ನೀರ ಹನಿಗಳು

0

ಜಾರದೆ ಅಂಟಿದ ನೀರ ಹನಿಗಳು
ದೇಹವನು ಅಪ್ಪಿ ಮುದ್ದಿಸುತ್ತಿವೆ
*****
ಈಜಾಡಲಿ ಬಿಡು ನಿನ್ನ ಮಧು ಬಟ್ಟಲಲಿ
ನನ್ನ ವಿರಹ ತಪ್ತ ಮುಗ್ಧ ತುಟಿಗಳು
*****
ನಿನ್ನ ಸುತ್ತಲೂ ಕಣ್ಣೋಟದ ಬಲೆ ಬೀಸಿದ್ದೇನೆ
ಮೊಗದಲ್ಲಿನ ಜಿಂಕೆ ನಗುವನು ಸೆರೆ ಹಿಡಿಯಲು
*****
ಪದಗಳೇ ದಯವಿಟ್ಟು ಸ್ವಲ್ಪವೇ ಜಾಗ ಕೊಡಿ
ಕಳೆದು ಹೋಗುವ ಅವಳ ರೂಪವನು ತುಂಬಿಸಿಡುವೆ
*****
ಕಮರಿದ ನನೆಪುಗಳು ಚಿಗಿಯುತ್ತಿವೆ
ವಿರಹವೇ ಸುಮ್ಮನೆ ಇದ್ದು ಬಿಡು.

kupperao

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.