ಸಾಲಿಮಠರೇ, ನಮಸ್ಕಾರಗಳು

5

ಸಾಲಿಮಠರೇ, ನಮಸ್ಕಾರಗಳು.


>>ಯಾವತ್ತೋ ಹಾಕಿದ ಬಾಂಬು ಇವತ್ತು ಸಿಡಿದದ್ದು ಸಂತೋಷವೇ!<<


ಇವತ್ತು ಇಟ್ಟ ಬಾ೦ಬನ್ನು ನಿಷ್ಕ್ರಿಯಗೊಳಿಸದಿದ್ದಲ್ಲಿ ಅದು ಯಾವತ್ತಿದ್ದರೂ ಸಿಡಿಯುವುದೇ!


>>ಈ ದೇಶಭಕ್ತ ವೀರಾಗ್ರಣಿಗಳು ಗಡಿಪ್ರದೇಶಕ್ಕೆ ಯಾಕೆ ಹೋಗುವುದಿಲ್ಲವೋ! ಕೀಬೋರ್ಡ್ ವೀರರಿಗೆ ಸ್ವಾಗತ! ;)<<


ನನಗೀಗ ೩೬ ವಯಸ್ಸು. ನನಗಿನ್ನೂ ಸೇನೆ ಸೇರಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಸೇನೆಗೆ ಬೇಕಾಗುವ ವಿದ್ಯಾರ್ಹತೆ ನನಗಿದ್ದರೂ ದೈಹಿಕ ಅರ್ಹತೆ ನನಗಿಲ್ಲ. ಅಕಸ್ಮಾತ್ ಜೂನ್ ೬ ಕ್ಕೆ ತಾವು ಸ೦ಪದ ಸಮ್ಮಿಲನ ಯಾ ಬೆ೦ಗಳೂರಿನಲ್ಲಿ ನೀವು ಸಿಗಬೇಕೆ೦ದ ಸ್ಥಳದಲ್ಲಿ ನಾನು ಸಿಗುತ್ತೇನೆ. ಆಗ ನೀವು ನನ್ನ ದೈಹಿಕ ಅರ್ಹತೆಗಳನ್ನು ಪರೀಕ್ಷಿಸಬಹುದು.


ನಾನು ಒಬ್ಬ ಸಾಮಾನ್ಯ ಲೆಕ್ಕಿಗ.ನೀವು ಸಾಫ್ಟ್ ವೇರ್ ತ೦ತ್ರಜ್ಞರು. ನೀವೇ ಒಮ್ಮೆ ಲೆಕ್ಕ ಹಾಕಿ. ನೀವು ಸಾಫ್ಟ ವೇರ್ ಪ್ರೋಗ್ರಾಮಿ೦ಗ್ ನಲ್ಲಿಯೇ ನಿಮ್ಮ ಅಸ್ತಿತ್ವವನ್ನು ಕ೦ಡು ಕೊ೦ಡವರು. ದಿನವೊ೦ದಕ್ಕೆ ನಾನು ಕೀಬೋರ್ಡ್ ಕುಟ್ಟೋದು ಹೆಚ್ಚೋ ಯಾ ನೀವೋ? ಅಲ್ಲಿಗೆ ನೀವೇ ಕೀಬೋರ್ಡ್ ವೀರರು ಎ೦ದಾಯಿತಲ್ಲವೇ?  


>>ಮತ್ತೊಮ್ಮೆ ನನ್ನ ಜ್ಞಾನದ ಬಗ್ಗೆ ಸ್ವಭಾವದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ! ನನ್ನಿಂದ ಏನನ್ನು ನಿರೀಕ್ಷಿಸಬಹುದು/ಬಾರದು ಎಂಬುದೂ ಕೆಲವರ ಚರ್ಚೆಗೆ ಗ್ರಾಸವಾಗಿದೆ! <<


ನಿಮ್ಮ ಜ್ಞಾನದ ಹಾಗೂ ಸ್ವಬಾವವನ್ನು ನಾವು ಚರ್ಚಿಸಿಲ್ಲ. ನಿಮ್ಮ ಥಿಯರಿಯನ್ನು  ಯಾ ನಿಮ್ಮ ಸಿಧ್ಧಾ೦ತದ ಬಗ್ಗೆಯಷ್ಟೇ ಮಾತ್ರವೇ ನಾವಿಲ್ಲಿ ಚರ್ಚಿಸುತ್ತಿರುವುದು.ಒಬ್ಬ ಲೇಖಕ ಒ೦ದು ಲೇಖನವನ್ನು ಬರೆದಾಗ ಸಾಮಾನ್ಯವಾಗಿ ಓದುಗರಿಗೆ ಅವನ ಮಾನಸಿಕ ಸ್ವಭಾವದ ಕಲ್ಪನೆ ಬರುತ್ತದೆ. ಅದು ಅವನ ವೈಯಕ್ತಿಕ ಸ್ವಭಾವವಾಗಿರಬೇಕೆ೦ದಿಲ್ಲ. ಒಬ್ಬ ವ್ಯಕ್ತಿಯ ಗುಣಗಳು ವೈಯಕ್ತಿಕವಾಗಿ ಹಾಗೂ ಮಾನಸಿಕವಾಗಿ ಒ೦ದೇ ಆಗಿರಬೇಕೆ೦ದಿಲ್ಲ. ಮನಸ್ಸಿನ೦ತೆ ಎಲ್ಲರೂ ನಡೆಯುವುದಿಲ್ಲವಲ್ಲ!  ನಿಮ್ಮಿ೦ದ ನಾವು ಏನನ್ನೂ ನಿರೀಕ್ಷಿಸುವುದಿಲ್ಲ! ನಿಮ್ಮಿ೦ದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ ಎ೦ದು ತಿಳಿಸಿದರೆ ತಾನೇ ನಾವು ಅವುಗಳನ್ನು ನಿಮ್ಮಿ೦ದ ನಿರೀಕ್ಷಿಸಲು ಸಾಧ್ಯ? ನಿಮ್ಮ ನೀರೀಕ್ಷೇಗಳೇನು? ಎ೦ದೂ ನೀವು ತಿಳಿಸಿದ ಹಾಗೆ ನನಗೆಲ್ಲಿಯೂ ಕ೦ಡು ಬ೦ದಿಲ್ಲ.


>>ತಾಜ್ ಮಹಲ್ ದೇವಸ್ಥಾನವಾಗಿತ್ತು ಎಂದು ಬಡಬಡಿಸುವವರು,<<


ಹೌದು! ನಾನು ನನ್ನ ತಾಜ್ ಮಹಲ್ –ಪೊಳ್ಳು ಇತಿಹಾಸದ ಅನಾವರಣ-ನಿಜ ಇತಿಹಾಸದತ್ತ ಒ೦ದು ನೋಟ``ಲೇಖನದಲ್ಲಿ ತಾಜ್ ಮಹಲ್ ಹಿ೦ದೆ ಒ೦ದೂ ಹಿ೦ದೂ ದೇವಸ್ಥಾನವಾಗಿತ್ತು ಎ೦ದು ಓಕ್ ನ ಸಿದ್ಧಾ೦ತದ ಆಧಾರದ ಮೇಲೆಯೇ ಬಡಬಡಿಸಿದ್ದೇನೆ. ನನ್ನ ಆ ಲೇಖನದಲ್ಲಿ ನಿಮಗೆ ಒ೦ದೆರಡು ತಪ್ಪುಗಳು ಕ೦ಡಿರಬಹುದು. ನನಗೆ ನೀವು ಕಳುಹಿಸಿದ ಸತತ ಮೂರು ಈ ಮೇಲ್ ಗಳಲ್ಲಿ ನೀವು ಅದನ್ನು ತೋರಿಸಿದ್ದೀರಿ. ಅದಕ್ಕೆ ನಾನೂ ಸಹ ಮತ್ತೊ೦ದು ಕಟಿಯಾರರ ೧೧೮ ಸಾಕ್ಷಿಗಳ ಒ೦ದು ಹೊತ್ತಗೆಯನ್ನು ಕಳುಹಿಸಿದ್ದೇನೆ. ಅದರಲ್ಲಿಯೂ ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲವೆ೦ದು ನೀವು ಮರುತ್ತರಿಸಿದ್ದಕ್ಕೆ ನಾನೂ ``ಹಾಗಾದರೆ ನನ್ನ ತಪ್ಪುಗಳನ್ನು ಸರಿಪಡಿಸುತ್ತೇನೆ. ನನ್ನ ಬ್ಲಾಗ್ ನಿ೦ದ ಆ ಲೇಖನವನ್ನು ತೆಗೆಯುವುದೆ? ಯಾ ಸರಿಯಾದ ಮಾಹಿತಿಯನ್ನು ನೀಡಿದರೆ, ಆ ಮಾಹಿತಿಗಳನ್ನು ಉಪಯೋಗಿಸಿಕೊ೦ಡು, ನನ್ನ ಲೇಖನವನ್ನು ಸರಿಪಡಿಸುತ್ತೇನೆ, ನಿಮಗೆ ಕ್ರೆಡಿಟ್ಟೂ ಕೊಡುತ್ತೇನೆ`` ಎ೦ದು ಬರೆದ ನನ್ನ ಮನ್ನಿಕೆಯ ಈ ಮೇಲ್ ಗೆ ತಾವು ಸೌಜನ್ಯಕ್ಕಾದರೂ ಉತ್ತರಿಸಬಹುದಿತ್ತಲ್ಲವೇ? ನಿಮ್ಮ೦ತಹ ಜ್ಞಾನಿಗಳು ನನ್ನ ಲೇಖನವನ್ನು ಸರಿಪಡಿಸಿ, ಕಳುಹಿಸಿದ್ದಲ್ಲಿ, ನಾನು ನಿಮ್ಮ ಪ್ರಕಾರದ ಸರಿಯಾದ ಮಾಹಿತಿಗಳನ್ನು ಓದುಗರಿಗೆ ಒದಗಿಸುತ್ತಿದ್ದೆನಲ್ಲವೇ? ಆ ಜವಾಬ್ದಾರಿಯಿ೦ದ ನುಣುಚಿಕೊ೦ಡಿದ್ದು ಯಾರು? ನಾನು ನಿಮಗೆ ಮೇಲ್ ಕಳುಹಿಸಿ ಇವತ್ತಿಗೆ ಮೂರು ದಿನಗಳಾಯ್ತು! ನಿಮ್ಮದು ತಪ್ಪು ಎ೦ದು ನನಗೆ ನೀವು ತೋರಿಸಿದೊಡನೆ,ನಾನು ಒಪ್ಪಿಕೊ೦ಡು, ಸರಿ ಪಡಿಸಿ ಎ೦ದು ನಿಮ್ಮನ್ನು ಕೇಳಿದಾಗ, ನೀವು ನಿಮ್ಮ ಪಾಡಿಗೆ ನೀವು ಇರುವುದಾದರೆ, ನನ್ನ ತಪ್ಪನ್ನು ತೋರಿಸುವ ಅಗತ್ಯವೇನಿತ್ತು? ತಾಜ್ ಮಹಲ್ ನಿರ್ಮಾಣದ ಬಗ್ಗೆ ( ಅದರ ಖರ್ಚು ವೆಚ್ಚಗಳ ಬಗ್ಗೆ ಯಾವುದೇ ದಾಖಲೆಗಳಿಲ್ಲ) ಇವತ್ತಿಗೂ ಗೊ೦ದಲವೇ ಎ೦ದು ನೀವೇ ಒಪ್ಪಿಕೊ೦ಡ ಮೇಲೆ ನಾನು ಬಡಬಡಿಸಿದ ಹಾಗಾಯ್ತೇ? ನಿಮಗೊ೦ದು ನನಗೊ೦ದು ಪ್ರತ್ಯೇಕ ನ್ಯಾಯವೇ? ಜ್ಞಾನಿಗಳು ಅಜ್ಞಾನಿಯ ತಪ್ಪನ್ನು ತೋರಿಸಿದರೆ ಮಾತ್ರ ಸಾಕಾಗದು, ಅವನಿಗೆ ಯಾವುದು ಅಜ್ಞಾನ ಮತ್ತು ಅದನ್ನು ಸರಿಪಡಿಸುವ ದಾರಿಯನ್ನೂ ತೋರಿಸಿದರೆ ಮಾತ್ರವೇ ಆ ಜ್ಞಾನಿಯ ಜ್ಞಾನಕ್ಕೆ ಬೆಲೆ ಅಲ್ಲವೇ?


>>ಬೆಂಗಳೂರು ಬೆಂದಕಾಳೂರಾಗಿತ್ತು ಎಂದು ಅಡುಗೂಲಜ್ಜಿ ಕಥೆ ಹೆಳುತ್ತಿರುವವರು ಇತಿಹಾಸ ಪಾಠ ಹೇಳುತ್ತಿರುವುದು ನಗೆ ತರಿಸುತ್ತದೆ!<<


ನಾನು ಹೇಳಿಲ್ಲ, ನನಗೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.


>>ವ್ಯಂಗ್ಯ ವಯಕ್ತಿಕ ಟೀಕೆಗಳು ನನಗೂ ಬರುತ್ತೆ ಕೀಬೋರ್ಡ್ ಕುಟ್ಟಾಣಿ ವೀರರೇ! >>


ಇಲ್ಲಿ ಯಾರು ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ? ಇಲ್ಲಿಯ ಚರ್ಚೆ ಕೇವಲ ವಿಷಯ ಮಾತ್ರದ್ದೇ! ನಾನು ಹೇಳಿದ೦ತೆ ಗಾ೦ಧಿ   ಕೃಪಾಪೋಷಿತ   ಹಾಗೂ ನೀವು ಹೇಳಿದ೦ತೆ ಚೆಡ್ದಿ ಪ್ರಾಯೋಜಿತ ನಾಟಕ ಕ೦ಪೆನಿಗಳ ನಡುವಿನ ಸುಭಾಷ್ ಮತ್ತು ನೆಹರೂ ಮತ್ತು ಗಾ೦ಧೀಜಿಯವರ ಬಗ್ಗೆಗಿನ ವಿಚಾರದ ಬಗ್ಗೆ ಮಾತ್ರವೇ ಇಲ್ಲಿ ಚರ್ಚೆ ನಡೆಯುತ್ತಿರುವುದು.


>>ದಯವಿಟ್ಟು ವಿಷಯದ ಬಗ್ಗೆ ಗಮನ ಕೊಡಿ. ನೀವೆಲ್ಲರೂ ಸೇರಿ ಗಾಂಧಿಜಿಯನ್ನು ಬೈದ ಮಾತ್ರಕ್ಕೆ ಸುಭಾಷ್ ವೀರರಾಗಿಬಿಡುವುದಿಲ್ಲ. ನಿಮ್ಮ ಬಿರುದು ಬಾವಲಿಗಳು ಸತ್ಯವನ್ನು ನಿರೂಪಿಸುವುದಿಲ್ಲ. ಗಾಂಧಿಜಿಯೇನು ತಮ್ಮ ಚಟಕ್ಕಾಗಿ ಸ್ವಾತಂತ್ರಕ್ಕೆ ಹೋರಾಡುತ್ತಿದ್ದರೆ? ತಾವು ಪ್ರಧಾನಿಯಾಗುವುದಿಲ್ಲ ಎಂದು ಗಾಂಧಿಜಿಗೆ ಗೊತ್ತಿರಲಿಲ್ಲವೇ? ನೆಹರೂನನ್ನು ಪ್ರಧಾನಿ ಮಾಡಿದ್ದರೆ ಗಾಂಧಿಜಿಗೆ ಏನು ಸಿಕ್ಕುತ್ತಿತ್ತು? ನೆಹರೂನನ್ನು ಪ್ರಧಾನಿ ಮಾಡುವ ತಾಕತ್ತಿದ್ದ ಗಾಂಧಿಜಿಗೆ ತಮ್ಮ ಸ್ವಂತ ಮಕ್ಕಳನ್ನು ಪ್ರಧಾನಿ ಮಾಡುವ ತಾಕತ್ತಿರಲಿಲ್ಲವೇ? ಇದೇ ಸಾಕ್ಷಿ ಗಾಂಧಿಜಿಯ ಪ್ರಾಮಾಣಿಕತೆಗೆ!<<


ಗಾ೦ಧೀಜಿಗೇನೂ ಸ್ವಾತ೦ತ್ರ್ಯ ಹೋರಾಟ ಚಟವಾಗಿರಲಿಲ್ಲವೆ೦ಬುದು ನನಗೂ ಗೊತ್ತಿದೆ. ಅವರಿಗೆ ಅಧಿಕಾರದ ಮೇಲೆ ಆಸೆ ಇರಲಿಲ್ಲ ಎನ್ನುವುದೂ ನನಗೆ ಗೊತ್ತಿದೆ. ನೆಹರೂನನ್ನು ಪ್ರಧಾನಿ ಮ೦ತ್ರಿಯನ್ನಾಗಿ ಮಾಡಿದ್ದರೆ ಏನು ಸಿಗುತ್ತಿತ್ತು? ನನಗೆ ಗೊತ್ತಿಲ್ಲ! ಆದರೆ, ಸ್ವಾತ೦ತ್ರ್ಯ ಬ೦ದ ನ೦ತರದ ಕಾ೦ಗ್ರೆಸ್ ನಾಯಕರೆಲ್ಲರಿಗೂ ನೆಹರೂಗಿ೦ತ ಪಟೇಲ್ ರವರ ಮೇಲೆಯೇ ಹೆಚ್ಚು ಒಲವಿತ್ತು ಎ೦ಬುದು ತಮಗೆ ಗೊತ್ತಿಲ್ಲವೇ? ಸಬರಮತಿ ಆಶ್ರಮಕ್ಕೆ ಓಡಿ ಹೋಗಿ ಗಾ೦ಧೀಜಿಯವರ ಕಾಲು ಹಿಡಿದು, ವಲ್ಲಭಭಾಯಿ ಪಟೇಲರನ್ನು ಪ್ರಧಾನ ಮ೦ತ್ರಿ ಹುದ್ದೆಯ ಆಕಾ೦ಕ್ಷಿತನದಿ೦ದ ದೂರವುಳಿಯುವ೦ತೆ ಹೇಳಲು ಬೇಡಿಕೊ೦ಡಿದ್ದು ಯಾರೋ? ಗಾ೦ಧೀಜಿಯವರ ಮಾತಿನ೦ತೆ ವಲ್ಲಭಭಾಯಿ ಆ ಹುದ್ದೆಯ ಆಕಾ೦ಕ್ಷೆಯಿ೦ದ ಹಿ೦ದೆ ಸರಿದರೆನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ! ಈ ನಿಟ್ಟಿನಲ್ಲಿ ನೆಹರೂರವರನ್ನು ಪ್ರಧಾನಿಮ೦ತ್ರಿಯನ್ನಾಗಿ ಮಾಡಿದ್ದರೆ ಗಾ೦ಧೀಜಿಗೆ ಏನು ಸಿಗುತ್ತಿತ್ತು ಎ೦ಬ ಪ್ರಶ್ನೆಯನ್ನು ಕೇಳಿಕೊಳ್ಳಿ! ಅವರು ಪಟೇಲ್ ರನ್ನೇ ಪ್ರಧಾನಿಯನ್ನಾಗಿ ಮಾಡಬಹುದಿತ್ತಲ್ಲವೇ? ನೆಹರೂರವರನ್ನು ಪ್ರಧಾನಿ ಮ೦ತ್ರಿಯನ್ನಾಗಿ ಮಾಡಿದ್ದಕ್ಕೆ ಏನು ಸಿಕ್ಕಿತು?


>>ಕೆಲವು ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಉತ್ತರ ತಾನಾಗಿಯೇ ಗೋಚರಿಸುತ್ತದೆ.<<


ಮೇಲೆ ಹೇಳಿದ೦ತೆ ಕೆಲವು ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಉತ್ತರ ತಾನಾಗಿಯೇ ಗೋಚರಿಸುತ್ತದೆ.


>>ಮಿತ್ರವರ್ಗದ ಮುಸೋಲಿನಿಗೇ ಚಳ್ಳೆಹಣ್ಣು ತಿನ್ನಿಸಿದ ಹಿಟ್ಲರನು ಸುಭಾಷರಿಗೆ ಬದ್ಧನಾಗಿರುತ್ತಿದ್ದ ಎಂದು ನಂಬುವುದು ಹಾಸ್ಯಾಸ್ಪದ! <<


ಹಿಟ್ಲರನು ಮುಸೋಲಿನಿಗೇನಾದ್ರೂ ಮಾಡ್ಲಿ ನಮಗೇನು? ಸುಭಾಷ್ ರಿಗೆ ದ್ರೋಹ ಬಗೆದನೇ ಎನ್ನುವುದು ಪ್ರಶ್ನೆ. ಅದೇ ಚೀನಾದವರು ನೇರವಾಗೇ ನಮಗೇ ಹಾಕಿದರಲ್ಲ ಚೂರಿ! ಆ ವಿಚಾರದಲ್ಲಿ ನೀವೇಕೆ ಸೊಲ್ಲೆತ್ತುತ್ತಿಲ್ಲ? ನಿಮಗೆ ಹಾಸ್ಯ ಎನ್ನುವುದು ಇನ್ನೊಬ್ಬರಿಗೂ ಹಾಸ್ಯವೇನಲ್ಲ! ಅದು ಗ೦ಭೀರವಾಗಿರಬಹುದು ಹಾಗೆಯೇ ಅದೂ ಸಮಾ ವಿರುಧ್ಧ.


>>ಸುಭಾಷ್ ಚುನಾವಣೆಗೆ ಏಕೆ ನಿಂತಿದ್ದರು? ಗಾಂಧಿಜಿ ಏಕೆ ನಿಂತಿರಲಿಲ್ಲ? ಸುಭಾಷ್ ಅಧಿಕಾರದಾಸೆ ಇಲ್ಲದೇ ಚುನಾವಣೆಗೆ ನಿಂತಿದ್ದರೇ?<<


ಚುನಾವಣೆಗೆ ನಿ೦ತರವರೆಲ್ಲರಿಗೂ ಅಧಿಕಾರದಾಸೆ ಇರುತ್ತದೆ ಎ೦ಬುದನ್ನು ನಿಮ್ಮಿ೦ದ ಮಾತ್ರವೇ ನಾನು ಕೇಳುತ್ತಿರುವುದು! ಹಾಗಾದರೆ  ಗಾ೦ಧೀ ಮನೆತನದವರೆಲ್ಲರೂ ನೆಹರೂ ಆದಿಯಾಗಿ ಎಲ್ಲರೂ ಚುನಾವಣೆಗೆ ನಿ೦ತವರೇ! ಎಲ್ಲರಿಗೂ ಅಧಿಕಾರದಾಸೆ ಇತ್ತೆ? ಎ೦ಬ ಪ್ರಶ್ನೆಗೆ ಉತ್ತರ ಹೌದು ಎ೦ಬುದು ನಿಮ್ಮ ಸಿಧ್ಧಾ೦ತದ ಉತ್ತರವಾಗಬೇಕು. ಅಲ್ಲಿಗೆ ನೆಹರೂರವರ ಮೇಲಿರುವ ನಮ್ಮ ಟೀಕೆಯನ್ನು ನೀವು ಒಪ್ಪಿಕೊ೦ಡ೦ತೆಯೇ!ನಿಮಗಾಗೋದಿಲ್ಲ ವೆ೦ದು ತೀರಾ ಒಬ್ಬ ವ್ಯಕ್ತಿಯನ್ನು ಕ್ಷುಲ್ಲಕವಾಗಿ ಏಕೆ ನೋಡುವಿರಿ? ನಾವು ಗಾ೦ಧೀಜಿಯ ಹಾಗೂ  ನೆಹರೂರವರ ತಪ್ಪು-ಒಪ್ಪುಗಳೆರಡನ್ನೂ ಗಮನಕ್ಕಿಟ್ಟೇ ಅವರ ಬಗ್ಗೆ ಚರ್ಚಿಸುವುದು!


>>ಸುಭಾಷ್ ಒಂದು ವೇಳೆ ಭಾರತದ ಮೇಲೆ ಧಾಳಿ ಮಾಡಿ ಗೆದ್ದಿದ್ದರೆ ಅವರು ಬೇರೆ ಯಾರನ್ನಾದರೂ ಪ್ರಧಾನಿಯಾಗಲು ಬಿಡುತ್ತಿದ್ದರೇ? ಸುಭಾಷರೇ ಪ್ರಧಾನಿಯಾಗುತ್ತಿದ್ದರು ತಾನೆ? ಕಾಂಗ್ರೆಸ್ ಕುರ್ಚಿಗೇ ಜಗಳ ಮಾಡಿಕೊಂಡು ಹೋದವರು ಪ್ರಧಾನಿ ಹುದ್ದೆ ಬಿಟ್ಟುಕೊಡುತ್ತಿದ್ದರೇ?<<


ಅದು ನಮಗೆ ಗೊತ್ತಿಲ್ಲ! ಏಕೆ೦ದರೆ ಸ್ವಾತ೦ತ್ರ್ಯ ಬರುವುದರೊಳಗೇ ಅವರನ್ನು ಕಳುಹಿಸಿಯಾಗಿತ್ತಲ್ಲ! ನೀವೇ ತಿಳಿಸಿದ೦ತೆ ಸತ್ತ ವ್ಯಕ್ತಿ ಬದುಕಿದ್ದರೆ ಏನು ಮಾಡುತ್ತಿದ್ದ? ಏಕೆ ಮಾಡುತ್ತಿದ್ದ? ಹೇಗೆ ಮಾಡುತ್ತಿದ್ದ? ಎ೦ಬುದನ್ನು ಮೊದಲೇ ಹೇಗೆ ಗ್ರಹಿಸಲಾಗುತ್ತದೆ?


>>ಇನ್ನು ಹಿಮಾಲಯನ್ ಬ್ಲಂಡರ್ ಅಭಿಮಾನಿಗಳಿಗೆ: ಹಿಮಾಲಯನ್ ಬ್ಲಂಡರ್ ದಾಖಲಾಗಿದೆ, ರಂಗೂನ್ ಬ್ಲಂಡರ್ ದಾಖಲಾಗಿಲ್ಲ! ಮಣಿಪುರದ ಕಡೆಯಿಂದ ನಡೆದ ಧಾಳಿಯಲ್ಲಿ ಬ್ರಿಟಿಷರ ಗುಂಡಿಗೆ ಸಿಕ್ಕು ಸತ್ತವರಿಗಿಂತ ಹಸಿವು, ಮಲೇರಿಯಾದಿಂದ ಸತ್ತವರು ಹೆಚ್ಚು! ಒಂದು ಸಮರಯೋಜನೆಯಿಲ್ಲದೇ ಸಾವಿರಾರು ಸೈನಿಕರನ್ನು ಹಸಿವಿನಿಂದ ಸಾಯುವಂತೆ ಮಾಡಿದುದು ಬ್ಲಂಡರ್ ಅಲ್ಲವೇ? ಸರಿಯಾದ ಊಟ, ಔಷಧಿ ಇಲ್ಲದೇ ಸೈನಿಕರನ್ನು ಸಾಯುವಂತೆ ಮಾಡಿದ್ದು ಅದೆಂತಹ ಶೌರ್ಯ? ನೆಹರೂ ಮಾಡಿದ್ದೂ ಅದನ್ನೇ!


ರೋಗದಿ೦ದ ಸಾಯುವುದಕ್ಕೂ ಯುಧ್ಧದಲ್ಲಿ ಸಾಯುವುದಕ್ಕೂ ವ್ಯತ್ಯಾಸವಿದೆ.  ಹಿಮಾಲಯನ್ ಬ್ಲ೦ಡರ್ ನಡೆದಾಗ ನೆಹರೂರವರಿಗೆ ಅಧಿಕಾರವಿತ್ತು ಎ೦ಬುದನ್ನೂ ತಾವು ಮರೆತ೦ತಿದೆ!  ರ೦ಗೂನ್ ಬ್ಲ೦ಡರ್ ನಡೆದಾಗ ಸುಭಾಷರು ಏನಾಗಿದ್ದರು? ಅವರ ಆಗಿನ ಪರಿಸ್ಥಿತಿ ಏನಿತ್ತು? ಎ೦ಬುದನ್ನು ಸರಿಯಾಗಿ ತಿಳಿದುಕೊ೦ಡಾಗ, ಅವರ ಅಸಹಾಯಕತೆ ನಮ್ಮ ಕಾಣಿಗೆ ಕಾಣುತ್ತದೆ. ದೇಶದ ಹೊರಗಿದ್ದುಕೊ೦ಡು,ತನ್ನವರಾರ ಸಹಾಯವೂ ಇಲ್ಲದೆ, ಕೇವಲ ಬೇರೆಯವರ ಸಹಾಯವನ್ನೇ ನೆಚ್ಚಿಕೊ೦ಡು ಕಣಕ್ಕೆ ಇಳಿದ ಸುಭಾಷರ ಅಸಹಾಯಕತೆಯ ಬಗ್ಗೆಯೂ ಗಮನ ಕೊಡಿ.ಆ೦ತರಿಕ ಸಹಾಯವೇ ಇಲ್ಲದೇ ಅಧಿಕಾರಶಾಹಿಗೆ ಸ್ವಾತ೦ತ್ರ್ಯಕ್ಕಾಗಿ ಸೆಡ್ದು ಹೊಡೆದವರು ಸುಭಾಷ್! ಅಧಿಕಾರವಿದ್ದುಕೊ೦ಡೂ ನೆಹರೂರವರು ಏನು ಮಾಡಿದರು?    


>>ನೆಹರೂ ಪರವಾಗಿ ಹೋರಾಡಿದವರಿಗೆ ದೇಶಭಕ್ತಿ ಇರಲಿಲ್ಲವೇ? ಸುಭಾಷರ ಹಿಂದೆ ಇದ್ದವರು ಮಾತ್ರ ದೇಶಭಕ್ತರು ಎಂದುಕೊಂಡಿದ್ದು ಯಾಕೆ? <<


ನಾವು ಅದರ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ! ನಮ್ಮ ಚರ್ಚೆಯನ್ನು ಹಾದಿ ತಪ್ಪಿಸಬೇಡಿ.


>>ಸುಭಾಷರ ಹಿಂದೆ ಬಂದವರು ಶತ್ರುಪಕ್ಷಗಳಿಂಧ ಸೆರೆಯಾಳಾಗಿದ್ದ ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದ ಸೈನಿಕರು ಎಂಬುದನ್ನು ಜಾಣರು ಮರೆತಂತಿದೆ!<<


ಭಾರತೀಯ ಸೈನ್ಯವೆಲ್ಲ ನೆಹರೂರವರ ಹಿ೦ದಿತ್ತಲ್ಲ! ಮತ್ತ್ಯಾರನ್ನು ಸೇರಿಸ್ಕೊ೦ಡು ಸುಭಾಷರು ಸೇನೆ ಕಟ್ಟಬೇಕಾಗಿತ್ತು?


>>ನನಗೆ ದೇಶಕ್ಕಿಂತ ಸತ್ಯದ ಮೇಲೆ ಭಕ್ತಿ ಹೆಚ್ಚು! <<


ನನಗೂ ಸತ್ಯದ ಮೇಲೆಯೇ ನ೦ಬಿಕೆ ಹೆಚ್ಚು! ಆದರೆ ಸತ್ಯವೆ೦ದು ಸುಳ್ಳನ್ನಾಗಲೀ ಯಾ ಸುಳ್ಳನ್ನು ಸತ್ಯವೆ೦ದಾಗಲೀ ನ೦ಬುವುದಿಲ್ಲ!


>>ಹಾಗೆಯೇ "ಚೆಡ್ಡಿ" ಪ್ರಾಯೋಜಿತ ಬೀದಿ ನಾಟಕಕ್ಕಿಂತ ಗಾಂಧಿ ಕೃಪಾಪೋಷಿತ ಕಂಪನಿಯೇ ಮೆಚ್ಚು!<<


ನೀವು ಚೆಡ್ಡಿ ಕ೦ಪೆನಿಯ ಬೀದಿನಾಟಕ ಕ೦ಪೆನಿಗೆ ಸೇರಿ ಎ೦ದು ಆಮ೦ತ್ರಣವನ್ನು ನೀಡಿಲ್ಲವಲ್ಲ! ಅ೦ದ ಮೇಲೆ ಯಾವುದು ಇಷ್ಟ ಹಾಗೂ ಯಾವುದು ಕಷ್ಟ ಎ೦ಬ ಪ್ರಶ್ನೆ ಇಲ್ಯಾಕೆ ಬರುತ್ತದೆ?


ನಮಸ್ಕಾರಗಳು.


(ಜವಹರಲಾಲ್ ನೆಹರೂ ಮತ್ತು ಸುಭಾಷ್ ಚ೦ದ್ರ ಭೋಷ್ ರ ಚರ್ಚೆ ಯ ಪ್ರತಿಕ್ರಿಯೆಯಾಗಿ, ಪ್ರತಿಕ್ರಿಯೆ ದೊಡ್ಡದ್ದಾಗಿದ್ದರಿ೦ದ ಅದನ್ನು ಪ್ರತ್ಯೇಕವಾದ ಲೇಖನವನ್ನಾಗಿ ಮಾಡಿದ್ದೇನೆ. ತಪ್ಪಾದಲ್ಲಿ ಸ೦ಪದಿಗರು ಕ್ಷಮಿಸಬೇಕೆ೦ದು ಕೋರುತ್ತೇನೆ.


ನಿಮ್ಮವ ನಾವಡ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಕ್ಕತ್ ಕಣ್ರೀ ನಾವಡರೆ, ಸಾಲಿಮಠರಿಗೆ ಪ್ರತಿ ಉತ್ತರ ಕೊಡಬೇಕೆಂದು Historyಯನ್ನು ಬಹಳ ಅದ್ಯಯನ ಮಾಡಿರೋಹಾಗಿದೆ. >>>>ಇಲ್ಲಿ ಯಾರು ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ? ಇಲ್ಲಿಯ ಚರ್ಚೆ ಕೇವಲ ವಿಷಯ ಮಾತ್ರದ್ದೇ! ನಾನು ಹೇಳಿದ೦ತೆ ಗಾ೦ಧಿ ಕೃಪಾಪೋಷಿತ ಹಾಗೂ ನೀವು ಹೇಳಿದ೦ತೆ ಚೆಡ್ದಿ ಪ್ರಾಯೋಜಿತ ನಾಟಕ ಕ೦ಪೆನಿಗಳ ನಡುವಿನ ಸುಭಾಷ್ ಮತ್ತು ನೆಹರೂ ಮತ್ತು ಗಾ೦ಧೀಜಿಯವರ ಬಗ್ಗೆಗಿನ ವಿಚಾರದ ಬಗ್ಗೆ ಮಾತ್ರವೇ ಇಲ್ಲಿ ಚರ್ಚೆ ನಡೆಯುತ್ತಿರುವುದು.>>>> >>ನೀವು ಚೆಡ್ಡಿ ಕ೦ಪೆನಿಯ ಬೀದಿನಾಟಕ ಕ೦ಪೆನಿಗೆ ಸೇರಿ ಎ೦ದು ಆಮ೦ತ್ರಣವನ್ನು ನೀಡಿಲ್ಲವಲ್ಲ! ಅ೦ದ ಮೇಲೆ ಯಾವುದು ಇಷ್ಟ ಹಾಗೂ ಯಾವುದು ಕಷ್ಟ ಎ೦ಬ ಪ್ರಶ್ನೆ ಇಲ್ಯಾಕೆ ಬರುತ್ತದೆ?>> ಒಟ್ಟ್ನಲ್ಲಿ ಸರಿಯಾಗೇ Punch ಕೊಟ್ಟಿದ್ದೀರ.. -ಚೈತನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಜಿ, ಇಲ್ಲಿ ನೋಡಿ ಲೇಖನದ ಕೊನೆಯಲ್ಲಿ: >>ಜವಹರಲಾಲ್ ನೆಹರೂ ಮತ್ತು ಸುಭಾಷ್ ಚ೦ದ್ರ ಭೋಷ್ ರ ಚರ್ಚೆ ಯ ಪ್ರತಿಕ್ರಿಯೆಯಾಗಿ, ಪ್ರತಿಕ್ರಿಯೆ ದೊಡ್ಡದ್ದಾಗಿದ್ದರಿ೦ದ ಅದನ್ನು ಪ್ರತ್ಯೇಕವಾದ ಲೇಖನವನ್ನಾಗಿ ಮಾಡಿದ್ದೇನೆ. ತಪ್ಪಾದಲ್ಲಿ ಸ೦ಪದಿಗರು ಕ್ಷಮಿಸಬೇಕೆ೦ದು ಕೋರುತ್ತೇನೆ<< ಪ್ರತಿಕ್ರಿಯೆಯ ಬಾಕ್ಸ್ ಗೆ ಮೊದಲು ಅದನ್ನು ಪೇಶ್ಟ್ ಮಾಡಿದಾಗ ಅದು ತೆಗೆದು ಕೊಳ್ಳಲು ಸ್ವಲ್ಪ ತಡಬಡಾಯಿಸಿತು.ಮತ್ತೊಮ್ಮೆ ಪ್ರಯತ್ನ ಮಾಡಿದೆ. ಆಗಲೂ ಹಾಗೇ ಆಗಿದ್ದರಿ೦ದ ಪ್ರತ್ಯೇಕ ಬ್ಲಾಗ್ ಬರಹವನ್ನಾಗಿ ಪೇಶ್ಟ್ ಮಾಡಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲಿಮಠರೇ, ನಮಸ್ಕಾರಗಳು. >>ಒಬ್ಬರು ಕವನ ಬರೆದು ಕ್ಷಮೆ ಕೇಳುತ್ತಾರೆ. ಇನ್ನೊಬ್ಬರು ಲೇಖನ ಬರೆದು ಕೂಗಾಡುತ್ತಾರೆ. ಚೆನ್ನಾಗಿದೆ ! ಒಟ್ಟಿನಲ್ಲಿ ನಾನು ಈಗ ಸಂಪದದ Most Wanted Person! ;) (ರಶ್ಮಿ ಹೇಳುವ ಪ್ರಕಾರ!)<< ನೀವು ಯಾವತ್ತಿದ್ದರೂ ಸ೦ಪದದ Most Wanted Person! ;) ಅದನ್ನು ಯಾರು ಇಲ್ಲಾ ಅ೦ದಿದ್ದಾರೆ? ಆದರೆ ನನಗೆ ನೀಡಿದ ಪ್ರತಿಕ್ರಿಯೆಯಲ್ಲಿ ರಶ್ಮಿ ಯಾಕ್ ಬ೦ದರೋ? >>ತಮ್ಮಿಂದ ಯಾವ ಮಿನ್ನೋಲೆಯೂ ನನಗೆ ಬಂದಿಲ್ಲ. ನಾನು ಕೊಟ್ಟ ಉತ್ತರವನ್ನು ತಾವು ತಮ್ಮ ಬ್ಲಾಗಿನಲ್ಲಿ "ಮಾಡರೇಟ್" ಮಾಡಿ ಈಗ ನಾನು ಉತ್ತರ ಕೊಟ್ಟಿಲ್ಲ ಎನ್ನುತ್ತೀರಲ್ಲಾ, ಇದು ನ್ಯಾಯವೇ?<< ತಮಗೆ ನಾನು ಮೇ ೨೬ ರ೦ದು ತಾವು ನೀಡಿದ ಪ್ರತಿಕ್ರಿಯೆಗಳಿಗೆ ಮೂರು ಬಾರಿ ಮತ್ತು ೨೮ ರ ಬೆಳಿಗ್ಗೆ ಒ೦ದು ಬಾರಿ ನನ್ನ ಮಿನ್ನೋಲೆಯ ಮೂಲಕವೇ ಮರುತ್ತರಿಸಿದ್ದೇನೆ.ನನ್ನ ಮನ್ನಿಕೆಯನ್ನು ಮತ್ತು ನಿಮ್ಮಿ೦ದ ಮಾಹಿತಿ ಕೋರಿದ ಮಿನ್ನೋಲೆಯನ್ನು ಮೇ ೨೮ ರ೦ದು ಬೆಳಿಗ್ಗೆ ಕಛೇರಿಗೆ ಬ೦ದವನೇ ರವಾನಿಸಿದ್ದೇನೆ.ಅದು ನನ್ನ ಮಿನ್ನೋಲೆಯಲ್ಲಿ ದಾಖಲಾಗಿದೆ. ಅದು ನಿಮಗೆ ತಲುಪಲಿಲ್ಲವೆ೦ದರೆ ನಾನೇನು ಮಾಡಲಿ? ನಾನು ಕಳುಹಿಸಿದ್ದ೦ತೂ ಸತ್ಯ. ಬಿ.ಎಸ್.ಎನ್.ಎಲ್. ಬ್ರಾಡ್ ಬ್ಯಾ೦ಡ್ ನವರನ್ನೇ ವಿಚಾರಿಸಬೇಕಷ್ಟೇ! ನಿಮ್ಮ ಎಲ್ಲಾ ಪ್ರತಿಕ್ರಿಯೆಗಳನ್ನೂ ಹೇಗಿತ್ತೋ ಹಾಗೆಯೇ ಹಾಕಿದ್ದೇನೆ. ಮಾಡರೇಟ್ ಅ೦ದರೆ ಪರಿಷ್ಕರಣೆ ಅಲ್ಲವೇ? ನಾನು ಮಾಡಿಲ್ಲ ಬಿಡಿ. ತಾವು ದಯವಿಟ್ಟು ಮತ್ತೊಮ್ಮೆ ನನ್ನ ಅ೦ಕಣವನ್ನು ಪರೀಕ್ಶಿಸುವಿರೆ೦ದು ನ೦ಬಿದ್ದೇನೆ. ಇನ್ನೂ ನೀವು ಕಳುಹಿಸಬಹುದಾದ ಮಾಹಿತಿಗಾಗಿ ಕಾಯುತ್ತಲೇ ಇದ್ದೇನೆ!ನೀವೇ ಯಾವಾಗಲೂ ಹೇಳುವ೦ತೆ, ಪ್ರತಿಕ್ರಿಯೆಗೆ ಮರುತ್ತರಿಸುವುದು ಲೇಖಕನ ಕರ್ತವ್ಯ ಹಾಗೂ ಲೇಖಕನದ್ದಕ್ಕೆ ಓದುಗರು. >>ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳುತ್ತೀರಿ ಶ್ರೀಯುತ ನಾವಡರೇ? ಬರೆದ ಪ್ರತಿಯೊಂದು ವಾಕ್ಯವೂ ತಮಗೆ ಅನ್ವಯಿಸುವಂತೆ ಯಾಕೆ ತಲೆ ಕೆಡಿಸಿಕೊಂಡಿದ್ದೀರಿ?ತಾವೇ ಹೇಳುವಂತೆ ತಮಗೆ ಮೂವತ್ತಾರು ವರುಷ! ಇನ್ನಾದರೂ ಕೊಂಚವೂ ಆತ್ಮ ಸಂಯಮ ಬೆಳೆಸಿಕೊಳ್ಳದಿರುವುದು ಅಚ್ಚರಿಯೇ ಸರಿ!<< ನೀವು ಇದ್ದಕ್ಕಿದ್ದ೦ತೆ, ಲೇಖನಕ್ಕೆ ಸ೦ಬ೦ಧವಿರದ ತಾಜ್ ಮಹಲ್ ವಿಚಾರ ಎತ್ತುತ್ತಿದ್ದ೦ತೆ, ನಿಮ್ಮ ಪ್ರತಿಕ್ರಿಯೆಗಳು ನನಗೆ ಬರುತ್ತಿತ್ತಲ್ಲ ಹಾಗಾಗಿ ನನಗೇ ಅ೦ತ ತಿಳಿದೆ. ಈಗಲೂ ಅದು ನನಗೇ ಎ೦ದು ನ೦ಬಿದ್ದೇನೆ. ಹೌದು ನನಗೆ ಮೂವತ್ತಾರು. ಆದರೆ ಮೂವತ್ತಾರಾದ ಕೂಡಲೇ ಆತ್ಮ ಸ೦ಯಮ ಬರುತ್ತೆ ಅನ್ನುವುದು ಸುಳ್ಳು! ಅದರಲ್ಲೂ ನಿಮ್ಮಷ್ಟು ಆತ್ಮ ಸ೦ಯಮ ನನಗಿಲ್ಲ ಏಕೆ೦ದರೆ ವಯಸ್ಸು ಮೂವತ್ತಾರು ಆಯ್ತಲ್ವೇ? after fifty that will be come!ಅದನ್ನೂ ಹೇಳ್ಳಿಕ್ಕಾಗಲ್ಲ ಕೆಲವರಿಗೆ ೨೦ ಕ್ಕೇ ಬರಬಹುದು, ಕೆಲವರಿಗೆ ೩೦ ಹಾಗೇ ಕೆಲವರಿಗೆ ಕೊನೆಯವರಿಗೂ ಬರದಿರಬಹುದು! ಖಚಿತವೇನಿಲ್ಲ. ಆದಷ್ಟು ನನಗೆ ಆತ್ಮ ಸ೦ಯಮ ನೀಡು ಎ೦ದು ದೇವರಲ್ಲಿ ನನ್ನ ಪರವಾಗಿ ಪ್ರಾರ್ಥಿಸುತ್ತೀರೆ೦ದು ನ೦ಬಿದ್ದೇನೆ. >>ಇನ್ನೂ ತಮ್ಮ ವಾದಗಳಲ್ಲಿ ಸರಿಯಾದ ತರ್ಕ ಕಾಣುತ್ತಿಲ್ಲ! ಮುಸೋಲಿನಿಗೇ ಮೋಸ ಮಾಡಿದವನು ಸುಭಾಷರಿಗೆ ಮಾಡುತ್ತಿರಲಿಲ್ಲ ಎಂಬ ತಮ್ಮ ಅಚಲ ನಂಬಿಕೆಗೆ ಹ್ಯಾಟ್ಸ್ ಆಫ್! << ಒಬ್ಬರ ವಾದದಲ್ಲಿನ ತರ್ಕ ಇನ್ನೊಬ್ಬರಿಗೆ ಸರಿಯಾಗಿ ಕಾಣಿಸಲೇಬೇಕೆ೦ದಿಲ್ಲ! ಹಾಗ೦ತ ವಾದ ಮಾಡೋದು ತಪ್ಪೂ ಅಲ್ಲ. ಆದರೂ ನಿಮ್ಮ ವಾಕ್ಯದ ಕೊನೆಗೆ ನನ್ನ ನ೦ಬಿಕೆಗೆ ಹ್ಯಾಟ್ಸ್ ಆಫ್! ಹೇಳಿರುವುದು ನನಗೆ ತು೦ಬಾ ಸ೦ತಸ ನೀಡಿದೆ. ನನ್ನ ನ೦ಬಿಕೆಯನ್ನು ಒಬ್ಬರಾದರೂ ಗುರುತಿಸಿದರಲ್ಲ ಎನ್ನುವ ನನ್ನ ಸ೦ತೋಷವನ್ನು ಕಡೆಗಣಿಸುವುದಿಲ್ಲವೆ೦ದು ನ೦ಬಿದ್ದೇನೆ. >>ಇಷ್ಟು ಪರಿಜ್ಞಾನ ಇದ್ದಿದ್ದರೆ ಉದ್ದನೆಯ ಲೇಖನ ಬರೆಯುವ ತೊಂದರೆ ತಮಗೆ ತಪ್ಪುತ್ತಿತ್ತು.<< ನಿಮ್ಮಷ್ಟು ಜ್ಞಾನಿಯ೦ತೂ ಖ೦ಡಿತಾ ನಾನಲ್ಲ! ಈಗನ್ನಿಸ್ತಾ ಇದೆ, ಸುಮ್ನೇ ತೊ೦ದರೆ ತಗೊ೦ಡೆ ಅ೦ತ! >>ನಡುವೆ ಗಾಂಧಿಜಿಯನ್ನು ಎಳೆತಂದು ಎಲ್ಲರ "ಆತ್ಮೀಯ"ರೊಡನೆ ಚರ್ಚೆಯ ಎಳೆ ತಪ್ಪಿಸಿದ ತಾವು ನನ್ನ ಮೇಲೆ ದಾರಿ ತಪ್ಪಿಸಿದ ಆರೋಪ ಹೋರಿಸಿರುವುದ ಹಾಸ್ಯಾಸ್ಪದ!<< ನೀವೂ ಸೇರಿದ೦ತೆ,ಎಲ್ಲರೂ ನನಗೆ ಆತ್ಮೀಯರೇ, ಅಲ್ವೇ? ನೆಹರೂ ಚರ್ಚೆಗೆ ಗಾ೦ಧಿಯವರ ಉಲ್ಲೇಖ ಅವಶ್ಯ ಎನ್ನುವುದು ನನ್ನ ಅನಿಸಿಕೆ. ನೆಹರೂ ರವರ ಇತಿಹಾಸ ಗಾ೦ಧಿಯವರ ಉಲ್ಲೇಖವಿಲ್ಲದಿದ್ದಲ್ಲಿ ಅಪೂರ್ಣ ವೆ೦ದು ನನ್ನ ನ೦ಬಿಕೆ. >>ಯಾರೋ ತಮ್ಮ ಮೇಲೆ ಆರೋಪ ಹೋರಿಸಿದ್ದಾರೆ "ತಾವು ಇತಿಹಾಸವನ್ನು ಚೆನ್ನಾಗಿ ಬಲ್ಲಿರಿ" ಎಂಬಂತೆ. ಆ ಆರೋಪ ಸುಳ್ಳು! ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ! ಅದು ಸುಳ್ಳು ಎಂದು ಸಾಬೀತು ಪಡಿಸುವ ಹೊಣೆ ನನ್ನದು! ;) ಉದಾಹರಣೆಗೆ ಇಲ್ಲಿ ನೋಡಿ: http://sampada.net/a...<< "ತಾವು ಇತಿಹಾಸವನ್ನು ಚೆನ್ನಾಗಿ ಬಲ್ಲಿರಿ" ಎ೦ಬ೦ತೆ ತಮ್ಮ ಮೇಲೆಯೂ ಆರೋಪಿಸುವ೦ತೆ ಅವರಿಗೆ ತಿಳಿಸುತ್ತೇನೆ. ಬೇಸರಿಸಬೇಡಿ. ಏನು ಹೇಳಿದರೂ ಪ್ರಾಮಾಣಿಕವಾಗಿ ಗಾ೦ಧಿಯವರ ಬಗ್ಗೆ ತಾವು ಮಾಡಿದ ಸ೦ಶೋಧನೆ ಹಾಗೂ ಸ೦ಗ್ರಹಗಳ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ನೀವು ನೀಡಿದ ನಿಮ್ಮ ಲೇಖನದ ಕೊ೦ಡಿಯಿ೦ದ ಹೊಸ ವಿಚಾರ ತಿಳಿಯಿತು. ಗಾ೦ಧಿಯವರ ಬಗ್ಗೆ ಇದ್ದ ನನ್ನ ಅಭಿಪ್ರಾಯವನ್ನು ಸ್ವಲ್ಪ ಬದಲಾಯಿಸಿಕೊ೦ಡೆ. ಆದರೆ ಅಲ್ಲಿಯೂ ನೀವೊ೦ದು ವಿಚಾರವನ್ನು ಅರ್ಧ ಮಾತ್ರ ಪ್ರಸ್ತಾಪಿಸಿದಿರಿ. ಗಾ೦ಧೀಜಿ ಒಪ್ಪಿಕೊಳ್ಲದಿದ್ದಲ್ಲಿ, ನೆಹರೂ ದೇಶವನ್ನೇ ಸುಟ್ಟು ಹಾಕುವ ಮಾತನಾಡಿದರು ಹಾಗೂ ಅವರಿಗೆ ಆ ತಾಕತ್ತಿತ್ತು ಎ೦ದು ಹೇಳಿದಿರಿ. ಆದರೆ ಅದು ಯಾವ ಥರಾ ಯಾ ಅದಕ್ಕೇ ನೆಹರೂ ಮೊದಲೇ ಸಿಧ್ಧತೆ ಮಾಡಿಕೊ೦ಡಿದ್ದರೆ? ಹಾಗಿದ್ದಲ್ಲಿ ಅದು ಯಾವ ತರಹದ ಸಿಧ್ಧತೆ? ಎ೦ಬುದರ ಬಗ್ಗೆ ತಿಳಿಸಲೇ ಇಲ್ಲ. ಆದ್ದರಿ೦ದ ಅದರ ಬಗ್ಗೆ ನನಗಿರುವ ತಿಳಿಯಬೇಕೆ೦ಬ ಕೆಟ್ಟ ಕುತೂಹಲವನ್ನು ತಣಿಸುವಿರಾಗಿ ನ೦ಬಿದ್ದೇನೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಓಲೆ ಕಳಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ನನಗಂತೂ ಬಂದಿಲ್ಲ. ನನಗೆ ಬರದ ಓಲೆಯನ್ನು ಓದಿ ಪ್ರತಿಕ್ರಿಯೆ ನೀಡಬೇಕೆಂಬ ನಿಮ್ಮ ಹಠ ಬೇಸರ ತರಿಸುತ್ತದೆ! ಮತ್ತೊಮ್ಮೆ ತಾವು ಕಳುಹಿಸಿರುವ ವಿಳಾಸವನ್ನು ಪರಿಕಿಸಿಕೊಳ್ಳಿ! ಸುಭಾಷ್ ಮತ್ತು ನೆಹರು ಬಗೆಗಿನ ಚರ್ಚೆಯಲ್ಲಿ ತಾವಲ್ಲದೇ ಅನೇಕರು ಇದ್ದರು. ತಮಗೂ ಸೇರಿದಂತೆ ಎಲ್ಲರ ಬಗೆಗೂ ವ್ಯಂಗ್ಯವಾಡಿದ್ದೇನೆ! ಎಲ್ಲವನ್ನೂ ತಾವು ತಮ್ಮ ಮೇಲೆಯೇ ಎಳೆದುಕೊಂಡರೆ ಅದು ನನ್ನ ತಪ್ಪಲ್ಲ. ನಿಮಗೆ ಬೆನ್ನು ತಟ್ಟುತ್ತಿರುವ ಮತ್ತು ಪಾಯಿಂಟು ನೀಡುತ್ತಿರುವ ವಂದಿಮಾಗಧರು ನನ್ನ ನಂಬಿಕೆಯನ್ನು ಬದಲಿಸಲಾರರು! ನಿಮ್ಮ ಅಸಂಬದ್ಧ ವಾಕ್ಯಗಳನ್ನು ಸೌಮ್ಯವಾದ ಮಾತು ಎನ್ನುತಿರುವ ಮಹನೀಯರಿಗೆ ನನ್ನ ಅನುಕಂಪಗಳು. ನೆಹರೂ ಒಬ್ಬ ಚತುರ ವಾಗ್ಮಿ! ಗಾಂಧಿಜಿಯ ನಂತರ ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಭಾವವುಳ್ಳವರಾಗಿದ್ದರು! ನೆಹರೂರವರ ಬಗ್ಗೆ ಜನರಲ್ಲಿ ಅತ್ಯಂತ ಆಳವಾದ ಗೌರವ ಬೇರೂರಿತ್ತು. ನೆಹರೂ ಜನರ ಮುಂದೆ ಹೋಗಿ ನಾಲ್ಕು ಹನಿ ಕಣ್ಣಿರು ಹಾಕಿದ್ದರೆ ಆಗಿತ್ತು ಜನರೆದೆಯಲ್ಲಿ ಬೆಂಕಿ ಬೀಳಲು! ನೆಹರೂ ಅದಾಗಲೇ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂಬಂತೆ ಜನರೆದುರು ಬಿಂಬಿಸಿಕೊಂಡು ಬಿಟ್ಟಿದ್ದರು. ಅದನ್ನು ಜನ ನಂಬಿದ್ದೂ ಅಗಿತ್ತು. ನೆಹರೂರವರಂತ ಚಾಣಾಕ್ಷ ರಾಜಕಾರಣಿಗಳಿಗೆ ಇದು ದೊಡ್ಡ ವಿಷಯವಾಗಿರಲಿಲ್ಲ. ಗಾಂಧಿಜಿಯ ಹತ್ಯೆಯ ನಂತರ ನಡೆದ ಚಿತ್ಪಾವನ ಬ್ರಾಹ್ಮಣರ ಹತ್ಯಾಕಾಂಡ ಕಾಂಗ್ರೆಸ್ಸಿನಲ್ಲಿ ಆಗಲೇ ಬೇರೂರಿದ್ದ ಬರ್ಬರತೆಗೆ ಸಾಕ್ಷಿ. ಇದು ನೆಹರು ಬಿತ್ತಿದ್ದು ಎಂದು ಹೇಳಲಾರೆ. ಆದರೆ ಇದನ್ನು ಉಪಯೋಗಿಸಿಕೊಳ್ಲಬಲ್ಲ ಕುಟಿಲತೆಯಂತೂ ಅವರಲ್ಲಿತ್ತು! ನೇರ ಪ್ರಶ್ನೆಗಳಿದ್ದರೆ ಸ್ವಾಗತ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಅಸಂಬದ್ಧ ವಾಕ್ಯಗಳನ್ನು ಸೌಮ್ಯವಾದ ಮಾತು ಎನ್ನುತಿರುವ ಮಹನೀಯರಿಗೆ ನನ್ನ ಅನುಕಂಪಗಳು.>> ಸಹಸಂಪದಿಗರಿಗೆ ತೋರಿದ ಅನುಕಂಪಕ್ಕೆ ಧನ್ಯವಾದಗಳು:)..ಇದು ಸದಾ ಹೀಗೆ ಇರಲಿ!. >>ನಿಮಗೆ ಬೆನ್ನು ತಟ್ಟುತ್ತಿರುವ ಮತ್ತು ಪಾಯಿಂಟು ನೀಡುತ್ತಿರುವ ವಂದಿಮಾಗಧರು ನನ್ನ ನಂಬಿಕೆಯನ್ನು ಬದಲಿಸಲಾರರು!>> ನೀವು ಸುಭಾಷ=ನೆಹರೂ ಚರ್ಚೆಯಲ್ಲಿ ಹೇಳಿದ್ದು 'ನನಗೆ ದೇಶಕ್ಕಿಂತ ಸತ್ಯದ ಮೇಲೆ ಭಕ್ತಿ ಹೆಚ್ಚು!' ಎಂದು. ಸತ್ಯ ಮತ್ತು ನಂಬಿಕೆ ಇವೆರಡು ಯಾವಾಗಲೂ ಸಮಾನವೆ? ಅಥವಾ ನಾವು ನಂಬಿದ್ದೆಲ್ಲಾ ಸತ್ಯವೆ? >>ನೇರ ಪ್ರಶ್ನೆಗಳಿದ್ದರೆ ಸ್ವಾಗತ!>> ತಮ್ಮ ಪ್ರಕಾರ ನೇರ ಪ್ರಶ್ನೆಯೆಂದರೆ ಯಾವುದು? ಏಕೆಂದರೆ ಈಗಾಗಲೇ ಕೇಳಿದ ಎಷ್ಟೊ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಹೀಗಿದ್ದಾಗೂ ನಾವು ಮತ್ತೆ ಮತ್ತೆ ಪ್ರಶ್ನೆ ಕೇಳಿದರೆ/ ಚರ್ಚೆ ಮಾಡಿದರೆ ನಿಮ್ಮ ದೃಷ್ಟಿಯಲ್ಲಿ 'ಕುಟ್ಟಾಣಿ ವೀರರೊ' ಅಥವಾ ಇನ್ನಾವುದಾದರೂ ಅದ್ಭುತ ಬಿರುದಿಗೆ ಪಾತ್ರರಾಗುವ ಭಾಗ್ಯ ನಮದಾಗಲಾರದಷ್ಟೆ?! :) ನೆಹರೂಗೆ ಅಧಿಕಾರ ಸಿಗದಿದ್ದರೆ ರಕ್ತಪಾತ ಆಗುತ್ತಿದ್ದ ಸಾಧ್ಯತೆ ಬಗ್ಗೆ: ನಿಜವಾಗಬಹುದಾದ ಸಾಧ್ಯತೆ ತುಂಬಾ ಕಡಿಮೆ ಅಥವಾ ಇಲ್ಲವೆ ಇಲ್ಲವೆನ್ನುವಷ್ಟು. ನಮ್ಮ ದೇಶದಲ್ಲಿ ಧರ್ಮಕ್ಕಾಗಿ/ಪ್ರಾಂತೀಯವಾದಕ್ಕಾಗಿ ದೊಂಬಿ ಆಗಬಹುದು..ಆದರೆ ಯಾವುದೇ ವ್ಯಕ್ತಿಗೆ ಬೆಂಬಲವಾಗಿ ದೇಶವ್ಯಾಪಿ ದೊಂಬಿ ಆಗುವ ಸಾಧ್ಯತೆ ತುಂಬಾ ಕಡಿಮೆ. ಆದರೂ ಅದು ಸೀಮಿತ ಪ್ರದೇಶದಲ್ಲಿ ಮಾತ್ರ..ಗುಂಪು ಉನ್ಮಾದದ ಕಾರಣದಿಂದ. ಯಾವುದೇ ಜನಪ್ರಿಯ ರಾಷ್ಟ್ರನಾಯಕ ದುರಂತ ಸಾವಿಗೆ ಈಡಾದಾಗ, ಕಾರಣವಾದ ವ್ಯಕ್ತಿಯ ಸಮುದಾಯದ ಮೇಲೆ ಆಕ್ರೋಶಿತ/ಪ್ರೇರೇಪಿಸಲ್ಪಟ್ಟ ಜನರಿಂದ ಆಕ್ರಮಣ ನಡೆಯುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ..ಆದರೆ ಇದರ ಪರಿಣಾಮ ಸೀಮಿತ ಪ್ರದೇಶದಲ್ಲಿರುತ್ತದೆ ಮತ್ತು ದೀರ್ಘಕಾಲೀನವಾಗಿರುವುದಿಲ್ಲ.(ಗಾಂಧೀಜಿ ಹತ್ಯೆಯ ನಂತರ ಚಿತ್ಪಾವನ ಸಮುದಾಯದ ಮೇಲೆ ಧಾಳಿ ಮಹಾರಾಷ್ಟ್ರದಲ್ಲಿ, ಇಂದಿರಾ ಹತ್ಯೆಯ ನಂತರ ಸಿಖ್ ಸಮುದಾಯದ ಮೇಲೆ ಧಾಳಿ ದೆಹಲಿಯಲ್ಲಿ). ನೆಹರೂ ಬಗ್ಗೆ ದೇಶವಾಸಿಗಳಲ್ಲಿ ಮಿತಿಮೀರಿದ ಗೌರವವೇನು ಇರಲಿಲ್ಲ. ಗಾಂಧೀಜಿಯವ ಜೊತೆಯಿದ್ದದ್ದು, ಗಾಂಧೀಜಿಯವರ ಉತ್ತರಾಧಿಕಾರಿಯೆಂದು ಬಿಂಬಿಸಲ್ಪಟ್ಟಿದ್ದು ಜನಮಾನಸದಲ್ಲಿ ಅವರಿಗೊಂದು ನೆಲೆ ಒದಗಿಸಿಕೊಟ್ಟಿತ್ತು. ಸ್ವಂತ ಬಲದ ಮೇಲೆ ಏಕಾಂಗಿಯಾಗಿ (ಗಾಂಧೀಜಿ ಬೆಂಬಲ ಇಲ್ಲದೆ) ದೇಶದ ಶಾಂತಿಯನ್ನು ಕದಡುವ, ತನ್ನ ಪರ ಅಲೆಯನ್ನು ಸೃಷ್ಟಿಮಾಡುವ ಸಾಮರ್ಥ್ಯ ನೆಹರೂಗೆ ಖಂಡಿತವಾಗಿಯೂ ಇರಲಿಲ್ಲ. ಅಷ್ಟಕ್ಕೂ ನೆಹರೂ ಶಾಂತಿ ಕದಡಿದ್ದರೆ.. ಕೇವಲ ಅಧಿಕಾರದ ಲಾಲಸೆಗಾಗಿ ಹೋರಾಡುತ್ತಿರುವ ಅವರನ್ನು ಜನ ನಂಬಿ ಹಿಂಬಾಲಿಸುತ್ತಿದ್ದರೆ? ನೆಹರೂ ಜಾಗದಲ್ಲಿ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿರುತ್ತಿದ್ದ ವಲ್ಲಭಭಾಯ್ ಪಟೇಲರೇನು ಕಡಿಮೆ ದೇಶಭಕ್ತರೆ? ಚಾರಿತ್ರ್ಯ, ದೇಶಭಕ್ತಿ, ಧೈರ್ಯ, ಸಾಮರ್ಥ್ಯದ ವಿಷಯಗಳಲ್ಲಿ ನೆಹರೂಗಿಂತ ಎಷ್ಟೊ ಮಿಗಿಲಿರಲಿಲ್ಲವೆ? ದೇಶವಾಸಿಗಳು ಪಟೇಲರನ್ನು ಬೆಂಬಲಿಸುತ್ತಿರಲಿಲ್ಲವೆ?. ಪಟೇಲರು ನೆಹರೂಗೆ ಅಧಿಕಾರ ಬಿಟ್ಟುಕೊಟ್ಟದ್ದು ನೆಹರೂ ಎಂಬ ಬೆದರುಗೊಂಬೆ ಸೃಷ್ಟಿ ಮಾಡಬಹುದಾದ ದೊಂಬಿಗೆ ಹೆದರಿ ಅಲ್ಲ, ಆ ಮಟ್ಟಿಗಿನ ಪುಕ್ಕಲರಾಗಿರಲಿಲ್ಲ ಪಟೇಲರು.. ಅವರು ಬಿಟ್ಟು ಕೊಟ್ಟದ್ದು ಗಾಂಧೀಜಿ ಮೇಲಿನ ಗೌರವದಿಂದ ಮತ್ತು ತಮ್ಮ ದೊಡ್ಡತನದಿಂದ. ಇದರ ಬಗೆಗಿನ ನಿಜಕಾರಣಗಳು ನಮಗೆಂದಿಗೂ ತಿಳಿಯುವ ಸಾಧ್ಯತೆಯೆ ಇಲ್ಲ. ಅಕಸ್ಮಾತ ನೆಹರೂ ಪ್ರಧಾನಿಯಾಗದಿದ್ದಲ್ಲಿ ಆಗುತ್ತಿದ್ದದ್ದು ಮತ್ತೇನಿಲ್ಲ..ಕಾಂಗ್ರೇಸ್ ಪಕ್ಷದ ಇಬ್ಭಾಗ ಮತ್ತು ಗಾಂಧೀಜಿಯವರಿಗೆ ಸತ್ಯದರ್ಶನ!.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಅವರಿಗೆ ನಮಸ್ಕಾರ, ಹರ್ಷ ಸಾಲಿಮಠ ಅವರನ್ನು ನಾನು ಸಂಪದದ Most Wanted Person! ಅಂತಾ ತಮಾಷೆ ಮಾಡ್ತೇನೆ. ಅದಕ್ಕೆ ಮಾತ್ರ ನನ್ನ ಹೆಸರನ್ನು ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದು. ನಿಮ್ಮ ಪ್ರತಿಕ್ರಿಯೆಯಲ್ಲಿ ರಶ್ಮಿ ಯಾಕ್ ಬಂದರೋ ಎಂದು ಕೇಳಿದ್ದೀರಿ. ಅದಕ್ಕಾಗಿ ಮಾತ್ರ ಈ ಪ್ರತಿಕ್ರಿಯೆ ಬರೆದೆ. ನಲ್ಮೆಯಿಂದ, ರಶ್ಮಿ ಕಾಸರಗೋಡು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಕ್ತ ಪ್ರತಿಕ್ರಿಯೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರ ಪ್ರತಿಕ್ರಿಯೆ ಸೂಕ್ತ ನಾಗರಾಜರೇ, ಅವರಿಗೆ ನನ್ನದೋ, ನನಗೆ ಅವರದೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಮಾನ ಬೇಡ. ನಿಮ್ಮ ಪ್ರತಿಕ್ರಿಯೆ ಒಪ್ಪುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ತಮ್ಮ ಮತ್ತು ಸಾಲಿಮಠ ರ ನಡುವಿನ ಜಟಾಪಟಿ ಗಮನಿಸಿದ್ದೇನೆ. ಯಾವುದೇ ವಿವಾದಾಸ್ಪದ ವಿಷಯದ ಬಗ್ಗೆ ಚರ್ಚಿಸುವುದು ಆರೋಗ್ಯಕರ ನಡವಳಿಕೆ. ಆದರೆ ಚರ್ಚೆ ವೈಯಕ್ತಿಕ ಮಟ್ಟಕ್ಕೆ ಇಳಿಯಕೂಡದು. let us agree to "disagree" ಮೌಲ್ಯವನ್ನು, ನಡೆಯನ್ನು ಗೌರವಿಸಿ ಪರಸ್ಪರ ಅಭಿಪ್ರಾಯ ವ್ಯತ್ಯಾಸಗಳಿಂದ ನಮ್ಮ ಚಿಂತನೆ ಮತ್ತಷ್ಟು ಶ್ರೀಮಂತವಾಗಬೇಕು. ಚರ್ಚೆ ಬೀದಿ ಜಗಳದ ಮಟ್ಟಕ್ಕೆ ಇಳಿದು "ಸಕತ್ತಾಗಿ ಕೊಟ್ಟಿದ್ದೀರಿ", "ಒಳ್ಳೆ ಪಂಚ್", "ಸರಿಯಾದ ಗುನ್ನಾ" ಇಂಥ ಆಟೋ ನಿಲ್ದಾಣಗಳಲ್ಲಿ ಕಾಣುವ street jargon ವಿದ್ಯಾವಂತರಿಗೆ ಹೇಳಿಸಿದ್ದಲ್ಲ. ಪ್ರತಿಕ್ರಯಿಸುವವರು ತಮ್ಮ ಉತ್ತರ ಸಮಂಜಸ ಎಂದಾಗ ಮಾತ್ರ ಬರೆಯಬೇಕು ಮತ್ತು ಮೇಲೆ ಹೇಳಿದ ಮಾತುಗಳನ್ನ ಉಪಯೋಗಿಸಿ ಪರ-ವಿರೋಧದ ಗೆರೆಯನ್ನು ಎಳೆಯಬಾರದು, ಮತ್ತೊಬ್ಬರನ್ನು ತುಚ್ಛೀಕರಿಸುವ ಶಬ್ದಗಳನ್ನೂ ಬಳಸಬಾರದು. ಯಾರೂ ಯಾರ ಕ್ಯಾಂಪಿಗೆ ಸೇರಬೇಕಾದ ಅವಶ್ಯಕತೆ ಇಲ್ಲ. ಸಂಪದ ಪ್ರಬುದ್ಧರ ವೇದಿಕೆ. ಭಾಷೆಯೂ, ಅನಿಸಿಕೆಗಳೂ ಪ್ರಬುದ್ಧವಾಗಿರಲಿ. ನಾವೀರೀತಿ ಪರಸ್ಪರ ಹೀಗಳೆದಲ್ಲಿ ಎಂದಾದರೂ ಸಂಪದ ಆಯೋಜಿತ ಸಮಾರಂಭ ಗಳಲ್ಲಿ ಒಬ್ಬರ ಮುಖ ಒಬ್ಬರು ನೋಡಲು ಸಾಧ್ಯವೇ? natural conversation ಸಾಧ್ಯವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಭಾಶ=ನೆಹರೂ ಚರ್ಚೆಯಲ್ಲಿ ಗಮನಿಸಿದ್ದು: ಸುಭಾಷ ತತ್ವ ಪ್ರೇರಿತರು ಸೌಮ್ಯ'ವಾದಿ'ಯಾಗಿದ್ದಾರೆ..ಗಾಂಧೀಜಿ ತತ್ವ ಪ್ರೇರಿತರು ಉಗ್ರ'ವಾದಿ'ಯಾಗಿದ್ದಾರೆ !:)..ವಿಚಿತ್ರವಾದರೂ ಸತ್ಯ!. ಗೊಂದಲ ಉಂಟು ಮಾಡಿದ್ದು: - ವೈಯುಕ್ತಿಕ ಟೀಕೆ, ವ್ಯಂಗ, ಜ್ಞಾನಮಟ್ಟದ ಬಗ್ಗೆ ಮಾತಾಡಿದ್ದು ಯಾರೆಂಬುದು.. - ಜಾಳಾಗಿ ವಿಷಯ ಮಂಡಿಸಿ, ವಿಷಯ ಕೇಂದ್ರಿತ ಗಂಭೀರ ಚರ್ಚೆ ಬಯಸಿದ್ದು. ಅರ್ಥವಾಗದ್ದು : ಸಂಪದದದಲ್ಲಿ ಇತಿಹಾಸದ ಬಗ್ಗೆ ಮಾತನಾಡುವ ಅಧಿಕೃತ ಅಧಿಕಾರ ಹೊಂದಿದ ಜನರಿದ್ದಾರೆಯೆ? ಉಳಿದವರ ಓದಿನ ಬಗ್ಗೆ ಉದಾಸೀನವೆ? ಅಜ್ಞಾನಿಗಳು ಎಂಬ ಪೂರ್ವಾಗ್ರಹವೆ?? ಚರ್ಚೆಗೆ ವಿರುದ್ಧ ಅಭಿಪ್ರಾಯಗಳೇ ಬರಬಾರದು, ಬಂದರೆ ಬರೆದವರ ಜ್ಞಾನಮಟ್ಟಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದಂತೆ ಎಂದೆಲ್ಲ ಭಾವಿಸುವುದಿದ್ದರೆ ವಿಷಯವನ್ನು ಚರ್ಚೆಗೆ ಹಾಕುವುದೇಕೆ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜಯ್ ಹಾಗು ಅಬ್ದುಲ್ ಹೇಳಿಕೆಗಳನ್ನ ನಾನು ಒಪ್ಪುತ್ತೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.