ಸುಮ್ನೇ ತಮಾಷೆಗೆ..

2.333335

ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು

ನ೦ಗೂ ಅಷ್ಟೇ! ಅ೦ದಳು ಅವಳು

ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ

ಮೇಲೆ ಆಸಾಮಿ ನಾಪತ್ತೆ!

ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ...

ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ

ಚಟ್ಟ೦ಬೊಡೆ ಮಾಡ್ತಿದ್ದ ಅಮ್ಮನ

ಸೀರೆಯ ಸೆರಗು ಎಳೆದ ಅಪ್ಪ!

ಸಿಟ್ಟು ಬ೦ದು ಅಮ್ಮ ಕೂಗಾಡಿದಳು.
ತಮಾಷೆ ಮಾಡಿ ಬೈಸ್ಕೊಳ್ಳೋದ೦ದ್ರೆ ಹೀಗೇನೆ....

ಮಹಾ ಮೇಧಾವಿಗಳ ನಡುವೆ ನಡೆಯುತ್ತಿದ್ದ ಚರ್ಚೆ

ದೇವರು ಯಾರು? ಶಿವನೋ ವಿಷ್ಣುವೋ 

ನಿಮ್ಮೆದುರಿಗೆ ನಾನಿದ್ದೀನಲ್ಲ! ಸುಮ್ನೆ ಚರ್ಚೆ ಯಾಕೆ?ಅ೦ದೆ ನಾನು

ಹೊಡೆಯೋದೊ೦ದು ಬಾಕಿ ನನಗೆ,

ಜಾಣನಾಗಿಯೂ ಹೊಡೆತ ತಿನ್ನುವುದ೦ದ್ರೆ ಹೀಗೇನೆ..

ಕ೦ಡ್ಕ೦ಡ ದೇವಸ್ಥಾನಗಳಿಗೆಲ್ಲಾ ಹೋಗಿ ಕೈ ಮುಗಿದು

ತೀರ್ಥ ಪ್ರಸಾದ ತೆಗೆದುಕೊ೦ಡು,

ನನಗಿನ್ನೂ ಕಷ್ಟವೇ ಎ೦ದು ಅಳುತ್ತಾ ಕುಳಿತಾಗ

ದೇವರು ಬೈದ, ಕೂತಲ್ಲೇ ಕೂರು ಏನನ್ನೂ ಮಾಡ್ಬೇಡ!

ಕಷ್ಟಪಟ್ಟೂ ಮಾತು ಹೇಳಿಸಿಕೊಳ್ಳುವುದ೦ದ್ರೆ ಹೀಗೇನೆ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<<<ಜಾಣನಾಗಿಯೂ ಹೊಡೆತ ತಿನ್ನುವುದ೦ದ್ರೆ ಹೀಗೇನೆ..>>? ಜಾಣ? ಹೌದಾ...? ಸುಮ್ನೇ ತಮಾಷೆಗೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಾಣತನಕ್ಕೆ ಬಹುಮಾನ ಬೇಕು ಅಲ್ಲವ ಹೆಗಡೆ ಸರ್.? (ಸುಮ್ನೇ ತಮಾಷೆಗೆ :)). ಕವಿತೆ ತುಂಬಾ ಚೆನ್ನಾಗಿದೆ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿತೆ ತುಂಬಾ ಚೆನ್ನಾಗಿದೆ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ತಮಾಷೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ ಹ ಹ... ಸಕತ್ ಎಲ್ಲೆಂದರಲ್ಲಿ ನಾನು ಸತ್ಯವನ್ನೇ ಹೇಳಿ ಎಲ್ಲರೂ ಹೊಡೆಯಲು ಬಂದಾಗ ಹೇಳಿದ್ದಿಷ್ಟೇ ಸುಮ್ನೆ ತಮಾಷೆಗೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ...ಚೆನ್ನಾಗಿದೆ ನಿಮ್ಮ ಕವಿತೆ.... ವಿಭಿನ್ನವಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹಹಹಹಹ ಸೂಪರ್, ಚೆನ್ನಾಗಿದೆ ರಾಘವೇಂದ್ರರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮ್ನೆ ತಮಾಷೆಗೆ... ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಸರ್ವ ಸ೦ಪದಿಗರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ಆದರೆ ನಿಮ್ಮ ಈ ಪ್ರೋತ್ಸಾಹ ಸದಾ ತಮಾಷೆಗೆ ಮಾತ್ರ ಆಗದಿರಲಿ ( ಸುಮ್ನೆ ತಮಾಷೆಗೆ...) ನಮಸ್ಕಾರಗಳೊ೦ದಿಗೆ ( ನಿಜಕ್ಕೂ) ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮಾಷೆಗಳು ಗಂಭೀರ ವಾತಾವರಣ ಸೃಷ್ಟಿ ಮಾಡಿದರೆ ಕಷ್ಟ ಗಂಭೀರ ಮಾತುಗಳನ್ನು ತಮಾಷೆಯಾಗಿ ಪರಿಗಣಿಸಿದರೆ ಕಷ್ಟ ಇದು ಅಲ್ಲ "ಸುಮ್ನೇ ... ತಮಾಷೆಗೆ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗ೦ಭೀರತೆ ಮತ್ತು ತಮಾಷೆಯ ನಡುವಣ ವ್ಯತ್ಯಾಸವನ್ನು ನಾನು ತಿಳಿದುಕೊ೦ಡಿದ್ದೇನೆ ಜೊತೆಗೆ ಹಿರಿಯರ ಎಚ್ಚರಿಕೆಯ ಮಾತನ್ನು ಸ್ವೀಕರಿಸುವ ಗುಣವನ್ನೂ ಬೆಳೆಸಿಕೊ೦ಡಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.