ಬದುಕು-ಭ್ರಮೆ

5

ಮಿತ್ರ,

ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು,

ಮೇರುತಿ ಪರ್ವತದ ತುದಿಯಲ್ಲೊಮ್ಮೆ

ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ

ದೂರಾಗಿ, ಜೋರಾಗಿ ಕೂಗಬೇಕೆ೦ದು!

ಆದರೂ ಒಮ್ಮೊಮ್ಮೆ

ಬದುಕು- ಭ್ರಮೆಗಳ ನಡುವೆ ತನನ!

ಸ೦ಸಾರ ಸಾಗರದ,

ದಿನ ರಾತ್ರಿಗಳ ಅ೦ತರದ

ನಡುವೆ ಪ್ರತಿದಿನವೂ ಹುಣ್ಣಿಮೆ!

ಭ್ರಮೆಯಲ್ಲಿಯೂ ಬದುಕಿದೆ.

ಕ್ಷಣಿಕ ಸುಖದ ಮಡುವಿದೆ!

ಮಿತ್ರ,ಸಮಾನ ರೇಖೆಗಳೇ ಇದ್ದರೆ

ಗೀಚಿ ಬರೆದ ಗೀರುಗಳ ಎಣಿಸುವರ್ಯಾರು?

ಬದುಕಿಗೆ ಭ್ರಮೆ- ಭ್ರಮೆಯಿ೦ದ ಬದುಕು!

ಸಾಗಿ ಹೋದ ಬದುಕಿನಲ್ಲೂ

ಉಲ್ಲಾಸದ ಕ್ಷಣವಿದೆ!

ಸ೦ತಸದ ಹನಿ ಬಿ೦ದುಗಳಿವೆ!

ಮು೦ಬರುವ ಬದುಕಿಗಾಗಿ ಭ್ರಮಿಸು,

ಭ್ರಮೆಯಿ೦ದಲೇ ಬದುಕು!

ಬದುಕು ನಿನ್ನದು!

ನೀ ಬದುಕು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರಿಗೆ ನಮಸ್ಕಾರ. ತಮ್ಮಿಂದ ಮತ್ತೊಂದು ಸುಂದರ ಕವನ. ತಮಗೆ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಸಾರ ಸಾಗರದ, ದಿನ ರಾತ್ರಿಗಳ ಅ೦ತರದ ನಡುವೆ ಪ್ರತಿದಿನವೂ ಹುಣ್ಣಿಮೆ! ಭ್ರಮೆಯಲ್ಲಿಯೂ ಬದುಕಿದೆ. ಕ್ಷಣಿಕ ಸುಖದ ಮಡುವಿದೆ!.......ಈ ಸಾಲುಗಳು ತು೦ಬಾ ಹಿಡಿಸಿದವು...........ಸರ್.........ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರ ನಿಮ್ಮ ಪ್ರತಿಕ್ರಿಯೆ ಕ೦ಡು ಸ೦ತಸವಾಯಿತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಉತ್ತಮ ಕವನ <<ದಿನ ರಾತ್ರಿಗಳ ಅ೦ತರದ ನಡುವೆ ಪ್ರತಿದಿನವೂ ಹುಣ್ಣಿಮೆ! ಭ್ರಮೆಯಲ್ಲಿಯೂ ಬದುಕಿದೆ. ಕ್ಷಣಿಕ ಸುಖದ ಮಡುವಿದೆ!>> ಬದಲಿಗೆ ಕ್ಷಣಿಕ ಸುಖದ ಮಡುವಲ್ಲಿ ಭ್ರಮೆಯಲ್ಲೂ ಬದುಕಿದೆ" ಎಂಬುದು ಇನ್ನೂ ಸರಿಯಾಗುವುದೇನೋ ಆದರೂ ನಿಮ್ಮ ಅನಿಸಿಕೆಯಂತೆ ನೋಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ, ಒ೦ದು ಕವನ-ಹತ್ತು ನೋಟ-ಹತ್ತು ದಿಕ್ಕು. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಾಘವೇಂದ್ರ, ಭ್ರಮೆಯಲ್ಲಿಯೂ ಬದುಕಿದೆ. ಈ ಭ್ರಮಾ ಬದುಕಿನಲ್ಲಿ ಕ್ಷಣಿಕ ಸುಖಗಳ ಮಡುವುಗಳೂ ಸಾಕಷ್ಟಿವೆ. ಒಮ್ಮೊಮ್ಮೆ ವಾಸ್ತವ ಅಸಹನೀಯವಾದಾಗ ಅನಿಸುವುದಿದೆ, ಬಹುಷಃ ಭ್ರಮೆಯಲ್ಲಿಯೇ ಬದುಕು ಇದೆ. ನಾನೂ ಹಲವಾರು ವರುಷ ಬರೀ ಭ್ರಮೆಯಲ್ಲಿಯೇ ಬದುಕಿದೆ. ದಿನದಿಂದ ದಿನಕ್ಕೆ ಪಕ್ವಗೊಳ್ಳುತ್ತಿರುವ ನಿಮ್ಮ ಭಾವನೆಗಳು, ಓದಲು ಸಂತಸವಾಗುತ್ತದೆ. ಕೊನೆಯ ಈ ಸಾಲುಗಳನ್ನು ಓದುವಾಗ, ಕವಿ ಯಾರನ್ನು ಉದ್ದೇಶಿಸಿ ಈ ಮಾತುಗಳನ್ನು ಬರೆದಿದ್ದಾರೆಂದು ಅರಿವಾಗುವುದಿಲ್ಲ. "ಮು೦ಬರುವ ಬದುಕಿಗಾಗಿ ಭ್ರಮಿಸು, ಭ್ರಮೆಯಿ೦ದಲೇ ಬದುಕು! ಬದುಕು ನಿನ್ನದು! ನೀ ಬದುಕು." - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,ನಿಮ್ಮ ಈ ಪ್ರತಿಕ್ರಿಯೆ ನನಗೆ ನಿರೀಕ್ಷಿತವೇ. ಕವಿ ತನ್ನ ಆತ್ಮೀಯ ಹಿರಿಯ ಗೆಳೆಯನೊಬ್ಬನೊ೦ದಿಗೆ ತನ್ನ ಬದುಕಿನ ಕಲ್ಪನೆ ಹಾಗೂ ಪ್ರಸ್ತುತದ ಭ್ರಮೆಗಳ ಬಗ್ಗೆ ವಿವರಿಸಿದಾಗ , ಗೆಳೆಯನು ಸಾ೦ತ್ವನ ನೀಡುತ್ತಾ, ಇಲ್ಲಿಯವರೆಗೆ ತನ್ನದೂ ಆ ಬಗ್ಗೆ ಒ೦ದು ಭ್ರಮೆಯಾಗಿತ್ತೆ೦ದೂ, ಆದರೆ ತನ್ನ ಹಿ೦ದಿನ ದಿನದ ಯಶಸ್ಸು ಭ್ರಮೆಯನ್ನು ದೂರಮಾಡಿದೆ, ಆದರೆ ಆ ಮು೦ಬರುವ ದಿನಗಳ ಭ್ರಮೆಯಿ೦ದಲೇ ನನ್ನ ಬದುಕು ಇಲ್ಲಿಯವರೆಗಿನ ಸ೦ತಸ ನೀಡಿತು ಎ೦ದು ಹೇಳುತ್ತಾ, ಕವಿಗೆ ನಿನ್ನ ಬದುಕಿನಲ್ಲಿಯೂ ಆ ದಿನಗಳು ಬರಲಿವೆ ಎ೦ಬ ಭ್ರಮೆಯೇ ನಿನ್ನನ್ನು ಚಿರಕಾಲ ಸ೦ತಸದಿ೦ದ ಇಡುತ್ತದೆ ಎ೦ಬ ವಾಸ್ತವಾ೦ಶವನ್ನು ತಿಳಿಸುತ್ತಾನೆ. ಕವಿಯ ಆ ಹಿರಿಯ ಗೆಳೆಯ ಯಾರೆ೦ಬುದು ಅರಿವಾಗಲಿಲ್ಲವೇ? ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳು. ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರೇ ಭ್ರಮೆಯೇ ಬದುಕು ಎ೦ಬುದು ಏಕೋ ಸರಿ ಅನ್ನಿಸಲಿಲ್ಲ (ಕ್ಷಮೆ ಇರಲಿ) ನಿಮ್ಮ ಕವನಕೆ ನನ್ನ ಪ್ರತಿ ಕವನ ಬದುಕಿನ ಕಲ್ಪನೆ ವಿಚಿತ್ರ ಭ್ರಮೆ ಮತ್ತು ಕನಸು ಅಸ್ಪಷ್ಟ ಚಿತ್ರ ಭ್ರಮೆಯೊಳಗಿನ ಬದುಕು ಆದಿಯ ಅ೦ತ್ಯ ಕನಸಿನೊಳಗಿನ ಬದುಕು ಅ೦ತ್ಯದ ಆದಿ ಮು೦ಬರುವ ದಿನಗಳಿಗೆ ಭ್ರಮೆ ಕೇವಲ ಭ್ರಮೆ ಅದರೊಳಗೆ ಸ೦ಸಾರ ಮೂರ್ತಗೊ೦ಡರೂ ಅಮೂರ್ತ, ಅಸ೦ಗತ ಕನಸು ಮು೦ಬರುವ ದಿನಕೆ ಭವಿಷ್ಯ ಅದೇ ದಾರಿಯಲ್ಲಿ ನಡೆದರೆ ಕಡೆದ ಶಿಲ್ಪ ಸು೦ದರ ಚಿತ್ರ ಸಾಗಿ ಹೋದ ಭ್ರಮಾಜೀವನ ಮಾಯಾಮ್ರುಗ, ಎಲ್ಲ ರೇಖೆಗಳು ಸಮಾ೦ತರವಲ್ಲ ಸಮಾ೦ತರಕೂ ಮು೦ಚೆ ಗೀರುಗಳೇ ಎಲ್ಲ ಭ್ರಮೆಯ ಬದುಕಿನಲಿ ಉಲ್ಲಾಸದ ಕಣ ಮರೀಚಿಕೆಯ ಅಣು ಕಣ ಭ್ರಮೆಯ ಬಿಟ್ಟು ಮು೦ಬರುವ ಬದುಕಿಗೆ ಕನಸಿಸು ಆ ದಾರಿಗು೦ಟ ಸಾಗು ಬದುಕು ನಿನ್ನದು ಮತ್ತು ಬದುಕೇ ನೀನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ, ಒ೦ದು ಕವನ- ಹತ್ತು ನೋಟ-ಹತ್ತು ದಿಕ್ಕು. ಕವಿ ಭ್ರಮೆಯೇ ಬದುಕು ಎ೦ದಿಲ್ಲ- ಕವಿಗೆ ಅವನ ಮಿತ್ರ ಹೇಳುತ್ತಿದ್ದಾನೆ ಭ್ರಮೆಯಿ೦ದ ಬದುಕು! ಮು೦ಬರುವ ದಿನಗಳತ್ತ ಆಶಾವಾದಿಯಾಗು ಎ೦ಬುದನ್ನು ವಾಸ್ತವದಲ್ಲಿ, ಆ ಭ್ರಮೆಯೊ೦ದು ಮನಸ್ಸನ್ನು ಸ೦ತಸವಾಗಿಡುವುದು ಎ೦ಬರ್ಥದಲ್ಲಿ ಹೇಳುತ್ತಿದ್ದಾನೆ. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[[ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ ದೂರಾಗಿ, ಜೋರಾಗಿ ಕೂಗಬೇಕೆ೦ದು!]] ಈ ಅನುಭವ/ಅನಿಸಿಕೆ ನನದೂ ಸಹ, ಇದು ಭಾವಜೀವಿಗಳಿಗೆ ಸಾಮಾನ್ಯ. ಚೆನ್ನಾಗಿದೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು, ಕವಿನಾಗರಾಜರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗವತರೇ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ನಾನು ಆಭಾರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಮೇರುತಿ ಪರ್ವತದ ತುದಿಯಲ್ಲೊಮ್ಮೆ ಎರಡೂ ಕೈಗಳನ್ನೆತ್ತಿ,>> ಹೋಗ್ಬೇಕಾದ್ರೆ ನನ್ನೂ ಕರೀರಿ ಸಾರ್, ಮೇರುತಿಗೆ ಚಾರಣ ಕೈಗೊಳ್ಳಬೇಕೆಂಬ ಆಸೆಯಿದೆ ;) ನಿಮ್ಮ ಕವಿಮನಕ್ಕೊಂದು ಅಭಿನಂದನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ೦ಡ್ರೆಡ್ ಪರ್ಸೆ೦ಟ್ ಶ್ಯೂರ್. ಈ ವಿಚಾರದಲ್ಲಿ ನನ್ನನ್ನು ಖ೦ಡಿತಾ ನ೦ಬಬಹುದು! ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.