ಹೃದಯದ ಭಾವ

4.75
ಹೃದಯದ ಭಾವನೆ ಅರಳಿ
ಪ್ರೀತಿಯ ಕಡಲು ಉಕ್ಕುತ್ತಿದೆ
ಕನಸಿನ ಪ್ರೀತಿಯ ಹಕ್ಕಿ
ಎದೆಯ ಗೂಡಲಿ ಅವಿತಿದೆ
ಬಂಧವ ಬೆಸೆಯುವ ಪ್ರೀತಿ
ಕಣ್ಣಿಗೆ ಲೋಕವ ಮರೆಮಾಡಿದೆ
 
ಪ್ರೀತಿಯ ಸಿಂಚನ ಮಿಡಿದು
ಮನದ ಹಕ್ಕಿ ಹಾರುತ್ತಿದೆ
ಬದುಕಿನ ಅಲೆಗಳು ಕಲೆತು
ಪ್ರೀತಿಯ ಸಾಗರವ ಸೃಷ್ಟಿಸಿವೆ
ಕನಸಿಗೆ ಚೈತನ್ಯ ಮೂಡಿ
ಮನಸಿನ ಭಾರ ಕರಗುತ್ತಿದೆ
 
ಎದೆಯ ಬಾಂದಳದ ತೋಟದಲ್ಲಿ
ಬಣ್ಣ ಬಣ್ಣದ ಹೂವುಗಳು ಅರಳುತ್ತಿವೆ
ಜೀವದೊಳಗಿನ ಮೌನ ಮುರಿದು
ಪ್ರೀತಿಯ ನುಡಿಯ ಹಾಡುತ್ತಿವೆ
ಬಾಳಿನ ಕತ್ತಲ ಬಾನಿನಲ್ಲಿ
ಸುಂದರ ನಕ್ಷತ್ರ ಮಿನುಗುತ್ತಿದೆ.
 
- ಮಾ.ಕೃ.ಮಂಜು  
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ
ಕವನ ಚೆನ್ನಾಗಿದೆ
<<ಲೋಕವ ಮರೆಮಾಡುವ ಪ್ರೀತಿ>>
ಇಡೀ ಪ್ರಪ೦ಚವನ್ನ ಪ್ರೀತಿ ಮರೆ ಮಾಡಬಾರ್ದು ಅಲ್ವಾ? (ಲೋಕೋ ಭಿನ್ನ ರುಚಿಃ)
ಲೋಕವನ್ನೇ ಪ್ರೀತ್ಸೋದನ್ನ ಕಲ್ಸುತ್ತೆ ಆ ಪ್ರೀತಿ
<<ಕನಸಿಗೆ ಚೈತನ್ಯ ಮೂಡಿ
ಮನಸಿನ ಭಾರ ಕರಗುತಿದೆ>>
ಸಾಲುಗಳು ಚೆನ್ನಾದೆ .ತು೦ಬಾ ಇಷ್ಟ ಆದ್ವು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹರೀಶ್... ಪ್ರೀತಿಯಲ್ಲಿ ಮುಳುಗಿದ ಮೇಲೆ ಭಾವನಾ ಲೋಕದಲ್ಲಿ ತೇಲುತ್ತಾ ನೈಜ ಪ್ರಪಂಚವ ಮರೆಯುವುದರ ಬಗ್ಗೆ ನಾನು ಹೇಳಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಕವನ ಚೆನ್ನಾಗಿದೆ....ಹೃದಯದ ಭಾವ ಅರಳುವುದಕ್ಕೆ ಕಾರಣರಾರು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ನನ್ನ ಹೃದಯದ ಭಾವ ಅರಳುವುದಕ್ಕೆ ಕಾರಣ ಹೇಳುವ ಆಸೆ ಆದರೆ ಮೊದಲು ಅವಳಿಗೆ ಹೇಳಬೇಕಲ್ಲಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆದೆಯ ಭಾವನೆ ಅರಳಿಸಿ ಪ್ರೀತಿಯ ಸಾಗರವನ್ನೇ ಸೃಷ್ಟಿಸಿದ ಆ ನಕ್ಷತ್ರ ಸದಾ ನಿಮ್ಮ ಬಾಳಲ್ಲಿ ಮುನುಗುತಿರಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿನುಗುತಿರಲಿ, ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು... ಕ್ಷಮಿಸಿ... ಮಿನುಗುತಿರಲಿ ಎಂದಾಗಬೇಕಿತ್ತು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಇಂದುಶ್ರೀಯವರೇ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

chenaagi mUDi baMdide, Manju avare,

~meena

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

manjuravare hrudayada bhavane chennagi mudi bandide.. sada manada hakki haarutirali.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೃಧಯದ ಭಾವ ಎನ್ನುವ ಕವನ ತುಂಬಾ ಚೆನ್ನಾಗಿದೆ. ಜೀವನದೊಳಗಿನ ಮೌನ ಮುರಿದು, ಪ್ರೀತಿಯ ನುಡಿಯ ಹಾಡುತ್ತದೆ, ಬಾಳಿನ ಕತ್ತಲ ಬಾನಿನಲ್ಲಿ, ಸುಂದರ ನಕ್ಷತ್ರ ಮಿನುಗುತ್ತಿದೆ. ಈ ಸಾಲು ನಾನು ಮೌನವಾಗಿದ್ದು ನನ್ನ ಬಾಳು ಕತ್ತಲ ಜಗತ್ತನ್ನು ಮರೆತು ನಕ್ಷತ್ರದಂತೆ ಮಿನುಗುತ್ತಿದ್ದೆನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.