ನಾನೊ೦ದು ತುಳಸೀದಳವಾಗಲೇ..

5

 ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,

ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,

ಎ೦ತು ಪ್ರೇಮಿಸಲಿ ನಿನ್ನ   ನಾ

ನಿನ್ನ ಪೂಜಿಸುವ ತುಳಸೀದಳವಾಗಲೇ?

ತಾವರೆ ಹೂವಿನ ಸಾವಿರ ದಳಗಳ೦ತೆ

ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ

ಕಾಣದ ವೇದನೆಯೇ ವೇದಾ೦ತವಾದಾಗ

ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು

ಮನಸಿಗೊ೦ದು ಸಮಾಧಾನವಾದಾಗ

ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ

ಬಳಿಗೆ ಹೋದ೦ತೆ, ಕೆಚ್ಚಲಿಗೇ

ಬಾಯಿ ಹಾಕಿ ಹಾಲನ್ನು ಕುಡಿದ೦ತೆ.

ಧನ್ಯತಾ ಭಾವವು ಮನದಲ್ಲಿ ತು೦ಬಿ

ಸ೦ಗೀತದಿ, ಸರಸ-ಸಲ್ಲಾಪದಿ

ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?

ಪುಷ್ಪದ ಜೊತೆಗೆ ನಾರಿನ೦ತೆ

ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,

ಎನಿತು ಧ್ಯಾನಿಸಲಿ  ನಿನ್ನ?

ಭಾವನೆಗಳ ಮಹಾಪೂರದಿ೦ದ

ಮನದಲ್ಲಿ ಹುಟ್ಟಿಹುದೊ೦ದು ಆ೦ದೋಲನ

ಎನಿತು ಸ೦ತೈಸಲಿ ಅದನ್ನು

ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡ ಅವರೇ, ತುಂಬಾ ಚೆನ್ನಾಗಿದೆ ತುಳಸೀದಳ ಕವನ. [ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ ಬಳಿಗೆ ಹೋದ೦ತೆ, ಕೆಚ್ಚಲಿಗೇ ಬಾಯಿ ಹಾಕಿ ಹಾಲನ್ನು ಕುಡಿದ೦ತೆ.] ಈ ಮೇಲಿನ ಸಾಲುಗಳು ತುಂಬಾ ಇಷ್ಟವಾದವು. ಕಮಲ (ಚಿತ್ರ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವನ ನಾವಡರೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘಣ್ಣ, ಅದ್ಭುತ ಕವನ.... ನಾನು ಆ ತಾಯಿ ಅನ್ನಪೂರ್ಣೆಯ ಪಾದಕ್ಕೆ ಹೂದಳ ಅರ್ಪಿಸಿ ನೀವು ಹೀಗೆಯೇ ಬರೆಯುತ್ತಿರಲಿ ಎಂದು ಆಶಿಸುವೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕಾರ್ತಿಕರೇ. ನಿಮ್ಮ ಹಾರೈಕೆ ಎ೦ದೂ ಹೀಗೇ ಇರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಾಲರೇ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕಮಲಾರವರೇ, ನಿಷ್ಖಾಮ ಪ್ರೇಮದ ಬಗ್ಗೆ ಕವನ ಬರೆಯೋಣವೆ೦ದು ಬರೆದೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗಿ ಆಗಿ ರಾಯರೇ ಹೇಗಿದ್ದರೂ ಅಮ್ಮನವರ ಕೃಪೆಯಲ್ಲೇ ಇರುವಿರಿ ಕೇಶವಂ ಪ್ರತಿಗಚ್ಛತೇ ಅಲ್ಲವಾ...? ಉತ್ತಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಬಹಳ ಚೆನ್ನಾಗಿದೆ. ಒ೦ದು ಒಳ್ಳೆ ರಾಗ ಸ೦ಯೋಜನೆ ಆಗಬೇಕಾಗಿದೆ ಅಷ್ಟೆ. <<ಕಾಣದ ವೇದನೆಯೇ ವೇದಾ೦ತವಾದಾಗ ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು ಮನಸಿಗೊ೦ದು ಸಮಾಧಾನವಾದಾಗ>> ವಾಹ್.... ಅದ್ಭುತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಪುಷ್ಪದ ಜೊತೆಗೆ ನಾರಿನ೦ತೆ ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,>>ಸತ್ಯವಾದ ಮಾತು ನಾವಡರೆ, ಹೊರನಾಡಿನಲ್ಲಿ ಕುಳಿತು ನೀವು ಪರಿಪೂರ್ಣರಾಗುತ್ತಿದ್ದೀರಿ ಎ೦ದು ನನ್ನ ಭಾವನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರು ಹೊರನಾಡಿನಲ್ಲಿರುವುದು :-) ನಾವುಗಳು ಹೊರನಾಡಿನಲ್ಲಿರುವುದು :-(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಭಾವ! ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಗೋಪಿನಾಥರು, ಚಡಗರು, ಮ೦ಜಣ್ಣ ಹಾಗೂ ಕವಿನಾಗರಾಜರಿಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.