ಅವಳ ಮನಸ್ಸು

5

ಇನಿಯ ನಿನ್ನ ತಂಗಾಳಿಯಂತ ಪ್ರೀತಿ

ನನ್ನ ಮನಸನ್ನು ಬಿರುಗಾಳಿಯಂತೆ ಚದುರಿಸಿದೆ.

............................................................

ತಿಳಿಯಾದಕೊಳದಂತಿರುನ ನನ್ನ ಮನಕ್ಕೆ

ನಿನ್ನ ನೆನಪುಗಳು ಕಲ್ಲೆಸದು ಆಟವಾಡುತ್ತಿವೆ.

..........................................................

ಹೀಗೆ ಬಂದು ಹಾಗೆ ಮಿಂಚಿ ಮಾಯವಾದರೆ.

ತಲ್ಲಣಿಸದಿರದೆ ನನ್ನ ಮನವು

ನಿನಗೇಕೆ ಅರ್ಥವಾಗುವುದಿಲ್ಲ ಈ ನೋವು........................................................

ನೀ ಇಲ್ಲದೆ ನಾ ಇರಬಲ್ಲೆ

ನೀ ಇದ್ದು ಇಲ್ಲದಂತೆ ನಾ ಹೇಗೆ ಇರಲಿ ಗೆಳೆಯ .............................................................

ಸ್ವಾರ್ಥವೊ , ಪ್ರೀತಿಯೊ ನಾ ಅರಿಯೆ

ಬದುಕಿನ ಕವಲುಗಳು ಬೇರಾದರು

ಮನ ಬಯಸುತಿದೆ ಬೇರಾದ ಕವಲುಗಳು

ಒಂದಾಗಬಾರದೆ ಎಂದು.

 ......................................................

ಅಂದು ನಾ ಮಾಡಿದ ಪ್ರೀತಿಯ ತ್ಯಾಗ

ಇಂದು ನನ್ನನ್ನೆ ಕೊಂದು ಹಾಡುತಿದೆ ಅಂತ್ಯದ ರಾಗ ..............................................................

ಹುಡುಗಾಟಕ್ಕೆಂದು ಆಡಿದ ಪ್ರೀತಿಯ ಆಟ

ಬೆಳೆದು ಹೆಮ್ಮರವಾಯಿತು

ಇಂದು ನಾ ಕಡಿದರು ಆ ಮರವನ್ನು

ಮತ್ತೆ ಮತ್ತೆ ಚಿಗುರುತಿರುವುದು

ನಾ ಹೇಗೆ ಇಲ್ಲದಾಗಿಸಲಿ ಆ ಬೇರುಗಳನ್ನು

ಉಸಿರೆ ಅದರಲ್ಲಿ ಇರುವುದು.

 ...........................................................

ನಾ ಕೊಟ್ಟೆ ನನ್ನ ಭಾವನೆಗಳಿಗೆ ಅಕ್ಷರಗಳ ರೂಪ

ಕೊನೆಗರಿತೆ ಅಕ್ಷರಗಳೆ ಅರಿಯದ ಹುಡುಗ

ಭಾವನೆಗಳೇನರಿತಾನು ಎಂದು .......................................................

ಹುಚ್ಚು ಮನಸ್ಸು ತನ್ನದೆ ಲೋಕದಲ್ಲಿ ವಿಹರಿಸುವುದು

ವಿಧಿ ತನ್ನ ಅಟ್ಟಹಾಸ ಮೆರೆದಿರುವುದು

ಅದರರಿವಿಲ್ಲದೆ ಮನ ತನ್ನಿನಯನೊಡನೆ ವ್ಯವಹರಿಸುವುದು ................................................................. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಲತೀ, ಇದು ನನ್ನ ಮನಸ್ಸನ್ನು ತಟ್ಟಿದ ಕವನ ಬೇಸರದೊಂದಿಗೆ ಖುಷಿ ನೀಡಿದ ಕವನ! ಸುಮ್ಮನಿದ್ದವನನ್ನು ಕರೆದು ಕೆಣಕಿದಂತೆ ನನಗಾಯ್ತು ನೆನಪಿನಂಗಳದಲ್ಲಿ ಮೈಲುದೂರ ಕೊಂಡು ಹೋಯ್ತು ನೆನಪುಗಳು ಮನದೊಳಗೆ ನಡೆಸುತ್ತವೆ ಸತತ ಸಂಗ್ರಾಮ ಬೇಡವೆಂದರೂ ಕಾಡುವವು ಇರದಲ್ಲಿ ಕಿಂಚಿತ್ತೂ ಆರಾಮ ಅಪರೂಪಕ್ಕೆ ಬರೆದರೂ ನೆನಪು ಮಾಸದಂತಹ ಕವನ ಒಮ್ಮೆಯಷ್ಟೇ ಅಲ್ಲ ಮತ್ತೆ ಮತ್ತೆ ಓದಿಸಿಕೊಂಬ ಕವನ! - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದ ಸುರೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನೆಗಳನ್ನು ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದೀರಿ.ಬರವಣಿಗೆ ಚೆನ್ನಾಗಿದೆ.ಮುಂದುವರೆಸಿ.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೋತ್ಸಾಹಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತೀ, ಒ೦ದು ಸೊಗಸಾದ ಭಾವನಾತ್ಮಕ ಕವನ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚ೦ದನೆಯ ಕವನ ಭಾವದಾಗಸವೇ ಕಾಣ್ತಿದೆಯಲ್ರೀ. ತು೦ಬಾ ಚೆನ್ನಾಗಿದೆ .ಆಕೆಗೊ೦ದು ಮಾತು ಭಾವನೆಗಳ ಮಹಾ ಪೂರದಲ್ಲಿ ಕೊಚ್ಚಿ ಹೋಗದಿರು ಗೆಳತಿ ಸಿಕ್ಕ ಭಾವವೆಲ್ಲವೂ ನಿನ್ನದೇ ನಿನ್ನ ಕೊರಳಿಗೆ ನಿನ್ನದೇ ಭಾವಗಳು ಇ೦ದಿನ ಅಡಿಪಾಯದ ಮೇಲೆ ಮು೦ದಿನ ಚ೦ದದರಮನೆ ಕಟ್ಟು ಹಿ೦ದಿನ ನೆನಪನ್ನು ಚಿತ್ರವಾಗಿಸು ಮತ್ತು ಸುಮ್ಮನೆ ಗೋಡೆಗೆ ನೇತು ಹಾಕು ಬಿದ್ದಿರಲಿ ಅದು ಅಲ್ಲೇ. ಬೇಕೆನಿಸಿದಾಗ ಒಮ್ಮೆ ನೋಡಿ - ಬಿಡು ಕಣ್ಣೀರಾದಾಗ ಬರೆದು ಹರಿದು ಬಿಡು ನನ್ನ ಕಿವಿಯೊಳಗೆ ಉಸಿರಿಬಿಡು ಒಳಗಿನ ಬೆ೦ಕಿ ನಿನ್ನನೇ ಸುಡುವುದು ಮಗು ನಕ್ಕು ಬಿಡು ಜಗವ ನೋಡಿ ನಗು ನಿಮ್ಮವ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನಾ ಕೊಟ್ಟೆ ನನ್ನ ಭಾವನೆಗಳಿಗೆ ಅಕ್ಷರಗಳ ರೂಪ ಕೊನೆಗರಿತೆ ಅಕ್ಷರಗಳೆ ಅರಿಯದ ಹುಡುಗ ಭಾವನೆಗಳೇನರಿತಾನು ಎಂದು" ಸೊಗಸಾದ ಸಾಲುಗಳು.... ಕವನ ತುಂಬ ಚೆನ್ನಾಗಿದೆ ಮಾಲತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[[ನೀ ಇಲ್ಲದೆ ನಾ ಇರಬಲ್ಲೆ ನೀ ಇದ್ದು ಇಲ್ಲದಂತೆ ನಾ ಹೇಗೆ ಇರಲಿ ಗೆಳೆಯ]] ದ್ವಂದ್ವದ ಅನುಭವ ಚೆನ್ನಾಗಿ ಮೂಡಿದೆ. ಪ್ರೀತಿಯನ್ನು ತಿರಸ್ಕರಿಸಿದ್ದರೆ ಚೆನ್ನಿತ್ತು ಎಂಬ ಭಾವವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೇ ಉತ್ತಮ ಭಾವನಾತ್ಮಕ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೆ, ಅಪರೂಪಕ್ಕೆ ಬರೆದರೂ ಒಂದು ನೆನಪಿನಲ್ಲುಳಿಯುವಂಥ ಕವನ ಬರೆದಿರುವಿರಿ. ಓದುತ್ತಾ ಹೋದಂತೆ ಎಮ್.ಎನ್.ವ್ಯಾಸರಾಯರು ಬರೆದ "ನೀ ಇಲ್ಲದೆ, ನನಗೇನಿದೆ" ಭಾವಗೀತೆ ನೆನಪಾಯ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.