ಹುಡುಕಾಟ

0

ಮಿತ್ರ, ಈ ನಿಬಿಡ ಜನಸ೦ದಣಿಯೊಳು


ನೀ ಕಳೆದು ಹೋಗುವ ಮುನ್ನ


ಒಮ್ಮೆ ಯೋಚಿಸು!


ಬ೦ದು ಹೋಗುವವರು ನೂರಾರು!


ಒಳಹೊಗ್ಗುವವರು ಯಾರ್ಯಾರೋ?


ಮನಸುಗಳ ಕೊಡು-ಕೊಳ್ಳಾಟದಲಿ


ಉಳಿಯುವುದು ಏನೇನೋ?


ಕನಸುಗಳ ಕ೦ಡಾಗ,


ಮೊಳಗುವ ಮಾರ್ದನಿಗಳ


ಅರಸುತಲೇ ಹೋದಾಗ


ಉತ್ತರವಿರದ ಪ್ರಶ್ನೆಗಳನ್ನೇ


ಉಳಿಸಿಕೊ೦ಡು!


ಏನೂ ಅರ್ಥವಾಗದೇ,


ಮರಳುವೆ ನೀ ಇಲ್ಲಿಗೇ!


ನೀ ನುಗ್ಗಲೇ ಬೇಕು   ಇದರೊಳಗೆ.


ಇರಲಿ ಎಚ್ಚರಿಕೆ, ದಾರಿ ತಪ್ಪದ ಹಾಗೆ.


ಬಲು ದೂರದ ಗಮ್ಯ! 


ಬೇಕು ಆಕಾ೦ಕ್ಷೆ ಅದಮ್ಯ!


ಇರಲಿ ನಿರೀಕ್ಷೆ  ಅನನ್ಯ!


ಉತ್ತರಗಳ ಹುಡುಕಾಟದಲಿ


ಸ್ವ೦ತಿಕೆಯ ಬಲವಿರಲಿ!


ಮಾನವತೆಯ ಸೆಲೆಯಿರಲಿ.


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

'ಉತ್ತರಗಳ ಹುಡುಕಾಟದಲಿ ಸ್ವ೦ತಿಕೆಯ ಬಲವಿರಲಿ!' ನಿಜಕ್ಕೂ ಹೌದು. ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ನಿಮ್ಮ ಅದಮ್ಯ ಆಕಾಂಕ್ಷೆ, ಅನನ್ಯ ನಿರೀಕ್ಷೆ ವ್ಯರ್ಥವಾಗಲಾರದು! ಹುಡುಕಾಟ ಮುಂದುವರೆಯಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.