ರಸ ಪ್ರಶ್ನೆಗಳು ಭಾಗ - ೩

3.666665

ಕನ್ನಡದ ರಸ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

೧. 'ಭಾರತ ಸಿಂಧು ರಶ್ಮಿ' ಇದು ಯಾರ ಮಹಾ ಕಾವ್ಯ?

೨. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತದ್ದು ಯಾವಾಗ?

೩. ಕನ್ನಡ ಭಾಷೆಯ ಲಿಪಿಯನ್ನು ಹೋಲುವ ಭಾರತೀಯ ಭಾಷೆ ಯಾವುದು?

೪.'ಶ್ರೀನಿವಾಸ' ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದವರು ಯಾರು?

೫. "ಚೋರಪಾಲಕ ಚರಿತ" ಕೃತಿಯ ಕರ್ತೃ ಯಾರು?

೬. ಕುಮಾರವ್ಯಾಸನ "ಕರ್ನಾಟ ಭಾರತ ಕಥಾಮಂಜರಿ" ಯಾವ ಷಟ್ಪದಿಯಲ್ಲಿದೆ?

೭."ರೂಪಕ ಸಾಮ್ರಾಜ್ಯ ಚಕ್ರವರ್ತಿ" ಎಂಬ ಬಿರುದು ಪಡೆದವರು ಯಾರು?

೮. ಆಧುನಿಕ ರಂಗಭೂಮಿಯ ಹರಿಕಾರರೆಂದು ಕರೆಯುವ ನಾಟಕಕಾರ?

೯. "ಯತಿ" ಎಂದರೆ?

೧೦. 'ಬಂಡ್ವಾಳ್ವಿಲ್ಲದ ಬಡಾಯಿ' ನಾಟಕವನ್ನು ಬರೆದವರು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

೧. ವಿ.ಕೃ. ಗೋಕಾಕ್.

೨. ೨೦೦೯

೬. ಭಾಮಿನಿ ಷಟ್ಪದಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತರಿಸಲು ಪ್ರಯತ್ನಿಸಿದಕ್ಕೆ ಧನ್ಯವಾದಗಳು ಅರವಿಂದ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

1. ವಿಕೃ ಗೋಕಾಕ್
3. ತೆಲುಗು
4. ಮಾಸ್ತಿ ವೆಂಕಟೇಶ ಐಯ್ಯಂಗಾರ್
9. ಕಾವ್ಯಗಳಲ್ಲಿ ಬರುವ ತಡೆ, ವಿರಾಮ
10 ಟಿ ಪಿ ಕೈಲಾಸಂ

ತಪ್ಪಾ ? ಸರೀನಾ ? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾರವರೇ ನಿಮ್ಮ ಉತ್ತರಗಳು ಸರಿಯಾಗಿವೆ.... ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

1.ವಿ ಕೃ ಗೋಕಾಕ
2.೨೦೦೯
3.ತೆಲುಗು
4.ಮಾಸ್ತಿ
6.ಭಾಮಿನಿ
7.ಕುಮಾರವ್ಯಾಸ
10.ಟಿ ಪಿ ಕೈಲಾಸಂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ವಿನಾಯಕ ಕೃಷ್ಣ ಗೋಕಾಕ (ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ)
೨. ೨೦೦೯
೩. ತೆಲುಗು
೪. ಮಾಸ್ತಿ ವೆ೦ಕಟೇಶ ಅಯ್ಯ೦ಗಾರ
೫. ಕೇಶಿರಾಜ
೬. ಭಾಮಿನಿ
೭. ಕುಮಾರವ್ಯಾಸ
೮. ಟಿ. ಪಿ. ಕೈಲಾಸಂ
೯. ಋಷಿ, ಮುನಿ
೧೦. ಟಿ ಪಿ ಕೈಲಾಸಂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ವಿನುತರವರೆ... ಎಲ್ಲರೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತದ್ದು ೨೦೦೯ ಎಂಬ ಉತ್ತರವನ್ನೇ ಕೊಟ್ಟಿದ್ದಾರೆ. ಆದರೆ ಅಕ್ಟೋಬರ್ ೩೧, ೨೦೦೮ ರಂದೇ ಘೋಷಣೆ ಮಾಡಿದ್ದು ಅಲ್ವಾ.... ಯತಿ ಎಂತಿ ಎಂದರೇ "ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ" ಎಂದರ್ಥ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮ೦ಜು ಅವರೇ, ಕಳೆದ ವರ್ಷವೇ ಶಾಸ್ತ್ರೀಯ ಸ್ಥಾನದ ಸ೦ಭ್ರಮವನ್ನಾಚರಿಸಿದ್ದು :)
ಆದರೆ ಒಮ್ಮೆ ಇಲ್ಲಿ (http://www.sampada.net/blog/srivathsajoshi/02/06/2009/೨೦೯೯೪) ಹಿರಣ್ಣಯ್ಯನವರ ಪತ್ರವನ್ನೊಮ್ಮೆ ಓದಿ. ಅದರಲ್ಲಿ ಇ೦ತಿದೆ.
>> ನೆಪಕ್ಕೆ ಕನ್ನಡವನ್ನು ಶಾಸ್ತ್ರಿಯ ಭಾಷೆಯೆಂದು ಕೇಂದ್ರದಿಂದ ಹೇಳಿಸಿದರೂ, ಇನ್ನೂ ಅದು ಅಧಿಕೃತವಾಗಿಲ್ಲ. ಕಾರಣ ತಮಿಳು ನಾಡಿನ ನ್ಯಾಯವಾದಿಯೊಬ್ಬರು(ಶ್ರೀಗಾಂಧಿ ಎಂಬುವವರು) ಚನ್ನೈನ ಉಚ್ಚನ್ಯಾಯಾಲಯದಲ್ಲಿ, ಕನ್ನಡದ ಶಾಸ್ತ್ರೀಯ ಭಾಷಾ ಸ್ಥಾನಕ್ಕೆ ಕೊಟ್ಟಿರುವ ಮನ್ನಣೆಯನ್ನು ರದ್ದು ಪಡಿಸುವಂತೆ ಕೋರಿದ್ದಾರೆ. ಅದಕ್ಕೆ ಆಕ್ಷೇಪಣಾ ಅರ್ಜಿಯನ್ನು ಹಾಕುವಲ್ಲಿಯೂ ಸಹ ನಮ್ಮ ಘನ ಸರ್ಕಾರದವರು ಅನಗತ್ಯ ಆಲಸ್ಯವನ್ನೂ, ವಿಳಂಬ ನೀತಿಯನ್ನೂ ಅನುಸರಿಸುತ್ತಾ ಇರುವುದು, ಸರ್ಕಾರದ ಅಜ್ಞಾನಕ್ಕೆ ಹಾಗೂ ನಮ್ಮ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿಯಂತಿದೆ. <<
ಅ೦ದರೆ ಕನ್ನಡಕ್ಕೆ ಇನ್ನೂ ಶಾಸ್ತ್ರೀಯ ಸ್ಥಾನ ಅಧಿಕೃತವಾಗಿ ಸಿಕ್ಕಿಲ್ಲವೇ?

ಇನ್ನು ಯತಿ ಗೆ ಋಷಿ, ಮುನಿ ಎ೦ಬ ಅರ್ಥವೂ ಇದೆ (ಜಿವಿ ಯವರ ಪದನೆರಿಕೆ ಆಧಾರ).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದಿನ ಕೇಂದ್ರ ಸರಕಾರ ಮೇ ತಿಂಗಳಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗುವ ನಾಲ್ಕೈದು ದಿನಗಳ ಮೊದಲು ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿರ್ಧಾರಕ್ಕೆ ಔಪಚಾರಿಕವಾಗಿ ಸಮ್ಮತಿ ನೀಡಿದೆ ಎನ್ನುವುದನ್ನು ಓದಿದ ನೆನಪು.
ಈ ಕೊಂಡಿ ನನಗಿಲ್ಲಿ ತೆರೆಯುತ್ತಿಲ್ಲವಾದರೂ ನೀವುಗಳು ಪ್ರಯತ್ನಿಸಿ ನೋಡಿ ಹೇಳಿ.

http://www.expressbuzz.com/edition/story.aspx?title=Cabinet%20formally%2...

http://www.google.co.in/search?hl=en&q=Cabinet+formally+approves+Classic...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರಿಗೂ ವಂದನೆಗಳು....

ರಸ ಪ್ರಶ್ನೆಗಳು ಭಾಗ - ೩ ರ ಉತ್ತರಗಳು

೧. 'ಭಾರತ ಸಿಂಧು ರಶ್ಮಿ' ಇದು ಯಾರ ಮಹಾ ಕಾವ್ಯ?
ಉತ್ತರ : ಡಾ.ವಿ.ಕೃ.ಗೋಕಾಕ್.
೨. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತದ್ದು ಯಾವಾಗ?
ಉತ್ತರ : ಅಕ್ಟೋಬರ್ ೩೧, ೨೦೦೮
೩. ಕನ್ನಡ ಭಾಷೆಯ ಲಿಪಿಯನ್ನು ಹೋಲುವ ಭಾರತೀಯ ಭಾಷೆ ಯಾವುದು?
ಉತ್ತರ: ತೆಲುಗು
೪.'ಶ್ರೀನಿವಾಸ' ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದವರು ಯಾರು?
ಉತ್ತರ: ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
೫. "ಚೋರಪಾಲಕ ಚರಿತ" ಕೃತಿಯ ಕರ್ತೃ ಯಾರು?
ಉತ್ತರ: ಕೇಶಿರಾಜ
೬. ಕುಮಾರವ್ಯಾಸನ "ಕರ್ನಾಟ ಭಾರತ ಕಥಾಮಂಜರಿ" ಯಾವ ಷಟ್ಪದಿಯಲ್ಲಿದೆ
ಉತ್ತರ: ಭಾಮಿನೀ ಷಟ್ಪದಿ
೭."ರೂಪಕ ಸಾಮ್ರಾಜ್ಯ ಚಕ್ರವರ್ತಿ" ಎಂಬ ಬಿರುದು ಪಡೆದವರು ಯಾರು?
ಉತ್ತರ: ಕುಮಾರವ್ಯಾಸ
೮. ಆಧುನಿಕ ರಂಗಭೂಮಿಯ ಹರಿಕಾರರೆಂದು ಕರೆಯುವ ನಾಟಕಕಾರ?
ಉತ್ತರ: ಟಿ.ಪಿ.ಕೈಲಾಸಂ
೯. "ಯತಿ" ಎಂದರೆ?
ಉತ್ತರ: ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ
೧೦. 'ಬಂಡ್ವಾಳ್ವಿಲ್ಲದ ಬಡಾಯಿ' ನಾಟಕವನ್ನು ಬರೆದವರು:
ಉತ್ತರ: ಟಿ.ಪಿ.ಕೈಲಾಸಂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.