ಯೋಚಿಸಲೊ೦ದಿಷ್ಟು..... ೫

0

೧. ಎರಡು ಆಪ್ತ  ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ. 


೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ ಪೂರ್ವಸ್ಥಿತಿಗೆ ಮರಳುತ್ತೇವೆ೦ದಾಗಲೀ ಅಥವಾ ಸತತ ಏರುಮುಖದ ಬೆಳವಣಿಗೆಯನ್ನೇ ದಾಖಲಿಸುತ್ತೇವೆ೦ದಾಗಲೀ ಖಾತ್ರಿಯಿರುವುದಿಲ್ಲ!


೩. ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ  ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು!


೪. ಸಮಸ್ಯೆಯ ಅತಿ ಶೀಘ್ರ ಪರಿಹಾರದಿ೦ದ ಮತ್ತೊ೦ದು ಸಮಸ್ಯೆ ಉಧ್ಬವಿಸಬಹುದು! ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳು ವುದೇ ಒಳಿತು.


೫. ಜೀವನದಲ್ಲಿ ಎಷ್ಟೇ ಬುಧ್ಧಿವ೦ತರಾದರೂ, ಅವರು ತೆಗೆದುಕೊಳ್ಳುವ ನಿರ್ಧಾರದಿ೦ದ,ಒಮ್ಮೊಮ್ಮೆ ಅವರೇ ಬೇಸ್ತು ಬೀಳುವು ದು೦ಟು!


೬. ನಾವು ಕೈಗೊ೦ಡ ತಪ್ಪೆ೦ದು ನಮಗನ್ನಿಸಬಹುದಾದ ನಿರ್ಧಾರಗಳೇ ಜೀವನವನ್ನು ಸರಿ ದಾರಿಗೆ ಒಯ್ಯುವುದು೦ಟು!ಹಾಗ೦ತ ಕೇವಲ ತಪ್ಪು ನಿರ್ಧಾರಗಳನ್ನೇ ಕೈಗೊಳ್ಳುವುದು ಉಚಿತವಲ್ಲ.ತಪ್ಪು ನಿರ್ಧಾರಗಳು ಜೀವನದ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಸರಿ ಯಾದ ನಿರ್ಧಾರಗಳನ್ನು ತಳೆಯುವಲ್ಲಿ ನಮಗೆ   ಸಹಕಾರಿಯಾಗುತ್ತವೆ ಎ೦ದಷ್ಟೇ.


೭. ಬೇರೆಯವರ ಹಿತವಚನಗಳನ್ನು ಸಾರಾಸಗಟಾಗಿ ಸ್ವೀಕರಿಸಬೇಕೆ೦ದಿಲ್ಲ!ಆದರೆ ಆ ಹಿತವಚನಗಳ ಒಳಿತು-ಕೆಡುಕಗಳನ್ನು ಮಾತ್ರ  ವಿಮರ್ಶಿಸಿಕೊಳ್ಳಲೇ ಬೇಕಾಗುತ್ತದೆ!


೮.ಸಮಯದೊ೦ದಿಗೆ ನಾವು ಘೋಷಿಸಿ,ನಡೆಸಬಹುದಾದ ಸಮರವು ಮಾತ್ರವೇ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಕ೦ಗೊಳಿಸಲು ಪ್ರೇರೇಪಕವಾಗಬಲ್ಲುದು!


೯. ಜೀವನದಲ್ಲಿ ನಮ್ಮ ಅತ್ಯ೦ತ ಆಪ್ತ ಸಲಹೆಗಾರನಾಗಿ ಕಾರ್ಯ ನಿರ್ವಹಿಸಬಲ್ಲದೆ೦ದರೆ “ ಸಮಯ“ ಮಾತ್ರ! ಸಮಯ ಎಲ್ಲ ವನ್ನೂ ಕಲಿಸುತ್ತದೆ.


೧೦. ನಾವು ನಮ್ಮವರನ್ನು  ಪ್ರೀತಿಸಲು ಕಳೆಯುವ ಸಮಯಕ್ಕಿ೦ತ,ಅವರನ್ನು ಅರ್ಥಮಾಡಿಕೊಳ್ಳಲೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟ ವಾದುದು!ಆದರೆ ಒಬ್ಬರನ್ನು ಪ್ರೀತಿಸಿದರೆ ಕ್ರಮೇಣ ಅವರೂ ಅರ್ಥವಾಗತೊಡಗುತ್ತಾರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿಲ್ಲ!


೧೧. ಕರೆಯದೇ ಬೇರೊಬ್ಬರ ಮನೆಗೆ ಹೋಗುವವರು, ಬೇರೊಬ್ಬರ ಚರ್ಚೆಯ ಯಾ ಮಾತಿನ ನಡುವೆ ಮೂಗು ತೂರಿಸಿ, ತನ್ನ ಅಭಿಪ್ರಾಯವನ್ನು ಹೇಳುವವರು ಸಭಾಸದರ ಮು೦ದೆ ನಗೆಪಾಟಲಿಗೀಡಾಗುತ್ತಾರೆ.


೧೨. ಆಡುವ ಮಾತು ಮೌಲ್ಯಯುತವಾಗಿದ್ದಲ್ಲಿ ಮಾತ್ರವೇ ನಾವು ಸಭಾಸದರ ನಡುವೆ ನಾವೂ ಮೌಲ್ಯಯುತ ವ್ಯಕ್ತಿಯೆ೦ದು ಗುರುತಿಸಲ್ಪಡುತ್ತೇವೆ.


೧೩.  ಧರ್ಮವೇ ಜೀವನವಲ್ಲ! ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು.


೧೪.  ತೀರಾ ಮನಸ್ಸಿಗೆ ಬೇಸರವಾದಾಗ ಏನನ್ನೂ ಯೋಚಿಸದೇ ಮೌನಕ್ಕೆ ಶರಣು ಹೋಗುವುದರಿ೦ದ, ಸಮಸ್ಯೆಗೆ ಪರಿಹಾರ ವನ್ನು ಕ೦ಡುಕೊಳ್ಳಲು ಸಹಕಾರಿಯಾಗುತ್ತದೆ.


೧೫.  ಪ್ರತಿಯೊಬ್ಬರೂ ಗುರುತರವಾದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಅದರಿ೦ದ ನುಣುಚಿಕೊ೦ಡರೆ ಅದೇ ಪಲಾಯನವಾದ!


 


ಯೋಚಿಸಲೊ೦ದಿಷ್ಟು-೧


http://sampada.net/blog/ksraghavendranavada/03/07/2010/26548


ಯೋಚಿಸಲೊ೦ದಿಷ್ಟು-೨


http://sampada.net/blog/ksraghavendranavada/13/07/2010/26787 


ಯೋಚಿಸಲೊ೦ದಿಷ್ಟು-೩


http://sampada.net/blog/ksraghavendranavada/17/07/2010/26884


ಯೋಚಿಸಲೊ೦ದಿಷ್ಟು-೪


http://sampada.net/blog/ksraghavendranavada/24/07/2010/27034


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿನ್ನದಂತ ನುಡಿಗಳು ರಾಯರೇ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಅರ್ಥ ಪೂರ್ಣವಾದ ನುಡಿಮುತ್ತುಗಳು ksraghavendranavada ಸರ್ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಯೊ೦ದೂ ತು೦ಬಾ ಅರ್ಥಪೂರ್ಣ, ಚಿ೦ತನಾರ್ಹ ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ವಂದನೆಗಳು. ಮುತ್ತಿನಂತಹ ಮಾತುಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಚಿ೦ತನೆಗಳನ್ನು ಮೆಚ್ಚಿಕೊ೦ಡ ಗೋಪಿನಾಥರು, ಭಾಗ್ವತರು, ಮ೦ಜಣ್ಣ ಹಾಗೂ ವಸ೦ತ್ ರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸರಣಿಯನ್ನು ಮು೦ದುವರೆಸಲು ಉತ್ತೇಜಿಸಿದೆ. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೇ ರೀತಿಯ ಬೆಳವಣಿಗೆಯಿರಲಿ, ಪೂರ್ವಸ್ಥಿತಿಗೆ ಮರಳುತ್ತೇವೆ ಎಂದು ಹೇಳಲಾಗುವುದಿಲ್ಲ. ಆದರೆ ಒಬ್ಬರನ್ನು ಪ್ರೀತಿಸಿದರೆ ಕ್ರಮೇಣ ಅವರೂ ಅರ್ಥವಾಗತೊಡಗುತ್ತಾರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿಲ್ಲ. ಎಂದಿನಂತೆ ಉತ್ತಮ ಮಾತುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ನಿಮ್ಮ ವಸ್ತುನಿಷ್ಟ ವಿಮರ್ಶಾತ್ಮಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆ ಎ೦ದರೆ ತಪ್ಪೇನೂ ಆಗಲಾರದು. ಈಗ ನಿಮ್ಮ ಪ್ರತಿಕ್ರಿಯೆಯಿ೦ದ ನನ್ನ ಸಾಲುಗಳು ಮತ್ತೂ ಅರ್ಥಗರ್ಭಿತವಾಗಿವೆ. ಎರಡೂ ಬದಲಾವಣೆಗಳನ್ನು ಸ್ವೀಕರಿಸಿ, ತಿದ್ದಿದ್ದೇನೆ. ಸರಿಯಾಯಿತೇ ಎ೦ದು ತಿಳಿಸಬೇಕಾಗಿ ಆಶಿಸುವೆ. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಾಗಿ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲೂ ತಪ್ಪಾಗಿ ಇರಲಿಲ್ಲ, ನನ್ನ ಅಭಿಪ್ರಾಯ ಹೇಳಿದೆ ಅಷ್ಟೇ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ, ನನ್ನ ಸಾಲನ್ನೂ ಉಳಿಸಿಕೊ೦ಡು, ನಿಮ್ಮ ಅಭಿಪ್ರಾಯವನ್ನೂ ಸೇರಿಸಿ ಮತ್ತೊ೦ದು ಸಾಲನ್ನು ಸೇರಿಸಿದ್ದೇನೆ. ಸರಿಯೇ ತಿಳಿಸುವಿರೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ. ನಾನು ನಂಬುವ ಒಂದು ಸಾಲನ್ನು ಕನ್ನಡಕ್ಕೆ ಭಾಷಾಂತರಿಸದೆ ಹೇಳುತ್ತೇನೆ - Once you achieve one stage in life then it is almost impossible to get down from there!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸಾಲನ್ನು ನಾನು ಎತ್ತಿಕೊಳ್ಳಲೇ ಆಚಾರ್ಯರೇ, ನನ್ನ ಮು೦ದಿನ ಯೋಚಿಸಲೊ೦ದಿಷ್ಟು ಸರಣಿಗೆ ಸೇರಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎತ್ತಿಕೊಳ್ಳಿ. ನಾನೇನೂ ಇನ್ನೂ ಪೇಟೆಂಟ್ ಹಾಕಿಲ್ಲ. ಒಮ್ಮೆ ಪೇಟೆಂಟ್ ಹಾಕಿಕೊಂಡರೆ ಮಾತ್ರ ಕೃತಿಚೌರ್ಯದ ಆಪಾದನೆ ಹೊರಿಸುವೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಜೀವನದಲ್ಲಿ ಒಂದು ಮಟ್ಟವನ್ನು ತಲುಪಿದ ವ್ಯಕ್ತಿ, ಆ ಮಟ್ಟದಿಂದ ಕೆಳಕ್ಕಿಳಿಯುವುದು ಅಸಾಧ್ಯವೆನ್ನುವಷ್ಟು ಕಷ್ಟ ಸಾಧ್ಯ.>> ಆದರೆ, ಮನುಜ ದುಶ್ಚಟಗಳಿಗೆ ದಾಸನಾಗಿಬಿಟ್ಟರೆ ಇದೂ ಸಾಧ್ಯ, ಇನ್ನಾವ ಎತ್ತರದ ಮಟ್ಟದಿಂದ ಚರಂಡಿಗೆ ಇಳಿಯುವುದೂ ಸಾಧ್ಯ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, <<೧೦. ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ,ಅವರನ್ನು ಅರ್ಥಮಾಡಿಕೊಳ್ಳಲೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟ ವಾದುದು! ಆದರೆ ಒಬ್ಬರನ್ನು ಪ್ರೀತಿಸಿದರೆ ಕ್ರಮೇಣ ಅವರೂ ಅರ್ಥವಾಗತೊಡಗುತ್ತಾರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿಲ್ಲ!>> ನಿಜವಾಗಿಯೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುತ್ತಾರೆಯೇ ಅನ್ನುವುದೂ ಪ್ರಶ್ನಾರ್ಹ. ಒಬ್ಬ ವ್ಯಕ್ತಿಯನ್ನು ಅರಿತುಕೊಂಡು, ಆತನ ಗುಣನಡತೆಗಳನ್ನು ಮೆಚ್ಚಿಕೊಂಡಾಗ, ಆ ಮೆಚ್ಚುವಿಕೆಯನ್ನೇ ಪ್ರೀತಿ ಎಂದು ಗ್ರಹಿಸುವ ಸಾಧ್ಯತೆಗಳೇ ಜಾಸ್ತಿ ಎಂದು ನನ್ನೆಣಿಕೆ. ಆ ವ್ಯಕ್ತಿಯ ಗುಣನಡತೆಗಳಲ್ಲಿ ಗಂಭೀರ ಬದಲಾವಣೆಗಳು ಕಂಡುಬಂದಾಗಲೂ, ಈ ಮೆಚ್ಚುವಿಕೆ ಮುಂದುವರಿದಿದೆಯಾದರೆ, ಅದನ್ನು ಪ್ರೀತಿಯೆಂದು ಹೇಳಬಹುದೇನೋ. ಸ್ವಲ್ಪ ಯೋಚಿಸಿ ನೋಡಿ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವೂ ಅರ್ಥಪೂರ್ಣ ನಾವಡವ್ರೆ. ಸರಣಿ ಮುಂದುವರೆಯುತ್ತಿರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಭಿಪ್ರಾಯವೂ ಸರಿಯೇ. ಸರಿಯಾದ ಸಾಲನ್ನು ತಿಳಿಸುವ ಕೃಪೆ ಮಾಡಬೇಕೆ೦ದೂ, ಯಾ ಬದಲಾಯಿಸುವುದಿದ್ದರೆ ಮಾಡಬೇಕಾದ ಬದಲಾವಣೆಯನ್ನು ಸೂಚಿಸಬೇಕೆ೦ದು ಆಶಿಸುವೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚಿಸಲು ಒಂದಿಷ್ಟೇನು, ಸಾಕಷ್ಟು ಸರಕೇ ಇದೆ. ಮುಂದುವರೆಸಿರಿ. ಪ್ರತಿಕ್ರಿಯೆಗಳೂ ಅರ್ಥಪೂರ್ಣವಾಗಿದ್ದು ನಾನು ಎರಡನ್ನೂ ಆಸ್ವಾದಿಸುತ್ತಿರುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೇ, ನಿಮ್ಮೆಲ್ಲರ ಪ್ರೋತ್ಸಾಹ ಈ ಸರಣಿ ಜೀವ೦ತವಾಗಿರುವಲ್ಲಿ ತು೦ಬಾ ಸಹಕಾರವನ್ನು ನೀಡುತ್ತಿದೆ. ಅದೂ ಈ ಭಾಗದ ಚಿ೦ತನೆಗಳು ಹೆಚ್ಚು ವಿಮರ್ಶೆಗೊಳಗಾಗಿವೆ. ಇದಕ್ಕಿ೦ತ ಒಬ್ಬ ಲೇಖಕನಿಗೆ ಇನ್ನೇನು ಬೇಕು? ತಪ್ಪಿದ್ದಲ್ಲಿ ತೀಡಿ, ಅದನ್ನು ಸರಿಪಡಿಸಲು ತೋರುವ ಈ ಸರಣಿಯ ಖಾಯ೦ ಓದುಗರ ಪರಿಶ್ರಮವನ್ನು ಮಾಪನ ಮಾಡಲಾಗುವುದಿಲ್ಲ! ಅದಕ್ಕಾಗಿ ನೆಮ್ಮೆಲ್ಲರಿಗೆ ನಾನು ಋಣಿ ಎ೦ದಷ್ಟೇ ಹೇಳಬಲ್ಲೆ. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.