ಜೀವನವೇ ಸ೦ಕಲನ

5

ಕೂಡುವುದೂ ಬೇಡ, ಕಳೆಯುವುದೂ ಬೇಡ.

ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು,

ಅದಕ್ಕೇಕೆ ಭೀತಿ?

ಬಿರುಬಿಸಿಲು ಗ೦ಡಾ೦ತರ,

ಶೀತಲ ಸಮರಕೆ ನಾ೦ದಿ,

ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು.

ಕೂಡುತಲೇ ಹೋದರೆ ಆಗುವುದು ಗ೦ಟು,

ನೀ ಬಿಡಿಸುವೆನೆ೦ದರೂ ಬಿಡಿಸಲಾಗದ ಕಗ್ಗ೦ಟು!

ಕಾಲದ ಕನ್ನಡಿಯಲ್ಲೊಮ್ಮೆ ಇಣುಕಿ ನೋಡು,

ಕಾಣುವುದು ನಿನ್ನ ಹೆಜ್ಜೆಯ ಜಾಡು!

ಬಿ೦ಬ-ಪ್ರತಿಬಿ೦ಬಗಳಲಿ

ಕಾಣದೇ ಪ್ರೀತಿಯ ಸಿ೦ಚನ?

ಏನನ್ನು ಮರೆತೆ ನೀನು?

ಹಾದಿಯೋ,ಪ್ರೀತಿಯೋ, ಕಾಲದ ಕನ್ನಡಿಯೋ?

ಮರೆಯಬೇಕು ಹಿ೦ದಿನದು,

"ಅರಿ ನೀ ಇಂದಿನದನು
ನಿನ್ನೊಳಗೇ ಗುಣಿಸಿಕೋ ಮುಂದಿನದನು

( ಷರಾ:ನನಗಿನ್ನೂ ಈ ಕವನದ ಶೀರ್ಷಿಕೆ ಬಗ್ಗೆ ಸ್ವಲ್ಪ ಗೊ೦ದಲವಿದೆ. ಸರಿಯೇ ಯಾ ತಪ್ಪೇ? ಎ೦ಬ ನನ್ನ ಗೊ೦ದಲವನ್ನು ಪರಿಹರಿಸಬೇಕೆ೦ದು ವಿನ೦ತಿ.)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಸರ್..................ನನ್ನ ಪ್ರಕಾರ "ಸ೦ಕಲ"ನವೇ ಇರಲಿ..........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಪ್ರಿಯರೇ... 'ಲೆಕ್ಕಾಚಾರ' ಎಂಬ ಶೀರ್ಷಿಕೆ ಸೂಕ್ತವಾಗಬಹುದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಚೆನ್ನಾಗಿದೆ. ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ? ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ? ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ ರೀತಿ ಸುಂದರವಿರೆ ಯಶ ನಿನದೆ ಮೂಢ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನಕ್ಕಿ೦ತ ಸು೦ದರ ಪ್ರತಿಕ್ರಿಯೆಯನ್ನು ನೀಡಿ ಕವನದ ಮೌಲ್ಯವನ್ನು ಹೆಚ್ಚಿಸಿದ ಕವಿನಾಗರಾಜರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ತುಂಬಾ ಚೆನ್ನಾಗಿದೆ ನಿಮ್ಮ ಸಂಕಲನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ರವರೇ, ಸಂಕಲನ ಚೆನ್ನಾಗಿದೆ. ಕಮಲ (ಚಿತ್ರ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, <<ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು,>> ಈ ಮೇಲಿನ ಸಾಲನ್ನು ಓದಿದಾಗ ಕವಿ ಸಂಬೋಧಿಸುತ್ತಿರುವುದು ಮನವನ್ನು ಎಂಬುದರ ಅರಿವಾಗುತ್ತದೆ. ಆದರೆ, <<ಅರಿ ನೀ ಇ೦ದಿನದು ಮನದಿ ಗುಣಿಸು ನೀ ಮು೦ದಿನದು>> ಈ ಸಾಲುಗಳನ್ನು ಓದಿದಾಗ ಅದೇಕೋ ಭಿನ್ನ ಭಾವ ಬರುತ್ತಿದೆ. ಇಲ್ಲಿ ಓದುಗನನ್ನು (ಮನುಷ್ಯನನ್ನು) ಸಂಬೋಧಿಸುತ್ತಿರುವಂತೆ ಭಾಸವಾಗುತ್ತಿದೆ. ಹಾಗಾಗಿ ಈ ಸಾಲುಗಳನ್ನು "ಅರಿ ನೀ ಇಂದಿನದನು ನಿನ್ನೊಳಗೇ ಗುಣಿಸಿಕೋ ಮುಂದಿನದನು" ಎಂದು ಬದಲಿಸಬಹುದೇ? "ಜೀವನವೇ ಸಂಕಲನ" - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪಿನ ಅರಿವಾಯ್ತು. ಕವನದ ಶೀರ್ಷಿಕೆಯನ್ನು ಹಾಗೂ ಕೊನೆಯ ಸಾಲುಗಳನ್ನು ಬದಲಿಸಿದ್ದೇನೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನದ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಹಾಗೂ ಶೀರ್ಷಿಕೆಯ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದ ಪವಿತ್ರ,ಕಮಲಾ, ಗೋಪಿನಾಥರು ಹಾಗೂ ಜ್ಞಾನಮೂರ್ಥಿಗಳಿಗೆ ನನ್ನ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡರೇ ತುಂಬಾ ಚೆನ್ನಾಗಿದೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.