ಕೊಕ್ ಕಥೆಯ ಮುಂದುವರೆದ ಭಾಗ

1

ಆ ವ್ಯಕ್ತಿಯ ಕೂಗು ಮೂರ್ತಿಗಳಿಗೆ ಸ್ಪೂರ್ತಿ ಬಂದಂತಾಯಿತು
..ಇನ್ನು ಹೆಚ್ಚು ಗಟ್ಟಿಯಾಗಿ ದುರ್ಗೆಯನ್ನು ಪಠಿಸತೊಡಗಿದರು....
ಇತ್ತ ಸ್ಮಶಾನದಲ್ಲಿ
. ರಾಮಚಾರಿ ತಲೆಗೆ ಬಿದ್ದ ಪೆಟ್ಟಿನಿಂದ ಕಣ್ಣು ಕತ್ತಲಿಟ್ಟಂತಾಗಿ ಕೆಳಗೆ ಬಿದ್ದ..
ಭರಮಚಾರಿ ಅಟ್ಟಹಾಸದಿಂದ ನಕ್ಕ ಇನ್ನು ತನ್ನ ಕೆಲಸ ನೆರವೇರಿದಂತೆ
..ಇನ್ನು ಯಾರು ತನ್ನನ್ನು ಮೀರಿಸುವವರು ಇರುವುದಿಲ್ಲ ವೆಂದು ಬೀಗಲಾರಂಭಿಸಿದ ಕೆಲಸ ಸಾಧಿಸಿದವನಂತೆ ಶರಣಬಸಪ್ಪನನ್ನು ನೋಡಿ ನಕ್ಕು ತನ್ನ ಮುಂದಿನ ಕೆಲಸದತ್ತ ಮುಂದುವರಿದ..ಸಾವಂತ್ರಿಯ ಹೆಣವನ್ನು ಎತ್ತಿಕೊಂಡು ತನ್ನ ಭುಜದ ಮೇಲೆ ಹಾಕಿಕೊಂಡು ದಾಪು ಕಾಲು ಹಾಕುತ್ತ ತನ್ನ ಜಾಗದತ್ತ ನಡೆದ.ಶರಣಬಸಪ್ಪನಿಗೆ ಅಲ್ಲಿನ ಚಿತ್ರಗಳನ್ನೆಲ್ಲ ನೋಡಿ ಏಕೋ ಮೈ ಎಲ್ಲ ಬೆವರಿದಂತಾಯಿತು..ಮೆಲ್ಲನೆ ಭ್ರಮಚಾರಿಗೆ ನಿನ್ನ ಕೆಲಸ ಮುಂದುವರೆಸು ನಾನು ಇಲ್ಲಿ ಇರುವುದು ಸರಿಯಲ್ಲ ಎಂದು ಕೈಗೆ ಸಿಕ್ಕಷ್ಟು ಹಣವನ್ನು ಅವನ ಕೈಯಲ್ಲಿ ತುರುಕಿ ಹಿಂದೆ ನೋಡದೆ ತನ್ನ ಕಾರಿನತ್ತ ನಡೆದ..ಭರಮಚಾರಿಗೆ ಅವನು ಇರುವುದು ಬೇಕಿರಲಿಲ್ಲ ಅವನಿಗೆ ತನ್ನ ಸಾಧನೆಯತ್ತ ಮಾತ್ರ ಗಮನವಿತ್ತು.ಶರಣಬಸಪ್ಪನಿಗೆ ಏಕೊ ತನ್ನಿಂದ ಏನೋ ತಪ್ಪಾಗಿದೆ ಮುಂದೆ ಅನಾಹುತ ಕಾದಿದೆ ಎನಿಸತೊಡಗಿತು ಡ್ರೈವರ್ ಗೆ ಕಾರನ್ನು ಮನೆಯತ್ತ ಹೋಗುವಂತೆ ಹೇಳಿ ಕಣ್ಣು ಮುಚ್ಚಿದ.
ಇತ್ತ ಭರಮಚಾರಿ ಸಾವಂತ್ರಿಯ ಹೆಣವನ್ನು ಅಲ್ಲೆ ಎಲೆಯಂತ ಹಾಸಿಗೆಯ ಮೇಲೆ ಮಲಗಿಸಿ ದುಷ್ಟಶಕ್ತಿಯ ಅವಹಾನೆಯ ಪೂಜೆಗಾಗಿ ಸಕಲ ಸಿದ್ಧತೆಗಳನ್ನು ಮಾಡತೊಡಗಿದ ಬಾಯಲ್ಲಿ ಮಂತ್ರಗಳ ಘೋಷಣೆ
..ಗುಡುಗು ಸಿಡಿಲುಗಳ ಜೊತೆ ಮಳೆಯ ಆರ್ಭಟ ಜೋರಾದೆಂತೆನಿಸಿತು..ಇದಕ್ಕೆಲ್ಲ ಪೂರ್ವ ಸಿದ್ದತೆ ನಡೆಸಿದ್ದ ಭರಮಚಾರಿ ಇಂತಹ ಪೂಜಗಳಿಗಾಗಿಯೆ ಗಟ್ಟಿಯಾದ ಚಪ್ಪರ ತಯಾರಿ ಮಾಡಿಕೊಂಡಿದ್ದ ಒಟ್ಟಿನಲ್ಲಿ ಇವತ್ತು ತೆಲೆಕೆಳಗಾದರು ಅವನ ಪೂಜೆ ಮಾತ್ರ ನಿಲ್ಲುವಂತಿರಲಿಲ್ಲ. ಏನೆ ಆದರು ಸಾಧಿಸಿಯೆ ತೀರಬೇಕೆಂದು ಅವನ ಹಠವಾಗಿತ್ತು..ಆಗಲೆ ಮಧ್ಯರಾತ್ರಿ ಸಮೀಪಿಸುತ್ತಿತ್ತು..ತಕ್ಷಣ ತನ್ನ ಗುರುಗಳ ನೆನಪಾಯಿತು.ಅತ್ತ ಓಡಿದ..ಅವರ ಹೆಣ ಏನೋ ಹೇಳುವಂತೆ ಭಾಸವಾಯಿತು..ಆಲಿಸಿದ ಒಂದು ಕ್ಷಣ ಮೈ ಎಲ್ಲ ಬೆವರಿತು..ಛೆ ಛೆ ಈ ಭರಮಚಾರಿಗೆ ಸೋಲೆ..ಎಂದಿಗು ಇಲ್ಲ ಇನ್ನು ಹೊತ್ತಿದೆ ಅಷ್ಟರಲ್ಲಿ ತನ್ನ ಕಾರ್ಯ ಸಾಧಿಸ ಬಹುದು ಎನಿಸಿತು..ತಡ ಮಾಡದೆ ಅತ್ತ ನಡೆದ..
ಮೂರ್ತಿಗಳ ಕೂಗು ಮುಗಿಲು ಮುಟ್ಟುವಂತಿತ್ತು
..ಮಳೆಯ ಅರ್ಭಟ ಹೆಚ್ಚಾಯಿತು..ಭರಮಚಾರಿಗೆ ತನ್ನ ಪೂಜೆ ಎಲ್ಲಿ ಅರ್ಧಕ್ಕೆ ನಿಲ್ಲುವುದೊ ಎಂದು ಭಯವಾಗತೊಡಗಿತು ತನ್ನ ಗುರುಗಳು ಹೇಳಿದಂತೆ ಇದನ್ನು ಇಲ್ಲಿಯೆ ಕೈ ಬಿಡಲೆ ತನ್ನ ಸಾಧನೆಗೆ ಬೇರೆ ಹೆಣಕ್ಕೆ ಮುಂದೆ ಕಾದರಯಿತು ಎನಿಸಿದರು, ಛೆ ಏನಕ್ಕೊ ಹೆದರಿ ಸಿಕ್ಕಂತ ಅವಕಾಶವನ್ನು ಬಿಡಲೆ .ಎನಿಸಿ ಮುಂದುವರೆದ.ಪೂಜೆ ಶುರು ಮಾಡಿಯೆ ಬಿಟ್ಟ, ಸಾವಂತ್ರಿಯ ಹೆಣವನ್ನು ಬೆತ್ತಲೆ ಮಲಗಿಸಿ ಅದಕ್ಕೆ ಹರಿಷಿಣ ಕುಂಕುಮ ಸುರಿದ..ವಿಚಿತ್ರವಾದ ಮಂತ್ರಗಳನ್ನು ಜಪಿಸಿದ..ಮಳೆ ಗಾಳಿ ಜೋರಯಿತು ಪೂಜೆಯ ವಸ್ತುಗಳೆಲ್ಲ ಅಲುಗಾಡಲಾರಭಿಸಿದವು..ಬರೆದ ರಂಗೋಲಿ ಜೊತೆಗೆ ತುಂಬಿದ ರಂಗು ಗಳೆಲ್ಲ ಒಂದಾಗ ತೊಡಗಿದವು, ದೀಪ ಹಚ್ಚ ಬೇಕು ಹಚ್ಚುವುದಾದರು ಹೇಗೆ..ಹಾಗು ಹೀಗು ಸುತ್ತಲು ಇದ್ದ ಇಟ್ಟಿಗೆ ಗಳನ್ನು ತಂದು ಮರೆಯಾಗಿಸಿ ದೀಪ ಹಚ್ಚಿದ ತಂದಿದ್ದ ಕೋಳಿಯನ್ನು ಮೊದಲು ಬಲಿ ಕೊಟ್ಟ ಅದರ ರಕ್ತವನ್ನು ಸಾವಂತ್ರಿಯ ಹೆಣದ ಮೇಲೆ ಸುರಿದ, ಹಾಗೆ ತಿರುಗಿ ತನ್ನ ಗುರುಗಳ ಗೋರಿಕಡೆ ತಿರುಗಿ ತನ್ನ ಸಾಧನೆ ಅರ್ಧ ಮುಗಿದಂತೆ ಎನ್ನುವಂತೆ ನೋಡಿದ ಶೈಲೇಂದ್ರನಾಥರ ಕೈ ಇನ್ನು ಬೇಡವೆನ್ನುವಂತೆ ಅಲುಗಾಡುತಿದ್ದವು..ಇನ್ನು ಸಾವಂತ್ರಿಯ ಹೊಟ್ಟೆಯಲ್ಲಿರುವ ಹಸಿ ಕಂದನನ್ನು ಹೊರತೆಗೆದು ಅದಕ್ಕೆ ಯಂತ್ರ ಗಳನ್ನು ಕಟ್ಟಿ ಪೂಜೆ ಮಾಡಿದರೆ ಮುಗಿಯಿತು..ಆದರೆ ದೀಪ ಅಲ್ಲಿಯತನಕ ಯಾವುದೆ ಕಾರಣಕ್ಕು ಆರಬಾರದು..ಅದು ಮುಖ್ಯವಾಗಿತ್ತು.
ಇತ್ತ ಮಳೆಯ ಆರ್ಭಟಕ್ಕೆ ರಾಮಚಂದ್ರನಿಗೆ ಎಚ್ಚರವಾದಂತೆನಿಸಿತು ನಿಧಾನವಾಗಿ ಕಣ್ಣುತೆರೆದು ನೋಡಿದ ನಡೆದ್ದಲ್ಲೆಲ್ಲವನ್ನು ನೆನಸಿಕೊಂಡ ತಕ್ಷಣ ಎದ್ದು ನಿಂತು ಸಾವಂತ್ರಿಯ ಹೆಣಕ್ಕಾಗಿ ಹುಡುಕಾಡಿದ
.ದೂರದಲ್ಲಿ ಭ್ರಮಚಾರಿಯ ಮಂತ್ರ ಕೇಳಿಸುತಿತ್ತು ಅದರ ಜಾಡು ಇಡಿದು ಅತ್ತ ನಡೆದ..ಅವನಿಗೆ ಗೊತ್ತು ಭರಮಚಾರಿಗೆ ತಾನು ಎದ್ದು ಬಂದಿರುವುದು ಗೊತ್ತಾದರೆ ತನ್ನ ಕಥೆ ಮುಗಿದಂತೆ ಎಂದು ನಿಧಾನವಾಗಿ ಬಂದು ಮರದ ಹಿಂದೆ ಅವಿತುಕೊಂಡು ನೋಡ ತೊಡಗಿದ ಅಯ್ಯೋ ?!! ತನ್ನ ಸಾವಂತ್ರಿಯ ಹೆಣ , ಮನಸ್ಸು ಚೀರಿತು..ಇದ್ದಕ್ಕಿದ್ದಂತೆ ಭ್ರಮಚಾರಿ ಎದ್ದು ನಿಂತ ತಕ್ಷಣ ರಾಮಚಂದ್ರ ಮರೆಯಾದ ಭ್ರಮಚಾರಿ ಎದ್ದು ನಿಂತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದು ಸಾವಂತ್ರಿಯ ಹೊಟ್ಟೆಯಲ್ಲಿನ ಹಸುಗೂಸನ್ನು ತೆಗೆಯಲು ತಯಾರಾದ ಆದರೆ ಅದಕ್ಕು ಮೊದಲು ಅವನು ಕುಡುಗೋಲಿಗು ಒಂದು ಕೋಳಿಯನ್ನು ಬಲಿಕೊಡಬೇಕಾಗಿತ್ತು ಅದಕ್ಕೆ ಕುಡುಗೋಲನ್ನು ಪೂಜೆ ಮಾಡಿ ಕೋಳಿಯನ್ನು ಬಲಿಕೊಟ್ಟ ಹಾಟ್ಟಹಾಸದಿಂದ ನಕ್ಕು ತನ್ನ ಗುರುಗಳ ಗೋರಿಯ ಬಳಿ ನಡೆದ ಅವನಿಗೆ ತನ್ನ ಮುಕ್ಕಾಲು ಸಾಧನೆಯ ಬಗ್ಗೆ ಹೇಳ ಬೇಕಾಗಿತ್ತು ಅಲ್ಲೆ ಅವನು ಎಡವುತ್ತಾನೆ ಎಂದು ಭಾವಿಸಿರಲಿಲ್ಲ..ಯಾಕೊ ತನ್ನ ಗುರುಗಳ ಕೈ ಅವರತ್ತ ಬರಬೇಡ ಎಂದು ಹೇಳುವಂತಿತ್ತು ಛೆ ತನ್ನ ಭ್ರಮೆ ಎಂದು ಅತ್ತ ನಡೆದು ಒಂದೆ ಸಮನೆ ಅರಚಲಾರಂಭಿಸಿದ..ನೋಡಿದಿರ ಗುರುಗಳೆ ನಿಮ್ಮ ಶಿಷ್ಯನ ಸಾಧನೆಯನ್ನು .. ಇನ್ನೇನು ಮುಗಿದೆ ಹೋಯಿತು ಅವಾಹನೆ ನಿಮ್ಮ ಮಾತು ಸುಳ್ಳಾಯಿತು ದೀಪ ಆರಲಿಲ್ಲ ನಾನು ಸಾಧಿಸೆ ಬಿಟ್ಟೆ ಇನ್ನು ಆ ಪಿಂಡವನ್ನು ತೆಗೆದು ಹೊರ ಹಾಕಿ ಯಂತ್ರವನ್ನು ಕಟ್ಟಿದರೆ ಮುಗೆದೆ ಹೋಯಿತು..ಅಟ್ಟ ಹಾಸದಿಂದ ನಗುತಿದ್ದ,..
ಇವನನ್ನೆ ಆಲಿಸುತಿದ್ದ ರಾಮಚಂದ್ರನ ಕಿವಿಗೆ ಬಿದ್ದದ್ದು ದೀಪವಿನ್ನು ಆರಲಿಲ್ಲ ಎಂಬ ಮಾತು ಅವನನ್ನು ಏನೋ ಮಾಡುವಂತೆ ಮಾಡಿದವು ತಕ್ಷಣ ಕಾರ್ಯ ಪ್ರವೃತ್ತ ನಾದ ಆದರೆ ಅದು ಕೆಲವೆ ಕ್ಷಣಗಳಲ್ಲಿ ನಡೆಯ ಬೇಕಿತ್ತು ತಾನು ಸಿಕ್ಕಿ ಹಾಕಿಕೊಂಡರೆ ತನ್ನ ಸಾವು ಖಚಿತ ಎಂದು ಅವನಿಗೆ ಗೊತ್ತಿತ್ತು
.. ಭಂಡ ಧೈರ್ಯ ಮಾಡಿಯೇ ಬಿಟ್ಟ. ಸತ್ತರೆ ತಾನೊಬ್ಬನೆ ತಾನೆ ಸಾಯುವುದು ಇರಲಿ. ಜೀವನದಲ್ಲಂತು ತನ್ನ ಸಾವಂತ್ರಿ ನಾನು ಒಂದಾಗಲಿಲ್ಲ ಸಾವಲ್ಲಾದರು ಒಂದಾಗೋಣ ಆಗಿದ್ದಾಗಲಿ .ಎಂದು ಅಲ್ಲಿಯೆ ಇದ್ದ ದಪ್ಪ ಕಲ್ಲನ್ನು ದೀಪಕ್ಕೆ ಗುರಿಯಾಗಿಸಿ ಹೊಡೆದ..ರಾಮಚಂದ್ರನ ಗ್ರಹಚಾರವೊ ಇಲ್ಲ ಭ್ರಮಚಾರಿಯ ಕೆಟ್ಟು ಘಳಿಗೆಯೊ ದೀಪ ಆರಿತು...ಗುಡುಗು ಸಿಡಿಲಿನ ಅರ್ಭಟ ಜೋರಾಯಿತು ಭರಮಚಾರಿಗೆ ಏನೋ ಅನಾಹುತ ಆದಂತೆನಿಸಿತು..ತಕ್ಷಣ ಅತ್ತ ಬಂದ ದೀಪ ಆರಿದೆ..ಮೈ ಎಲ್ಲ ಸೆಟೆಯಿತು....ರಾಮಚಂದ್ರ ಬಿದ್ದ ಜಾಗ ನೋಡಿದ..ಅದು ಖಾಲಿ.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಲತಿ ಚೆನ್ನಾಗಿದೆ, ಇದೊಂದು ಹೊಸ ರೀತಿ ಆಟ ಎಂದರೆ ತಪ್ಪಾಗಲಾರದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.