ಟಿವಿ ಕಾರ್ಯಕ್ರಮಗಳು, ಜಗ್ಗೇಶ್ ಇತ್ಯಾದಿ....

0

ಚಂದನ ವಾಹಿನಿಯಲ್ಲಿ ಸುಮಾರು ೩ ವರ್ಷಗಳಿಂದ ಪ್ರತಿ ಭಾನುವಾರ ರಾತ್ರಿ ೧೦ ಘಂಟೆಗೆ ಪ್ರಸಾರವಾಗುತ್ತಿರುವ ’ಸತ್ಯ ದರ್ಶನ’ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಾ? ನಾನು ಈ ಕಾರ್ಯಕ್ರಮವನ್ನು
ಹೆಚ್ಚು ಕಡಿಮೆ ಪ್ರತಿವಾರವೂ ನೋಡುತ್ತಿದ್ದೇನೆ. ಈ ಕಾರ್ಯಕ್ರಮ ಕೇವಲ ಅರ್ಧ ಘಂಟೆಯಷ್ಟೆ ಪ್ರಸಾರವಾಗುತ್ತದೆ. ಇದನ್ನು ೧ ಘಂಟೆಗೆ ವಿಸ್ತರಿಸಿದರೆ ಚೆನ್ನಾಗಿತ್ತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀಯುತ ವಿಧ್ವಾನ್ ಪಾವಗಡ ಪ್ರಕಾಶ ರಾವ್. ಇವರ ಪ್ರವಚನ ಕಾರ್ಯಕ್ರಮಗಳಿಗೆ ಎಲ್ಲಿಲ್ಲದ ಬೇಡಿಕೆ.

’ಸತ್ಯ ದರ್ಶನ’ ಆಧ್ಯಾತ್ಮ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳ ಕಾರ್ಯಕ್ರಮ. ಕೆಲವು ಎಪಿಸೋಡುಗಳು ನೀರಸವಾಗಿದ್ದರೆ, ಕೆಲವುಗಳಲ್ಲಿ ತರ್ಕಬದ್ದ ಪ್ರಶ್ನೋತ್ತರಗಳಿದ್ದು ಕೇಳಲು ಆಸಕ್ತಿ ಮೂಡಿಸುತ್ತವೆ.

ಇನ್ನು ಟಿವಿ ೯ ತಂಡದ ಪ್ರತಿ ಭಾನುವಾರ ರಾತ್ರಿ ೧೦.೩೦ ಕ್ಕೆ ಪ್ರಸಾರವಾಗುವ ’ಹೀಗೂ ಉಂಟೆ’ ಕಾರ್ಯಕ್ರಮವೂ ಸಹ ತರ್ಕಾತೀತ ವಿಷಯಳ ವರದಿ ನೀಡಿ ಆಸಕ್ತಿ ಮೂಡಿಸುತ್ತಿದೆ.

ಜೀ ಟಿವಿ ಗೆ ಬಂದರೆ ಭಾನುವಾರ ಮಧ್ಯಾನ್ಹ ಪ್ರಸಾರಗೊಳ್ಳೂವ ’ಚಿತ್ರ ಪ್ರಪಂಚ’ ಕಾರ್ಯಕ್ರಮ ಉತ್ತಮ ವಾಗಿದೆ. ಹೆಗ್ಗಡೆಯವರು ಚಿತ್ರಗಳ ವಿಶ್ಲೇಶಣೆ ಯನ್ನು ನಿಷ್ಪಕ್ಷವಾಗಿ ನಡೆಸಿಕೊಡುತ್ತಾರೆ. ಇದೇ ವಾಹಿನಿಯ ಬೆಳಗಿನ ಕಾರ್ಯಕ್ರಮಗಳಾದ ’ಭಾಗವತ’, ’ಕೃಷ್ಣ ದರ್ಶನ’ ಇತ್ಯಾದಿಗಳೂ ಚೆನ್ನಾಗಿ ಮೂಡಿಬರುತ್ತಿವೆ. ರಾತ್ರಿ ೧೦.೩೦ಕ್ಕೆ ಪ್ರಸಾರವಾಗುವ ’ಡಿಟೆಕ್ಟಿವ್ ಧನುಷ’ ಸಹ ಒಂದು ಉತ್ತಮ ಪ್ರಯೋಗ.

ಉದಯದ ’ನೀವೆಲ್ಲೋ ನಾವಲ್ಲೇ’ ನನಗಿಷ್ತವಾದ ಇನ್ನೊಂದು ಕಾರ್ಯಕ್ರಮ. ಇವರ ಧಾರಾವಾಹಿಗಳೋ ದೇವರಿಗೇ ಪ್ರೀತಿಯಾಗಬೇಕು!!

ಈಟಿವಿಯ ’ಮನ್ವಂತರ’, ’ಮೂಡಲ ಮನೆ’ ಧಾರಾವಾಹಿಗಳಿಗಿದ್ದಷ್ಟು ಜನಪ್ರಿಯತೆ ಇಲ್ಲದಿದ್ದರೂ ’ಪ್ರೀತಿ ಇಲ್ಲದ ಮೇಲೆ’ ಯನ್ನು ಜನರು ’ಇನ್ನೇನೂ ಗತಿ ಇಲ್ಲದ ಮೇಲೆ’ ಎಂದು ನೋಡುತ್ತಿದ್ದಾರೆಯೇ ಎಂಬ ಅನುಮಾನ ನನಗೆ!!.

ಸುವರ್ಣ ಚಾನೆಲ್ ತಿರುಗಿಸಿದಾಗಲೆಲ್ಲಾ ಬರೀ ರಾಜಕೀಯ ಚರ್ಚೆಗಳೇ. ಸುನೀಲ್ ಪುರಾಣಿಕ್ ರವರ ’ಸಂಗೊಳ್ಳಿ ರಾಯಣ್ಣ’ ಉತ್ತಮವಾಗಿ ಮೂಡಿಬರುತ್ತಿದೆ.

’ಯು೨’ ನಲ್ಲಿ ಯಾವಾಗಲೂ, ಯಾವ ಕಾಲದಲ್ಲಾದರೂ ಇಷ್ಟವಾಗುವ ರಸಮಯ ಚಿತ್ರಗೀತೆಗಳು.

ಈ ’ಚಾನೆಲ್ ರೇಸ್’ ನಲ್ಲಿ ಯಾರು ನಿಲ್ಲುತ್ತಾರೋ(ಓಡುತ್ತಾರೋ?) ಯಾರು ’ಗಾಯಗೊಂಡು ನಿವೃತ್ತ’ ರಾಗುತ್ತಾರೋ ತಿಳಿಯದು. ಒಟ್ಟಿನಲ್ಲಿ ಕನ್ನಡ ಟಿವಿ ಪ್ರೇಕ್ಷಕನಿಗೆ ಆಯ್ದುಕೊಳ್ಳಲು ಬಹಳಷ್ಟು ಕಾರ್ಯಕ್ರಮಗಳ ಪಟ್ಟೀಯೇ ಇದೆ.

ಇನ್ನೊಂದು ವಿಷಯ ನೋಡ್ರಿ..ಇತ್ತೀಚೆಗೆ ಉತ್ತಮ ವಾದ ೧೦೦% ಕಾಮೆಡಿ ಚಿತ್ರಗಳು ಕನ್ನಡದಲ್ಲಿ ಬರುತ್ತಿಲ್ಲ. ಹಾಸ್ಯ ಚಿತ್ರವೆಂದು ಹೇಳಿ ಬಿಡುಗಡೆಯಾಗುವ ಚಿತ್ರಗಳೇ ಹಾಸ್ಯಾಸ್ಪದವಾಗಿರುತ್ತವೆ. ಬಹುಷಃ ಜಗ್ಗೇಶ್ ರಂತಹ ಅದ್ಭುತ ಟೈಮಿಂಗ್ ಉಳ್ಳ ಪೂರ್ಣ ಪ್ರಮಾಣದ ಇನ್ನೊಬ್ಬ ಹಾಸ್ಯ ನಟ ಕನ್ನಡ ಚಿತ್ರರಂಗಕ್ಕೆ ದೊರೆತಿಲ್ಲ. ರಮೇಶ್ ರವರೂ ಸಹ ಇನ್ನೊಬ್ಬ ಹಾಸ್ಯಪ್ರಜ್ಞೆಯುಳ್ಳ ಕಲಾವಿಧ. ’ರಾಮ ಶಾಮ ಭಾಮ’ದ ನಂತರ ಒಂದೂ ಉತ್ತಮ ಹಾಸ್ಯ ಪ್ರಧಾನ ಚಿತ್ರಗಳು ಬಂದಿಲ್ಲವೆಂದು ನನ್ನ ಅನಿಸಿಕೆ.

ಇನ್ನೊಂದು ವಿನಂತಿ. ಟಿ.ವಿ, ಪೇಪರ್ ಗಳವರು ಕೊಡುವ ಚಿತ್ರವಿಮರ್ಶೆಗಳನ್ನು ನಂಬಿಕೊಂಡು ಚಿತ್ರ ನೋಡಲು ಖಂಡಿತ ಹೋಗಬೇಡಿ. ತೋಪು ಚಿತ್ರಗಳನ್ನೂ ’ಉತ್ತಮ ಚಿತ್ರಗಳೆಂದು’ ಹೇಳಿ ರೈಲು ಹತ್ತಿಸುತ್ತಾರೆ.

ಥೀಯೇಟರ್ ಗಳ ವಿಶಯಕ್ಕೆ ಬಂದರೆ, ಬೆಂಕಿ ಪೆಟ್ಟಿಯಷ್ಟು ಚಿಕ್ಕದಾದ ಪಿ.ವಿ.ಆರ್, ಮುಲ್ಟಿಪ್ಲೆಕ್ಸ್ ಗಳ ಚಿತ್ರಮಂದಿರಗಳಿಗಿಂತ ವಿಶಾಲವಾದ ಇತರ ಹಳೆಯ ಚಿತ್ರ ಮಂದಿರಗಳೇ ವಾಸಿ. ಈ ಮಲ್ಟಿಪ್ಲೆಕ್ಸ್ ಚಿತ್ರಮಣ್ದಿರಗಳಲ್ಲಿ ಕಿವಿಗಡಚಿಕ್ಕುವಷ್ಟು ಸೌಂಡು ಕೊಟ್ಟು ತಲೆ ನೋವು ಬರಿಸುತ್ತಾರೆ. ತಿಂಗಳಿಗೆ ೨-೩ ಚಿತ್ರಗಳನ್ನು ಇಲ್ಲಿ ನೋಡಿದರೆ ನಿಮಗೆ ’ಯಿಯರ್ ಡ್ರಮ್’ ಉಪಯೋಗಿಸುವ ಪ್ರಮೇಯ ಬರಬಹುದು!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉದಯ ವಾಹಿನಿಯಲ್ಲಿ ಸದ್ಯಕ್ಕೆ ಬರುತ್ತಿರುವ ಕಾರ್ಯಕ್ರಮಗಳಲ್ಲಿ ನನಗೆ ಮೆಚ್ಚುಗೆ ಆದದ್ದು ಈಶ್ವರ ದೈತೋಟ ಅವರು ನಡೆಸಿಕೊಡುವ 'ಸಂವೇದನೆ' ಅನ್ನುವ ಸಂದರ್ಶನ ಕಾರ್ಯಕ್ರಮ.

ಪ್ರತಿದಿನ, ಒಂದು ವಿಶೇಷ ವ್ಯಕ್ತಿಯೊಡನೆ ನಡೆಯುವ ಈ ಸಂದರ್ಶನ ಖಂಡಿತ ನೋಡುವ ಹಾಗಿದೆ. ಬೆಳಗ್ಗೆ ಬರುವ ಈ ಕಾರ್ಯಕ್ರಮವನ್ನು ನಾನು ರೆಕಾರ್ಡ್ ಮಾಡಿ, ಸಾಧ್ಯವಾದಾಗ ನೋಡುತ್ತೇನೆ.

ಈವರೆಗೆ ಬಂದಿರುವ ವ್ಯಕ್ತಿಗಳಲ್ಲಿ ನನಗೆ ನೆನಪುಳಿದವರು ಸಂಗೀತಗಾರರಾದ ವೆಂಕಟೇಶ ಗೋಡ್ಖಿಂಡಿ, ವಿನಾಯಕ ತೊರವಿ, ಸಂಗೀತಾ ಕಟ್ಟಿ, ನಟರಾದ ಮಾಲತಿ ಮತ್ತು ಯಶವಂತ ಸರ್ದೇಶಪಾಂಡೆ, ವೈದ್ಯೆ ವಿಜಯಲಕ್ಶ್ಖಿ ಬಾಳೇಕುಂದ್ರಿ, ಐ.ಎ.ಎಸ್. ಅಧಿಕಾರಿ ಅಜಯ್ ಸಿಂಗ್, ಶಿಲ್ಪಿ ತ್ಯಾಗರಾಜ ಆಚಾರ್ಯ, ಯಕ್ಷಗಾನ ಕಲಾವಿದರಾದ ಮಂಟಪ ಪ್ರಭಾಕರ ಹೆಗಡೆ , ಹರಟೆಯ ಕೃಷ್ನೇಗೌಡರು, ಎಸ್.ಎಲ್.ಭೈರಪ್ಪ ಮೊದ್ಲಾದವರು.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉದಯದ ’ನೀವೆಲ್ಲೋ ನಾವಲ್ಲೇ’ ನನಗಿಷ್ತವಾದ ಇನ್ನೊಂದು ಕಾರ್ಯಕ್ರಮ. ಇವರ ಧಾರಾವಾಹಿಗಳೋ ದೇವರಿಗೇ ಪ್ರೀತಿಯಾಗಬೇಕು!!
’ಪ್ರೀತಿ ಇಲ್ಲದ ಮೇಲೆ’ ಯನ್ನು ಜನರು ’ಇನ್ನೇನೂ ಗತಿ ಇಲ್ಲದ ಮೇಲೆ’ ಎಂದು ನೋಡುತ್ತಿದ್ದಾರೆಯೇ ಎಂಬ ಅನುಮಾನ ನನಗೆ!!.

ಹೆ ಹೆ. ಈಗಷ್ಟೇ ಇದನ್ನೋದಿ ಪಕ್ಕದ ಮನೆಯವರಿಗೂ ಕೇಳುವಷ್ಟು ಜೋರಾಗಿ ನಗುತ್ತಿದ್ದೆ. :-)

ನನಗೆ ಟಿ ವಿ ನೋಡಲು ಹೆಚ್ಚು ಸಿಗೋದಿಲ್ಲ, ಆದರೆ ಇಷ್ಟೊಂದು ಚ್ಯಾನಲ್ಲುಗಳು ಹಾಗೂ ಅವುಗಳ ನಡುವೆ ಸಿಕ್ಕಾಪಟ್ಟೆ competition ಇರೋದರಿಂದ ಕೆಲವು ಒಳ್ಳೆಯ ಕಾರ್ಯಕ್ರಮಗಳು ಬರುತ್ತಿರಬಹುದು ಎಂಬುದು ನನ್ನ ಊಹೆ.

ಹಿಂದೆ ಚಂದನದಲ್ಲಿ ನ್ಯೂಸ್ ಓದುತ್ತಿದ್ದ ಗಜಾನನ ಹೆಗಡೆಯವರು ಇತ್ತೀಚೆಗೆ ಮಾತಿಗೆ ಸಿಕ್ಕಿದ್ದರು. ಅವರು ಕೂಡ ಕನ್ನಡ ಟಿ ವಿ ಚ್ಯಾನಲ್ಲುಗಳು ಈಗ ಹೇಗಿವೆ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. ಬಹಳ ತಮಾಷೆಯಾಗಿತ್ತು ಕೇಳೋದಕ್ಕೆ ;-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಸತ್ಯ ದರ್ಶನ’ .... ನಾನು ಕೆಲವಾರು ಎಪಿಸೋಡ್ ಮಾತ್ರ ನೊಡ್ದೆ. . ಪ್ರಕಾಶ ಪಾವಗಡ ರ ಈ ಕಾರ್ಯಕ್ರಮ ನಿಜವಾಗಿಯೂ ತುಂಬಾ ಮೆಚ್ಚಿಗೆಯಾಯಿತು. ಈಿಗಲೂ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆಯೇ? ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವ ಕಾರ್ಯಕ್ರಮಗಳಲ್ಲಿ ಇದೂ ಒಂದು.

ಅತ್ವ " ಚಂದನ" ವನ್ನೂ ಯಾರಾದರೂ ನೆಟ್ ನಲ್ಲಿ ಸ್ಟ್ರೀಮ್ ಮಾಡ್ತ ಇದ್ರೆ ದಯವಿಟ್ಟು ಅದ್ರ ಕೊನ್ಡಿ ಯನ್ನು ಕೊಡಿ.

ಈಶ್ವರ ದೈತೋಟ ಅವರು ನಡೆಸಿಕೊಡುವ 'ಸಂವೇದನೆ' ಕಾರ್ಯಕ್ರಮವನ್ನು ನಾನು ಆಗಾಗ್ಗೆ ಇಲ್ಲಿ ನೋಡ್ತಾ ಇರ್ತೀನಿ. ತುಂಬಾ ಚೆನ್ನಾಗಿ ಬರ್ತಾ ಇದೆ. ಅದೇ ಉದಯದ "ಪರಿಚಯ" ( ಈಿಗ ಬರುತ್ತ ಇದೆಯೋ ಇಲ್ಲ್ವೋ ಗೊತ್ತಿಲ್ಲ) ಕಾರ್ಯಕ್ರಮವನ್ನು , ನಾನು ಊರಲ್ಲಿ ಇದ್ದಾಗ ತಪ್ಪಿಸಿದ್ದೆ ಇಲ್ಲ. ನನಗೆ ಅಷ್ಟು ಇಷ್ಟವಾಗಿತ್ತು. ಶೈಲಜಾ ಸಂತೋಶ್ ಅವ್ರ ಪರಿಚಯ ಮಾಡಿಕೊಡುವ ದಾಟಿ, ಅವ್ರ ತಯಾರಿಗೆ ಅವರೇ ಸಾಟಿ.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.