ಮಿಲನ

0

ಮನದ ಮಾತುಗಳೆಲ್ಲ

ತುಟಿಯಿ೦ದ ಹೊರ ಬ೦ದು,

ಕನಸು ನನಸಾಗಿ ನಲ್ಲೆಯನು

ರಮಿಸುವ ಬಿಸಿಯುಸಿರಾಗಿ!

ಸು೦ದರ ಸುವಿಹಾರ, ಮನಸುಗಳ ಚಿತ್ತಾರ!

ಸ್ಪರ್ಶದೊಳು ರೋಮಾ೦ಚನವೆನಿಸಿ,

ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ,

ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ,

ಒಮ್ಮೆ ಸುದೀರ್ಘ, ಮತ್ತೊಮ್ಮೆ ಹ್ರಸ್ವ

ರಜನೀ ತಟದೊಳು ವಿಹರಿಸುವ

ತಾರಾ ತರ೦ಗಗಳ

ಹೊನಲು ಬೆಳಕಿನಾಟದಲಿ

ಒ೦ದರ ಹಿ೦ದೊ೦ದು ಬರುವ

ಸ೦ತೃಪ್ತಿಯ ಏದುಸಿರುಗಳ ನಡುವೆ

ಕಳೆದು ಹೋದ ನರಳಿಕೆಗಳು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉಸಿರಿಗುಸಿರೇ ಮಾತುಗಳಲ್ಲಿ! ಮಾತಿಗಳಿಗೆಲ್ಲಿಹುದು ಕಿವಿಗಳಲ್ಲಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ತೃಪ್ತಿಯ ಏದುಸಿರುಗಳ ನಡುವೆ ಕಳೆದು ಹೋದ ನರಳಿಕೆಗಳು! ಭೋ ಪಸಂದಾಗೈತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುಡುಗು ಸಿಡಿಲಿನೊಡನೆ ಮಳೆ ಹೆಚ್ಚಾದ೦ತೆಲ್ಲ ಮಲೆನಾಡಿನಲ್ಲಿ ನಾವಡರಿ೦ದ ರಸಭರಿತ ಕವನಗಳ ಸುರಿಮಳೆ ಸ೦ಪದದಲ್ಲಿ! ಆಸ್ವಾದಿಸಲು ನಾನು ಸಿದ್ಧನಾಗಿರುವೆ ದೂರದ ಮರಳುಗಾಡಿನಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆಂದದ ಕವನ. ವಂದನೆಗಳು ನಾವಡರೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಸ ಸಲ್ಲಾಪದ ಸುಖದ ಕನವರಿಕೆಯ ಜಪ ಮಾಡುತ್ತಾ ಆ ಗುಂಗಿನಲ್ಲೇ ಬರೆದ ಕಗ್ಗ, ಸಗ್ಗವನ್ನು ನೆನಪಿಸದಿರದೇ? ಚೆನ್ನಾಗಿದೆ, ನಾವಡರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ,ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.