲ ಅಕ್ಕ , ಪ್ಯಾರಗ್ರಾಫ್ ಮಾಡಿ ಹಾಕಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ವಿನಿ..ಈಗ ಹಾಕಿದೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಕ ಈಗ ಸರಿಯಾಗಿದೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಪಟಿಕ, ಸ್ಪಟಿಕದಂತೆ ಪಾರದರ್ಷಕವಾಗಿದೆ(transparent).... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಸ್ಪಟಿಕದ ಹಿಂದಿರುವ ಹೃದಯಗಳು ಈಗ ಕಾಣುತ್ತೆ ನೋಡಿ..ನಾಗೇಂದ್ರ ಇವತ್ತು ಕವನಳ ಬಾಳಲ್ಲಿ ಅವಳ ಹೃದಯವನ್ನು ಮೀಟುವ ಹುಡುಗನೊಬ್ಬ್ಸ ಬರುತ್ತಿದ್ದಾನೆ...ನಿಮಿಗೆ ಬೇಸರವಾಗ್ಬೋದೇನೊ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಸ್ಯಾಡಿಸ್ಟ್ ಗಳೆ ತುಂಬಿದಾರೆ :) .. ನೀವು, ಶ್ರಿ ಹರ್ಷ, ಇಂಚರ... ಕರ್ಮ ಕಾಂಡ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕ್ರೀ ನಾಗೇಂದ್ರ, ನನಗೆ ಬೈತಿದ್ದೀರಿ. ನಾನೇನು ಮಾಡಿದೆ? ಮಾಲತಿ ನಿಮ್ಮ ಕಾದಂಬರಿ ಚೆನ್ನಾಗಿ ಮೂಡಿ ಬರ್ತಿದೆ. :-) ನನ್ನ ಕಾದಂಬರಿ ಮುಂದುವರೀತಾನೇ ಇಲ್ಲ. :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನನ್ನ ಕಾದಂಬರಿ ಮುಂದುವರೀತಾನೇ ಇಲ್ಲ.>>
ಅದು ಮುಂದುವರೆಯಲ್ಲ ಕಣ್ರೀ , ನೀವು ಮುಂದುವರೆಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೆ! ಹೌದಲ್ವಾ. ನಾನು ಮುಂದುವರೆಸಬೇಕು. ಗೊತ್ತೇ ಆಗಲಿಲ್ಲಾ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಗೊತ್ತಾಗೋಕೆ ಇಷ್ಟು ದಿನ , ಇನ್ನು ಕಥೆ ಮುಂದುವರೆಯೋಕೆ ಅದೆಷ್ಟು ದಿನವೋ ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ! ಅವ್ರು ಮರೆತಿದ್ರು, ನೀನ್ ಮತ್ತೆ ನೆನಪಿಸಿ ಬಿಟ್ಯಾ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬರೆದಿಲ್ಲ ಅನ್ನೋದು ನಿಮಗಿನ್ನೂ ನೆನಪಿದೆಯಾ :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ... ಯಾಕಾ?? ಪಾಪದ ಹಸಿಗೂಸಿನಂತಹ ಹುಡುಗಿಗೆ, ಇಬ್ಬಿಬ್ರು ಬಾಯ್ ಪ್ರೆಂಡ್ ಕೊಡ್ಸಿ, ಇಬ್ರ ಹತ್ರಾನು ಅನ್ಯಾಯ ಮಾಡ್ಸೊ ನೀವು ಸ್ಯಾಡಿಸ್ಟ್ ಅಲ್ದೆ ಮತ್ತೇನು.. ಸಂಪದದಲ್ಲೇನು ಎಲಿಜಿಬಲ್ ಬ್ಯಾಚೆಲರ್ಸ್ ಗೆನು ಕಡಿಮೇನಾ??
(ತಮಾಷೆಗೆ)..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗೇ ಇಬ್ಬರಿಬ್ಬರು ಹುಡುಗರು ಒಂದೇ ಹುಡುಗಿಯ ಹಿಂದೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗೇಂದ್ರ ನಾನ್ಯಾಕೆ ಸ್ಯಾಡ್ಯಿಸ್ಟ್ ಆಕ್ತೀನಿ..
ಸ್ಪಟಿಕ ನನ್ನ ಕನಸು..ಕವನ ನನ್ನ ಕಲ್ಪನೆಯ ಹುಡಿಗೆ ಅವಳನ್ನು ವಾಸ್ತವವಾಗಿ ನೆನೆದರೆ ಎಂಥವರಿಗು ಅವಳು ಮೆಚ್ಚುಗೆಯಾಗುತ್ತಾಳೆ..ಅದುಕ್ಕೆ ನಿಮ್ಮ ಬಾಳಲ್ಲು ಅಂತ ಹುಡಿಗಿನೆ ಸಿಗಲಿ ಎಂದು ಹಾರೈಸುತ್ತೀನಿ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಕ, ನಿಮಗೊಂದು ಖಾಸಗಿ ಮಿಂಚಂಚೆ ಕಳ್ಸಿದಿನಿ.. ದಯವಿಟ್ಟು ಓದಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಕಥೆಯಾಯ್ತಲ್ರೀ....

ಕಥೆ ಬರಿಯೋದಲ್ದೇ.. ಸ್ಯಾಡಿಸ್ಟ್ ಅಂತ ಬೇರೆ ಅನಿಸ್ಕೊಬೇಕಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ.. ತಮಾಷೆಗೆ ಹೇಳ್ದೆ.. ಮನಮುಟ್ಟುವ ಹಾಗೆ ಇರುತ್ತೆ ನಿಮ್ ಬರವಣಿಗೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊತ್ತಾಯ್ತು..ಮೆಚ್ಚುಗೆಗೆ ಶರಣು.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಮಾಲ್ತಕ್ಕ ಕಾದ೦ಬರಿಯ ೬ ಭಾಗಗಳನ್ನ ಒ೦ದೇ ಗುಕ್ಕಿಗೆ ಓದುಮುಗಿಸ್ದೆ.ಓದಿಸ್ಕೊ೦ಡು ಹೋಯ್ತು ಜೊತೆಗೆ ಕುತೂಹಲನೂ ಉಳಿಸಿದೆ
ಬೇಗನೆ ಉಳಿದ ಭಾಗಗಳನ್ನ ಪೇರಿಸಿಬಿಡಿ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಯಿಸಿದ ಎಲ್ಲರಿಗು ನನ್ನ ಧನ್ಯವಾದಗಳು...ಆಫೀಸ್ ನಲ್ಲೆ ಸಮಯವನ್ನು ಹೊಂದಿಸಿಕೊಂಡು ಅದನ್ನು ಮುಂದುವರೆಸ ಬೇಕು ಆದ್ದರಿಂದ ಎರಡು ದಿನಕ್ಕೊಂದು ಭಾಗದಂತೆ ಹಾಕುತ್ತೇನೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರ ಮುನ್ದಿನ ಭಾಗ ಅನ್ದ್ರೆ ಸ್ಪಟಿಕ ಎಸ್ಟೇಟ್-೭ ಯಾವಗ ಸೆರ್ಸ್ತಿರ ನನ್ ಅನ್ಥು ವೈಟ್ ಮಡ್ತಿದ್ದಿನಿ............ ಮಾಲತಿ ಅಕ್ಕ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.