ಸ್ಪಟಿಕ ಎಸ್ಟೇಟ್-೫

0

ರಾಮಮುರ್ತಿ ಮಗಳ ಒಪ್ಪಿಗೆಯನ್ನು ಪಡೆದು ಶಂಕ್ರಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿ ಗಂಡಿನ ಕಡೆಯರು ಯಾವಾಗ ಬರುತ್ತಾರೆ ಎಂದು ತಿಳಿಸುವಂತೆ ಹೇಳಿದರು..ಮನಸ್ಸು ನಿರಾಳವಾಯಿತು..ಶಾರು ....ಬಂದೆ..ಏನ್ಹೇಳಿ? ಶಂಕ್ರಣ್ಣಂಗೆ ವಿಷ್ಯ ತಿಳ್ಸಿದೀನಿ ಇನ್ನೊಂದೆರಡು ಘಂಟೆಲಿ ಗಂಡಿನಕಡೆಯವರ ಜೋತೆ ಮಾತಡಿ ಯಾವಾಗ ಬರ್ತಾರೆ ಅಂತ ತಿಳುಸ್ತಾಂರಂತೆಕಣೆ..ಒಳ್ಳೆದೆ ಆಯ್ತು ಬಿಡಿ..ಎಂದು ರಾತ್ರಿಯ ಅಡುಗೆ ನೆನೆದು ಒಳ ನಡೆದರು..ರಾಮಮುರ್ತಿ ಪೇಪರ್ ಓದಲು ತಯಾರಾದರು...ಕವನ ಯಾವುದೊ ಪುಸ್ತಕ ತಿರುವಿಹಾಕುತ್ತಿದ್ದಳು...ಸುಮ ಅಮ್ಮನ್ ಜೊತೆ ಅಡುಗೆ ಮನೆಯಲ್ಲಿ ಸಹಾಯ ಮಾಡಲನುವಾದಳು...ಸುಮಿ ಹುಡುಗನ ಬಗ್ಗೆ ಏನನ್ನುಸ್ತೆ ನಿನಿಗೆ.ಎಂದು ಕೆನ್ನೆ ಹಿಂಡಿದರು..ನಾಚಿದವಳಂತೆ ತಕ್ಷಣ ಗಂಭೀರದಿಂದ ನೋಡೋಕೇನೊ ಚೆನಾಗಿದರೆ, ಗುಣ ಹೇಗೆ ಅಂತ ಹೇಳ್ಲಮ್ಮ?..ಅದ್ರು ಬಗ್ಗೆ ನೀನೆ ನು ಯೋಚ್ನೆ ಮಾಡ್ಬೇಡ ಹುಡುಗನ ಗುಣ ತುಂಬಾ ಒಳ್ಳೆದಂತೆ ಕಣೆ ನಮ್ ಶಂಕ್ರಣ್ಣನೆ ಹೇಳ್ಲಿಲ್ವ..ಅದು ಅಲ್ದೆ ಜೋಯಿಸ್ರು ನಿಮ್ಮಿಬ್ರು ಜಾತಕ ನೋಡಿ ತುಂಬಾ ಚೆನಾಗಿ ಕೂಡಿಬರುತ್ತೆ ಅಂತ ಹೇಳಿದಾರ್ ಕಣೆ..ಏನೊ ಆ ದೇವರ್ ದಯೆಯಿಂದ ಎಲ್ಲ ಸೂಸೂತರವಾಗಿನಡುದ್ರೆ ಅಷ್ಟೆ ಸಾಕು..ಅದು ಇದು ಮಾತನಾಡುತ್ತ ಹೊತ್ತು ಹೋಗಿದ್ದೆ ತಿಳಿಯಲಿಲ್ಲ ಮಾತನಾಡುತ್ತಲೆ ಊಟ ಮುಗಿಸಿ ಎಲ್ಲರು ಹೊರ ಬಂದರು ಟ್ರಿಣ್..ಟ್ರಿಣ್..ಫೋನು ರಿಂಗಾಯಿಸಿತು...ರಾಮಮುರ್ತಿ ಬಂದು ರಿಸಿವರ್ ತೆಗೆದು ಕೊಂಡರು..ಹಲೋ ಭಾವ ನಾನು ಶಂಕ್ರಣ್ಣ....ಹೊಂ ಹೇಳಪ ಗೊತ್ತಾಯ್ತು...ಭಾವ ಹುಡುಗಕಡೆಯವ್ರಿಗೆ ವಿಷಯ ತಿಳುಸ್ದೆ..ಅವರು ಜಾತಕ ಎಲ್ಲ ತೋರ್ಸಿದ್ರಂತೆ...ಎಲಾ ಥರದಲ್ಲು ಕೂಡಿಬಂದಿದಿಯಂತೆ ತುಂಬಾ ಖುಷಿಯಾಗಿದಾರೆ ಭಾವ...ನಾಳೆ ಸೋಮವಾರನೆ ಬರ್ತಾರಂತೆ ಸುಮಿನ ನೋಡಕೆ.....ಅವರಿಗೆ ಆದಷ್ತು ಬೇಗ ಮದುವೆನು ಮಾಡ್ಕೊ ಯೋಚನೆ ಇದೆ ಭಾವ....ಒಳ್ಳೆದೆ ಆಯ್ತು ಬಿಡು ಶಂಕ್ರು...ನೀನು ಬರ್ತೀಯಲ ಅವ್ರ್ ಜೊತೆ? ಎಯ್ ಮತೆ ನಾನು ಬೇಗ ಬರ್ತೀನಿ ಬಿಡಿ ನೀವೇನು ಯೋಚ್ನೆ ಮಾಡ್ಬೇಡಿ..ಅದು ಸರಿ ಎಷ್ಟೊತಿಗೆ ಬರ್ತಾರಂತೆ ಎಷ್ಟೊ ಜನ ಬರ್ತಾರಂತೆ....ತುಂಬಾ ಸಿಂಪಲ್ಲ್ ಜನ ಭಾವ ಅವ್ರು ನನು ಬೇಗ ಹೋಗಿರ್ತೀನಿ ಅಂತ ಹೇಳಿದ್ದಕ್ಕೆ..ಹುಡುಗ, ಅವ್ನ್ ತಂದೆ ತಾಯಿ ,ಹುಡುಗನ ಸ್ನೇಹಿತ ಬರ್ತಾರಂತೆ..ಬೆಳಿಗ್ಗೆ ೧೦:೩೦ ಅಶ್ಟೊತಿಗೆ ಬರ್ತಾರಂತೆ...ಸರಿ ಬಿಡು ನೀನು ಬೇಗ ಬಂದ್ಬಿಡು..ಸರಿ ಭಾವ ನಾನು ಬೆಳಿಗ್ಗೆ ೮ ಘಂಟೆಗೆಲ್ಲ ಅಲ್ಲಿರ್ತೀನಿ...ಎಂದು ಮಾತು ಮುಗಿಸಿದ.ಶಾರು ಗಂಡಿನ ಕಡೆಯವರು ಸೋಮವರ ಬೆಳಿಗ್ಗೆ ೧೦:೩೦ ಬರ್ತಾರಂತೆ ಶಂಕರಣ್ಣ ಬೇಗ ಬರ್ತಾನಂತೆ ಇನ್ನು ಎರ್ಡು ದಿನ ಟೈಮಿದೆ..ಏನೇನ್ ತಯಾರಿಬೇಕೊ ಮಾಡ್ಕೊಳೋಣ....ಸಾಮಾನ್ ಏನಾದ್ರು ಬೇಕಿದ್ರೆ ಪಟ್ಟಿ ಮಾಡಿಡು ಶನಿವಾರ ಸಾಯಂಕಾಲ ತಂದ್ಬಿಡಣ..ಸರಿನ.. ಶಾರದಮ್ಮ ಸಂತೋಷದಿಂದ ನಗುತ್ತ ಆಯ್ತು ಎಂದು ತೆಲೆಯಾಡಿಸಿದರು.
ಬೆಳಿಗ್ಗೆ ಎಂದಿನಂತೆ ರಾಮಮುರ್ತಿ ಎಸ್ಟೇಟಿಗೆ ಹೋದರು..ರಾಯರನ್ನು ಕಂಡು ವಿಷ್ಯ ತಿಳಿಸುವುದು ಅವರ ಉದ್ದೇಶವಾಗಿತ್ತು..ರಾಯರು ಆಗಲೆ ಕೆಲಸದವರ ಹತ್ತಿರ ಮಾತಾನಾಡುತ್ತಿದ್ದಿದ್ದು ಕಂಡು ಬಳಿನಡೆದರು..ರಾಯರು ಎಂದಿಗಿಂತ ಸಂತೋಷದಿಂದ ಇರುವುದು ಕಂಡು ಆಶ್ಚರ್ಯವಾಯಿತು.....ರಾಮಮುರ್ತಿ ಬರುವುದು ಕಂಡು ಅವರೆ ಬೇಗ ಬೇಗ ಇವರ ಬಳಿ ನಡೆದು ಬಂದರು...ರಾಮು ರಾಮು ಒಂದು ಸಂತೋಶದ ಸುದ್ದಿ ಕಣೊ..ಏನ್ ರಾಯ್ರೆ ಅದು ಇಷ್ಟೊಂದು ಖುಷಿಯಾಗಿದೆ ಅಂದೆ ಅದು ಸುಹಾಸ್ ವಿಷ್ಯನೆ ಆಗ್ರ್ಬೇಕು...ಹೌದಲ್ವೊ..ಹೌದು ರಾಮು ಆದೇವ್ರು ಕೊನೆಗು ಈ ೫ ವರ್ಷದ ವನವಾಸ ಮುಗುಸ್ಬಿಟ್ಟ....ಹೆಗಲ ಮೇಲೆ ಕೈಹಾಕುತ್ತ ರಾತ್ರಿ ಸುಹಾಸ್ ಫೋನ್ ಮಾಡಿದ್ದ ಕಣೊ...ವಿವರಿಸಲಾರಂಭಿಸಿದರು...ರಾತ್ರಿ ಹನ್ನೊಂದರ ಸಮಯ ರಾಯರು ನಿದ್ದೆ ಬರದೆ ಹೊರಳಾಡುತ್ತಿದ್ದರು..ಯಾಕೊ ಗಾಳಿಗೆ ಹೋಗಬೇಕೆನಿಸಿ ಬಾಲ್ಕನಿಗೆ ಬಂದು ನಿಂತರು ಆಗಲೆ ಫೋನ್ ರಿಂಗಣಿಸಿದ್ದು ಕೇಳಿಸಿತು..ಇಷ್ಟೊತ್ತಿನಲ್ಲಿ ಯಾರಿರಬಹುದು ಎಂದು ಯೋಚಿಸುತ್ತ..ಭವಾನಿಯತ್ತ ನೋಡಿದರು..ಆಗಲೆ ಗಾಢನಿದ್ರೆಯಲ್ಲಿದ್ದಳು..ಅವಳಿಗೆ ಎಚ್ಚರವಾಗ್ದಿರಲೆಂದು..ಕೆಳಗಡೆ ಬಂಡು ಫೋನ್ ತೆಗೆದುಕೊಂಡುರು ಹಲೋ....ಹಲೋ ಅಪ್ಪ ನಾನು ಸುಹಾಸ್..ತಮ್ಮ ಕಿವಿಯನ್ನೆ ನಂಬದಾದರು...ಸುಹಾಸ್ ನೀನಾಪ...ಹೇಗಿದ್ದೀಯೊ ಮಗನೆ....ಹೂಂ ಅಪ್ಪ ಚೆನಾಗಿದೀನಿ ನೀವೇಗಿದ್ದೀರ? ಅರಾಮ...ನೀನಿಲ್ದೆ ನಾವು ಹೇಗೆ ಚೆನಾಗಿರೋಕೆ ಸಾಧ್ಯನಪ? ಯಕೊ ದುಃಖ ಒತ್ತರಿಸಿಬಂದಂತಾಯಿತು..ಮಾತುಗಳು ಹಾಗೆ ತುಂಡಾದವು..ಅಪ್ಪ ಆಪ್ಪ್ ಅತ್ತಲಿಂದ ಧ್ವನಿ..ಕೂಗುತ್ತಲೆ ಇತ್ತು..ಸಾವರಿಸಿಕೊಂಡು ಹೇಳು ಸುಹಾಸ್ ನೀನ್ ಚೆನಾಗಿದೀಯ ಮಗನೆ ಎಂದರು..ಇಲ್ಲ ಅಪ್ಪ ನಾನು ಅಷ್ಟೆ...ಇಲ್ಲ ಇಲ್ಲ ನಾನು ಚೆನಾಗಿದೀನಿ ..ಅಮ್ಮ ಹೇಗಿದಾರೆ.ಮೊದಲ ಬಾರಿ ಅಮ್ಮನನ್ನು ಕೇಳಿದ್ದ...ಸಂತೋಷವಾಯಿತು ರಾಯರಿಗೆ..ಇದಾಳೆ ಕಣೊ ನಿನ್ ನೆನೆಪಲ್ಲೆ ದಿನಿದಿನಕ್ಕೆ ಮೌನಿಯಾಕ್ತ ಇದಾಳೆ..ಯಾರ್ಜೊತೆನು ಅಷ್ಟು ಮಾತಾಡಲ್ಲ..ಅವಳ್ದೆ ಲೋಕದಲ್ಲಿರ್ತಾಳೆ..ಇರ್ಲಿ ಬಿಡು ಅವತ್ತು ಅವ್ಳಿಗೆ ಅವಳ ಹಠ ಹೆಚ್ಚಾಯ್ತು ಇವತ್ತು ನಿನಿಗೆ ನಿನ್ ಹಠ ಹೆಚ್ಚಾಗಿದೆ ಅಷ್ಟೆ...ಮಧ್ಯೆ ನಾನು...ನಿಟ್ಟುಸಿರುಬಿಟ್ಟರು...ಅಪ್ಪ ಹಾಗೇಳ್ಬೇಡಿ..ನಾನು ಬದಲಾಗಿದೀನಪ..ನಾನೀಗ್ಯಾಕೆ ಫೋನ್ ಮಾಡ್ದೆ ಗೊತ್ತ..ನಾನು indiaಗೆ ವಾಪಸ್ ಬರ್ತಾ ಇದೀನಪ......ರಾಯರಿಗೆ ತಮ್ಮ ಉಸಿರೆ ನಿಂತಂತಾಯಿತು....ಯಾವುದು ಕನಸು ಎಂದು ತಿಳಿದಿದ್ದರು ಅದು ನನಸಾಗುತ್ತಿದೆ..ಏನ್ ಹೇಳ್ದೆ ಇನ್ನೊಂದ್ಸಾರಿ ಹೇಳು...ಹೌದಪ ನನಿಗು ನನ್ನ ತಪ್ಪಿನ ಅರಿವಾಗಿದೆ ಅಪ್ಪ ಆದ್ರೆ ಒಂದು ಮಾತು ಅಮ್ಮ ನನಿಗೆ ಇನ್ನಯಾವುದಕ್ಕು ಒತ್ತಾಯ ಮಡ್ಬಾರ್ದು ಅಷ್ಟೆ...ಅಯ್ಯೊ ಅಯ್ಯೊ ನೀನು ಒಂದ್ಸಾರಿ ಇಲ್ಲಿಗೆ ಬಂದು ನೋಡು ಮತ್ತೆ ನಿನ್ನುನ್ನ ಮಗು ಥರ ನೋಡ್ಕೊತಾಳೆ ತುಂಬಾ ಬದಲಾಗಿದಾಳೆ ಕಣೊ ನಿಮ್ಮಮ್ಮ ..ತಡಿ ತಡಿ ಅವಳುನ್ನ ಕರಿತೀನಿ...ಈ ವಿಷ್ಯ ತಿಳುದ್ರೆ...ಭವಾನಿ ಭವಾನಿ..ಅಪ್ಪ ಅಪ್ಪ.. ಅಮ್ಮ್ಮ ಮಲ್ಗಿದ್ರೆ ಎದ್ದೆಳ್ಸ್ ಬೇಡಿ ಮುಂದಿನ ವಾರಾನೆ ಬರ್ತಾ ಇದೀನಿ..ಆಗ್ಲೆ ಮಾತಾಡ್ತೀನಿ....ಇಲ್ಲಿ ಆಗ್ಲೆ ಎಲ್ಲ ತಯಾರಿನು ಮಡ್ಕೊಂಡಾಗಿದೆ...ಸರಿನ. ಬೆಳಿಗ್ಗೆ ಅಮ್ಮಂಗೆ ವಿಷ್ಯ ತಿಳ್ಸಿ..ಮುಂದಿಂದು ಬಂದ ಮೇಲೆ ಮಾತಾಡೋಣ...ಸರಿ ಆಗ್ಲೆ ಲೇಟಾಗಿದೆ ನೀವು ಮಲಿಗಿ ಆಯ್ತ....ನನ್ ಕಂದ ದೇವರು ನಿನಿಗೆ ಚೆನಾಗಿಟ್ಟಿರ್ಲಪ್ಪ..ಸರಿ ಸರಿ ನೀನು ಮಲ್ಕೊ..ಎಂದು ಖುಷಿಯಿಂದ ಫೋನಿಟ್ಟು.. ಒಂದೆ ಉಸಿರಿಗೆ ಮೇಲೆ ಓಡಿದರು..ಭವಾನಿ ಗಾಢ ನಿದ್ರೆಯಲ್ಲಿದ್ದಳು..ಅವಳಿಗೆ ಈಗಲೆ ಎಬ್ಬಿಸಿ ವಿಷ್ಯ ತಿಳಿಸಲ ಅಥವ ಬೆಳಿಗ್ಗೆ ತಿಳಿಸಲ ಬೇಡ ಬೇಡ ಈಗಲೆ ತಿಳಿಸುವುದು ಉತ್ತಮ.. ಪಾಪ ಖುಷಿಪಡುತ್ತಾಳೆ..ಭವಾನಿ ಭವಾನಿ ಮೆಲ್ಲಗೆ ಕರೆದರು...ಯಾವತ್ತು ಹಾಗೆ ಎಬ್ಬಿಸದ ರಾಯರು ಇಂದು ಎಬ್ಬಿಸಿದ್ದನ್ನು ಕಂಡು ...ಕಣ್ಣು ಬಿಡುತ್ತ ಪ್ರಶ್ನಾರ್ಥಕವಾಗಿ ಅವರನ್ನು ನೋಡುತ್ತ ಎದ್ದು ಕುಳಿತಳು...ಭವಾನಿ ಸುಹಾಸ್ ಫೋನ್ ಮಾಡಿದ್ದ ಕಣೆ...ಸಂತಸದ ಸುದ್ದಿ ಕೇಳಿದಂತೆ ಹೌದ ಯಾವಾಗ ಏನ್ ವಿಷ್ಯ ಹೇಗಿದ್ದಾನೆ? ತಡಿ ಭಾವನಿ ಪೂರ್ತಿ ಕೇಳು..ನಮ್ ಸುಹಾಸ್ ಮುಂದಿನವಾರನೆ indiaಗೆ ಬರ್ತಾಇದಾನಂತೆ ...ಎಂದು ಎಲ್ಲ ವಿಷ್ಯ ತಿಳಿಸಿದರು..ಭವಾನಿಯ ಮನಸ್ಸು ಹುಚ್ಚೆದ್ದು ಕುಣಿಯಿತು ...ರಂಗನಾಥ್ ರಂಗನಾಥ ಅವನಿಗೆ ನನ್ ಮೇಲೆನು ಬೇಜಾರಿಲ್ಲ ತಾನೆ..ಅವಳ ಕಣ್ಣೂಗಳು ತುಂಬಿ ಬಂದವು ಇಲ್ಲ ಭವಾನಿ ಆದ್ರೆ ..ಅದ್ರೆ ಏನ್ ರಂಗನಥ್?ಏನು ಇಲ್ಲ ಅವನು ಇಲ್ಲಿಗೆ ಬಂದ್ ಮೇಲೆ ನೀನು ಯವುದಕ್ಕು ಅವನಿಗೆ ಒತಾಯಮಾಡ್ಬಾರ್ದು ಅಂತ ಹೇಳಿದಾನೆ ಎಂದು ಅಳುಕುತ್ತಲೆ ಹೇಳಿದರು..ಇಲ್ಲ ರಂಗನಾಥ್ ನಿಮಿಗೊತ್ತಲ್ವ ನಾನು ಎಷ್ಟು ಬದಲಾಗಿದೀನಿ ಅಂತ..ಅವ್ನು ಇಲ್ಲಿಗೆ ಬಂದ್ರೆ ಸಾಕು ಅವರ ಕೈ ಇಡಿದು ಕಣ್ಣೀರಿಟ್ಟಳು..ಅಯ್ಯೊ ತಾಯಿ ಕರುಳೆ ಅನಿಸಿತು..ಸಮಾಧಾನ ಪಡಿಸುತ್ತ....ಇನ್ನು ಯೋಚನೆ ಎಲ್ಲ ಮಾಡ್ಬೇಡ..ಅರಾಮಾಗಿ ಇದ್ರೆ ಮಾಡು ಎಂದರು ..ರಂಗನಾಥ್ ಸುಹಾಸ್ ಯಾವತ್ತು ಬರ್ತಾನಂತೆ..ಅವನಿಗೆ ಮೇಲ್ಗಡೆ ರೂಮನ್ನೆ ರೆಡಿಮಾಡ್ಬಿಡಣ....ಮತ್ತೆ ಅವನು ಬರೊದ್ರೊಳಗೆ ಹೊಸ ಕಾರು ತಂದ್ಬಿಡೋಣ..ಹಾಗೆ ಹೀಗೆ ..ಮಾತನಾಡುತ್ತಲೆ ಇದ್ದಳು....ಇಷ್ಟೆ ನೋಡು ರಾತ್ರೆ ನಡ್ದಿದ್ದು...ರಾಮು ರಾಮು ಬೆಳಿಗ್ಗೆ ಇಂದ ಭವಾನಿ ಸಡಗರ ನೋಡೊಕಾಕ್ತಿಲ್ಲ..ಏನ್ ಓಡಾತ ಅಂತೀಯ..ಮನೆ ಎಲ್ಲ ಸಿಂಗರಿಸುತ್ತಿದ್ದಾಳೆ...ಎಂದು ಬಂಗಲೆ ಕಡೆ ಮುಖ ಮಾಡಿ ನಕ್ಕರು..ತುಂಬಾ ಸಂತೋಷ ರಾಯ್ರೆ....ಇದುಕ್ಕಿಂತ ಇನ್ನೇನ್ ವಿಷ್ಯ ಇದೆ...ಆ ದೇವ್ರು ಈ ಸಂತೋಷನ ಹಾಗೆ ಇಟ್ಟಿರ್ಲಿ.....ಅಂದು ಪೂರ್ತಿ ರಾಯರು ಮಗನ ವಿಷಯವನ್ನೆ ಮಾತನಾಡುತ್ತಿದ್ದರು...ಈ ನಡುವೆ..ರಾಮಮುರ್ತಿಗೆ ಸೋಮವಾರ ಮಗಳನ್ನು ನೋಡಲು ಬರುತ್ತಿರುವ ವಿಷ್ಯ ತಿಳಿಸಲು ಸಮಯವೆ ಸಿಗಲಿಲ್ಲ...ಸಂಜೆ ಮನೆಗೆ ಹೋಗುವ ಹೊತ್ತಲ್ಲಿ ತಿಳಿಸಿದರು..ರಾಯ್ರೆ ಸೋಮವಾರ ನಾನು ಎಸ್ಟೇಟಿಗೆ ಬರಲ್ಲ ಎಂದು ತಿಳಿಸಿದರು ..ನೋಡ್ದ್ಯ ನನ್ ಸಡಗರದಲ್ಲಿ ನಿನ್ ವಿಷ್ಹ್ಯನೆ ಮರ್ತ್ ಬಿಟ್ಟೆ..ಅದುಕ್ಕೆ ರಜ ಕೇಳ್ಬೇಕೇನಯ್ಯ ನೀನು.. ಅರಾಮಾಗಿ ಎಲ್ಲ ಕೆಲ್ಸ ಮುಗುಸ್ಕೊಂಡು ಬಾ ಎಲ್ಲ ಒಳ್ಳೆದಾಗ್ಲಿ..ಏನಾದ್ರು ಸಹಾಯ ಬೇಕಾದ್ರೆ ಕೇಳು..ಸಂಕೋಚ ಬೇಡ ಎಂದರು.
ಶಾರದಮ್ಮ ಆಗಲೆ ಮನೆಗೆ ಬೇಕಾದ ಸಾಮಾನಿನ ಪಟ್ಟಿಯನ್ನೆಲ್ಲ ಮಾಡಿ...ಸುಮಿ ..ಕವನ ಎಂದು ಕೂಗಿದರು ಏನಮ? ಅನ್ನುತ್ತ ಇಬ್ಬರು ಬಂದರು..ನಗುತ್ತ ಸುಮಿ ಸೋಮವಾರ ಅವ್ರೆಲ್ಲ ಬರ್ತಾರಲ ಯಾವ್ ಸೀರೆ ಉಡ್ಕೊಂತೀಯೆ? ನೀನೆ ಹೇಳಮ ಯಾವ್ದು ಅಂತ ಎನ್ನುತ್ತ ಅವರ ಹೆಗಲ ಮೇಲೆ ತೆಲೆಯಿಟ್ಟಳು? ಕವನ ..ಅಕ ನೀನು ಆ ಕನಕಾಂಬರ ಕಲರ್ ರೇಷ್ಮೆ ಸೀರೆ ಇದಿಯಲ ಅಮ್ಮಂದು ಅದುನ್ನ ಉಡ್ಕೊ ತುಂಬಾ ಚೆನಾಗಿ ಒಪ್ಪುತ್ತೆ ನಿನಿಗೆ ಆ ಬಣ್ಣ ..ಅಷ್ಟು ದೊಡ್ಡ ಜರಿ ಬಾರ್ಡರದು...ಹೌದೆ ಸುಮಿ ಆ ಬಣ್ಣ ನಿನಿಗೆ ಚೆನಾಗೊಪ್ಪುತ್ತೆ ಅದುಕ್ಕೆ ಮ್ಯಾಚಿಂಗ ಬ್ಲೌಸ್ ಹೊಲಿಸ್ಕೊಂಡೀದೀಯಲ..ಸರಿ ಎಂದು ತೆಲೆಯಾಡಿಸಿದಳು..ನಾಳೆ ಚೆನ್ನಾಗಿ ಎಣ್ಣೆ ಹಾಕ್ಕೊಂಬಿಡು ತೆಲೆಗೆ..ಸೋಮವಾರ ಬೆಳಿಗ್ಗೆನೆ ನೀರು ಹಾಕ್ಕೆವಂತೆ ಎಂದರು ಸರಿ..ಬಾರೆ ಸುಮಿ ಎಲ್ಲ ರೆಡಿಮಾಡ್ಕೊಳೊಣ ಎಂದು ಅಕ್ಕನನ್ನು ಕರೆದು ರೂಮಿಗೆ ಓಡಿದಳು..ಸುಮಿನು ಹಿಂದೆನೆ ಬಂದಳು..ಬೀರುವನ್ನು ತೆಗೆದು ಸೀರೆ ಹೊರತೆಗೆದಳು ಕನಕಾಂಬರ ಬಣ್ಣದ ದೊಡ್ಡ ಜರಿಯಂಚಿನ.ಸಣ್ಣ ಸಣ್ಣ ಹೂಗಳು ಸೀರೆ ತುಂಬಾ ಚೆನ್ನಾಗಿತ್ತು..ಹಾಗೆ ಹಿಡಿದು ಕನ್ನಡಿಯಲ್ಲೊಮ್ಮೆ ನೋಡಿದಳು ಹೌದು ಚೆನ್ನಾಗಿ ಕಾಣುತ್ತದೆ ಎನಿಸಿತು...ಅಷ್ಟರಲ್ಲಿ ಶಾರದಮ್ಮ ದೊಡ್ಡ ಪದಕದ ಮುತ್ತಿನ ಸರ ಬಳೆ ಉಂಗುರಗಳನ್ನು ಜುಮುಕಿಯನ್ನು ತಂದರು ಸುಮಿ ಆ ಸೀರೆಗೆ ಈ ಮುತ್ತಿನ ಸೆಟ್ ತುಂಬಾ ಚೆನ್ನಾಗಿ ಒಪ್ಪುತ್ತೆ ಕಣೆ ಇದುನ್ನೆ ಹಾಕ್ಕೊ...ಎಂದು ಕೈಗಿತ್ತರು..ಸರಿ ಎಂದು ತೆಲೆಯಾಡಿಸಿದಳು.ಅಷ್ಟರಲ್ಲಿ ರಾಯರು ಒಳ ಬಂದರು ಇವರ ಸಂಭ್ರಮ ಕಂಡು ಏನು ಆಗಲೆ ಮದುಮಗಳ ಕಳೆ ಬಂದ್ಬಿಟ್ಟಿದೆ ಎಂದು ಸುಮಳಿಗೆ ತಮಾಷೆ ಮಾಡಿದರು.ಎಲ್ಲರು ನಕ್ಕರು...ಶಾರದಮ್ಮ ಗಂಡನಿಗೆ ಕಾಫಿತರಲು ಒಳನಡೆದರು.ರಾಮಮುರ್ತಿ ಬಟ್ಟೆ ಬದಲಾಯಿಸಿ ಮುಖ ತೊಳೆದು ವರಾಂಡದಲ್ಲಿ ಬಂದು ಕುಳಿತರು..ಶಾರದಮ್ಮ ಬಿಸಿ ಬಿಸಿ ಹಬೆಯಾಡುವ ಉಪ್ಪಿಟ್ಟು ಕಾಫ್ಹಿ ತಂದು ಗಂಡನ ಕೈಗಿಟ್ಟರ್ರು..ಏನೋಂದ್ರೆ ಸಾಮಾನಿನಪಟ್ಟಿ ಮಾಡಿದೀನಿ ಎಂದು ಅವರ ತಿಂಡಿ ಕಾಫಿಯನಂತರ ಕೈಗಿಟ್ಟರು...ಪಟ್ಟಿಯಲ್ಲೊಮ್ಮೆ ಕಣ್ಣಾಡಿಸಿ....ಏನ್ ಮಡ್ಬೇಕು ಅಂತಾ ಇದೀಯ ಶಾರು ಅವ್ರು ಬಂದಾಗ? ತರಕಾರಿ ಎಲ್ಲ ಹಾಕಿ ಉಪ್ಪಿಟ್ಟು ಮಾಡಿ ,ಬಜ್ಜಿ ಮಾಡಿ, ಗಸಗಸೆ ಪಾಯ್ಸ ಮಡೋಣ ಅಂತ ಇದೀನಿ...ಸರಿ ಹಾಗೆ ಮಾಡು ಅವ್ರು ಬೆಳಿಗ್ಗೆ ಬರೋದ್ರಿಂದ ತಿಂಡಿ ತಿಂದೆ ಬಂದಿರ್ತಾರೆ ಅನ್ಸುತ್ತೆ....ಹಾಗೆ ಶಾರು ಇನ್ನೊಂದು ಸಂತೋಶದ ವಿಶ್ಯ ಎಂದು ಸುಹಾಸ್ ಬರುವ ವಿಷ್ಯವನ್ನು ತಿಳಿಸಿದರು...ಹೌದಾ...ಅಬ್ಬ ಅಂತು ದೇವ್ರು ಕಣ್ ಬಿಟ್ನಲ್ಲ ಬಿಡಿ..ಎಂದು ನಿಟ್ಟುಸಿರು ಬಿಟ್ಟರು....ರಾಮಮುರ್ತಿ ನಗುತ್ತ ಪಟ್ಟಿಯಲ್ಲಿರುವ ಸಾಮನು ತರಲು ಹೊರಡಲನುವಾದರು...ಭಾನುವಾರವೆಲ್ಲ ಮನೆಯನ್ನು ಒಂದು ಕಡೆಯಿಂದ ಮಕ್ಕಳಿಬ್ಬರು ಸ್ವಚ್ಚಮಾಡಿದರು..ಅದರಲ್ಲೆ ದಿನವೆಲ್ಲ ಕಳಿಯಿತು
ಸೋಮವಾರ ಶಾರದಮ್ಮ ಎಂದಿಗಿಂತಲು ಬೇಗ ಎದ್ದು ಬಾಗಿಲಿಗೆ ನೀರಾಕಿ..ನೀರು ಕಾಯಿಸಿ.ಸ್ನಾನ ಮಾಡಿಕೊಂಡು ಅವರೆ ದೀಪ ಹಚ್ಚಿದರು ..ಕವನಾನು ಬೇಗ ಎದ್ದಳು .ರಾಮಮುರ್ತಿ ಒಬ್ಬರೆ ವಾಕಿಂಗ್ ಹೊರಟರು ಕವನ ತಾಯಿಗೆ ಹೇಳಿ ತಾನು ಜೊತೆ ಹೊರಟಳು..ಶಾರದಮ್ಮ ದೀಪವಚ್ಚಿ ಸುಮಿಯನ್ನು ಎಬ್ಬ್ಸಿದರು ಸುಮಿ ಏಳಮ್ಮ ೬ ಘಂಟೆ ಆಯ್ತು..ತೆಲೆಗೆ ನೀರು ಹಾಕ್ಕೊಬೇಕು...ಎದ್ದೆ ಎಂದು ಮೈ ಮುರಿಯುತ್ತ ಇಂದಿನ ದಿನವನ್ನು ನೆನೆದು ಉಲ್ಲಾಸದಿಂದ ಎದ್ದಳು.
ಕವನ ಅಪ್ಪನ ಜೊತೆ ತುಂಬಾ ದಿನಗಳ ನಂತರ ವಾಕಿಂಗ್ ಹೊರಟ್ಟಿದ್ದಳು..ಅಪ್ಪ ಬೆಳಿಗ್ಗೆ ಹೊತ್ತು ವಾಕಿಂಗ್ ಮಾಡೋದು ಎಷ್ಟು ಚೆನಾಗಿರುತ್ತಲ..ಹೌದು ಮಗಳೆ ಈ ಬೆಳಿಗ್ಗೆ ಮಾಡೊ ವಾಕಿಂಗ್ ದಿನ ಪೂರ್ತಿ ನಮ್ಮುನ್ನ fresh ಹಾಗಿ ಇರೊಹಾಗೆ ಮಾಡುತ್ತೆ...ಇನ್ನೇನು ನಿನಿಗು ರಜ ಅಲ್ವ ದಿನಾ ಬಾ..ಹೌದಪ ಇನ್ಮೇಲೆ ದಿನಾ ಬರ್ಬೇಕು ಅನ್ಕೊಂಡಿದೀನಿ..ಕವನ , ಏನಪ.. ಒಂದು ವಿಷ್ಯ ಹೇಳ್ಬೇಕು ನಿನಿಗೆ ..ಹೇಗಿದ್ರು ನೀನು ಆಡಿಟರ್ ಹತ್ರ ಪ್ರಾಖ್ಟೀಸ್ ಮಾಡ್ಬೇಕು ಅಂತ ಹೇಳ್ತಾಇದ್ದ್ಯಲ..ಅದ್ರು ಬಗ್ಗೆ ರಾಯ್ರು ಜೊತೆ ಮಾತಡ್ದೆ...ಅವರು ಹೇಳೊ ಪ್ರಕಾರ ಹೇಗಿದ್ರು ಎಸ್ಟೇಟಿಗೆ ಇಬ್ರು ಆಡಿಟ್ ಅಸಿಸ್ಟೆಂಟ್ ಬೇಕು ಆ ಕೆಲ್ಸಾನ ನೀನೆ ಯಾಕ್ ಮಾಡ್ಬಾರ್ದು..ಹೇಗಿದ್ರು ನಾನು ಜೊತೆ ಇರ್ತೀನಿ...ಒಟ್ಟಿಗೆ ಹೋಗಿ ಒಟ್ಟಿಗೆ ಬರ್ಬೋದು..ಏನಂತೀಯ...ನಿಮ್ ಎಸ್ಟೇಟಿಗ ಅಪ್ಪ...ಯಾಕೊ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು..ಯಾಕ್ ಮಗಳೆ ನಿನಿಗೆ ಇಷ್ಟ ಇಲ್ಲ ಅಂದ್ರೆ ಬೇಡ.....ಹಾಗಲ್ಲಪ್ಪ ಆ ಭವಾನಿ ಅಂಟಿ..ಅವಳ ಕಳವಳ ಅರಿತವರಂತೆ ..ಹಾಗೇನು ಇಲ್ಲ ಮಗಳೆ ಅವರು ಈಗ ತುಂಬಾ ಬದಲಾಗಿದ್ದಾರೆ..ಅದ್ರು ಬಗ್ಗೆ ಏನು ಚಿಂತೆ ಮಾಡ್ಬೇಡ...ಅದು ಅಲ್ದೆ ಆಫೀಸಿಗು...ಅವರು ಇರೊ ಬಂಗ್ಲೆಗು ತುಂಬಾನೆ ದೂರ ಇದಿಯಲ ನಿನ್ ಪಾಡಿಗೆ ನೀನ್ ಕೆಲ್ಸ ಮಾಡ್ಬೋದು..ಯೋಚ್ನೆ ಮಾಡು ನಿನಿಗೆ ಒಪ್ಗೆ ಆದ್ರೆ ಸರಿ ಒತ್ತಾಯ ಏನು ಇಲ್ಲ ಸರಿನ ..ಸರಿ ಅಪ್ಪ ಯೋಚನೆ ಮಾಡಿ ಹೇಳ್ತೀನಿ...
ಅಮ್ಮ ಸಾಕಮ...ಅಯ್ಯೊ ಸುಮ್ನಿರು ಎಣ್ಣೆ ಚೆನಾಗಿ ಹಾಕ್ಕೊಂಡು ತೆಲೆಸ್ನಾನ ಮಾಡುದ್ರೆ ಒಂಥರ ಉಲ್ಲಾಸ ಇರುತ್ತೆ ಕಣೆ /..ಹಾಗೆ ಕೂತಿರು ಅರಿಷಿಣ ತರ್ತೀನಿ.....ಅದು ಬೇರೆನ ಅಮ...ಹಾಗೆಲ್ಲ ಅನ್ಬಾರ್ದು ಕಣೆ ..ಬಟ್ಟಲಲ್ಲಿ ಅರಿಷಿಣ ..ಹಾಲಿನಕೆನೆ ಬೆರಸಿ ತ್ಂದರು ..ಅರಿಷಿಣ ಎಣ್ಣೆ ಸ್ನಾನ ಮಾಡಿದ್ರೆ ಆಗ್ ಬರು ಕಳೆನೆ ಬೇರೆ. ಇವತ್ತು ವಿಶೇಷದ ಅಲ್ವ ಅದುಕ್ಕೆ ..ಎಂದು ಮೈ,ಕೈಗೆಲ್ಲ ಹಚ್ಚಿ ತಿಕ್ಕಿದರು...ಅಂತು ಎಣ್ಣೆ ಹರಿಷಿಣದ ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿ..ಕೂದಲನ್ನು ಗಾಳಿಗೆ ಆರಿಸುತ್ತ ಗಾಳಿಗೆ ನಿಂತಳು...
(ಮುಂದುವರೆಯುವುದು)

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಧನ್ಯವಾದಗಳು, ಕವನಂಗೆ ಹೇಳಿ... ಕೇಳಿದೀನಂತ.. ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಹೇಳ್ತೀನಿ, ನಿಮಗೆ ಕವನ ಅಷ್ಟು ಇಷ್ಟ ಆದ್ಲ..ನಿಮಿಗೆ ಅಂಥ ಹುಡ್ಗಿನೆ ಬಾಳ ಸಂಗಾತಿಯಾಗಿ ಸಿಗ್ಲಿ ಎಂದು ಹಾರೈಸುತ್ತೇನೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೆ, ಇಂದಿನ ನಿಮ್ಮ ಬ್ಲಾಗ್ ಓದಿ, ಕುತೂಹಲದಿಂದ ನಿಮ್ಮ ಎಲ್ಲಾ " ಸ್ಫಟಿಕ ಎಸ್ಟೇಟ್" ಓದಿದೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಾತ್ರಗಳ ಸ್ರುಷ್ಟಿ ಅದ್ಭುತ!! ವ್ಯಾಕರಣದ ಕಡೆ ಹೆಚ್ಚು ಗಮನ ಕೊಡಿ. ಒಬ್ಬ ಒಳ್ಳೆಯ ಲೀಖಕಿಯಾಗುವ ಸಾಮರ್ಥ್ಯ ನಿಮ್ಮಲ್ಲಿದೆ. ಮುಂದುವರೆಸಿ, ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ವ್ಯಾಕರಣದಕಡೆ ಗಮನ ಹರಿಸುತ್ತೇನೆ..ಆದರು ಕೆಲವು ಸಾರಿ...ಗೊತ್ತಿಲ್ಲದೆ ತಪ್ಪುಗಳಾಗುತ್ತದೆ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.